Monday 12th, May 2025
canara news

ಪೇಜಾವರ ಮಠದಲ್ಲಿ ನಡೆಸಲ್ಪಟ್ಟ ಪುತ್ತೂರು ನರಸಿಂಹ ನಾಯಕ್

Published On : 27 Mar 2019   |  Reported By : Rons Bantwal


ಪ್ರಸ್ತುತಿ ಪಡಿಸಿದ ಹರಿದಾಸ ಭಕ್ತಿ ಸಂಗೀತ ಲಹರಿ ಕಾರ್ಯಕ್ರಮ

ಮುಂಬಯಿ, ಮಾ.25: ಮುಂಬಯಿಯ ಪ್ರಖ್ಯಾತ ಫ್ಯಾಶನ್ ಡಿಸೈನಿಂಗ್ ಮತ್ತು ಎವಿಯೇಶನ್ ಟೂರಿಸಂ ಸಂಸ್ಥೆಯಾದ ಇಂಟರ್‍ನ್ಯಾಶನಲ್ ಇನ್‍ಸ್ಟಿಟ್ಯೂಟ್ ಟ್ರೇನಿಂಗ್ ಸೆಂಟರ್ (ಐಐಟಿಸಿ) ಸಂಸ್ಥೆಯ ಸಂಸ್ಥಾಪಕ ಎಸ್.ಕೆ ಉರ್ವಾಳ್ ಮತ್ತು ಪ್ರಫುಲ್ಲಾ ಎಸ್.ಉರ್ವಾಳ್ ಹಾಗೂ ಬಿ.ಆರ್ ಹೊಟೇಲು ಸಮೂಹದ ಆಡಳಿತ ನಿರ್ದೇಶಕ ಬಿ.ಆರ್ ಶೆಟ್ಟಿ ಮತ್ತು ಚಂಚಲ ಆರ್.ಶೆಟ್ಟಿ ಪರಿವಾರವು ತಮ್ಮ ಪ್ರಾಯೋಜಕತ್ವ ಹಾಗೂ ಪೇಜಾವರ ಮಠದ ಮುಂಬಯಿ ಶಾಖೆ ಇದರ ಸಹಕಾರದೊಡನೆ ಕಳೆದ ಶನಿವಾರ ಸಂಜೆ ಸಾಂತಕ್ರೂಜ್ ಪೂರ್ವದ ಪ್ರಭಾತ್ ಕಾಲೋನಿಯ ಪೇಜಾವರ ಮಠದ ಸಭಾಗೃಹದಲ್ಲಿ ರಾಜ್ಯೋತ್ಸವ ಪ್ರಶಸ್ತಿ ವಿಜೇತ, ಪುರಂದರದಾಸ ಪ್ರಸಿದ್ಧಿಯ ಸಂಗೀತಕಾರ ಪುತ್ತೂರು ನರಸಿಂಹ ನಾಯಕ್ ಬಳಗದ ಹರಿದಾಸ ಭಕ್ತಿ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.

ಐಟಿಸಿ ನಿರ್ದೇಶಕ ವಿಕ್ರಾಂತ್ ಉರ್ವಾಳ್ ಹಾಗೂ ಬಿಎಸ್‍ಕೆಬಿ ಅಸೋಸಿಯೇಶನ್ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು ಅವರು ಪುತ್ತೂರು ನರಸಿಂಹ ನಾಯಕ್ ಶಾಲು ಹೊದಿಸಿ, ಸ್ಮರಣಿಕೆ ಪುಪ್ಫಗುಪ್ಚ ನೀಡಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಪೇಜಾವರ ಮಠದ ಪ್ರಧಾನ ವ್ಯವಸ್ಥಾಪಕ ರೆಂಜಾಳ ರಾಮದಾಸ ಉಪಾಧ್ಯಾಯ, ಪುರೋಹಿತ ಅಶೋಕ್ ಭಟ್ ದಂಪತಿ, ಶ್ರೀಧರ ರಾವ್, ಮುರಳೀ ಭಟ್ ಡೊಂಬಿವಿಲಿ ಮೊದಲಾದವರು ಉಪಸ್ಥಿತರಿದ್ದು ಪೇಜಾವರ ಮಠದ ಪ್ರಬಂಧಕ ಶ್ರೀಹರಿ ಭಟ್ ಕಾರ್ಯಕ್ರಮ ನಿರೂಪಿಸಿದರು. ಪ್ರಕಾಶ್ ಆಚಾರ್ಯ ರಾಮಕುಂಜ ವಂದಿಸಿದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here