Sunday 11th, May 2025
canara news

ಎ.13: ಬಿಲ್ಲವರ ಶ್ರೀ ವಿಠೋಭ ಭಜನಾ ಮಂದಿರ ಹೆಜಮಾಡಿ ಕೋಡಿ

Published On : 12 Apr 2019   |  Reported By : Rons Bantwal


ಸಾಂತಕ್ರೂಜ್‍ನ ಬಿಲ್ಲವ ಭವನದಲ್ಲಿ ಜೀರ್ಣೋದ್ಧಾರ ಸಮಿತಿ ಸ್ನೇಹ ಮಿಲನ

ಮುಂಬಯಿ, ಎ.10: ಸುಮಾರು ನೂರು ಸಂವತ್ಸರಗಳ ಐತಿಹ್ಯ ಹೊಂದಿರುವ ಬಿಲ್ಲವರ ಶ್ರೀ ವಿಠೋಭ ಭಜನಾ ಮಂದಿರ ಹೆಜಮಾಡಿ ಕೋಡಿ ಇಲ್ಲಿಯ ಸ್ಥಳೀಯ ಬಿಲ್ಲವ ಸದಸ್ಯರಿಂದ ನಿರ್ಮಾಣಗೊಂಡಿದ್ದು, ಪ್ರತೀ ಗುರುವಾರ ಪೂಜೆ, ಭಜನಾ ಕಾರ್ಯಕ್ರಮ ನಡೆಯುತ್ತಿದೆ. ಇದೀಗ ಮಂದಿರ ಶಿಥಿüಲಾವಸ್ಥೆಯಲ್ಲಿದ್ದು ಅದನ್ನು ಜೀರ್ಣೋದ್ಧಾರ ಗೊಳಿಸುವ ಕಾರ್ಯ ಯೋಜನೆಯನ್ನು ಆಡಳಿತ ಸಮಿತಿ ಕೈಗೆತ್ತಿಕೊಂಡಿದೆ. ಸುಮಾರು 75 ಲಕ್ಷ ರೂಪಾಯಿಗಳ ಅಂದಾಜು ವೆಚ್ಚದಲ್ಲಿ ಯೋಜನೆ ಮಂದಿರ ಪುನನಿರ್ಮಾಣಗೊಂಡು ಬ್ರಹ್ಮ ಕಲಶಾಭಿ ಧಾರ್ಮಿಕ ಕೆಲಸಗಳು ನಡೆಯಲಿವೆ. 12 ತಿಂಗಳೊಳಗೆ ನೂತನ ಮ ದಿರ ನಿರ್ಮಾಣ ಗೊಳ್ಳಲಿದೆ.

ಈ ಪ್ರಯುಕ್ತ ಇದೇ ಬರುವ ಎಪ್ರಿಲ್.13ನೇ ಶನಿವಾರ ಸಾಯಂಕಾಲ 4.00 ಗಂಟೆಗೆ ಸಾಂತಕ್ರೂಜ್ ಪೂರ್ವದ ಬಿಲ್ಲವ ಭವನದಲ್ಲಿ ಜೀರ್ಣೋದ್ಧಾರ ಸಮಿತಿಯ ಆಶ್ರಯದಲ್ಲಿ ಸ್ನೇಹ ಮಿಲನ ಆಯೋಜಿಸಲಾಗಿದೆ. ಅತಿಥಿü ಅಭ್ಯಾಗತರಾಗಿ ಹೊಟೇಲ್ ಉದ್ಯಮಿ ಆ್ಯವೆನ್ಯೂ ಗ್ರೂಫ್ ಆಫ್ ಹೊಟೇಲ್ಸ್‍ನ ನಿರ್ದೇಶಕ ರಘುರಾಮ ಕೆ.ಶೆಟ್ಟಿ, ಭಾರತ್ ಬ್ಯಾಂಕ್‍ನ ನಿರ್ದೇಶಕರುಗಳಾದ ವಾಸುದೇವ ಆರ್.ಕೋಟ್ಯಾನ್ , ಭಾಸ್ಕರ ಎಂ.ಸಾಲ್ಯಾನ್, ಉದ್ಯಮಿ ಸತ್ಯ ಎಸ್.ಕೋಟ್ಯಾನ್ ಬೊಯಿಸರ್, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ್ ಎಸ್.ಪೂಜಾರಿ, ಹೊಟೇಲ್ ಲಲಿತ್ ಗೋರೆಗಾಂವ್ ನಿರ್ದೇಶನ ಜೆ.ವಿ ಕೋಟ್ಯಾನ್, ರಾಮ ಜಿ.ಸುವರ್ಣ ಗೋರೆಗಾಂವ್, ಸಿಎ| ಅಶ್ವಜಿತ್ ಹೆಜ್ಮಾಡಿ ಮತ್ತಿತರರು ಭಾಗವಹಿಸಲಿದ್ದಾರೆ.

ಶ್ರೀ ವಿಠೋಭ ಭಜನಾ ಮಂದಿರ ಹೆಜಮಾಡಿ ಕೋಡಿ ಇದರ ಪದಾಧಿಕಾರಿಗಳು, ಸದಸ್ಯರು, ದಾನಿಗಳು ಮತ್ತು ಭಜನಾ ಮಂದಿರದ ಸಂಬಂಧಿತರು ಹಾಜರಾಗುವಂತೆ ಊರ ಸಮಿತಿ ಅಧ್ಯಕ್ಷ ಉಮಾನಾಥ್ ಅಮೀನ್, ಗೌ| ಪ್ರ| ಕಾರ್ಯದರ್ಶಿ ಬಿ.ಬಿ ವೇಣುಗೋಪಾಲ್ ಹಾಗೂ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮೋಹನ್‍ದಾಸ್ ಹೆಜ್ಮಾಡಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here