Monday 16th, September 2019
canara news

ಕಾರ್ಕಳದ ಪುಲ್ಕೇರಿ ಅಂಗನವಾಡಿಯಲ್ಲಿ ಸ್ತ್ರೀ ಶಕ್ತಿ ಗುಂಪು ಸದಸ್ಯೆಯರಿಗೆ ಮಾಹಿತಿ ಕಾರ್ಯಕ್ರಮ

Published On : 16 May 2019   |  Reported By : Rons Bantwal


ಕಾರ್ಕಳ:- ಸ್ಥಳೀಯ ಪುಲ್ಕೇರಿಯ ಅಂಗನವಾಡಿ ಕೇಂದ್ರದ ಮೂರು ಶ್ತ್ರೀ ಶಕ್ತಿ ಗುಂಪುಗಳ ಸದಸ್ಯೆಯರಿಗೆ ಮಾಹಿತಿ ಕಾರ್ಯಕ್ರಮ ಮೇ 15 ರಂದು ಬುಧವಾರ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಹಾಜರಿದ್ದ ದ.ಕ.ಜಿಲ್ಲಾ ಗ್ರಾಹಕ ಸಂಘಟನೆ ಒಕ್ಕೂಟ್ ಜತೆ ಕಾರ್ಯದರ್ಶಿ ರಾಯೀ ರಾಜ ಕುಮಾರ್, ಮೂಡುಬಿದಿರೆ ಯವರು ಗ್ರಾಹಕರ ಹಕ್ಕುಗಳ ಕುರಿತು ಮಾಹಿತಿ ನೀಡಿದರು. ಬಳಕೆದಾರರು ತಮ್ಮ ಹಕ್ಕುಗಳನ್ನು ಹೇಗೆ ಚಲಾಯಿಸಬೇಕು, ಪರಿಹಾರಗಳನ್ನು ಹೇಗೆ ಪಡೆದುಕೊಳ್ಳಬೇಕು ಎಂಬಿತ್ಯಾದಿ ಹಲವಾರು ಮಾಹಿತಿಗಳನ್ನು ತಿಳಿ ಹೇಳಿದರು. ಯಾವುದೇ ತೊಂದರೆಗಳು ಎದುರಾದಾಗ ಪರಿಹರಿಸಿಕೊಳ್ಳುವ ಮಾರ್ಗೋಪಾಯಗಳನ್ನು ಸೂಚಿಸಿದರು.

ವೇದಿಕೆಯಲ್ಲಿ ಹಾಜರಿದ್ದ ಕಾರ್ಕಳ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಶ್ರೀಮತಿ ಉಮಾರವರು ತಮ್ಮ ಇಲಾಖೆಯ ವಿವಿಧ ಕಾರ್ಯಕ್ರಮಗಳ ಪರಿಚಯವನ್ನು ಮಾಡಿಕೊಟ್ಟರು. ಇರ್ವತ್ತೂರು ಗ್ರಾಮದ ಪ್ರಥಮಿಕ ಕೇಂದ್ರದ ಸಹಾಯಕಿ ಕು|ಸಂಗೀತಾರವರು ಮಲೇರಿಯಾ, ಡೆಂಗ್ಯೂ, ಇತ್ಯಾದಿ ಖಾಯಿಲೆಗಳ ಮಾಹಿತಿ ನೀಡಿ ನೀರಿನ ಸದ್ಬಳಕೆಯನ್ನು ತಿಳಿಸಿಕೊಟ್ಟರು.

ಸ್ಪಂದನಾ, ಸಂಜನಾ, ಸಿಂಚನಾ ಎನ್ನುವ ಮೂರೂ ಸ್ತ್ರೀ ಶಕ್ತಿ ಗುಂಪುಗಳ ಎಲ್ಲಾ ಸದಸ್ಯೆಯರೂ ಕಾರ್ಯಕ್ರಮದ ಪ್ರಯೋಜನ ¥ಡೆದುಕೊಂಡರು. ಅಂಗನವಾಡಿ ಕೇಂದ್ರದ ಮೇಲ್ವಿಚಾರಕಿ ಶ್ರೀಮತಿ ಶಕೀಲಾ ಯಾನೆ ಸಾಕಮ್ಮ ರವರು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಅಂಗನವಾಡಿ ಕೇಂದ್ರ ಸಹಾಯಕಿ ಶ್ರೀಮತಿ ದೀಪಾರವರು ವಂದಿಸಿದರು.
More News

ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ `ಸ್ಟೈಲಿಂಗ್ ಅಟ್ ದ ಟಾಪ್' ಕೃತಿ ಬಿಡುಗಡೆ
ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ `ಸ್ಟೈಲಿಂಗ್ ಅಟ್ ದ ಟಾಪ್' ಕೃತಿ ಬಿಡುಗಡೆ
ಬ್ರಹ್ಮಶ್ರೀ ನಾರಾಯಣ ಗುರು 165ನೇ ಜಯಂತ್ಯೋತ್ಸವ ಸಂಭ್ರಮಿದ ಬಿಲ್ಲವರ ಅಸೋಸಿಯೇಶನ್
ಬ್ರಹ್ಮಶ್ರೀ ನಾರಾಯಣ ಗುರು 165ನೇ ಜಯಂತ್ಯೋತ್ಸವ ಸಂಭ್ರಮಿದ ಬಿಲ್ಲವರ ಅಸೋಸಿಯೇಶನ್
ಮಾಜಿ ಶಾಸಕ  ಜಗನ್ನಾಥ ಎ.ಶೆಟ್ಟಿ ನಿಧನ
ಮಾಜಿ ಶಾಸಕ ಜಗನ್ನಾಥ ಎ.ಶೆಟ್ಟಿ ನಿಧನ

Comment Here