Monday 12th, May 2025
canara news

ಶಿವಾ'ಸ್ ಹೇರ್ ಡಿಝೈನರ್ಸ್ ಪ್ರಸಿದ್ಧಿಯ ಶಿವರಾಮ ಕೆ.ಭಂಡಾರಿ ಮುಡಿಗೇರಿಸಿದ ಗ್ಲೋಬಲ್ ಲೀಡರ್ಸ್ ಆವಾರ್ಡ್ ಎಂಟರ್‍ಪ್ರೈಸ್ ಎಡಿಶನ್ -2019 ಪ್ರಶಸ್ತಿ

Published On : 24 Mar 2019   |  Reported By : Rons Bantwal


ಮುಂಬಯಿ, ಮಾ.22: ದಕ್ಷಿಣ ಕನ್ನಡ ಕಾರ್ಕಳ ಅತ್ತೂರು ಮೂಲದವರಾಗಿದ್ದು ಮುಂಬಯಿ ಮಹಾನಗರದಲ್ಲಿ ಹೇರ್ ಸ್ಟೈಲೋ ಮೂಲಕ ಪ್ರಸಿದ್ಧಿ ಗಿಟ್ಟಿಸಿ ಕೊಂಡಿರುವ ಹೆಸರಾಂತ ಕೇಶ ವಿನ್ಯಾಸ ಸಂಸ್ಥೆ ಶಿವಾ'ಸ್ ಹೇರ್ ಡಿಝೈನರ್ಸ್ ಪ್ರೈವೇಟ್ ಲಿಮಿಟೆಡ್‍ನ ಆಡಳಿತ ನಿರ್ದೇಶಕ ಡಾ| ಶಿವರಾಮ್ ಕೆ.ಭಂಡಾರಿ ಇವರಿಗೆ ಗ್ಲೋಬಲ್ ಲೀಡರ್ಸ್ ಸಂಸ್ಥೆಯು ವರ್ಷದ ಅತಿ ನವೀನತೆಯ ಕೇಶ ವಿನ್ಯಾಸ(ಮೋಸ್ಟ್ ಇನೋವೇಟಿವ್ ಹೇರ್ ಸ್ಟೈಲ್ ಆಫ್ ದಿ ಈಯರ್) ಗ್ಲೋಬಲ್ ಲೀಡರ್ಸ್ ಆವಾರ್ಡ್ ಎಂಟರ್‍ಪ್ರೈಸ್ ಎಡಿಶನ್-2019' ಪ್ರಶಸ್ತಿ ಪ್ರದಾನಿಸಿ ಗೌರವಿಸಿದೆ.

ಕಳೆದ ಶನಿವಾರ ದುಬಾಯಿ ಇಲ್ಲಿನ ಜೆ.ಡಬ್ಲ್ಯೂ ಮಾರಿಯೆಟ್ ಹೊಟೇಲ್ ಸÀಭಾಗೃಹದಲ್ಲಿ ನಡೆಸಲ್ಪಟ್ಟ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿüಯಾಗಿ ಉಪಸ್ಥಿತ ಬಾಲಿವುಡ್ ಚಿತ್ರ ನಿರ್ಮಾಪಕ ಮಧುಕರ್ ಭಂಡಾರ್ಕರ್ ಅವರು ಶಿವರಾಮ್ ಭಂಡಾರಿ ಅವರಿಗೆ ಪ್ರಶಸ್ತಿ ಪ್ರದಾನಿಸಿ ಶುಭಾರೈಸಿದರು.

ಅತ್ಯಾಧುನಿಕ, ಸುಸಜ್ಜಿತ ಮಳಿಗೆಯಾಗಿ ಕಾರ್ಯಚರಿಸುತ್ತಾ ವ್ಯಕ್ತಿತ್ವದಲ್ಲಿ ಬಾಲಿವುಡ್ ವ್ಯಕ್ತಿಯಂತೆಯೇ ಪ್ರಜ್ವಲಿಸುತ್ತಾ ಸದಾ ತೆರೆಯ ಮರೆಯಲ್ಲೇ ಸಮಾಜ ಸೇವೆಯಲ್ಲಿ ತೊಡಗಿಸಿ ಕೊಂಡಿರುವ ಶಿವರಾಮ ಅವರು ತುಳುನಾಡ ಹಳ್ಳಿ ಹುಡುಗನೋರ್ವ ಭಂಡಾರಿ ಸಮುದಾಯದಲ್ಲಿ ಹುಟ್ಟಿ ಬೆಳೆದು ಭಂಡಾರಿ ಸಮಾಜದ ಮಿನುಗುತಾರೆ ಆಗಿರುವ ಶಿವರಾಮ ಭಂಡಾರಿ ಅವರ ಸಾಧನೆ ಪ್ರಸಕ್ತ ಪೀಳಿಗೆಗೆ ಮಾದರಿ. ಹೇರ್ ಕಟ್ಟಿಂಗ್ ಸಲೂನ್‍ಗೆ ಹೊಸ ಆಯಾಮ ನೀಡಿ ತನ್ನ ಕ್ಷೌರ ಉದ್ಯಮವನ್ನು ಪ್ರೈವೇಟ್ ಲಿಮಿಟೆಡ್ ಮೂಲಕ ಶಿವಾಸ್ ಹೇರ್ ಸ್ಟೈಲೋ ಡಿಸೈನರ್ ಹೆಸರಿನೊಂದಿಗೆ ಮುನ್ನಡೆಸುತ್ತಿದ್ದಾರೆ.

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here