Sunday 11th, May 2025
canara news

ಕರುನಾಡ ಸಿರಿ ವಾರ್ಷಿಕ ಸಮ್ಮೇಳನ-ಕವಿಗೋಷ್ಠಿ-ಸನ್ಮಾನ-ಸಾಂಸ್ಕೃತಿಕ ವೈಭವ

Published On : 14 Apr 2019   |  Reported By : Rons Bantwal


ಕನ್ನಡ ಸಂಸ್ಕೃತಿಗೆ ಅಳಿಯುವ ಭಯವಿಲ್ಲ : ಡಾ| ಸುನೀತಾ ಎಂ.ಶೆಟ್ಟಿ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಎ.13: ಮನುಷ್ಯನಿಗೆ ಮುಖ್ಯವಾಗಿ ಇರಬೇಕಾದದ್ದು ಭಾಷೆಯ ಮೇಲಿನ ಪ್ರೀತಿ. ಅದನ್ನು ನಿಮ್ಮ ಸಂಸ್ಥೆ ಉಳಿಸಿಕೊಂಡು ಬಂದಿದೆ. ಅದಕ್ಕಾಗಿ ಕರುನಾಡ ಸಿರಿ ಸಂಸ್ಥೆ ಅಭಿನಂದನಾರ್ಹ. ಇಂದಿನ ಈ ಕಾಲದಲ್ಲಿ ಭಾಷೆ, ಸಂಸ್ಕೃತಿ ಉಳಿಯಬೇಕಾದರೆ ಯುವಕರ ಪಡೆ ಮುಂದೆ ಬರಬೇಕಾಗುವ ಅವಶ್ಯಕತೆಯಿದೆ. ಇಲ್ಲಿ ಯುವ ಜನತೆಯೆ ಮುಂದೆ ಬಂದು ಕಾರ್ಯ ನಿರ್ವಾಹಿಸುತ್ತಿದ್ದಾರೆ. ಅದ್ದರಿಂದಾಗಿ ನಮ್ಮ ಕನ್ನಡ ಸಂಸ್ಕೃತಿ ಅಳಿಯುವ ಭಯವಿಲ್ಲ ಎಂದು ಸೃಜನಾ ಬಳಗದ ಮಾರ್ಗದರ್ಶಿ, ಹಿರಿಯ ಸಾಹಿತಿ, ಕವಯತ್ರಿ ಡಾ| ಸುನೀತಾ ಎಂ.ಶೆಟ್ಟಿ ತಿಳಿಸಿದರು.

ಇಂದಿಲ್ಲಿ ಶನಿವಾರ ಮಾಟುಂಗಾ ಪೂರ್ವದ ಮೈಸೂರು ಅಸೋಸಿಯೇಶನ್ ಸಭಾಗೃಹದಲ್ಲಿ ಮುಂಬಯಿ ಕನ್ನಡಿಗರ ಕ್ರಿಯಾಶೀಲ ಸಂಸ್ಥೆ ಕರುನಾಡ ಸಿರಿ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರೊಂದಿಗೆ ಸಂಸ್ಥೆಯ ವಾರ್ಷಿಕ ಸಮ್ಮೇಳನ ನಡೆಸಿದ್ದು ಸಮಾರಂಭ ಉದ್ಘಾಟಿಸಿ, ಕವಿ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಸುನೀತಾ ಶೆಟ್ಟಿ ಮಾತನಾಡಿದರು.

ಈ ಶುಭಾವಸರದಲ್ಲಿ ವೇದಿಕೆಯಲ್ಲಿ ಪ್ರಶಸ್ತಿ ಪುರಸ್ಕೃತ ನಾಟಕಕಾರ ಸಾ.ದಯಾ, ಸೌಮ್ಯ ಸಿರೀಶ ಐಯ್ಯಂಗಾರ್, ಶಿಕ್ಷಕ ಅನಂತ ಮೇಘರಾಜ್, ಶಿವಯೋಗಿ ಸಣ್ಣಮಣೆ, ಕರುನಾಡ ಸಿರಿಯ ಸಂಸ್ಥೆಯ ಯೋಗೇಶ್ ಸುಪೇಕರ್, ಅನಿಲ್ ಗೌಡ, ರಕ್ಷಿತ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದು ಮಹಾನಗರದಲ್ಲಿನ ಪ್ರತಿಭಾವಂತ ವಿದ್ಯಾಥಿರ್üಗಳಿಗೆ ವಿದ್ಯಾಥಿರ್üವೇತನ ವಿತರಿಸಿ ಶುಭಾರೈಸಿದರು.

ಕವಿಗೋಷ್ಠಿಯಲ್ಲಿ ಮಹಾನಗರದ ಹೆಸರಾಂತ ಕವಿಗಳಾದ ಡಾ| ಕರುಣಾಕರ ಎನ್.ಶೆಟ್ಟಿ, ಡಾ| ಜಿ.ಪಿ ಕುಸುಮಾ, ಗೋಪಾಲ ತ್ರಾಸಿ, ಸುರೇಖಾ ನಾಯಕ್ ತಮ್ಮತಮ್ಮ ಕವಿತೆಗಳನ್ನು ಪ್ರಸ್ತುತ ಪಡಿಸಿದ್ದು, ಸಾ.ದಯಾ (ದಯಾನಂದ ಸಾಲ್ಯಾನ್) ಕವಿಗೋಷ್ಠಿಯನ್ನು ನಿರೂಪಿಸಿದರು.

ನ್ಯಾಯವಾದಿ ಹೆಚ್.ಕೆ ಸುಧಾಕರ ಅರಾಟೆ, ಕರುಣಾಕರ ಜಿ.ಪುತ್ರನ್, ಡಾ| ಪ್ರಕಾಶ ಮುಡಬಿದ್ರಿ, ಲಂಕೇಶ ಗೋಲಪಲ್ಲಿ, ರಾಜೇಶ್ರೀ ಶಿರ್ವಾಡ್ಕರ್ ಸಯಾನ್, ಡಾ| ಹರೀಶ ಸಾಲಿಯಾನ್, ಲೀಲಾ ಖಾರ್ವೆ, ಅಶೋಕ್ ಎಸ್.ಸುವರ್ಣ, ಗೋಪಾಲ ತ್ರಾಸಿ, ದಯಾಸಾಗರ್ ಚೌಟ, ರಕ್ಷಿತ್ ಶೆಟ್ಟಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಗಣೇಶ್ ಶೆಟ್ಟಿ ಪ್ರಾರ್ಥನೆಯನ್ನಾಡಿದರು. ಕರುನಾಡ ಸಿರಿಯ ಸಂಸ್ಥೆಯ ಮುಖ್ಯಸ್ಥ ಬಾಲಚಂದ್ರ ದೇವಾಡಿಗ, ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿದರು. ನಿಶ್ಮಿತಾ ಸಾಲ್ಯಾನ್ ಮತ್ತು ಭೀಮರಾಯ ಚಿಲ್ಕ ಅತಿಥಿüಗಳನ್ನು ಪರಿಚಯಿಸಿದರು. ಸೌಮ್ಯ ಸಾಲ್ಯಾನ್ ಮತ್ತು ಅಭಿಷೇಕ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಅರುಣ್ ಧೋಣೆ ವಂದಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮವಾಗಿ ನಗರದ ಯುವ ಪ್ರತಿಭೆಗಳು, ದ ಹೋಪ್ ಫೌಂಡೇಶನ್ ಧಾರಾವಿ ಇದರ ಕಲಾವಿದ ಮಕ್ಕಳು, ಬೆಂಕಿ ಬಾಯ್ಸ್, ರಿಮ್ ಗ್ರೂಪ್ ಮತ್ತಿತರ ತಂಡಗಳು ನೃತ್ಯ, ಹಾಡು, ಕಿರುನಾಟಕ ಇತ್ಯಾದಿಗಳನ್ನು ಪ್ರಸ್ತುತ ಪಡಿಸಿ ಮನರಂಜಿಸಿದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here