Friday 19th, April 2024
canara news

ಬಿರುವೆರ್ ಕುಡ್ಲ ಬಜಪೆ ಘಟಕ ಅಂತರ್ ವಲಯದ ಕ್ರಿಕೆಟ್ ಪಂದ್ಯಾಟ ಬಿ.ಕೆ ಸ್ಪಂದನ ಟ್ರೋಫಿ - 2019

Published On : 12 May 2019   |  Reported By : Rons Bantwal


ಇತ್ತೀಚಿಗೆ ಎಸ್.ಎನ್.ಎಸ್ ಪಾಲಿಟೆಕ್ನಿಕ್ ಮೈದಾನ, ಸುಂಕದಕಟ್ಟೆ ಯಲ್ಲಿ ನಡೆಯಿತು.ಕ್ರಿಕೆಟ್ ಪಂದ್ಯಾಟದಲ್ಲಿ ಮೊದಲ ಪ್ರಶಸ್ತಿ ಯನ್ನು ಬಿರುವೆರ್ ಕುಡ್ಲ ಎಕ್ಕಾರು ವಲಯ ಪಡೆಯಿತು.

ಎರಡನೇ ಪ್ರಶಸ್ತಿಯನ್ನು ಬಿರುವೆರ್ ಕುಡ್ಲ ಬಜಪೆ ವಲಯ ಪಡೆಯಿತು. ಮ್ಯಾನ್ ಆಪ್ ದಿ ಸೀರಿಸ್ ಪ್ರಶಸ್ತಿಯನ್ನು ಬಜಪೆ ವಲಯದ ಸದಸ್ಯ ಸಂತೋಷ್ ಪೂಜಾರಿ ಪಡೆದರು. ಮ್ಯಾನ್ ಆಪ್ ದಿ ಮ್ಯಾಚ್ ಪ್ರಶಸ್ತಿಯನ್ನು ಎಕ್ಕಾರು ವಲಯದ ದೀಪಕ್ ಸುವರ್ಣ ಪಡೆದರು.

ಈ ಪಂದ್ಯಾಟವು ಬಿರುವೆರ್ ಕುಡ್ಲ ಬಜಪೆ ಘಟಕದ ಸ್ಪಂದನ ತಂಡದ ಸಮಾಜಕ್ಕೆ ಒಂದು ಮಾದರಿ ಕ್ರಿಕೆಟ್ ಪಂದ್ಯಾಟವಾಗಿ ಮೂಡಿ ಬಂತು. ಈ ಪಂದ್ಯಾಟದಲ್ಲಿ ಪ್ರಶಸ್ತಿ ಪಡೆದ ವಿನ್ನರ್ಸ್ ಬಿರುವೆರ್ ಕುಡ್ಲ ಬಜಪೆ ಘಟಕ ಎಕ್ಕಾರು ವಲಯ 10000 ಸಾವಿರ ರೂಪಾಯಿ ಮತ್ತು ರನ್ನರ್ ಬಿರುವೆರ್ ಕುಡ್ಲ ಬಜಪೆ ಘಟಕ ಬಜಪೆ ವಲಯ 5000 ಸಾವಿರ ರೂಪಾಯಿ ಗಳನ್ನು ಕಡು ಬಡತನದಲ್ಲಿ ಇರುವ ಕಳೆದ ವಾರ ವಾಹನ ಅಪಘಾತದಲ್ಲಿ ತೀವ್ರ ಗಾಯಕ್ಕೆ ಒಳಗಾಗಿದ್ದ ಕಟೀಲು ಉಲ್ಲಂಜೆ ನಿವಾಸಿ ಪ್ರಸಾದ್ ರವರಿಗೆ ವೈದ್ಯಕೀಯ ನೆರವು ನೀಡಲಾಯಿತು. ಎರಡು ತಂಡಗಳು ಸ್ವಇಚ್ಚೆಯಿಂದ ತಾವು ಶ್ರಮಪಟ್ಟು ಆಡಿ ಪ್ರಶಸ್ತಿ ತಮ್ಮದಾಗಿಸಿ ಆ ಹಣವನ್ನು ಅಶಕ್ತರ ಕಣ್ಣೀರು ಒರೆಸುವ ಕಾರ್ಯಕ್ಕೆ ತೊಡಗಿಸುವ ಮೂಲಕ ಮಾನವೀಯ ಮೆರೆಯಿತು. ಈ ಸಂದರ್ಭದಲ್ಲಿ ಬಿರುವೆರ್ ಕುಡ್ಲ ಮಂಗಳೂರು ಕೇಂದ್ರ ಸಮಿತಿಯ ಅಧ್ಯಕ್ಷ ರಾಕೇಶ್ ಪೂಜಾರಿ ಬಳ್ಳಾಲ್ ಬಾಗ್, ಬಿರುವೆರ್ ಕುಡ್ಲ ಬಜಪೆ ಘಟಕದ ಅಧ್ಯಕ್ಷ ಶರತ್ ಪೂಜಾರಿ, ಎಕ್ಕಾರು ವಲಯದ ಗೌರವ ಸಲಹೆಗಾರರು ಪ್ರಕಾಶ್ ಕುಕ್ಯಾನ್ ಎಕ್ಕಾರು, ಅನ್ವಿತ್ ಕಟೀಲು NSUI ಜಿಲ್ಲಾ ಉಪಾಧ್ಯಕ್ಷರು. ಗಣೇಶ್ ಪೂಜಾರಿ ಬಜಪೆ ಗೌರವ ಸಲಹೆಗಾರರು, ರಿತೇಶ್ ಶೆಟ್ಟಿ, ಎಸ್.ಎನ್.ಎಸ್ ಕ್ರಿಕೆಟರ್ಸ್ ಸದಸ್ಯರು ಹಾಗೂ ಎಲ್ಲಾ ವಲಯದ ಸಂಚಾಲಕರು ಮತ್ತು ಸರ್ವಸದಸ್ಯರು ಉಪಸ್ಥಿತರಿದ್ದರು.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here