ಬಹುಭಾಷೆಯಲ್ಲಿ ಯಕ್ಷಗಾನ ಪ್ರದರ್ಶನ ಒಳ್ಳೆಯ ಬೆಳವಣಿಗೆ-ಮೋಹನದಾಸ್ ಮಲ್ಯ
ಮುಂಬಯಿ, ಮಾ.26: ಮಹಾನಗರದಲ್ಲಿ ಯಕ್ಷಗಾನ ಉತ್ಕರ್ಷೆಗಾಗಿ ನಡೆಯುತ್ತಿರುವ ಕಾರ್ಯಕ್ರಮಗಳು ಪ್ರದರ್ಶನಗಳು, ಶಿಬಿರಗಳು ಬಹುಶಃ ತಾಯ್ನಾಡಲ್ಲೂ ನಡೆಯಲಿಕ್ಕಿಲ್ಲ, ಇಲ್ಲಿ ಯಕ್ಷಗಾನ ಕನ್ನಡ, ತುಳು ಕೊಂಕಣಿ ಮಾತ್ರವಲ್ಲದೆ ಇದೀಗ ಮರಾಠಿ ಭಾಷೆÉಯಲ್ಲೂ ಪ್ರದರ್ಶಿಸಲಾರಂಭವಾದದ್ದು ಒಳ್ಳೆಯ ಬೆಳವಣಿಗೆ. ಮಹಾರಾಷ್ಟ್ರದ ವಿಶ್ವವಿಖ್ಯಾತ ಪಂಡರಾಪುರದ ಕ್ಷೇತ್ರದ ಬಗ್ಗೆ `ಪಂಡರಪುರ್ ಮಹಿಮಾ' ಎಂಬ ವ್ಯಾಖ್ಯಾನ ಜನಪ್ರಿಯ ಯಕ್ಷಗಾನ ಮಂಡಳಿ ಆಡಿತೋರಿಸುವುದು ಶ್ಲಾಘನೀಯ. ಕಾಶಿ ಮಠಧೀಶರಾದ ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿ ಅವರ ಅಭಯ ಹಸ್ತದಿಂದ ಪ್ರಾರಂಭವಾದ ಜನಪ್ರಿಯ ಯಕ್ಷಗಾನ ಕಲಾ ಮಂಡಳಿ ಕಳೆದ ಆರು ದಶಕಗಳಿಂದ ಮಹಾನಗರದಲ್ಲಿ ಯಕ್ಷಗಾನ ಬಯಲಾಟವನ್ನು ಆಡಿತೋರಿಸುತ್ತಿದೆ. ಮಂಡಳಿಯ ಸ್ವರ್ಣಮಹೋತ್ಸವ ಆಚರಣೆಯಲ್ಲಿ ನಮ್ಮ ದಹಿಸರ್ ಕಾಶೀ ಮಠದಲ್ಲಿ 25 ಪ್ರಯೋಗಗಳನ್ನು ಪ್ರದರ್ಶಿಸಲು ನಾವು ಅನುವು ಮಾಡಿಕೊಟ್ಟಿದ್ದೇವೆ. ಇಂತಹ ಪುರಾತನ ಕಲೆಯ ಆರಾಧಕರಾದ ನಾವೆಲ್ಲರೂ ಇದಕ್ಕೆ ಪೆÇ್ರೀತ್ಸಾಹ ಕೊಡಬೇಕು ನನ್ನ ಬೆಂಬಲ ಸದಾ ಇದೆ ಎಂದು ಕಾಶೀಮಠ ದಹಿಸರ್ ವಿಠಲ ರುಖುಮಾಯೀ ದೇವಸ್ಥಾನದ ಅಧ್ಯಕ್ಷ ಮೋಹನದಾಸ್ ಮಲ್ಯ ತಿಳಿಸಿದರು.
ಕಳೆದ ಶನಿವಾರ (ಮಾ.23) ಮಹಾರಾಷ್ಟ್ರ ಸೇವಾ ಸಂಘದ ಕಲಾ ವಿಭಾಗ ಇದರ ಮುಲುಂಡ್ ಸಭಾಗೃಹದಲ್ಲಿ ಜಿಎಸ್‍ಬಿ ಸಭಾ ಮುಲುಂಡ್ ಹಾಗೂ ಮಹಾರಾಷ್ಟ್ರ ಸೇವಾ ಸಂಘದ ಕಲಾ ವಿಭಾಗಗಳ ಜಂಟಿ ಪ್ರಾಯೋಜಕತ್ವದಲ್ಲಿ ಜರಗಿದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಲ್ಯ ಮಾತನಾಡಿದರು.
ಮಹಾರಾಷ್ಟ್ರ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ ವಾಜೆ ಅತಿಥಿüಯಾಗಿದ್ದು ಮಾತನಾಡಿ ಯಕ್ಷಗಾನ ಕಲೆ ಮಹಾರಾಷ್ಟ್ರ ಕರ್ನಾಟಕದ ಬೆಸುಗೆಯನ್ನು ವೃದ್ದಿಸುತ್ತಿದೆ ಇಂತಹ ಕಾರ್ಯಕ್ರಮಕ್ಕೆ ನಮ್ಮ ಪೆÇ?ರೀತ್ಸಾಹ ಸದಾ ಇದೆ ಎಂದರು.
ಮಂಡಳಿ ಅಧ್ಯಕ್ಷ ರವೀಂದ್ರ ಪೈ ಗಂಗೊಳ್ಳಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಜನಪ್ರಿಯ ಯಕ್ಷಗಾನ ಮಂಡಳಿ ನಡೆದು ಬಂದ ದಾರಿಯನ್ನು ವಿವರಿಸಿದಲ್ಲದೆ ಇಂದಿನ ಯಕ್ಷಗಾನ ಪ್ರದರ್ಶನದ ಪ್ರಾಯೋಜಕರಿಗೂ ಕಲಾವಿದರಿಗೂ, ನೆರೆದ ಸರ್ವ ಕಲಾ ಪ್ರೇಮಿಗಳಿಗೂ ಶುಭ ಹಾರೈಸಿದರು.
ಜನಪ್ರಿಯ ಯಕ್ಷಗಾನ ಕಲಾ ಮಂಡಳದ ಉಪಾಧ್ಯಕ್ಷ ಖ್ಯಾತ ಮೃದಂಗ ವಾದಕ ದಿನೇಶ್ ಪ್ರಭು ಮತ್ತು ಜಿಎಸ್‍ಬಿ ಮಂಡಲ ಸಯಾನ್ ಗಣೇಶೋತ್ಸವದ ಪ್ರಧಾನ ಅರ್ಚಕ ವೇ| ಮೂ| ಕೃಷ್ಣ ಭಟ್ ಅವರ ಸ್ಮರಣಾರ್ಥ ಜರಗಿದ ಯಕ್ಷಗಾನದ ಮಧ್ಯದಲ್ಲಿ ಈರ್ವರ ಕುಟುಂಬಿಕರ ಸದಸ್ಯರನ್ನು ಹಾಗೂ ಪ್ರಸಂಗಕರ್ತ ಎಂ.ಟಿ ಪೂಜಾರಿ ಅವರನ್ನು ಅತಿಥಿüಗಳು ಶಾಲು, ಫಲ ಪುಷ್ಪ ಸ್ಮರಣಿಕೆಗಳನ್ನಿತ್ತು ಗೌರವಿಸಿದರು.
ವೇದಿಕೆಯಲ್ಲಿ ಅತಿಥಿಗಳಾಗಿ ಮುಲುಂಡ್ ಜಿ.ಎಸ್.ಬಿ ಸಭಾದ ಅಧ್ಯಕ್ಷ ಸುರೇಂದ್ರ ಬಾಳಿಗ ಮತ್ತ್ತು ಕಾಮತ್ ಕೇಟರರ್ಸ್ ಮಾಲಕ ಸತೀಶ್ ಕಾಮತ್, ಮಹಾರಾಷ್ಟ್ರ ಸೇವಾ ಸಂಘದ ಕಲಾ ವಿಭಾಗದ ಕಾರ್ಯಾದರ್ಶಿ ವಿನೋದ್ ಸೌದಗರ್, ಜಿಎಸ್‍ಬಿ ಸಭಾ ಸಯಾನ್‍ನ ಸದಸ್ಯ ಸಚ್ಚಿದಾನಂದ್ ಪಡಿಯಾರ್ ಮತ್ತಿತರರನ್ನು ಗೌರವಿಸಲಾಯಿತು. ಮಂಡಳಿಯ ಗೌ| ಕೋಶಾಧಿಕಾರಿ ಯೋಗೇಶ್ ಢಾಂಗೆ ಅತಿಥಿüಗಳನ್ನು ಪರಿಚಯಿಸಿದರು. ಗೌ| ಕಾರ್ಯದರ್ಶಿ ವಿಠಲ ಪ್ರಭು ಕುಕ್ಕೆಹಳ್ಳಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.