Monday 22nd, July 2019
canara news

ವಿ.ಆರ್ ಕೋಟ್ಯಾನ್‍ರ ಮಾತೃಶ್ರೀ ಸುಂದರಿ ಆರ್.ಬಂಗೇರ ನಿಧನ

Published On : 15 Apr 2019   |  Reported By : Rons Bantwal

ಮುಂಬಯಿ, ಎ.15: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಧುರೀಣ, ಹೆಜಮಾಡಿ ಬಿಲ್ಲವರ ಸಂಘದ ಅಭಿವೃದ್ಧಿಯ ರೂವಾರಿ, ಭಾರತ್ ಬ್ಯಾಂಕ್‍ನ ಮಾಜಿ ಕಾರ್ಯಧ್ಯಕ್ಷ ವಾಸುದೇವ ಆರ್.ಕೋಟ್ಯಾನ್ ಇವರ ಮಾತೃಶ್ರೀ ಸುಂದರಿ ರಾಜು ಬಂಗೇರ (89.) ಇಂದಿಲ್ಲಿ ಸೋಮವಾರ ಮುಂಜಾನೆ ಮಹಾನಗರದ ವಿಲೇಪಾರ್ಲೆ ಪಶ್ಚಿಮದಲ್ಲಿನ ನಾನಾವಟಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು.

ಇನ್ನಬೈಲು ಮನೆತನದವರಾಗಿದ್ದ ಮೃತರು ಮೂರು ಗಂಡು, ಮೂರು ಹೆಣ್ಣು ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ.

ಸುಂದರಿ ಕೋಟ್ಯಾನ್ ನಿಧನಕ್ಕೆ ಭಾರತ್ ಬ್ಯಾಂಕ್‍ನ ಕಾರ್ಯಧ್ಯಕ್ಷ ಜಯ ಸಿ.ಸುವರ್ಣ, ಉಪ ಕಾರ್ಯಾಧ್ಯಕ್ಷೆ ನ್ಯಾ| ರೋಹಿಣಿ ಜೆ.ಸಾಲ್ಯಾನ್, ಆಡಳಿತ ನಿರ್ದೇಶಕ ಸಿ.ಆರ್ ಮೂಲ್ಕಿ ಮತ್ತು ನಿರ್ದೇಶಕರು, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ, ಗೌ| ಪ್ರ| ಕಾರ್ಯದರ್ಶಿ ಧನಂಜಯ ಶಾಂತಿ, ಮಾಜಿ ಅಧ್ಯಕ್ಷರುಗಳಾದ ಎಲ್.ವಿ ಅವಿೂನ್, ನಿತ್ಯಾನಂದ ಡಿ.ಕೋಟ್ಯಾನ್ ಸೇರಿದಂತೆ ಸರ್ವ ಪದಾಧಿಕಾರಿಗಳು, ಹೆಜಮಾಡಿ ಬಿಲ್ಲವರ ಸಂಘದ ಸರ್ವ ಪದಾಧಿಕಾರಿಗಳು, ಹಿರಿಯ ಉದ್ಯಮಿಗಳಾದ ಬೋಳ ರಘುರಾಮ ಕೆ.ಶೆಟ್ಟಿ, ಜಗನ್ನಾಥ ವಿ.ಕೋಟ್ಯಾನ್, ಲೆಕ್ಕ ಪರಿಶೋಧಕ ಸಿಎ| ಅಶ್ವಜಿತ್ ಹೆಜ್ಮಾಡಿ, ಶ್ರೀ ವಿಠೋಭ ಭಜನಾ ಮಂದಿರ ಹೆಜಮಾಡಿ ಕೋಡಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮೋಹನ್‍ದಾಸ್ ಹೆಜ್ಮಾಡಿ, ಹರೀಶ್ ಹೆಜ್ಮಾಡಿ ಮತ್ತಿತರ ಗಣ್ಯರು ಸಂತಾಪ ಸೂಚಿಸಿದ್ದಾರೆ.
More News

ತೋನ್ಸೆ ಶ್ರೀ ಬ್ರಹ್ಮಬೈದರ್ಕಳ ಪಂಚ ಧೂಮಾವತಿ ಗರೋಡಿ ಸೇವಾ ಟ್ರಸ್ಟ್‍ನ ಪ್ರಥಮ ವಾರ್ಷಿಕ ಮಹಾಸಭೆ
ತೋನ್ಸೆ ಶ್ರೀ ಬ್ರಹ್ಮಬೈದರ್ಕಳ ಪಂಚ ಧೂಮಾವತಿ ಗರೋಡಿ ಸೇವಾ ಟ್ರಸ್ಟ್‍ನ ಪ್ರಥಮ ವಾರ್ಷಿಕ ಮಹಾಸಭೆ
ಶ್ರೀ ಕೆ.ಟಿ ವೇಣುಗೋಪಾಲ್-ಕಪಸಮ ರಾಷ್ಟ್ರೀಯ ಮಾಧ್ಯಮಶ್ರೀ-2019 ಪುರಸ್ಕಾರ ಪ್ರಕಟ  ಪ್ರಥಮ ಪುರಸ್ಕಾರಕ್ಕೆ ಹಿರಿಯ ಪತ್ರಕರ್ತ ನ್ಯಾ| ವಸಂತ ಕಲಕೋಟಿ ಆಯ್ಕೆ
ಶ್ರೀ ಕೆ.ಟಿ ವೇಣುಗೋಪಾಲ್-ಕಪಸಮ ರಾಷ್ಟ್ರೀಯ ಮಾಧ್ಯಮಶ್ರೀ-2019 ಪುರಸ್ಕಾರ ಪ್ರಕಟ ಪ್ರಥಮ ಪುರಸ್ಕಾರಕ್ಕೆ ಹಿರಿಯ ಪತ್ರಕರ್ತ ನ್ಯಾ| ವಸಂತ ಕಲಕೋಟಿ ಆಯ್ಕೆ
ಶಿವಾ'ಸ್ ಹೇರ್ ಡಿಝೈನರ್ಸ್ ಪ್ರಸಿದ್ಧಿಯ ಶಿವರಾಮ ಕೆ.ಭಂಡಾರಿಗೆ ಲಂಡನ್‍ನಲ್ಲಿ ಭಾರತ್ ರತ್ನ ಜೀವಮಾನ  ಪ್ರಶಸ್ತಿ-2019 ಪ್ರಾಪ್ತಿ
ಶಿವಾ'ಸ್ ಹೇರ್ ಡಿಝೈನರ್ಸ್ ಪ್ರಸಿದ್ಧಿಯ ಶಿವರಾಮ ಕೆ.ಭಂಡಾರಿಗೆ ಲಂಡನ್‍ನಲ್ಲಿ ಭಾರತ್ ರತ್ನ ಜೀವಮಾನ ಪ್ರಶಸ್ತಿ-2019 ಪ್ರಾಪ್ತಿ

Comment Here