Sunday 11th, May 2025
canara news

ಅದಮಾರು ಮಠದಲ್ಲಿ ಸಂಭ್ರಮಿಸಲ್ಪಟ್ಟ 23ನೇ ವಾರ್ಷಿಕ ರಾಮನವಮಿ

Published On : 14 Apr 2019   |  Reported By : Rons Bantwal


ಭಜನಾ ರೂಪಕ-ಪಲ್ಲಕ್ಕಿ ಉತ್ಸವ-ಗಜ ರಥೋತ್ಸವ-ವಿಶೇಷ ಪ್ರವಚನ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಎ.13: ಅಂಧೇರಿ ಪಶ್ಚಿಮದ ಇರ್ಲಾ ಅಲ್ಲಿನ ಶ್ರೀ ಅದಮಾರು ಮಠದಲ್ಲಿ ಸ್ಥಾಪಿತ ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಶ್ರೀ ಅದಮಾರು ಮಠದ ಮುಂಬಯಿ ಶಾಖೆಯಲ್ಲಿ ಇಂದಿಲ್ಲಿ ಶನಿವಾರ 23ನೇ ವಾರ್ಷಿಕ ರಾಮನವಮಿಯನ್ನು ಧಾರ್ಮಿಕ ಮತ್ತು ಸಾಂಸ್ಕೃತಿಕ ವೈಭವದೊಂದಿಗೆ ಅದ್ದೂರಿಯಿಂದ ಸಂಭ್ರಮಿಸಲ್ಪಟ್ಟಿತು. ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮಿಜಿ ಮಠದಲ್ಲಿ ಪ್ರತಿಷ್ಠಾಪಿತ ಶ್ರೀದೇವರಿಗೆ ಪೂಜೆ ನೆರವೇರಿಸಿ ಸಾಂಪ್ರದಾಯಿಕವಾಗಿ ರಾಮನವಮಿ ಆಚರಿಸಿ ವಿಶೇಷ ಪ್ರವಚನಗೈದು ನೆರೆದ ಭಕ್ತರಿಗೆ ಹರಸಿದರು.

ರಾಮ ನವಮಿ ನಿಮಿತ್ತ ದಿನವಿಡೀ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಬೆಳಿಗ್ಗೆ ಶ್ರೀದೇವರಿಗೆ ಪಂಚಾಮೃತ ಅಭಿಷೇಕ, ಮಧ್ಯಾಹ್ನ ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ, ಸಂಜೆ ರಥೋತ್ಸವ ನಂತರ ಪಲ್ಲಕ್ಕಿ ಉತ್ಸವ, ರಾತ್ರಿ ಮಹಾಪೂಜೆ ನಡೆಸಲ್ಪಟ್ಟಿತು.

ಮಧ್ಯಾಂತರದಲ್ಲಿ ಚಾರ್ಕೋಪ್ ಕನ್ನಡ ಬಳಗ, ವಾಗ್ದೇವಿ ಭಜನಾ ಮಂಡಳಿಗಳು ಹರಿ ಭಜನೆ ನಡೆಸಿದರು. ಗೋಕುಲ ಭಜನಾ ಮಂಡಳಿ ಸಯನ್ ಸಂಕ್ಷೀಪ್ತ ರಾಮಾಯಣ `ಭಜನಾ ರೂಪಕ' ಪ್ರಸ್ತುತ ಪಡಿಸಿತು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ದಿನೇಶ್ ವಿನೋದ್ ಕೋಟ್ಯಾನ್ ತೋನ್ಸೆ ಬಳಗ ಸೆಕ್ಸೊಫೆÇೀನ್ ವಾದನವನ್ನು, ಸುಮಾರು ಆರು ನೃತ್ಯ ಕಲಾವಿದರು ಭರತನಾಟ್ಯವನ್ನು ಹಾಗೂ ಶಾಂತಿಲಕ್ಷ್ಮೀ ಉಡುಪ ರಚಿಸಿ ನಿರ್ದೇಶಿಸಿದ `ಅಂಬಾ ಪ್ರತಿಜ್ಞೆ ' ಕಿರು ನಾಟಕವನ್ನು ಕಲಾವಿದರು ಪ್ರದರ್ಶಿಸಿದರು.

ನೂರಾರು ಗಣ್ಯರು ಸೇರಿದಂತೆ ಅನೇಕ ಪುರೋಹಿತರು, ಭಕ್ತಾಭಿಮಾನಿಗಳು ಉತ್ಸವದಲ್ಲಿ ಪಾಲ್ಗೊಂಡಿದ್ದರು. ಅದಮಾರು ಮಠ ಮುಂಬಯಿ ಶಾಖೆಯ ದಿವಾಣ ಲಕ್ಷಿ ್ಮೀನಾರಾಯಣ ಮುಚ್ಚಿಂತ್ತಾಯ ಸುಖಾಗಮನ ಬಯಸಿದರು. ಮಠದ ಮುಂಬಯಿ ಶಾಖೆಯ ವ್ಯವಸ್ಥಾಪಕ ಪಡುಬಿದ್ರಿ ವಿ.ರಾಜೇಶ್ ರಾವ್ ಕೃತಜ್ಞತೆ ಸಮರ್ಪಿಸಿದರು.

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here