Thursday 25th, April 2024
canara news

ಅದ್ದೂರಿಯಾಗಿ ನಡೆದ ಃಅಈ ಇಫ್ತಾರ್ ಕೂಟ ೨೦೧೯ ಹಾಗೂ ಸ್ಕಾಲರ್ಷಿಪ್ ಪ್ರಸ್ತಾವನಾ ಕಾರ್ಯಕ್ರಮ.

Published On : 17 May 2019   |  Reported By : Shodhan Prasad


ಅನಿವಾಸಿ ಕನ್ನಡಿಗರ ಪ್ರಖ್ಯಾತ ಸಮಾಜ ಸೇವಾ ಸಂಸ್ಥೆ ಬ್ಯಾರೀಸ್ ಕಲ್ತರಲ್ ಫೋರಮ್ ( BCF ) ವತಿಯಿಂದ ಇತ್ತೀಚೆಗೆ ದುಬೈ ಯಾ ಇರಾನಿಯನ್ ಕ್ಲಬ್ ಸಭಾಂಗಣದಲ್ಲಿ ಅದ್ದೂರಿಯ ಇಫ್ತಾರ್ ಮೀಟ್ 2019 ನೆರವೇರಿತು.

UAE ಯಾದ್ಯಂತ ಸುಮಾರು ಸಾವಿರಕ್ಕೂ ಮಿಕ್ಕಿ ಮುಸ್ಲಿಂ ಹಿಂದೂ ಕ್ರಿಶ್ಚಿಯನ್ ಸಮಾಜದ ಅನಿವಾಸಿ ಕನ್ನಡ ಹಾಗೂ ಕನ್ನಡೇತರ ಭಾಂದವರು, ಮಹನೀಯರು, ಮಹಿಳೆಯರು ಮತ್ತು ಮಕ್ಕಳು ಸೇರಿದ ಈ ಇಫ್ತಾರ್ ಸಮಾರಂಭದಲ್ಲಿ UAE ಸ್ಥಿತ ಹಲವಾರು ವಿಶೇಷ ಅತಿಥಿಗಳು ಭಾಗವಹಿಸಿದ್ದರು.

ಇಫ್ತಾರ್ ಗೆ ಮುನ್ನ ಜನಾಬ್ ಇಕ್ಬಾಲ್ ಕುಂದಾಪುರ (ಮೇಫ), ಜನಾಬ್ ಅಶ್ರಫ್ ಸತ್ತಿಕಲ್ ಸಹಭಾಗಿತ್ವದಲ್ಲಿ ಜನಾಬ್ ಸಜಿಪ ಅಬ್ದುಲ್ ರಹ್ಮಾನ್, ಅಮೀರ್ ಹಳೆಯಂಗಡಿ, ಜನಾಬ್ ರಿಯಾಜ್ ಸುರತ್ಕಲ್ ರವರ ಸಹಯೋಗದೊಂದಿಗೆ ಹಾಗೂ ಇಸ್ಲಾಮಿಕ್ ರಸ ಪ್ರಶ್ನೆಗಳ ಸ್ಪರ್ಧೆ ನಡೆಸಲಾಯಿತು.

ಬಹುಮಾನ್ಯ ತಾಹ ಬಾಫಖಿ ತಂಗಳ್, ಗೌ ಅಧ್ಯಕ್ಷರು, DKSC ಯವರು ದುವಾ ನೆರವೇರಿಸಿದರು.

ತದ ನಂತರ ಇಫ್ತಾರ್ ಕಾರ್ಯಕ್ರಮ ನಡೆದು ನಮಾಜಿನ ನಂತರ ಮುಖ್ಯ ಸಭಾಕಾರ್ಯಕ್ರಮ ಹಾಗೂ BCF ಸ್ಕಾಲರ್ಷಿಪ್ ನಿರೂಪಣಾ ಕಾರ್ಯಕ್ರಮ ನಡೆಸಲಾಯಿತು.

BCF ಅಧ್ಯಕ್ಡ್ಶರಾದ ಡಾ B K ಯೂಸುಫ್ ರವರ ಘಾನಾ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಬಿಸಿಫ್ ಪ್ರಧಾನ ಕಾರ್ಯ ದರ್ಶಿಗಳಾದ ಡಾ ಕಾಪು ಮೊಹಮ್ಮದ್ ಅತಿಥಿ ಗಳನ್ನು ಸ್ವಾಗತಿಸಿದರು. ಮಾಸ್ಟರ್ ಆಫ್ರಾಜ್ ಅಫೀಕ್ ಹುಸೈನ್ ಕಿರಾತ್ ಪಠಿಸಿದರು.

ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಡಾ BK ಯೂಸುಫ್ ರವರು ಃಅಈ ಎಂಬ ಜನಪ್ರಿಯ ಸಮಾಜ ಸೇವಾ ಸಂಸ್ಥೆಯ ಮೂಲಕ ತನ್ನ ದೇಶವಾಸಿಗಳ ಸೇವೆಯನ್ನು ಮಾಡುವ ಅವಕಾಶವನ್ನು ಒದಗಿಸಿದ ಅಲ್ಲಹುವನ್ನು ಸ್ತುತಿಸುತ್ತಾ ಈ ಒಂದು ಉತ್ತಮ ಸೇವೆಯನ್ನು ಮಾಡುವ ಅವಕಾಶ ಕೊಟ್ಟ BCF ಗೆ ತಾನು ಆಭಾರಿಯಾಗಿದ್ದೇನೆ ಎಂದರು. ಪವಿತ್ರ ರಮದಾನ್ ಅಲ್ಲಾಹುವಿನ ಅನುಗ್ರಹದ ಹಾಗೂ ನಮ್ಮಿಂದ ಆದ ತಪ್ಪು ದೋಷಗಳನ್ನು ಕ್ಷಮಿಸುವ ತಿಂಗಳು ಆಗಿದ್ದು ದೇವರು ನಮ್ಮೆಲ್ಲರನ್ನೂ ಅವನ ಅಪಾರ ಕೃಪಾ ಕಟಾಕ್ಷ ಹಾಗೂ ಅನುಗ್ರಹದಿಂದ ಇಹದಲ್ಲೂ ಹಾಗೂ ಪರದಲ್ಲೂ ಜಯಶಾಲಿಗಳನ್ನಾಗಿ ಕರುಣಿಸಲಿ ಎಂದು ಹಾರೈಸಿದರು. BCF ಇನಿವಾಸಿ ಕನ್ನಡಿಗರ ಸಂಘಟನೆಗಳ ಪೈಕಿ ಅತೀ ಜನಪ್ರಿಯ ಸಮಾಜ ಸೇವಾ ಸಂಘಟನೆ ಎಂದು BCF ನ ಪರಿಚಯವಿತ್ತರು. ಅವರು ಮುಂದುವರೆಯುತ್ತಾ ವಿದ್ಯೆಯು ಸಮಾಜದ ಅಭಿವೃದ್ಧಿಯ ಹೆಬ್ಬಾಗಿಲಾಗಿದ್ದು ಪ್ರವಾದಿ ಮೊಹಮ್ಮದ್SAS ರವರು ವಿದ್ಯೆಗೆ ಅತೀ ಹೆಚ್ಚು ಮಹತ್ವ ಕೊಟ್ಟು ವಿದ್ಯೆಯು ಸಮಾಜದ ಜೀವಾಳ ಎಂದು ಹೇಳಿದ್ದು ಪವಿತ್ರ ಕುರಾನಿನಲ್ಲಿ ಅಲ್ಲಾಹು ಕೊಟ್ಟ ವಾಗ್ದಾನವಾಗಿದೆ-ನಿಶ್ಚಯವಾಗಿಯೂ ಅಲ್ಲಾಹು ಉದಾರಿಗಳಿಗೆ ತಕ್ಕ ಪ್ರತಿಫಲ ನೀಡುವವನಾಗಿದ್ದಾನೆ , ಈ ನಿಟ್ಟಿನಲ್ಲಿ BCF ಕಳೆದ ಹಲವಾರು ವರ್ಷಗಳಿಂದ ನೀಡುತ್ತಾ ಬಂದಿರುವ ಈ ಸ್ಕಾಲರ್ಷಿಪ್ ಯೋಜನೆಗೆ ಸಹಕರಿಸಬೇಕೆಬಂದು ಕೋರಿದರು. ಮುಂಬರುವ ವರ್ಷಗಳಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಇನ್ನಷ್ಟು ವಿಧದ ವಿಶಿಷ್ಟ ಯೋಜನೆಗಳನ್ನು BCF ಹಮ್ಮಿ ಕೊಂಡಿದ್ದು ತಮ್ಮೆಲ್ಲರ ಪಾಲ್ಗೊಳ್ಳುವಿಕೆಯ ಮೂಲಕ BCF ದೊಡ್ಡ ರೀತಿತ್ಯಲ್ಲಿ ಶೈಕ್ಷಣಿಕ ಸೇವೆಯನ್ನು ಸಮಾಜಕ್ಕೆ ನೀಡುವ ಮಹತ್ವಾಕಾಂಕ್ಷಿ ಯೋಜನೆಗಳನ್ನು ಹೊಂದಿದೆ ಎಂದು ನುಡಿದರು.

BCF ಇಫ್ತಾರ್ ಪ್ರೋಗ್ರಾಮ್ ಇದರ ಚಯರ್ಮನ್ ಆಗಿದ್ದ ಹಾಗೂ BCF ಉಪಾಧ್ಯಕ್ಷರೂ ಜನಾಬ್ ಅಬ್ದುಲ್ ಲತೀಫ್ ಮುಲ್ಕಿಯವರು ತಮ್ಮ ಭಾಷಣದಲ್ಲಿ ಈ ಪವಿತ್ರವಾದ ಕಾರ್ಯ ಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದವನ್ನು ಸಲ್ಲಿಸುತ್ತಾ ಅಲ್ಲಾಹು ನಮ್ಮ ಎಲ್ಲ ಈ ಉತ್ತಮ ಕಾರ್ಯವನ್ನು ಸ್ವೀಕರಿಸಿ ಅನುಗ್ರಹಿಸಲಿ ಎಂದು ದುಆ ಮಾಡಿದರು. ಃಅಈ ಇಫ್ತಾರ್ ಕಮಿಟಿ 2019 ಇದರ ಚಯರ್ಮನ್ ಆಗಿ ಸೇವೆಸಲ್ಲಿಸುವ ಅವಕಾಶ ಒದಗಿಸಿದ್ದಕ್ಕಾಗಿ ಬಿಸಿಫ್ ಗೆ ತಾನು ಅಭಾರಿ ಎಂದರು. ಕುರಾನಿನ ಆಯತ್ತನ್ನು ಉಲ್ಲೇಖಿಸುತ್ತಾ ನಿಸ್ವಾರ್ಥ ಮನಸ್ಸಿನ ಸಮಾಜ ಸೇವೆಯನ್ನು ಮಾಡುವವರನ್ನು ಖಂಡಿತವಾಗಿ ಅಲ್ಲಹು ಅನುಗ್ರಹಿಸುತ್ತಾನೆ, ಒಂದು ಸಣ್ಣ ಒಳ್ಳೆಯ ಕಾರ್ಯ ಒಂದು ದೊಡ್ಡ ಅನುಗ್ರಹವಾಗಿ ನಮಗೆ ಒದಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲ ಕನ್ನಡ ಪರ ಸಂಘಟನೆಗಳ ಪ್ರತಿನಿಧಿಗಳಿಗೆ ಹಾಗೂ ಈ ಕಾರ್ಯಕ್ರಮಕ್ಕೆ ಸಹಕರಿಸಿ ಇದೊಂದು ಅತ್ಯಂತ ಯಶಸ್ವೀ ಕಾರ್ಯಕ್ರಮವಾಗಿ ಜರುಗಲಿಕ್ಕೆ ಕಾರಣರಾದ BCF ನ ಎಲ್ಲ ಪದಾಧಿಕಾರಿಗಳಿಗೆ ಹಾಗೂ ಇಫ್ತಾರ್ ಕಮಿಟಿಯ ಎಲ್ಲ ಸದಸ್ಯರಿಗೆ ಧನ್ಯವಾದ ಸಮರ್ಪಿಸಿದರು.

BCF ಸ್ಕಾಲರ್ಷಿಪ್ ಕಮಿಟಿ ಹಾಗೂ ಃಅಈ ಉಪಾಧ್ಯಕ್ಷರಾದ ಜನಾಬ್ ಒ.ಇ.ಮೂಳೂರ್ ತಮ್ಮ ಭಾಷಣದಲ್ಲಿ ಈ BCF ಇಫ್ತಾರ್ ಕೂಟದಲ್ಲಿ ಸೇರಿರುವ ಎಲ್ಲ ಕನ್ನಡಿಗರು, ವಿವಿಧ ಜಾತಿ, ಪಂಗಡಕ್ಕೆ ಸೇರಿದ ಕನ್ನಡಿಗರಾಗಿದ್ದು ಈ ಃಅಈ ಇಫ್ತಾರ್ ಕೂಟವು ನಮ್ಮ ಭಾರತದ, ವಿಶೇಷವಾಗಿ ನಮ್ಮ ಕರ್ನಾಟಕದ ಸಹೋದರತೆ, ಸಮಾನತೆ ಯನ್ನು ಸಾರುವ ವಿವಿಧತೆಯಲ್ಲಿ ಏಕತೆಯ ಸಂದೇಶಕ್ಕೆ ಸಾಕ್ಷಿಯಾಗಿದೆ ಎಂದರು. ಈ ಜಾತ್ಯಾತೀತ ಐಕ್ಯತೆಯೇ ಭಾರತದ ಶಕ್ತಿಯಾಗಿದ್ದು ಃಅಈ ಯಾವತ್ತೂ ಈ ಸೌಹಾರ್ದತೆಯನ್ನು ಉತ್ತೇಜಿಸುವ ಸಂಸ್ಥೆಯಾಗಿದೆ ಎಂದರು. BCF ನ ಪರಿಚಯವನ್ನು ಸ್ಟೂಲವಾಗಿ ಮಾಡುತ್ತಾ, ವಿದ್ಯೆಯನ್ನು ಉತ್ತೇಜಿಸೋದರ ಮೂಲಕ ಸಮಾಜದ ಉನ್ನತಿಯನ್ನು ಸಾಧಿಸೋದು ಹಾಗೂ ತಮ್ಮ ಸ್ವಂತಕ್ಕೆ, ತಮ್ಮ ಕುಟುಂಬಕ್ಕೆ, ತಮ್ಮ ಸಮಾಜಕ್ಕೆ ಹಾಗೂ ತನ್ನ ತಾಯ್ನಾಡಿಗೆ ಯಾವತ್ತ್ತು ಉಪಕಾರವಾಗ ಬಲ್ಲ ಆರೋಗ್ಯ ವಂತ, ವಿದ್ಯಾವಂತ ಭವಿಷ್ಯ ಮುಖೀ ಸಮಾಜದ ನಿರ್ಮಾಣಕ್ಕೆ ನೆರವಾಗೋದು BCF ಇದರ ಮುಖ್ಯ ಧ್ಯೇಯ ಎಂದರು. ತಮ್ಮೆಲ್ಲರ ಸಹಕಾರದಿಂದ ಕಳೆದ ಹಲವಾರು ವರ್ಷಗಳಿಂದ ಕರ್ನಾಟಕದ ಎಲ್ಲ ಜಾತಿ ಪಂಗಡಕ್ಕೆ ಸೇರಿದ ಬಡ ವಿದ್ಯಾರ್ಥಿಗಳಿಗೆ ಪ್ರತೀ ವರ್ಷ ಸುಮಾರು 600 ರಿಂದ 700 ರಷ್ಟು ಮಕ್ಕಳಿಗೆ PUC ಯಿಂದ ಹಿಡಿದು ಸ್ನಾತಕೋತ್ತರ ಪದವಿ ವರೆಗೆ ವಿವಿಧ ಕ್ಷೆತ್ರಗಳಲ್ಲಿ ವಿದ್ಯಾರ್ಥಿ ವೇತನ ನೀಡುತ್ತಾ ಬಂದಿದ್ದುಇದು ವರೆಗೆ BCF ಸ್ಕಾಲರ್ಷಿಪ್ ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಮರ್ಪಿಸುತ್ತಾ ಈ ಸಲ ಇನ್ನೂ ಹೆಚ್ಚಿನ ಮಟ್ಟದಲ್ಲಿ ಸಹಕರಿಸುವಂತೆ ವಿನಂತಿಸಿದರು.

UAE ಯ ಪ್ರಖ್ಯಾತ ಉದ್ಯಮಿಯೂ ,ಸಮಾಜ ಸೇವಕರೂ ,BCF ಪ್ರಧಾನ ಗೌ. ಸಲಹೆಗಾರರೂ , ಕರ್ನಾಟಕ ಅಲ್ಪಸಂಖ್ಹ್ಯಾತ ಅಭಿವ್ರಿದ್ದಿ ನಿಗಮದ ಚಯರ್ಮನ್ ಆಗಿರುವ ಜನಾಬ್ ಝಫರುಲ್ಲಾ ಖಾನ್ ಮಂಡ್ಯ ಅಂದಿನ ಪ್ರಧಾನ ಮುಖ್ಯ ಅತಿಥಿಗಳಾಗಿದ್ದರು. ಅವರು ತಮ್ಮಭಾಸನದಲ್ಲಿ ನಿರರ್ಗಳವಾದ ಅತ್ಯಾಕರ್ಷಕ ಮಾತಿನ ಶೈಲಿಯಿಂದ ಸಭಿಕರನ್ನು ಪ್ರಭಾವಿತರನ್ನಾಗಿಸಿದರು. ಃಅಈ ಸಂಸ್ಥೆಯು ಅದೆಷ್ಟೋ ವರ್ಷಗಳಿಂದ ನಿಸ್ವಾರ್ಥವಾಗಿ ಸಮಾಜ ಸೇವೆಯನ್ನು ದೊಡ್ಡ ರೀತಿಯಲ್ಲಿ ಮಾಡುತ್ತಿದ್ದು ಈ ಸಂಸ್ಥೆಯ ಪ್ರಧಾನ ಸಲಹೆಗಾರರಾಗಿ ಜನ ಸೇವೆ ಮಾಡುವ ಅವಕಾಶ ತನಗೆ ಸಿಕ್ಕಿದ್ದು ಇದು ತನಗೊಂದು ಹೆಮ್ಮ್ಮೆಯ ವಿಚಾರ ಎಂದರು. ಅಲ್ಪ ಸಂಖ್ಯಾಕ ಸಮುದಾಯ ವಿದ್ಯೆ ಮತ್ತು ಉದ್ಯಮದಲ್ಲಿ ಮುಂದೆ ಬರುವ ಅವಶ್ಯಕತೆ ಇದ್ದು ಈ ಸಂಭಂದ Karnataka minority Development Corporation ವತಿಯಿಂದ ಸಿಗ ಬಹುದಾದ ಎಲ್ಲ ಸಹಾಯ ಸಹಕಾರವನ್ನು ನೀಡಲು ಬೇಕಾದ ಏರ್ಪಾಡುಗಳನ್ನು ಮಾಡಲು ತಾನು ಸಿದ್ಧ ಎಂದು ಹೇಳಿದರು BCF ಯಾವುದೇ ಜಾತಿ ಭೇದದ ವ್ಯತ್ಯಾಸವಿಲ್ಲದೆ ಎಲ್ಲರೊಂದಿಗೆ ಕೂಡಿ ಕೊಂಡು ಸಮಾಜ ಸೇವೆಯಲ್ಲಿ ನಿರತರಾಗಿರೋದು ಶಲಾಘನೀಯ ಎಂದರು. ಜನಾಬ್ ಝಫರುಲ್ಲಾ ಖಾನ್ ಮಂಡ್ಯ ರವರಿಗೆ ಅವರ ಸುಧೀರ್ಘ ಅವಧಿಯ ಸಮಾಜ ಸೇವೆಯನ್ನು ಗುರುತಿಸಿ BCF ವತಿಯಿಂದ ವಿಶೇಷವಾದ ಗೌರವ ಫಲಕವನ್ನು ನೀಡಿ ಸನ್ಮಾನಿಸಲಾಯಿತು.

ಅಂದಿನ ಇನ್ನೋರ್ವ ಮುಖ್ಯ ಅತಿಥಿ ಪ್ರಖ್ಯಾತ ಉದ್ಯಮಿ ಜನಾಬ್ ಶಬ್ಬೀರ್ ಸೈಫುದ್ದೀನ್, ಚಯರ್ಮನ್ ಫಿಝ್ಯ್ ಗ್ರೂಪ್ ರವರು BCF ನ ಉತ್ಕ್ರಷ್ಟವಾದ ಸೇವಾ ಕಾರ್ಯವನ್ನು ಶ್ಲಾಘಿಸಿದರು.

ಇತರ ಅತಿಥಿಗಳಾದ ಜನಾಬ್ ರಿಜ್ವಾನುಲ್ಲಾ ಖಾನ್, ಪ್ರೆಸಿಡೆಂಟ್- ಎಮಿರೇಟ್ಸ್ ಗ್ಲಾಸ್, ಜನಾಬ್ ಝಯ್ನ್ ಝಫರುಲ್ಲಾ ಖಾನ್,. ಜನಾಬ್ ಅಶ್ರಫ್K M ., ಜನಾಬ್ ನವೀದ್,ಆಖ ಸಮೀರ್ ಯೂಸುಫ್, ಜನಾಬ್ ಅಸ್ಲಾಂ- ಅಲ ಬಾಹರ್ ಹೋಟೆಲ್ಸ್, ಜನಾಬ್ ಇರ್ಷಾದ್ , ನಫೀಸ್ ಗ್ರೂಪ್, ಗ್ರೂಪ್, ಜನಾಬ್ ನವಾಜ್ ಕೋಟೆಕಾರ್ - ಪ್ರಧಾನ ಕಾರ್ಯ ದರ್ಶಿ- DKSC , ಜನಾಬ್ ಶುಕೂರ್ ಮನಿಲಾ,. ಜನಾಬ್ ಯೂಸುಫ್ ಅರ್ಲಪಡವು,

Mr. Abdul Jaleel, Mr. Sanaullah, Mr. Naveed, Mr. Irshad, Mr. Anand Bailur, Mr. Satish, Mr. Abdul Rehman, Mr. Shamshudeen, Mr. Deepak, Mr. Naser Nandavara, Mr. Bekal Sungandraj, Mr. Islam from Al Bahar Hotel, Mr. Noel Almeda MR Arif ಮೊದಲಾದ ಗಣ್ಯರು ಉಪಸ್ಥಿತರಿದ್ದರು.

ಮುಂದೆ BCFಸ್ಕಾಲರ್ಷಿಪ್ 2019 ಬಗ್ಗೆ ಪ್ರಸ್ತಾವಿಸುತ್ತ ಪ್ರಧಾನ ಕಾರ್ಯದರ್ಶಿ ಡಾ ಕಾಪು ಮೊಹಮ್ಮದ್ ನೆರೆದ ಸಭಿಕರಿಗೆ ಈ ಬಗ್ಗೆ ಸವಿವರವಾದ ಪ್ರಸ್ತಾವನೆಯನ್ನು ಮಂಡಿಸಿದರು. ಸಭಿಕರಿಂದ ಹಾಗೂ ಮುಖ್ಯ ಅತಿಥಿಗಳಿಂದ ಗಣನೀಯ ಮಟ್ಟದಲ್ಲಿ ಸ್ಕಾಲರ್ಷಿಪ್ ದೇಣಿಗೆಯನ್ನು ಸಂಗ್ರಹಿಸಲಾಯಿತು.

UAE ಯ ಕನ್ನಡ ಪರ ಸಂಘಟನೆಗಳಾದ ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್, KCF , ಶಾರ್ಜಾ ಕರ್ನಾಟಕ ಸಂಘ, KNRI , ದುಬೈ ಕರ್ನಾಟಕ ಸಂಘ , ಸ ಅದಿಯ್ಯ, KIC , ಮೂಳೂರ್ ಅಸೋಸಿಯೇಷನ್, ಕುಂದಾಪುರ ಅಸೋಸಿಯೇಷನ್, ತವಕ್ಕಲ್ ಓವರ್ಸೀಸ್,ಕಣ್ಣಂಗಾರ್ ಅಸೋಸಿಯೇಷನ್ ಅಲ ಕಮರ್ ಅಸೋಸಿಯೇಷನ್,ಆಲ್ ಇಸ್ಲಾಮಿಯ್ಯ,ಬಿಲ್ಲವಾಸ್ ದುಬೈ, ಮ್ಯಾಂಗಲೋರ್ ಕೊಂಕಣ್ಸ್ , ಬಂಟ್ಸ್ ಅಸೋಸಿಯೇಷನ್ ಮೊದಲ್ಲದ ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಈ ಕಾರ್ಯಕ್ರಮವು ಅತೀ ಉತ್ತಮವಾಗಿ ನಡೆಯುವರೇ ಶ್ರಮ ಪಟ್ಟ BCF ಇಫ್ತಾರ್ ಕಮಿಟಿ ಚಯರ್ಮನ್ ಜನಾಬ್ ಅಬ್ದುಲ್ ಲತೀಫ್ ಮುಲ್ಕಿ, ಜನಾಬ್ಅ ಫೀಕ್ ಹುಸೈನ್, ಅಮೀರುದ್ದೀನ್ S I ,ಜನಾಬ್ಜ ಅಬ್ದುಲ್ ಲತೀಫ್ ಪುತ್ತೂರು, , ನಾಬ್ ಅಬ್ದುಲ್ ರಹ್ಮಾನ್ ಸಜಿಪ, ಜನಾಬ್ ಅಸ್ಲಾಂ ಕಾರಾಜೆ, ಜನಾಬ್ ಉಸ್ಮಾನ್ ಮೂಳೂರು, ಜನಾಬ್ ರಿಯಾಜ್ ಸುರತ್ಕಲ್, ಜನಾಬ್ ಅಮೀರ್ ಹಳೆಯಂಗಡಿ, ಜನಾಬ್ ಇಕ್ಬಾಲ್ ಮೇಫ, ಜನಾಬ್ ಸುಲೇಮಾನ್ ಮೂಳೂರು, ಜನಾಬ್ ರಫೀಕ್ ಮುಲ್ಕಿ, ಜನಾಬ್ ಸತ್ತಿಕಲ್ ಅಶ್ರಫ್, ಮತ್ತು ಉಳ್ಳಾಲ ಸ್ವಯಂಸೇವಕರ ತಂಡ ಹಾಗೂ ಅವರ ತಂಡವು ಹಾಗೂ ಉತ್ತಮ ರೀತಿಯಲ್ಲಿ ಆಯೋಜಿಸಿದ ಃಅಈ ಸ್ವಯಂ ಸೇವಾ ತಂಡದ ಮುಖ್ಯಸ್ಥ ಜನಾಬ್ ಯಾಕೂಬ್ ದೀವಾ ಹಾಗೂ ಅವರ ತಂಡ ಮತ್ತು B CF ಈ ಲೇಡೀಸ್ ವಿಂಗ್ ಇದರ ಮುಖ್ಯಸ್ಥೆ ಶ್ರೀಮತಿ ಮುಮ್ತಾಜ್ ಝಕೀರ್ ಹಾಗೂ ತಂಡದ ಅಪಾರ ಪರಿಶ್ರಮವನ್ನು ಕೊಂಡಾಡಲಾಯಿತು.

ಈ ಕಾರ್ಯಕ್ರಮಕ್ಕೆ ಆರ್ಥಿಕ ಸಹಾಯ ನೀಡಿದ ಪ್ರತೀ ಬಿಸಿಫ್ ನಾಯಕರು ಹಾಗೂ ಕಮಿಟಿ ಸದಸ್ಯರಿಗೆ ಧನ್ಯವಾದವನ್ನು ನೀಡಲಾಯಿತು.

ಗಿಫ್ಟ್ ಡಲು, ಬ್ಯಾನರ್ ಮೊದಲಾದವುದರ ಮೂಲಕ ಸಹಕರಿಸಿದ JAS ADVERTISEMENT , AL ABRA PERFUMES ಮೊದಲಾದ ಪ್ರಾಯೋಜಕರನ್ನು ಸ್ಮರಿಸಲಾಯಿತು.
ಃಅಈ ಉಪಾಧ್ಯಕ್ಷರಾದ ಜನಾಬ್ ಅಮೀರುದ್ದೀನ್ SI ರವರು ಧನ್ಯವಾದ ಸಮರ್ಪಿಸಿದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here