Sunday 11th, May 2025
canara news

ಬಂಟರ ಸಂಘ ಮುಂಬಯಿ ಸಂಭ್ರಮಿಸಿದ ವಿಶ್ವ ಬಂಟರ ದಿನಾಚರಣೆ ಬಿಸು ಪರ್ಬ-ವಾರ್ಷಿಕ ಸ್ನೇಹ ಸಮ್ಮೀಲನ-ಸರ್ವೋತ್ಕೃಷ್ಟ ಬಂಟ ಸಾಧಕ ಪುರಸ್ಕಾರ ಪ್ರದಾನ

Published On : 17 Apr 2019   |  Reported By : Rons Bantwal


(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)

ಮುಂಬಯಿ, ಎ.14: ಮಹಾನಗರದ ಕುರ್ಲಾ ಇಲ್ಲಿನ ಬಂಟರ ಭವನದ ಶ್ರೀಮತಿ ರಾಧಾಬಾಯಿ ತಿಮ್ಮಪ್ಪ ಭಂಡಾರಿ ಸಭಾಗೃಹದಲ್ಲಿ ಇಂದಿಲ್ಲಿ ರವಿವಾರ ಬಂಟರ ಸಂಘ ಮುಂಬಯಿ ಬಿಸು ಪರ್ಬ-2019, ವಾರ್ಷಿಕ ಸ್ನೇಹ ಸಮ್ಮೀಲನ, ಬಂಟ ಸಾಧಕ `ಪುರುಷ-ಮಹಿಳೆ' ಪುರಸ್ಕಾರ ಪ್ರದಾನ, ವಿಶ್ವ ಬಂಟರ ದಿನಾಚರಣೆ, ಸಾಂಸ್ಕೃತಿಕ ವೈಭವವನ್ನು ಸಾಂಪ್ರದಾಯಿಕ ಸಡಗರದಿಂದ ಸಂಭ್ರಮಿಸಿತು. ಸಂಘದ ಅಧ್ಯಕ್ಷ ಪದ್ಮನಾಭ ಎಸ್.ಪಯ್ಯಡೆ ಅಧ್ಯಕ್ಷತೆಯಲ್ಲಿ ನೆರವೇರಿದ ತ್ರಿವಳಿ ಸಂಭ್ರಮವನ್ನು ಅತಿಥಿü ಅಭ್ಯಾಗತರಾಗಿದ್ದ ಭವಾನಿ ಫೌಂಡೇಶನ್ ನವಿ ಮುಂಬಯಿ ಸಂಸ್ಥಾಪಕ ಅಧ್ಯಕ್ಷÀ ದಡ್ದಂಗಡಿ ಚೆಲ್ಲಡ್ಕ ಕೆ.ಡಿ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿದರು.

ಗೌರಹ್ವಾನಿತ ಅತಿಥಿüಗಳಾಗಿ ಮಾಜಿ ಭಾರತೀಯ ಕ್ರಿಕೆಟಿಗ ಕೃಷ್ಣಮಚಾರಿ ಶ್ರೀಕಾಂತ್, ಸ್ಕೈಟೆಕ್ ಸಂಸ್ಥೆಯ ಆಡಳಿತ ನಿರ್ದೇಶಕ ಚಂದ್ರಹಾಸ ಎಸ್.ಶೆಟ್ಟಿ ಥಾಣೆ ಉಪಸ್ಥಿತರಿದ್ದು, ಪ್ರಶಸ್ತಿ ಪ್ರಾಯೋಜಕರನ್ನು ಒಳಗೊಂಡು ಸಂಘವು ವಾರ್ಷಿಕವಾಗಿ ಕೊಡಮಾಡುವ `ಕಣಂಜಾರು ಆನಂದ ಶೆಟ್ಟಿ ಸ್ಮಾರಕ ಯಕ್ಷಗಾನ ಕಲಾ ಪ್ರಶಸ್ತಿ'ಯನ್ನು ಹಿರಿಯ ಯಕ್ಷಗಾನ ಕಲಾವಿದ ಶ್ಯಾಮ ಶೆಟ್ಟಿ ಅವರಿಗೆ ಮತ್ತು ಜ್ಯೋತಿ ಆರ್.ಎನ್ ಶೆಟ್ಟಿ ಪ್ರಾಯೋಜಕತ್ವದ `ಶ್ರೀಮತಿ ಪ್ರೇಮಾ ನಾರಾಯಣ ರೈ ಪ್ರಶಸ್ತಿ'ಯನ್ನು ಅರುಷಾ ಎನ್.ಶೆಟ್ಟಿ ಇವರಿಗೆ ಪ್ರದಾನಿಸಿ ಪುರಸ್ಕೃತರನ್ನು ಅಭಿನಂದಿಸಿದರು.

ಸಂಜೆ ನಡೆಸಲ್ಪಟ್ಟ ಸಂಘದ ವಾರ್ಷಿಕ ಸ್ನೇಹ ಸಮ್ಮೀಳನ-2019 ಸಮಾರಂಭದ ಅಧ್ಯಕ್ಷತೆ ಪದ್ಮನಾಭ ಎಸ್. ಪಯ್ಯಡೆ ವಹಿಸಿದ್ದು, ಅತಿಥಿü ಅಭ್ಯಾಗತರಾಗಿ ನಿವೃತ್ತ ಹಿರಿಯ ನ್ಯೂಕ್ಲೀಯರ್ ವಿಜ್ಞಾನಿ ಡಾ| ಎ.ಪಿ ಜಯರಾಮ್, ಆದಾಯ ತೆರಿಗೆ ಹೆಚ್ಚುವರಿ ತನಿಖಾ ನಿರ್ದೇಶಕ ಜನಾರ್ದನ್ ಸನಾತನ್, ಅತಿಥಿüಗಳಾಗಿ ಉದ್ಯಮಿಗಳಾದ ಅರಿಬೈಲು ಬಾಬು ಶೆಟ್ಟಿ ಫೆÇೀರ್ಟ್, ಸುಭಕರ್ ಶೆಟ್ಟಿ ಮಲಾಡ್, ಭಾಸ್ಕರ್ ಶೆಟ್ಟಿ ಕಾಶೀವಿೂರಾ, ರವೀಂದ್ರನಾಥ ಎಂ.ಭಂಡಾರಿ, ಡಾ| ವಿಜೇತ ಸಂಜೀವ ಶೆಟ್ಟಿ, ಸಿಎ| ಆತ್ಮಾನಂದ ಆರ್.ಶೆಟ್ಟಿ, ದಿವಾಕರ ಶೆಟ್ಟಿ ಇಂದ್ರಾಳಿ, ಸಂಘದ ವಿಶ್ವಸ್ಥ ಸದಸ್ಯ ಉಳ್ತೂರು ಮೋಹನ್‍ದಾಸ್ ಶೆಟ್ಟಿ, ಗೌ| ಕೋಶಾಧಿಕಾರಿ ಪ್ರವೀಣ್ ಬಿ.ಶೆಟ್ಟಿ, ಜತೆ ಕಾರ್ಯದರ್ಶಿ ಮಹೇಶ್ ಎಸ್.ಶೆಟ್ಟಿ, ಜತೆ ಕೋಶಾಧಿಕಾರಿ ಗುಣಪಾಲ್ ಶೆಟ್ಟಿ ಐಕಳ, ಮಹಿಳಾಧ್ಯಕ್ಷೆ ರಂಜನಿ ಸುಧಾಕರ್ ಹೆಗ್ಡೆ, ಯುವ ವಿಭಾಗಧ್ಯಕ್ಷ ಶರತ್ ವಿ.ಶೆಟ್ಟಿ ವೇದಿಕೆಯನ್ನು ಅಲಂಕರಿಸಿದ್ದರು.

ಈ ಶುಭಾವಸರÀದಲ್ಲಿ ಡಾ| ಪಿ.ವಿ ಶೆಟ್ಟಿ ಪ್ರಾಯೋಜಕತ್ವದ ರಮಾನಾಥ ಎಸ್. ಪಯ್ಯಡೆ ಸ್ಮಾರಕ `ಸರ್ವೋತ್ಕೃಷ್ಟ ಬಂಟ ಸಾಧಕ ಪುರುಷ-2019 ಪುರಸ್ಕಾರ'ವನ್ನು ಸಂಘದ ಹಿರಿಯ ಧುರೀಣ, ಮಾಜಿ ಅಧ್ಯಕ್ಷ ಎಂ.ಡಿ ಶೆಟ್ಟಿ (ಮೂಳೂರು ದೇಜು ಶೆಟ್ಟಿ) ಇವರಿಗೆ ಹಾಗೂ ಡಾ| ಮನೋಹರ್ ಹೆಗ್ಡೆ ಮತ್ತು ಆಶಾ ಮನೋಹರ್ ಹೆಗ್ಡೆ ಪ್ರಾಯೋಜಕತ್ವದ ದಿ| ಶೆಫಾಲಿ ಎಂ.ಹೆಗ್ಡೆ ಸ್ಮಾರಕ `ಸರ್ವೋತ್ಕೃಷ್ಟ ಬಂಟ ಸಾಧಕ ಮಹಿಳೆ-2019 ಪುರಸ್ಕಾರ'ವನ್ನು ಶ್ರೀಮತಿ ಶರಣ್ಯ ಹೆಗ್ಡೆ ಇವರಿಗೆ ಪ್ರಶಸ್ತಿ ಪ್ರಾಯೋಜಕರುಗಳು ಮತ್ತು ಅತಿಥಿüಗಳು ಪ್ರದಾನಿಸಿ ಶುಭಾರೈಸಿದರು.

ಬೆಳಿಗ್ಗೆ ಅಧ್ಯಕ್ಷರು ಬಂಟ ಧ್ವಜಾರೋಹಣಗೈದÀು ಸಾಂಕೇತಿಕವಾಗಿ ಸಂಭ್ರಮಕ್ಕೆ ಚಾಲನೆಯನ್ನಿತ್ತರು. ಬಳಿಕ ಸಂಘದ ಆವರಣದಲ್ಲಿನ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಪೂಜೆಗಳನ್ನು ನಡೆಸಲಾಯಿತು. ಮಂದಿರದ ಪ್ರಧಾನ ಅರ್ಚಕ ವಿದ್ವಾನ್ ಅರವಿಂದ ಬನ್ನಿಂತ್ತಾಯ ಪೂಜಾಧಿಗಳನ್ನು ನೆರವೇರಿಸಿ ತೀರ್ಥಪ್ರಸಾದ ವಿತರಿಸಿ ಅನುಗ್ರಹಿಸಿದರು. ಸಾಂಸ್ಕೃತಿಕ ವೈಭವದ ಪ್ರಯುಕ್ತ ಸಂಘದ ಒಂಭತ್ತು ಪ್ರಾದೇಶಿಕ ಸಮಿತಿಗಳ, ಮಹಿಳಾ ಮತ್ತು ಯುವ ವಿಭಾಗದ ಕಲಾವಿದರು ವೈವಿಧ್ಯಮಯ ನೃತ್ಯಾವಳಿ, ಸಾಂಸ್ಕೃತಿಕ ವೈಭವ ಪ್ರಸ್ತುತ ಪಡಿಸಿದರು. ಬಂಟರ ಸಂಘದ ಆಡಳಿತ ಮಂಡಳಿ ಸದಸ್ಯರು ಮತ್ತು ಶ್ರೀ ಮಹಾವಿಷ್ಣು ಕೃಪಾ ಬಂಟ ಯಕ್ಷಗಾನ ಕಲಾ ವೇದಿಕೆಯ ಕಲಾವಿದರು ಅಜೆಕಾರು ಬಾಲಕೃಷ್ಣ ನಿರ್ದೇಶನ, ಸತೀಶ್ ಶೆಟ್ಟಿ ಪಟ್ಲ ಭಾಗವತಿಕೆದಲ್ಲಿ `ಕೃಷ್ಣ ಕೃಷ್ಣ ಶ್ರೀಕೃಷ್ಣಾ' ಯಕ್ಷಗಾನ ಪ್ರದರ್ಶಿಸಿದರು.

ಬಂಟ ಜುಮಾದಿಯನ್ನು ವೇದಿಕೆಯಲ್ಲಿ ಪ್ರತಿಷ್ಠಾಪಿಸಲಾಗಿದ್ದು, ಬಂಟಗೀತೆಯೊಂದಿಗೆ ಸಂಭ್ರಮ ಆದಿಗೊಂಡಿತು. ಪದ್ಮನಾಭ ಪಯ್ಯಡೆ ಸ್ವಾಗತಿಸಿದರು. ಕವಿತಾ ಐ.ಆರ್ ಶೆಟ್ಟಿ ಪ್ರಾರ್ಥನೆಯನ್ನಾಡಿ ಅತಿಥಿü ಪರಿಚಯಗೈದರು. ಕು| ಅಕ್ಷಯ ಶೆಟ್ಟಿ, ಉಪಾಧ್ಯಕ್ಷ ಚಂದ್ರಹಾಸ ಕೆ.ಶೆಟ್ಟಿ, ಮಮತಾ ಎಂ.ಶೆಟ್ಟಿ ಪುರಸ್ಕೃತರನ್ನು ಪರಿಚಯಿಸಿದರು. ಕರ್ನೂರು ಮೋಹನ್ ರೈ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು. ಅಶೋಕ್ ಪಕ್ಕಳ ಕಾರ್ಯಕ್ರಮ ನಿರೂಪಿಸಿದರು. ಸಿಎ| ಸಂಜೀವ ಶೆಟ್ಟಿ ಸಂಘದ ವಾರ್ಷಿಕ ಚಟುವಟಿಕೆಗಳ ಸ್ಥೂಲ ಮಾಹಿತಿ ಭಿತ್ತರಿಸಿ ಕೃತಜ್ಞತೆ ಸಮರ್ಪಿಸಿದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here