Sunday 11th, May 2025
canara news

ಗೋರೆಗಾಂವ್ ಪಶ್ಚಿಮದಲ್ಲಿ ಮೊಡೇಲ್ ಬ್ಯಾಂಕ್ ಲಿಮಿಟೆಡ್‍ನ 24ನೇ ಶಾಖೆ ಉದ್ಘಾಟನೆ

Published On : 02 May 2019   |  Reported By : Rons Bantwal


ವಿಶ್ವಾಸವೇ ಆಥಿ೯ಕ ಭದ್ರತೆ ಆಗಿರುತ್ತದೆ: ರೋಯ್‍ಸ್ಟನ್ ಬ್ರಗನ್ಝ

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಮೇ.01: ಯಾವೊತ್ತೂ ಶ್ರಮಜೀವನದಿಂದಲೇ ಸಾಧನೆ ಸಿದ್ಧಿ ಸಾಧ್ಯವಾಗುವುದು. ನಾವು ಪರಸ್ಪರ ಎಷ್ಟು ದಯಾಳುಗಳಾಗಿ ಹಸನ್ಮುಖಿಗಳಾಗಿ ವ್ಯವಹಾರಿಸುತ್ತೆವೆಯೋ ಅದೇ ನಮ್ಮ ಪಾಲಿಗೆ ಸಮೃದ್ಧಿಯ ಆಶೀರ್ವಾದವಾಗಿ ಫಲಿಸುತ್ತದೆ. ಹಣದ ವ್ಯವಹಾರ ಜೀವನೋಪಾಯವಷ್ಟೇ. ಐಶ್ವರ್ಯ (ಮನಿ) ಎನ್ನುವುದು ವ್ಯವಹಾರ ಚಲಾವಣಾ ಕ್ರಿಯೆಯೇ ಹೊರತು ಬದುಕುವಲ್ಲ. ಆದರೆ ಜೀವನ ಅನ್ನುವುದು ವಿಶ್ವಾಸದ ಪ್ರತೀಕವಾಗಿದೆ. ದ್ವಿಪಾಶ್ರ್ವ ನಂಬಿಕೆಯೇ ಹಣಕಾಸು ವ್ಯವಹಾರದ ಯಶಸ್ಸುವಾಗಿದೆ. ಇಬ್ಬರೊಳಗಿನ ವಿಶ್ವಾಸವೇ ಆಥಿರ್üಕ ಭದ್ರತೆ ಆಗಿರುತ್ತದೆ. ಎಂದು ಗ್ರಾಮೀಣ್ ಕ್ಯಾಪಿಟಲ್ ಇಂಡಿಯಾ ಲಿಮಿಟೆಡ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ರೋಯ್‍ಸ್ಟನ್ ಬ್ರಗನ್ಝ ನುಡಿದರು.

ಮಹಾರಾಷ್ಟ್ರ ದಿನಾಚರಣೆ ಮತ್ತು ವಿಶ್ವ ಕಾರ್ಮಿಕ ದಿನದ ಶುಭಾವಸರವಾದ ಇಂದು ಬುಧವಾರ ಗೋರೆಗಾಂವ್ ಪಶ್ಚಿಮದ ಎಂ.ಜಿ ರಸ್ತೆಯಲ್ಲಿನ ಏಕ್‍ವೀರ ಪ್ರಸಾದ್ ಕಟ್ಟಡದಲ್ಲಿ ಮೊಡೇಲ್ ಕೋ.ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ತನ್ನ 24ನೇ ನೂತನ ಶಾಖೆ ಸೇವಾರ್ಪಣೆ ಗೊಳಿಸಿದ್ದು ಬ್ರಗನ್ಝ ರಿಬ್ಬನ್ ಕತ್ತರಿಸಿ ನೂತನ ಶಾಖೆ ಉದ್ಘಾಟಿಸಿ ಮಾತನಾಡಿದರು.

ಮೊಡೇಲ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಆಲ್ಬರ್ಟ್ ಡಬ್ಲ್ಯೂ.ಡಿಸೋಜಾ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಸಮಾರಂಭ ದಲ್ಲಿ ಗೋರೆಗಾಂವ್ ಪಶ್ಚಿಮದ ಅವರ್ ಲೇಡಿ ಆಫ್ ರೋಸರಿ ಚರ್ಚ್‍ನ ಮುಖ್ಯ ಧರ್ಮಗುರು ರೆ| ಫಾ| ಡಾ| ಫ್ರಾನ್ಸಿಸ್ ಕರ್ವಾಲೋ ದೀಪ ಪ್ರಜ್ವಲಿಸಿ ಆಶೀರ್ವಚನಗೈದು ಶಾಖೆಯನ್ನು ಗ್ರಾಹಕರ ಸೇವೆಗೆ ಅನುವು ಮಾಡಿದರು.

ಫಾ| ಕರ್ವಾಲೋ ಅನುಗ್ರಹ ನುಡಿಗಳನ್ನಾಡಿ ಕಾರ್ಯನಿರ್ವಹಣಾ ಹೊರತು ಜೀವನಧ್ಯೇಯವು ಅಪೂರ್ಣ. ಆದರೆ ಜನಸೇವೆಯಷ್ಟೇ ಹಣ ಸೇವೆಯೂ ಮುಖ್ಯ. ಕಾರಣ ಧನವೇ ಜೀವನೋಪಯದ ಶಕ್ತಿಯಾಗಿದೆ. ಯಾವುದೇ ಕ್ಷೇತ್ರದಲ್ಲೂ ಸಾಧನೆ ಮಾಡಿದ್ದಲ್ಲಿ ಯಶಸ್ಸು ಸಾಧ್ಯವಾಗುವುದು ಅನ್ನುವುದನ್ನು ಈ ಬ್ಯಾಂಕ್‍ನ ಮಹತ್ಕಾರ್ಯದಿಂದ ಅರ್ಥೈಸಬಹುದು. ಹಣಕಾಸು ವ್ಯವಹಾರದಲ್ಲಿ ಧನ ಲಾಭಕ್ಕಿಂತ ಸಂಬಂಧ ಲಾಭವೇ ಪ್ರಧಾನವಾದುದು. ಇದು ಜೀವ ಪೆÇ್ರೀತ್ಸಾಹಕ್ಕೆ ಉತ್ತೇಜನವಾಗಿ ವಿಶ್ವಾಸವಾಗಿ ಬೆಳೆಯುವುದು ಎಂದರು.

ಬ್ಯಾಂಕ್‍ನ ಈ ತನಕ ಸುಮಾರು 70,000 ಷೇರುದಾರರು ಇದ್ದು, ರೂಪಾಯಿ 37 ಕೋಟಿ ಷೇರು ಮೊತ್ತ ಹೊಂದಿದೆ. ಸದ್ಯ ರೂಪಾಯಿ 1,030 ಕೋಟಿ ಠೇವಣಿ ಹೊಂದಿ ಒಟ್ಟು ರೂಪಾಯಿ 1,600 ಕೋಟಿ ವ್ಯವಹಾರ ನಡೆಸಿದೆ. ಆ ಪಯ್ಕಿ ರೂಪಾಯಿ 570 ಕೋಟಿ ಮುಂಗಡ ಠೇವಣಿಯೊಂದಿಗೆ ಮುನ್ನಡೆಯುತ್ತಿದೆ. ನಗುಮುಖದ ಸೇವೆಯೇ ನಮ್ಮ ಧ್ಯೇಯವಾಗಿದ್ದು, ಯಾವೊತ್ತೂ ಚಿಕ್ಕದಾದುದೇ ಅಧಿಕ ಫಲೋತ್ಫಾದಕ ಅನ್ನುವಂತೆ ನಮ್ಮದು ಕಿರಿಯ ಬ್ಯಾಂಕ್ ಆಗಿದ್ದರೂ ಹಿರಿತನವುಳ್ಳದ್ದಾಗಿ ಸೇವಾ ಸತ್ಪಲತೆ ಹೊಂದಿದೆ. ಕಡಿಮೆ ಬಡ್ಡಿದೊಂದಿಗೆ ಹೆಚ್ಚು ಸೇವೆಗಳನ್ನೀಡುತ್ತಾ ಮಾನವೀಯ ಮೌಲ್ಯಗಳನ್ನು ಗೌರವಿಸಿ ಪೆÇ್ರೀತ್ಸಹಿಸುತ್ತಾ ಸೇವೆಯಲ್ಲಿ ಕಾರ್ಯತೃಪ್ತವಾಗಿದೆ ಎಂದು ಬ್ಯಾಂಕ್‍ನ ಈ ವರೇಗಿನ ವ್ಯವಹಾರ ವೈಶಿಷ್ಟ ್ಯವನ್ನು ಭಿತ್ತರಿಸಿ ಅಧ್ಯಕ್ಷೀಯ ಭಾಷಣವನ್ನುದ್ದೇಶಿಸಿ ಆಲ್ಬರ್ಟ್ ಡಿಸೋಜಾ ತಿಳಿಸಿದರು.

ಬ್ಯಾಂಕ್‍ನ ಸಂಸ್ಥಾಪಕಾಧ್ಯಕ್ಷ ಜೋನ್ ಡಿಸಿಲ್ವಾ ವೇದಿಕೆಯಲ್ಲಿ ಆಸೀನರಾಗಿದ್ದು ಮಾತನಾಡಿ ಬ್ಯಾಂಕ್ ಆಗಿ ಪರಿವರ್ತನೆಗೊಂಡ ಬಳಿಕದ 20 ವರ್ಷಗಳಲ್ಲಿ 24 ಶಾಖೆಗಳನ್ನೊಳಗೊಂಡ ಬ್ಯಾಂಕ್ ದಕ್ಷ ಸೇವೆಯಿಂದಲೇ ಗ್ರಾಹಕರ ವಿಶ್ವಾಸ ಗಳಿಸಿ ಕನಿಷ್ಠಾವಧಿಯಲ್ಲಿ ಸ್ವಂತಿಕೆಯ ಪ್ರತಿಷ್ಠೆ ರೂಢಿಸಿದೆ. ಆಧುನಿಕ ಬದುಕನ್ನು ಹರಸುವ ಯುವಜನತೆಗೆ ವಿಪುಲ ಸೇವಾವಕಾಶ ಒದಗಿಸಿ ಅವರಲ್ಲಿನ ಕೌಶಲ್ಯತೆ ವೃದ್ಧಿಸಿ ಉದ್ಯಮಿಗಳಾಗುವತ್ತ ಪೆÇ್ರೀತ್ಸಹಿಸುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಬ್ಯಾಂಕ್‍ನ ಉಪ ಕಾರ್ಯಾಧ್ಯಕ್ಷ ವಿಲಿಯಂ ಸಿಕ್ವೇರಾ, ನಿರ್ದೇಶಕರುಗಳಾದ ವಿನ್ಸೆಂಟ್ ಮಥಾಯಸ್, ಸಿಎ| ಪೌಲ್ ನಝರೆತ್, ಥೋಮಸ್ ಡಿ.ಲೋಬೊ, ಅಬ್ರಹಾಂ ಕ್ಲೇಮೆಂಟ್ ಲೊಬೋ, ಸಂಜಯ್ ಶಿಂಧೆ, ನ್ಯಾಯವಾದಿ ಪಿಯುಸ್ ವಾಸ್, ಬೆನೆಡಿಕ್ಟಾ ರೆಬೆಲ್ಲೋ, ಮರಿಟಾ ಡಿಮೆಲ್ಲೋ, ಬ್ಯಾಂಕ್‍ನ ಸಿಇಒ, ಮಹಾ ಪ್ರಬಂಧಕ ವಿಲಿಯಂ ಎಲ್.ಡಿಸೋಜಾ, ಉನ್ನತಾಧಿಕಾರಿಗಳಾದ ರಾಯ್ನ್ ಬ್ರಾಂಕೋ, ಜೆಸನ್ ಮಾರ್ಟಿಸ್, ಅನಿಲ್ ಮಿನೇಜಸ್, ಬೀಯೆಟಾ ಕಾರ್ವಾಲೋ, ಬಾಂಬೇ ಕಥೋಲಿಕ್ ಸಭಾ ಇದರ ಆ್ಯಂಟನಿ ಡಾಯಸ್, ಅಲೆಕ್ಸ್ ಡಿಸೋಜಾ ಗೋರೆಗಾಂವ್, ಕೊಂಕಣಿ ಸೇವಾ ಮಂಡಳ್ ಗೋರೆಗಾಂವ್ ಅಧ್ಯಕ್ಷ ಜೋನ್ಸನ್ ಡಿಸೋಜಾ, ಕಾರ್ಯದರ್ಶಿ ರಿಚಾರ್ಡ್ ಡೆಸಾ, ತಮಿಳ್ ಕಥೋಲಿಕ್ ಅಸೋಸಿಯೇಶನ್ ಗೋರೆಗಾಂವ್ ಅಧ್ಯಕ್ಷ ಮಣಿ ಸೆಲ್ವಾಂ, ಸೈಂಟ್ ಥೋಮಸ್ ಅಕಾಡೆಮಿ ಗೋರೆಗಾಂವ್ ಇದರ ಪ್ರಾಂಶುಪಾಲೆ ಭಗಿನಿ ಸಿ.ರಮೊನಾ, ಅಲ್ಬನ್ ಬ್ರಗನ್ಝ, ಹೆಸರಾಂತ್ ಸಂಗೀತಗಾರ ಹೆನ್ರಿ ಡಿಸೋಜಾ, ಕಟ್ಟಡದ ಮಾಲಕಿ ಡಾ| ಇಂದು ಮಹಾಜನ್, ಉದ್ಯಮಿ ಕಾರೋಲಿನ್ ಪಿರೇರಾ, ಸ್ಥಾನೀಯ ಗಣ್ಯರು ಸೇರಿದಂತೆ ಬ್ಯಾಂಕ್‍ನ ಷೇರುದಾರರು, ಗ್ರಾಹಕರು, ಹಿತೈಷಿಗಳು ಉಪಸ್ಥಿತರಿದ್ದು ಬ್ಯಾಂಕ್‍ನ ಶ್ರೇಯೋಭಿವೃದ್ಧಿಗೆ ಶುಭಾರೈಸಿದರು.

ಬ್ಯಾಂಕ್‍ನ ಉಪ ಕಾರ್ಯಾಧ್ಯಕ್ಷ ವಿಲಿಯಂ ಸಿಕ್ವೇರಾ ಸ್ವಾಗತಿಸಿ ಅತಿಥಿüಗಳಿಗೆ ಪುಷ್ಫಗುಪ್ಚಗಳನ್ನೀಡಿ ಗೌರವಿಸಿದರು. ನಿರ್ದೇಶಕ ಥೋಮಸ್ ಡಿ.ಲೋಬೊ ಪ್ರಸ್ತಾವನೆಗೈದರು. ಎಡ್ವರ್ಡ್ ರಾಸ್ಕಿನ್ಹಾ ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಶಾಖಾ ಪ್ರಬಂಧಕಿ ರೈನಾ ಫೆರ್ನಾಂಡಿಸ್ ಪಾರ್ಥನೆ ಪಠಿಸಿ ಧನ್ಯವದಿಸಿದರು. ರಾಷ್ಟ್ರಗೀತೆಯೊಂದಿಗೆ ಸಮಾರಂಭ ಸಮಾಪನ ಗೊಂಡಿತು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here