Sunday 11th, May 2025
canara news

ನೂತನ ಐಷಾರಾಮಿ ಕೆನರಾ ಪಿಂಟೋ ಬಸ್‍ಗಳ ಸೇವೆಯಾರಂಭ

Published On : 12 Apr 2019   |  Reported By : Rons Bantwal


ವಿೂರಾರೋಡ್ (ಮುಂಬಯಿ)-ಮಂಗಳೂರು ಪ್ರಯಾಣದ ಸೇವೆ ಲಭ್ಯ

ಮುಂಬಯಿ, ಎ.05: ಸಾರಿಗೆ, ಸಂಚಾರ ಸೇವೆ, ಪಯಣ ಸೇವೆಯಲ್ಲಿ ಸುಮಾರು ಏಳು ದಶಕಗಳ ಸೇವೆಯಲ್ಲಿ ತೊಡಗಿಸಿ ಕೊಂಡು ಪ್ರಯಾಣಕ್ಕೆ ಹೆಸರುವಾಸಿಯಾದ ಕೆನರಾ ಪಿಂಟೋ ಟ್ರಾವೆಲ್ಸ್ ಇದೀಗ ಮಂಗಳೂರು-ಮುಂಬಯಿ ಮಾರ್ಗವಾಗಿ ನೂತನ ಐಷಾರಾಮಿ ಬಸ್‍ಗಳ ಸೇವೆಯಾರಂಭಿಸಿದೆ.

ಕಳೆದ ಗುರುವಾರ ಮಂಗಳೂರು ಅಲ್ಲಿನ ಮೋಟಾರುಖಾನೆಯಲ್ಲಿ ಕರ್ನಾಟಕ ರಾಜ್ಯ ಸಚಿವ ಸಂಪುಟ ಮಾನ್ಯತಾ ರಾಜ್ಯ ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ ಐಷಾರಾಮಿ ಬಸ್‍ಗಳ ಸೇವೆಗೆ ಚಾಲನೆ ನೀಡಿದರು. ಕೆನರಾ ಪಿಂಟೋ ಟ್ರಾವೆಲ್ಸ್‍ನ ಮಾಲೀಕ ಸುನೀಲ್ ಪಾಯ್ಸ್ ಪುತ್ತೂರು ಅಭಿವಂದಿಸಿದರು.

ಫಾ| ಐವಾನ್ ಡಿಸೋಜಾ ಬಸ್‍ಗಳನ್ನು ಆಶೀರ್ವಚನ ಗೈದರು. ಮಂಗಳೂರು ಮಹಾನಗರ ಪಾಲಿಕೆಯ ನಗರ ಸೇವಕ ಪ್ರವೀಣ್ ಆಳ್ವ, ಸಂಸ್ಥೆಯ ವ್ಯವಸ್ಥಾಪಕರು, ನೌಕರವೃಂದ ಮತ್ತು ವಿವಿಧ ಏಜೆಂಟರು ಉಪಸ್ಥಿತರಿದ್ದರು.

ಕಳೆದ 67 ವರ್ಷಗಳಿಂದ ಪ್ರಯಾಣಿಕರ ಸೇವೆಯಲ್ಲಿ ಕೆನರಾ ಪಿಂಟೊ ಟ್ರಾವೆಲ್ಸ್ ಸಂಸ್ಥೆ ಇದೀಗ ಗ್ರಾಹಕರ ಅನುಕೂಲಕ್ಕಾಗಿ ಸಂಜೆ 4.00 ಗಂಟೆಗೆ ಮುಂಬಯಿ ಉಪನಗರದ ವಿೂರಾರೋಡ್‍ನಿಂದ ಮಂಗಳೂರು ಬಸ್ ಸೇವೆ ಪ್ರಾರಂಭಿಸಿದೆ.B11RI – SHIFT VOLVO MULTI AXILE ಬಸ್ಸುಗಳು ಇದೀಗಲೇ ಸೇವೆಯಲ್ಲಿ ಲಭ್ಯವಿದ್ದು ಅತ್ಯಾಧುನಿಕ ಈ ಬಸ್ಸ್‍ಗಳು ಎಂದಿನಂತೆಯೇ ಪ್ರಯಾಣಿಕರ ಸೇವೆಯಲ್ಲಿವೆ.

ಕೆನರಾ ಪಿಂಟೊ ದೈನಂದಿನ ಸರ್ವಿಸ್‍ಗಳು ನಿಮ್ಮ ಸೇವೆಯಲ್ಲಿದ್ದು ಟಿಕೇಟು ಬುಕ್ಕಿಂಗ್‍ಗಾಗಿ ಹತ್ತಿರದ ಏಜೆಂಟರನ್ನು ಯಾ ಮಂಗಳೂರು, ಸುರತ್ಕಲ್, ಉಡುಪಿ, ಮುಂಬಯಿ ಕಛೇರಿಗಳನ್ನು ಸಂಪರ್ಕಿಸುವಂತೆ ಅಥವಾ WWW.CANARAPINTO.COM and https://www.eticketsfortravel.com/ ಇದಕ್ಕೆ ಲಾಗೀನ್ ಮಾಡಿ ತಮಗೆ ಅನುಕೂಲಕರವಾದ ಸೀಟುಗಳನ್ನು ಕಾಯ್ದಿರಿಸಿ ಸುಖಕರ ಪ್ರಯಾಣ ನಡೆಸುವಂತೆ ಸುನೀಲ್ ಪಾಯ್ಸ್ ತಿಳಿಸಿದ್ದಾರೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here