Friday 29th, March 2024
canara news

ಮುಂಬಯಿ ಬಂಟರ ಭವನದಲ್ಲಿ ನೆರವೇರಿದ ವಿಶ್ವ ಬಂಟರ ಸಮಾಗಮ ಸಂಭ್ರಮ

Published On : 19 Mar 2019   |  Reported By : Rons Bantwal


ಬಂಟರಲ್ಲಿ ಎಲ್ಲರೂ ನಾಯಕರು ಇವರಿಗೆಲ್ಲಾ ಐಕಳ ಹರೀಶ್ ಸರ್ವಶ್ರೇಷ್ಠರು: ಸದಾನಂದ ಶೆಟ್ಟಿ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)


ಮುಂಬಯಿ, ಮಾ.15: ಬಂಟರಲ್ಲಿ ಎಲ್ಲರೂ ನಾಯಕರು ಇವರಿಗೆಲ್ಲಾ ಐಕಳ ಹರೀಶ್ ಸರ್ವಶ್ರೇಷ್ಠರು ಅನ್ನುವುದನ್ನುಸಾಬೀತು ಪಡಿಸಿದ್ದಾರೆ. ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮೂಲಕ ತನ್ನ ನಾಯಕತ್ವ ಏನೆಂದು ಜಗತ್ತಿಗೆ ತೋರ್ಪಡಿಸಿದ್ದಾರೆ. ಅವರ ಸೇವಾ ವೈಖರಿ ಏನೆಂದು ಸೇವಾ ಸಾಕ್ಷ ್ಯಚಿತ್ರ ಮೂಲಕ ತಿಳಿದು ಆಶ್ಚರ್ಯ ಚಕಿತನಾಗಿ ಸ್ವಂತದ ಕಣ್ಣೊರೆಸುವಂತಾಯಿತು. ಸರ್ವ ಸಂಪನ್ನರಾದ ಐಕಳ ಹರೀಶ್ ಸರ್ವರನ್ನೂ ಸಮಾನರಾಗಿಸಿ ಒಗ್ಗಟ್ಟಿನಿಂದ ಸಮಾಜವನ್ನು ಮುನ್ನಡೆಸಲು ಶ್ರೇಷ್ಠರು. ಸಾಂಘಿಕವಾಗಿ ಮುನ್ನಡೆದರೆ ಸಫಲತೆಯ ಸಮಬಾಳು ಪÁಪ್ತಿ ಅನ್ನುವ ಸಂದೇಶವನ್ನು ಇವರು ಜಗತ್ತಿಗೆ ತೋರ್ಪಡಿಸಿದ್ದಾರೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟ ಇದರ ಮಾಜಿ ಅಧ್ಯಕ್ಷ ಎ.ಸದಾನಂದ ಶೆಟ್ಟಿ ತಿಳಿಸಿದರು.

ಜಾಗತಿಕ ಬಂಟರ ಸಂಘಗಳ ಒಕ್ಕೂಟ (ಫೆಡರೇಶನ್ ಆಫ್ ವರ್ಲ್ಡ್ ಬಂಟ್'ಸ್ ಅಸೋಸಿಯೇಶನ್'ಸ್) ಸಂಸ್ಥೆ ಇಂದಿಲ್ಲಿ ರವಿವಾರ ಸಂಜೆ ಕುರ್ಲಾ ಪೂರ್ವದಲ್ಲಿನ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ.ಭಂಡಾರಿ ಸಭಾಗೃಹದಲ್ಲಿ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ವಿಶ್ವ ಬಂಟರ ಸಮಾಗಮ ದಲ್ಲಿ ಮುಖ್ಯ ಅತಿಥಿüಯಾಗಿದ್ದು ಸದಾನಂದ ಶೆಟ್ಟಿ ಮಾತನಾಡಿದರು.

ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್.ಪಯ್ಯಡೆ ದೀಪ ಪ್ರಜ್ವಲಿಸಿ ಸಮಾಗಮ ಉದ್ಘಾಟಿಸಿದ್ದು, ಅತಿಥಿs ಅಭ್ಯಾಗತರಾಗಿ ಆರ್ಗ್ಯಾನಿಕ್ ಇಂಡಸ್ಟ್ರೀಸ್ ಲಿಮಿಟೆಡ್‍ನ ಕಾರ್ಯಾಧ್ಯಕ್ಷ ಫೆಡರೇಶನ್‍ನ ನಿರ್ದೇಶಕ ತೋನ್ಸೆ ಆನಂದ ಎಂ.ಶೆಟ್ಟಿ ಮತ್ತು ಶಶಿರೇಖಾ ಆನಂದ ಶೆಟ್ಟಿ, ಎಂಆರ್‍ಜಿ ಸಮೂಹ ಬೆಂಗಳೂರು ಕಾರ್ಯಾಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿ, ಬಂಟ್ಸ್ ಸಂಘ ಮುಂಬಯಿ ಇದರ ಮಾಜಿ ಅಧ್ಯಕ್ಷ ಕರ್ನಿರೆ ವಿಶ್ವನಾಥ್ ಶೆಟ್ಟಿ, ಬಂಟ್ಸ್ ಫೆಡರೇಶನ್‍ನ ಗೌ| ಕಾರ್ಯದರ್ಶಿ ವಿಜಯಪ್ರಸಾದ್ ಆಳ್ವ, ವಾಣಿ ವಿ.ಆಳ್ವ, ಗೌ| ಕೋಶಾಧಿಕಾರಿ ಕೊಲ್ಲಾಡಿ ಬಾಲಕೃಷ್ಣ ರೈ, ಜೊತೆ ಕಾರ್ಯದರ್ಶಿ ಜಯಕರ್ ಶೆಟ್ಟಿ ಇಂದ್ರಾಳಿ, ಫೆಡರೇಶನ್‍ನ ಲೆಕ್ಕಪರಿಶೋಧಕ ಹಾಗೂ ಚುನವಣಾಧಿಕಾರಿ ನ್ಯಾಯವಾದಿ ಕೆ.ಪ್ರಥ್ವಿರಾಜ್ ರೈ, ಸತೀಶ್ ಅಡಪ ಸಂಕಬೈಲ್, ಉಳ್ತೂರು ಮೋಹನ್‍ದಾಸ್ ಶೆಟ್ಟಿ ಪ್ರಧಾನರಾಗಿ ವೇದಿಕೆಯಲ್ಲಿದ್ದರು.

ಬಂಟ್ಸ್ ಸಂಘ ಮುಂಬಯಿ ಮಹಿಳಾಧ್ಯಕ್ಷೆ ರಂಜನಿ ಸುಧಾಕರ ಹೆಗ್ಡೆ, ಬೋಂಬೆ ಬಂಟ್ಸ್ ಅಸೋಶಿಯೇಶನ್ ಅಧ್ಯಕ್ಷ ಸುಭಾಷ್ ಬಿ.ಶೆಟ್ಟಿ, ಬಂಟ್ಸ್ ಸಂಘ ಬೆಂಗಳೂರು ಅಧ್ಯಕ್ಷ ಆರ್.ಉಪೇಂದ್ರ ಶೆಟ್ಟಿ, ಬಂಟ್ಸ್ ಸಂಘ ಪುಣೆ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲಾಬೆಟ್ಟು, ಮೀರಾ ಡಹಾಣು ಬಂಟ್ಸ್ ಗೌರವಾಧ್ಯಕ್ಷ ಡಾ| ಶಂಕರ್ ಶೆಟ್ಟಿ ವಿರಾರ್, ಬಂಟ್ಸ್ ಸಂಘ ಬೆಳ್ತಂಗಡಿ ಅಧ್ಯಕ್ಷ ಎಸ್.ಜಯರಾಮ ಶೆಟ್ಟಿ, ಅಹ್ಮದಾಬಾದ್ ಬಂಟ್ಸ್‍ನ ಅಧ್ಯಕ್ಷ ರಿತೇಶ್ ಹೆಗ್ಡೆ, ಬಂಟ್ಸ್ ಯುವ ವಿಭಾಗದ ದೇವಿಚರಣ್ ಶೆಟ್ಟಿ, ಥಾಣೆ ಬಂಟ್ಸ್‍ನ ಅಧ್ಯಕ್ಷ ಕುಶಲ್ ಸಿ.ಭಂಡಾರಿ, ಬಂಟರ ಸಂಘ ಕುಂದಾಪುರ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ, ಬಂಟ್ಸ್ ಸಂಘ ಗುರುಪುರ ಅಧ್ಯಕ್ಷ ರಾಜ್‍ಕುಮಾರ್ ಶೆಟ್ಟಿ, ಬಂಟ್ಸ್ ಸಂಘ ಪಿಂಪ್ರಿ ಚಿಂಚ್ವಾಡ್ ಅಧ್ಯಕ್ಷ ವಿಜಯ ಶೆಟ್ಟಿ, ಬಂಟ್ಸ್ ಸಂಘ ಹಾವೇಲಿ ಪುಣೆ ಅಧ್ಯಕ್ಷ ಆನಂದ ಶೆಟ್ಟಿ, ಜವಾಬ್ ಅಧ್ಯಕ್ಷ ಜಯ ಪ್ರಕಾಶ್ ಶೆಟ್ಟಿ, ಮುಲುಂಡ್ ಬಂಟ್ಸ್ ಅಧ್ಯಕ್ಷ ಪ್ರಕಾಶ್‍ಚಂದ್ರ ಶೆಟ್ಟಿ ಹುಂತ್ರಿಕೆ, ಬಂಟ್ಸ್ ಸಂಘ ದೆಹಲಿ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ಸಿಎ| ದಯಾಕಿರಣ್ ಶೆಟ್ಟಿ, ಮನೋಜ್ ಶೆಟ್ಟ್ಟಿ ತೋನ್ಸೆ (ಕೆಮ್ಮಣ್ಣು), ಬಂಟ್ಸ್ ಸಂಘ ಮುಂಬಯಿ ವಿವಿಧ ಪ್ರಾದೇಶಿಕ ಸಮಿತಿಗಳ ಕಾರ್ಯಾಧ್ಯಕ್ಷರಾದ ಡಾ| ಆರ್.ಕೆ ಶೆಟ್ಟಿ, ನಲ್ಯಗುತ್ತು ಪ್ರಕಾಶ್ ಶೆಟ್ಟಿ, ರವೀಂದ್ರ ಶೆಟ್ಟಿ, ಚಂದ್ರಶೇಖರ್ ರೈ, ಸತೀಶ್ ಎನ್.ಶೆಟ್ಟಿ, ಕರುಣಾಕರ ಶೆಟ್ಟಿ ಕಲ್ಲಡ್ಕ, ಚಂದ್ರಶೇಖರ್ ಶೆಟ್ಟಿ, ಗಿರೀಶ್ ಶೆಟ್ಟಿ ತೆಳ್ಳಾರ್, ಜಯಂತ್ ಪಕ್ಕಳ, ಕಾರ್ಯಕ್ರಮ ಸಂಯೋಜಕರಾದ ಡಾ| ಪ್ರಭಾಕರ ಶೆಟ್ಟಿ ಬೋಳ, ರತ್ನಾಕರ ಶೆಟ್ಟಿ ಮುಂಡ್ಕೂರು, ಇಂದ್ರಾಳಿ ದಿವಾಕರ ಶೆಟ್ಟಿ ವೇದಿಕೆಯಲ್ಲಿ ಆಸೀನರಾಗಿದ್ದರು.

ಪಯ್ಯಡೆ ಮಾತನಾಡಿ ಸದ್ಯ ಈ ಫೆಡರೇಶನ್‍ಗೆ ಬಂಟ್ಸ್ ಸಂಘ ಮುಂಬಯಿನ ಮೂವರು ಸಕ್ರೀಯ ವ್ಯಕ್ತಿಗಳನ್ನು ಆಯ್ಕೆ ಆಗಿರುವುದು ಅಭಿನಂದನೀಯ. ಐಕಳ ಹರೀಶ್ ಫೆಡರೇಶನ್‍ನ ಅಧ್ಯಕ್ಷರಾಗಿ ಅಗ್ರಗಣ್ಯರೆಣಿಸಿ ನಮ್ಮ ಸಂಸ್ಥೆಯ ಕೀರ್ತಿಯನ್ನು ವಿಶ್ವಕ್ಕೆ ಪಸರಿಸಿರುವುದು ಸ್ತುತ್ಯರ್ಹ. ಆ ಮೂಲಕ ನಿರ್ಜೀವವಾಗಿದ್ದ ಫೆಡರೇಶನ್ ಸದ್ಯ ಪುನರ್ಜನ್ಮ ಪಡೆದು ಸೇವೆ ನಿರತವಾಗಿದೆ. ಬಂಟರು ಜಾಗತೀಕವಾಗಿ ಬೆಳೆದಿದ್ದು, ಅವರೆಲ್ಲರ ಸೇವೆಗೆ ಈ ಫೆಡರೇಶನ್‍ಅಣಿಗೊಂಡು ಸಮಾಜವನ್ನು ಇನ್ನಷ್ಟು ಶ್ರೀಮಂತಗೊಳಿಸುವಂತಾಗಲಿ ಎಂದರು.

ಮುಂಬಯಿಗರು ಅಂದರೆ ಹಣವಂತ ಆಸ್ತಿಕರು ಎಂದು ತವರೂರ ಜನರ ಭಾವನೆ. ಕೇಳಿದಾಗೆಲ್ಲಾ ಹಣ ಕೊಡುವವರು ಎಂದು ತಿಳಿದು ಅವರ ಜೀವನವನ್ನು ಸಂಪನ್ಭರಿತವಾಗಿಸುತ್ತಿದ್ದಾರೆ. ಆದರೆ ನಮ್ಮ ಹಗಲಿರುಳ ಶ್ರಮ, ಕಷ್ಟ-ನಷ್ಟ, ಬೆವರುಗಳಿಕೆಯ ಜೀವನ ಅವರು ಎಂದೂ ಅರ್ಥೈಸಿಕೊಳ್ಳುವವರಲ್ಲ. ಇದನ್ನು ಇನ್ನಾದರೂ ಸ್ಥಿತಿಗತಿ ಮನವರಿಸಿ ಸಂಪಾದಿತ ಗಳಿಕೆಯನ್ನು ತಕ್ಕ ಉದ್ದೇಶಗಳಿಗೆ ಮಾತ್ರ ವ್ಯಯಿಸಿ ಪುಣ್ಯಕ್ಕೆ ಭಾಜನರಾಗಿ. ನಾನು ಒಕ್ಕೂಟ ಅಧ್ಯಕ್ಷನಾಗಿ ಒಂದು ವರ್ಷದಲ್ಲಿ ಸೇವಾ ನಿರತನಾಗಿ ನಮ್ಮವರ ಬದುಕಿನ ಸ್ಥಿತಿಗತಿ ಖುದ್ಧಾಗಿ ಕಂಡರಿದು ಅವರ ರೋಚಕ ಜೀವನವನ್ನರಿತು ಸ್ವಹಸ್ತಗಳಿಂದ ಕಣ್ಣೀರು ಒರೆಸುತ್ತಾ ಅವರಿಗೆ ಆಸರೆಯಾಗುವಲ್ಲಿ ನಿಜಾರ್ಥದ ಸೇವೆಯನ್ನು ಕಂಡುಕೊಂಡಿದ್ದೇನೆ. ಅನೇಕ ದಶಕಗಳಿಂದ ಸಮಾಜ ಸೇವೆಯಲ್ಲಿ ನಿರತನಾಗಿದ್ದು ಅದು ಶೋಕಿಯಾಗಿತ್ತೇ ಎನ್ನುವ ಅನುಮಾನ ಇದೀಗ ನನ್ನನ್ನು ಕಾಡುತ್ತಿದೆ. ನಾವು ದೇವಸ್ಥಾನಕ್ಕೆ ಕೋಟಿಗಟ್ಟಲೆ ಹಣ ಸುರಿಯುತ್ತೇವೆ. ಆದರೆ ನಮ್ಮಲ್ಲಿನ ಜನತೆಯ ಬಡತನ ನೀಗಿಸುವತ್ತ ಚಿಂತಿಸುವುದಿಲ್ಲ. ಇನ್ನಾದರೂ ಸ್ವಸಮಾಜ ಬಡತನ ತಿಳಿದು ಅಭಯಸ್ತ ನೀಡಿ ಪುಣ್ಯಗಳಿಸುವ ಕಾಯಕದಲ್ಲಿ ಕೈ ಜೋಡಿಸಿ ಎಂದು ಐಕಳ ಹರೀಶ್ ಸಮುದಾಯದ ನೈಜ್ಯ ಸ್ಥಿತಿಗತಿಯನ್ನು ಮನವರಿಸಿ ಭಾವೋದ್ವೆಕರಾಗಿ ನುಡಿದರು.

ಪ್ರಕಾಶ್ ಶೆಟ್ಟಿ ಮಾತನಾಡಿ ಪರಶುರಾಮ ದೇವರ ಕೊಡಲಿಗೆ ಕಡಲು ಕೊಟ್ಟ ನಾಡು ಅದೇ ತುಳುನಾಡು. ಇಂತಹ ಪುಣ್ಯಾಧಿ ನಾಡಲ್ಲಿ ನಾವು ಇಲ್ಲಿ ಬಂಟರಾಗಿ ಹುಟ್ಟಿದ್ದು ನಮ್ಮೆಲ್ಲರ ಸೌಭಾಗ್ಯ. ಬಂಟರು ಎಲ್ಲಾ ಕ್ಷೇತ್ರಗಳಲ್ಲೂ ಸಾಧಕರೆಣಿಸಿದವರು. ಇಂತಹ ಸಮುದಾಯದ ಜಾಗತಿಕ ಸಂಸ್ಥೆಯ ಚುಕ್ಕಾಣಿಯನ್ನಿಡಿದ ಐಕಳರಿಗೆ ಫೆಡರೇಶನ್ ಮೂಲಕ ನಾವು ಬಹುದೊಡ್ಡ ಜವಾಬ್ದಾರಿ ನೀಡಿದೆ. ಇಡೀ ಸಮಾಜ ನಮಗೆ ಬಹಳ ಕೊಟ್ಟಿದ್ದು ನಾವೂ ಸಮಾಜಕ್ಕೇನಾದರೂ ಕೊಟ್ಟು ಸಮಾಜದ ಋಣ ಪೂರೈಸುವ. ಬಂಟ ಸಮಾಜ ನಮಗೆ ಬಹಳಷ್ಟು ನೀಡಿದ್ದರೂ ನಾವು ನಮ್ಮ ಸಮಾಜಕ್ಕೆ ನೀಡಿದ್ದು ತುಂಬಾ ಕಡಿಮೆ. ಫೆಡರೇಶನ್‍ನಿಂದ ನಮ್ಮೆಲ್ಲರಲ್ಲೂ ಬಹಳಷ್ಟು ನಿರೀಕ್ಷೆ ಅಪೇಕ್ಷೆ ಬಹಳಷ್ಟಿದೆ ಇದನ್ನು ಈಡೇರಿಸುವ ಭರವಸೆ ನಮಗಿದೆ ಎಂದರು.

ಸ್ವಸ್ಥ ್ಯ ಸಮಾಜದ ಮುನ್ನಡೆಗೆ ಓರ್ವ ಸಮರ್ಥ ನಾಯಕನ ಅಗತ್ಯವಿದೆ. ಹೇಗೆ ದೇಶಕ್ಕೆ ಒಳ್ಳೆಯ ಪ್ರಧಾನಿ, ಪ್ರಾಂತ್ಯಕ್ಕೆ ದಕ್ಷ ರಾಜ ಇರಬೇಕೋ ಅದರಂತೆ ಸಮುದಾಯದ ಸರ್ವೋನ್ನತಿಗೆ ದಿಟ್ಟ ಧುರೀಣ ಅಗತ್ಯವಾಗಿರಬೇಕು. ನಾನು ಕಂಡಂತೆ ಬಂಟ ಸಮುದಾಯಕ್ಕೆ ಐಕಳ ಒಂದು ಹೀರ್ ಇದ್ದಂತೆ. ಸಮುದಾಯದ ಅಧ್ಯಯನ ನಡೆಸಿ ಆಶಕ್ತ ಬಂಧುಗಳ ಕಣ್ಣೀರು ಒರೆಸುವ ಕಾಯಕದಲ್ಲಿ ತೊಡಗಿಸಿ ಕೊಂಡಿರುವುದು ನಮ್ಮೆಲ್ಲರ ಭಾಗ್ಯ. ಅವರೊಂದಿಗೆ ಶ್ರಮಿಸುವ ಕರ್ನಿರೆ ಅವರೂ ದಾನಕರ್ಣರಾಗಿ ಸಮಾಜದ ಕಳಕಳಿಯನ್ನು ತಿಳಿದು ಮುನ್ನಡೆಯುತ್ತಿದ್ದಾರೆ. ಇದನ್ನೆಲ್ಲಾ ಅವರು ಅವರ ಮನೆಗಾಗಿ ಅಲ್ಲ ಬಂಟ ಸಮಾಜಕ್ಕಾಗಿ ಮಾಡುತ್ತಿದ್ದಾರೆ ಅನ್ನುವ ಕನಿಷ್ಠ ಮನೋಭಾವ ನಮ್ಮಲ್ಲಿರಬೇಕು. ದೇಶಕ್ಕೆ ನರೇಂದ್ರ ಮೋದಿ ಹೇಗೆಯೋ ಬಂಟರಿಗೆ ಐಕಳ ಹರೀಶ್ ಜನನಾಯಕ ಎಂದು ಆನಂದ ಶೆಟ್ಟಿ ಅಭಿಪ್ರಾಯ ಪಟ್ಟರು.

ವಿಜಯಪ್ರಸಾದ್ ಆಳ್ವ ಮಾತನಾಡಿ ಸೇವಾ ಸಂತೃಪ್ತನಾದ ನಾನು ಫೆಡರೇಶನ್‍ನಿಂದ ನಿರ್ಗಮನದ ಸಂಭ್ರಮ ಮರೆಯಲು ಅಸಾಧ್ಯ. ಕಾನೂನುತ್ಮಕವಾಗಿ ಮುನ್ನಡೆದಾಗ ಬರುವ ಜನರು ಅರ್ಹರಾಗಿ ಬರುತ್ತಾರೆ. ಇದನ್ನು ಐಕಳ ತೋರಿಸಿ ಮಾದರಿ ಆಗಿದ್ದಾರೆ. ಬಂಟರು ಸ್ವಸಾಮರ್ಥ್ಯವುಳ್ಳ ಸಾಧಕರಾಗಿದ್ದು ಸಾಮರಸ್ಯತ್ವದ ಬದುಕಿಗೆ ಪ್ರೇರಕರು. ಆದರೆ ಬಂಟರು ಬರೇ ಭೂಮಿಗೆ ಅಂಟಿಕೊಂಡು ತಮ್ಮೊಳಾಗಿನ ಅಹಂನಿಂದ ಬಡವರೆಣಿಸಿದ್ದಾರೆ. ಇಂತಹ ಸಮಸ್ಯೆಗಳನ್ನು ಸರಿಪಡಿಸಲು ಸಮುದಾಯದ ದೂರದೃಷ್ಠಿವುಳ್ಳ ಐಕಳ ಹರೀಶ್ ಅವರಿಂದ ಫೆಡರೇಶನ್ ಮುಖೇನ ಸಾಧ್ಯ ಎಂದರು.

ನನ್ನ ಬಹುತೇಕ ಬಾಳು ಬಂಟ ಸಮಾಜದ ಸಹವಾಸದಲ್ಲಿ ಕಳೆದಿದ್ದೇನೆ. ಅದರಲ್ಲೂ ಸುಮಾರು ಒಂದು ದಶಕದಿಂದ ಈ ಫೆಡರೇಶನ್‍ನಲ್ಲಿ ವ್ಯಯಿಸಿ ಸಮಾಜ ಸೇವೆಗಾಗಿ ಬಾಳಿದ್ದೇನೆ. ಈ ಗೌರವಕ್ಕೆ ಭಾಜನರಾಗಿ ಇಂದು ನನ್ನ ಸೇವಾ ಬದುಕು ಫಲಪ್ರದವಾಯಿತು. ಬಂಟ ಸಮಾಜದ ಭೀಷ್ಮ ಐಕಳ ಹರೀಶ್ ಓರ್ವ ನುಡಿದಂತೆ ನಡೆಯುವ ನಿಸ್ಸೀಮಾ ನಾಯಕ. ಅವರ ಅಧಿಕಾರ ಪರ್ವ ಎಂದೂ ಬಂಜರವಾಗದು. ಐಕಳರ ಸಾರಥ್ಯದಿಂದ ಬಡತನಮುಕ್ತ ಬಂಟ ಸಮಾಜ ಸಾಧ್ಯ ಎಂದು ಕೊಲ್ಯಾಡಿ ಬಾಲಕೃಷ್ಣ ತಿಳಿಸಿದರು.

ಕಾರ್ಯಕ್ರಮದಲ್ಲಿ ಬಂಟ್ಸ್ ಸಂಘ ಮುಂಬಯಿ ಇದರ ಉಪಾಧ್ಯಕ್ಷ ಚಂದ್ರಹಾಸ ಕೆ.ಶೆಟ್ಟಿ, ಗೌ| ಪ್ರ| ಕಾರ್ಯದರ್ಶಿ ಸಿಎ| ಸಂಜೀವ ಶೆಟ್ಟಿ, ಗೌ| ಕೋಶಾಧಿಕಾರಿ ಪ್ರವೀಣ್ ಬಿ.ಶೆಟ್ಟಿ, ಜತೆ ಕಾರ್ಯದರ್ಶಿ ಮಹೇಶ್ ಎಸ್.ಶೆಟ್ಟಿ, ಜತೆ ಕೋಶಾಧಿಕಾರಿ ಗುಣಪಾಲ್ ಶೆಟ್ಟಿ ಐಕಳ, ಗೌತಮ್ ಎಸ್.ಶೆಟ್ಟಿ, ಶಿವಪ್ರಸಾದ್ ಶೆಟ್ಟಿ, ದಿವಾಕರ ಶೆಟ್ಟಿ ಕುರ್ಲಾ, ರವೀಂದ್ರನಾಥ ಎಂ.ಭಂಡಾರಿ, ವೇಣುಗೋಪಾಲ್ ಶೆಟ್ಟಿ, ದಿವಾಕರ ಶೆಟ್ಟಿ ಅಡ್ಯಾರ್, ಪ್ರವೀಣ್ ಶೆಟ್ಟಿ ವಾರಂಗ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಶುಭವಾಸರದಲ್ಲಿ ಬಂಟ ಸಮುದಾಯದ ಸಾಧಕರಾದ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಒಕ್ಕೂಟದ ನಿರ್ದೇಶಕರಾದ ಕೆ.ಪ್ರಕಾಶ್ ಶೆಟ್ಟಿ (ಬಂಜಾರ), ತೋನ್ಸೆ ಆನಂದ ಎಂ.ಶೆಟ್ಟಿ ಮತ್ತು ಶಶಿರೇಖಾ ಆನಂದ ಶೆಟ್ಟಿ ಹಾಗೂ ವಿಜಯಪ್ರಸಾದ್ ಆಳ್ವ ಮತ್ತು ವಾಣಿ ವಿ.ಆಳ್ವ (ದಂಪತಿಗಳು), ಕೊಲ್ಲಾಡಿ ಬಾಲಕೃಷ್ಣ ರೈ, ಡಾ| ಶಂಕರ್ ಬಿ.ಶೆಟ್ಟಿ ವಿರಾರ್, ಡಾ| ಕರ್ನೂರು ಮೋಹನ್ ರೈ ಅವರನ್ನು ಅತಿಥಿüಗಳು ಸನ್ಮಾನಿಸಿ ಅಭಿನಂದಿಸಿದರು.

ವೀಣಾ ಶೆಟ್ಟಿ ಪ್ರಾರ್ಥನೆಯನ್ನಾಡಿದರು. ಕರ್ನಿರೆ ವಿಶ್ವನಾಥ್ ಶೆಟ್ಟಿ ಸ್ವಾಗತಿಸಿ ಪ್ರಸ್ತಾವನೆಗೈದÀು ಫೆಡರೇಶನ್‍ನ ಧ್ಯೇಯೋದ್ದೇಶಗಳನ್ನು ಮನವರಿಸಿದರು. ಬಂಟರವಾಣಿ ಮಾಸಿಕದ ಗೌರವ ಸಂಪಾದಕ ಅಶೋಕ್ ಪಕ್ಕಳ ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಜಯಕರ್ ಶೆಟ್ಟಿ ಇಂದ್ರಾಳಿ ವಂದನಾರ್ಪಣೆಗೈದರು. ಸಮಾಗಮ ಪ್ರಯುಕ್ತ ಬಂಟ ಸಮುದಾಯದ ವಿವಿಧ ಸಂಸ್ಥೆಗಳು ನೃತ್ಯವೈವಿಧ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಾದರ ಪಡಿಸಿದರು. ವಿಠಲ್ ನಾಯ್ಕ್ ಕಲ್ಲಡ್ಕ ಇವರು ಗೀತಾ ಸಾಹಿತ್ಯ ವೈಶಿಷ್ಟ್ಯ ಹಾಸ್ಯ ಪ್ರಹಸನ ಪ್ರಸ್ತುತಪಡಿಸಿದರು.

ಪದಾಗ್ರಹಣ ಸಮಾರಂಭ:
ಸಮಾರಂಭದ ಮಧಾಂತರದಲ್ಲಿ ಪದಾಗ್ರಹಣ ಸಮಾರಂಭ ನಡೆಸಲ್ಪಟ್ಟಿತು. ನಿರ್ಗಮನ ಪದಾಧಿಕಾರಿಗಳು ಮತ್ತು ಅತಿಥಿüಗಣ್ಯರು ಜಾಗತಿಕ ಬಂಟರ ಸಂಘಗಳ ಒಕ್ಕೂಟಕ್ಕೆ ಸರ್ವಾನುಮತದಿಂದ ನೂತನ ಅಧ್ಯಕ್ಷರಾಗಿ ಪುನಾರಯ್ಕೆಯಾದ ಐಕಳ ಹರೀಶ್ ಶೆಟ್ಟಿ ಅವರಿಗೆ ಪದವಿ ಪ್ರದಾನಿಸಿ ಗೌರವಿಸಿ ಅಭಿನದಿಸಿದರು. ಅಂತೆಯೇ ಇತರ ಪದಾಧಿಕಾರಿಗಳಾಗಿ ಆಯ್ಕೆಯಾದ ಕರ್ನಿರೆ ವಿಶ್ವನಾಥ್ ಶೆಟ್ಟಿ (ಉಪಾಧ್ಯಕ್ಷ), ಜಯಕರ್ ಶೆಟ್ಟಿ ಇಂದ್ರಾಳಿ (ಗೌ| ಕಾರ್ಯದರ್ಶಿ), ಉಳ್ತೂರು ಮೋಹನ್‍ದಾಸ್ ಶೆಟ್ಟಿ (ಗೌ| ಕೋಶಾಧಿಕಾರಿ), ಸತೀಶ್ ಅಡಪ ಸಂಕಬೈಲ್ (ಜೊತೆ ಕಾರ್ಯದರ್ಶಿ) ಆಯ್ಕೆ ಆಗಿದ್ದು, ನಿರ್ಗಮನ ಪದಾಧಿಕಾರಿಗಳು, ಅತಿಥಿüಗಣ್ಯರು ನೂತನ ಪದಾಧಿಕಾರಿಗಳಿಗೆ ಪುಷ್ಫಗುಪ್ಚ, ಪದವಿಪತ್ರ ಪ್ರದಾನಿಸಿ ಅಭಿನಂದಿಸಿದರು. ಫೆಡರೇಶನ್‍ನ ಲೆಕ್ಕಪರಿಶೋಧಕ ಹಾಗೂ ಚುನವಣಾಧಿಕಾರಿ ನ್ಯಾಯವಾದಿ ಕೆ.ಪ್ರಥ್ವಿರಾಜ್ ರೈ ಆಯ್ಕೆ ಪ್ರಕ್ರಿಯೆ ನಡೆಸಿ ನೂತನ ಪದಾಧಿಕಾರಿಗಳಿಗೆ ಶುಭಾರೈಸಿದರು.

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here