Tuesday 23rd, April 2019
canara news

ಕುಂದಾಪುರ ರೊಜರಿ ಮಾತಾ ಇಗರ್ಜಿಯಲ್ಲಿ ಭಕ್ತಿ ಪೂರ್ವಕ ಗರಿಗಳ ಭಾನುವಾರ ಆಚರಣೆ

Published On : 14 Apr 2019   |  Reported By : Bernard Dcosta


ಕುಂದಾಪುರ,ಎ.14: ‘ನಮಗಾಗಿ ಯೇಸು ಸ್ವಾಮಿ ಬಹಳವಾದ ಕಶ್ಟ ಹಿಂಸೆ ಅನುಭವಿಸಿದರು. ಅವರ ಪಟ್ಟ ಕಶ್ಟವನ್ನು ಮನದಟ್ಟು ಮಾಡಿಕೊಳ್ಳಬೇಕು. ಯೇಸು ಸ್ವಾಮಿ ಯೇಸು ಎಷ್ಟು ಕರುಣಾಮಯಿ ಎಂದರೆ ಆತನನ್ನು ಶಿಲುಬೆಗೇರಿಸಿದವರನ್ನು ‘ದೇವರೆ ಅವರರನ್ನು ಕ್ಷಮಿಸಿ ಅವರು ಎನು ಮಾಡುತ್ತಿದಾರೆಂದು ಅರಿಯರು, ತನ್ನ ಒಂದು ಕೆನ್ನೆಗೆ ಹೊಡೆದವರಿಗೆ ಮತ್ತೊಂದು ಕೆನ್ನೆಯನ್ನು ತೋರಿಸಿದಾತ, ಆತ ನಮಗಾಗಿ ರಕ್ತ ಹರಿಸಿ, ಆತನ ರಕ್ತದಿಂದ ನಮ್ಮನ್ನು ಶುದ್ದ ಗೊಳಿಸಿದಾತ, ಈ ಪವಿತ್ರ ವಾರದಲ್ಲಿ ಯೇಸು ನಮಗಾಗಿ ಪಟ್ಟ ಯಾತನೆ ಸ್ಮರಿಸಿ ಈ ಪವಿತ್ರ ವಾರವನ್ನು ಪ್ರಾರ್ಥನೆ, ದಾನ, ಕ್ಷಮೆಗಳ ಮೂಲಕ ಆಚರಿಸೋಣ” ಎಂದು ಕುಂದಾಪುರ ಇಗರ್ಜಿಯ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಸಂದೇಶ ನೀಡಿದರು.

 

ಬಲಿದಾನಕ್ಕೂ ಮೊದಲು ಕುಂದಾಪುರ ರೊಜರಿ ಮಾತಾ ಇಗರ್ಜಿಯ ಮೇರಿ ಮಾತೆಯ ಗ್ರೊಟ್ಟೊದ ಮುಂದೆ ಕುಂದಾಪುರ ಸಂತ ಮೇರಿಸ್ ಪಿ.ಯು.ಕಾಲೇಜಿನ ಪ್ರಾಂಶುಪಾಲ ವಂ|ಧರ್ಮಗುರು ಪ್ರವೀಣ್ ಅಮ್ರತ್ ಮಾರ್ಟಿಸ್ ಗರಿಗಳನ್ನು ಆಶಿರ್ವದಿಸಿದರು. ತರುವಾಯ ಇಗರ್ಜಿಯ ಹೊರ ರಸ್ತೆಯಲ್ಲಿ ಮತ್ತು ಇಗರ್ಜಿಯ ಮೈದಾನದಲ್ಲಿ ಗರಿಗಳನ್ನು ಹಿಡಿಕೊಂಡು ಭಕ್ತಿಪೂರ್ವಕ ಮೆರವಣಿಗೆಯನ್ನು ನೆಡೆಸಲಾಯಿತು, ಬಳಿಕ ಇಗರ್ಜಿಯಯಲ್ಲಿ ಪವಿತ್ರ ಬಲಿದಾನವನ್ನು ಅರ್ಪಿಸಿದರು. ಈ ಪವಿತ್ರ ಬಲಿದಾನದಲ್ಲಿ ಸಹಾಯಕ ಧರ್ಮಗುರು ವಂ|ರೋಯ್ ಲೋಬೊ ಗರಿಗಳ ಭಾನುವಾರದ ದೇವರ ವಾಕ್ಯದಲ್ಲಿ ಯೇಸು ಅನುಭವಿಸಿದ ಯಾತನೆ ಮತ್ತು ಶಿಲುಬೆ ಮರಣದ ವಾಕ್ಯವನ್ನು ಇತರ ಧರ್ಮಗುರುಗಳಡೊನೆ ವಾಚಿಸಿ ನೆಡೆಸಿಕೊಟ್ಟರು. ಈ ಭಕ್ತಿ ಪೂರ್ವಕ ಗರಿಗಳ ಭಾನುವಾವರದ ವಿಧಿಯಲ್ಲಿ, ಅನೇಕ ಧರ್ಮ ಭಗಿನಿಯರು ಪಾಲನ ಮಂಡಳಿ ಉಪಾಧ್ಯಕ್ಷ, ಕಾರ್ಯದರ್ಶಿ, ಸದಸ್ಯರು ಮತ್ತು ಹಲವಾರು ಭಕ್ತರು ಈ ಪೂಜಾವಿಧಿಯಲ್ಲಿ ಪಾಲುಗೊಂಡರು.

 
More News

ಸ್ವರ್ಗೀಯ ತುಳಸಿ ವೇಣುಗೋಪಾಲ್-ಡಾ| ಬಿ.ಎ ಸನದಿ ಅವರಿಗೆ
ಸ್ವರ್ಗೀಯ ತುಳಸಿ ವೇಣುಗೋಪಾಲ್-ಡಾ| ಬಿ.ಎ ಸನದಿ ಅವರಿಗೆ
ಕುಂದಾಪುರದ ಆಥಿರ್üಕ ಅಸಹಾಯಕ ವಧುವಿಗೆ ಪಾಣಿಗ್ರಹಣ ನೆರವೇರಿಸಿದ
ಕುಂದಾಪುರದ ಆಥಿರ್üಕ ಅಸಹಾಯಕ ವಧುವಿಗೆ ಪಾಣಿಗ್ರಹಣ ನೆರವೇರಿಸಿದ
ಮುಲುಂಡ್ ಕನ್ನಡ ಸಂಘದ ಉದ್ಘಾಟನಾ ಸಮಾರಂಭದ ಕಾರ್ಯಕ್ರಮ
ಮುಲುಂಡ್ ಕನ್ನಡ ಸಂಘದ ಉದ್ಘಾಟನಾ ಸಮಾರಂಭದ ಕಾರ್ಯಕ್ರಮ

Comment Here