Monday 12th, May 2025
canara news

ಬಿಲ್ಲವರ ಭವನದಲ್ಲಿ ಮಹಿಳಾ ವಿಭಾಗದಿಂದ ನಡೆಸಲ್ಪಟ್ಟ ವೈದ್ಯಕೀಯ ಶಿಬಿರ

Published On : 02 Apr 2019   |  Reported By : Rons Bantwal


ಅಜಾಗರೂಕತೆಯೇ ಅಸ್ವಸ್ಥತೆಯ ಮೂಲ: ಡಾ| ಶ್ಯಾಮಿಲಿ ಎಸ್.ಪೂಜಾರಿ

(ಚಿತ್ರ / ವರದಿ : ರೊನಿಡಾ ಮುಂಬಯಿ)

ಮುಂಬಯಿ, ಮಾ.31: ವೃತ್ತಿ, ಜೀವನ ಸಾಧನೆ, ಗಳಿಕೆಯ ಧಾವಂತದಲ್ಲಿರುವ ಮಾನವನ ಒತ್ತಡದ ಜೀವನದಲ್ಲಿ ಆರೋಗ್ಯದ ಕಾಳಜಿಗೆ ಮಹತ್ವ ನೀಡದಿರುವುದೇ ಅನಾರೋಗ್ಯದ ಬೆಳವಣಿಗೆಗೆ ಪ್ರಧಾನ ಕಾರಣವಾಗಿದೆ. ಅಂದರೆ ಅಜಾಗರೂಕತೆಯೇ ಅಸ್ವಸ್ಥತೆಗೆ ಮೂಲ ಎನ್ನುವುದು ಸೂಕ್ತ. ಕ್ಯಾನ್ಸರ್‍ನಂತಹ ಕಾಯಿಲೆಗಳನ್ನು ಆರಂಭದಿಂದಲೇ ಗುರುತಿಸಿ ಕೊಂಡು ಶಮನಗೊಳಿಸಲು ಸಾಧ್ಯ. ಆದರೆ ನಾವು ಸಣ್ಣಪುಟ್ಟ ನೆಪಒಡ್ಡಿ ಲಕ್ಷ್ಯ ನೀಡದೆ ಅದು ಗುಣಮುಖ ಹೊಂದದ ಹಂತಕ್ಕೆ ಬಂದಾಗ ಎಚ್ಚರವಾಗುವುದರಿಂದ ಯಾವುದೇ ಕಾಯಿಲೆಗಳನ್ನು ನಮ್ಮ ದೇಹವನ್ನು ಆವರಿಸುವುದು. ಆದುದರಿಂದ ಮೊದಲ ಹಂತದಲ್ಲೇ ಆರೋಗ್ಯ ತಪಾಸನೆ ಮಾಡಿಸಿ ಜೀವನವನ್ನು ಆರೋಗ್ಯದಾಯಕವಾಗಿಸಿ ಎಂದು ಆರೋಗ್ಯದ ಬಗ್ಗೆ ಸದಾ ಕಾಳಜಿ ವಹಿಸಿ ತಮ್ಮ ಜೊತೆಗೆ ಸಮಾಜದ ಸ್ವಸ್ಥ ್ಯವ ನ್ನೂ ಕಾಪಾಡುವಂತೆ ಟಾಟಾ ಮೆಮೋರಿಯಲ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಶ್ಯಾಮಿಲಿ ಎಸ್.ಪೂಜಾರಿ ಸಲಹಿದರು.

ಬಿಲ್ಲವರ ಅಸೋಸಿಯೇಶನ್ ಮಹಿಳಾ ವಿಭಾಗವು ಟಾಟಾ ಮೆಮೋರಿಯಲ್ ಆಸ್ಪತ್ರೆಯ ಸಹಯೋಗದೊಂದಿಗೆ ಇಂದಿಲ್ಲಿ ಆದಿತ್ಯವಾರ ಬೆಳಿಗ್ಗೆ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಭವನದಲ್ಲಿ ವೈದ್ಯಕೀಯ ಶಿಬಿರ ಆಯೋಜಿಸಿದ್ದು, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ ಮಾರ್ಗದರ್ಶನ ಹಾಗೂ ಮಹಿಳಾ ವಿಭಾಗಧ್ಯಕ್ಷೆ ಜಯಂತಿ ವಿ.ಉಳ್ಳಾಲ್ ಸಾರಥ್ಯದಲ್ಲಿ ನಡೆಸಲ್ಪಟ್ಟ ಶಿಬಿರವನ್ನು ಬಿಲ್ಲವರ ಅಸೋಸಿಯೇಶನ್‍ನ ಉಪಾಧ್ಯಕ್ಷ ಹರೀಶ್ ಜಿ.ಅವಿೂನ್ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.

ಟಾಟಾ ಆಸ್ಪತ್ರೆಯ ಡಾ| ಶ್ಯಾಮಿಲಿ ಎಸ್.ಪೂಜಾರಿ, ಡಾ| ಅದಿತಿ ಆಗರ್‍ವಾಲ್, ಡಾ| ಮಂಗಳಾ ಪಾಟೀಲ್ ಸೇರಿದಂತೆ ಇತರ ನುರಿತ ವೈದ್ಯರು ಭಾಗವಹಿಸಿ ಧರ್ಮಾರ್ಥವಾಗಿ ವೈದ್ಯಕೀಯ ಶಿಬಿರ ನಡೆಸಿದ್ದು, ಶಿಬಿರದಲ್ಲಿ ಕ್ಯಾನ್ಸರ್ ತಡೆಗಟ್ಟುವಿಕೆ ಬಗ್ಗೆ ವೈದ್ಯರು ವಿಶೇಷ ತಪಾಸಣೆ ನಡೆಸಿ ಬಿಲ್ಲವರ ಅಸೋಸಿಯೇಶನ್‍ನಂತಹ ಸೇವಾ ಸಂಸ್ಥೆಗಳಿಂದ ಇಂತಹ ಶಿಬಿರಗಳ ಅವಶ್ಯಕತೆಯಿದೆ. ಕ್ಯಾನ್ಸರ್ ಅಂದಾಕ್ಷಣ ಭಯ ಪಡುವ ಅಗತ್ಯವಿಲ್ಲ ಬದಲಾಗಿ ಇಂತಹ ಲಕ್ಷಣಗಳೇನೂ ಕಾಡಿದರೂ ತತ್‍ಕ್ಷಣವೇ ಜಾಗೃತರಾಗಿ ಪ್ರಥಮ ಚಿಕಿತ್ಸೆಗೆ ಒಳಗಾಗಿ ಆರೋಗ್ಯವನ್ನು ಕಾಪಾಡಿಕೊಳ್ಳಿರಿ ಎಂದರು.

ಕಾರ್ಯಕ್ರಮದಲ್ಲಿ ಭಾರತ್ ಬ್ಯಾಂಕ್‍ನ ನಿರ್ದೇಶಕ ಪುರುಷೋತ್ತಮ ಎಸ್.ಕೋಟ್ಯಾನ್, ಸಮಾಜ ಸೇವಕರಾದ ಗೋಪಾಲ್ ಪಾಲನ್ ಮಲಾಡ್, ಶಂಕರ್ ಕೆ.ಸುವರ್ಣ ಖಾರ್, ಶಿವರಾಮ ಪೂಜಾರಿ, ಮಾಧವ ಐಲ್, ಮಹಿಳಾ ವಿಭಾಗದ ಉಪ ಕಾರ್ಯಧ್ಯಕ್ಷೆಯರಾದ ಪ್ರಭಾ ಕೆ.ಬಂಗೇರ ಮತ್ತು ಗಿರಿಜಾ ಚಂದ್ರಶೇಖರ್, ಜೊತೆ ಕಾರ್ಯದರ್ಶಿಗಳಾದ ಜಯಂತಿ ಎಸ್.ಕೋಟ್ಯಾನ್ ಮತ್ತು ಕುಸುಮಾ ಅವಿೂನ್, ಯಶೋಧಾ ಎನ್.ಟಿ ಪೂಜಾರಿ, ಪೂಜಾ ಪುರುಷೋತ್ತಮ್ ಕೋಟ್ಯಾನ್ ಸೇರಿದಂತೆ ಅಸೋಸಿಯೇಶನ್‍ನ ವಿವಿಧ ಸ್ಥಳೀಯ ಸಮಿತಿಗಳ ಪದಾಧಿಕಾರಿಗಳು, ಸದಸ್ಯರನೇಕರು ಹಾಜರಿದ್ದು ಶಿಬಿರದ ಫಲಾನುಭವ ಪಡೆದರು.

ಮಹಿಳಾ ವಿಭಾಗಧ್ಯಕ್ಷೆ ಜಯಂತಿ ವಿ.ಉಳ್ಳಾಲ್ ಸ್ವಾಗತಿಸಿ ಅತಿಥಿüವರ್ಯರಿಗೆ ಹಾಗೂ ವೈದ್ಯಾಧಿಕಾರಿಗಳಿಗೆ ಪುಷ್ಪಗುಪ್ಛಗಳನ್ನೀಡಿ ಗೌರವಿಸಿದರು. ಅಸೋಸಿಯೇಶನ್‍ನ ಗೌರವ ಪ್ರಧಾನ ಕಾರ್ಯದರ್ಶಿ ಧನಂಜಯ ಎಸ್.ಕೋಟ್ಯಾನ್ ಪ್ರಸ್ತಾವನೆಗೈದು ಕಾರ್ಯಕ್ರಮ ನಿರೂಪಿಸಿದರು. ಮಹಿಳಾ ಗೌರವ ಕಾರ್ಯದರ್ಶಿ ಸುಮಿತ್ರಾ ಎಸ್.ಬಂಗೇರ ಧನ್ಯವದಿಸಿದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here