Monday 13th, July 2020
canara news

ಬಣ್ಣದ ರಂಗು...ಸಂಸ್ಕಾರದ ಮೆರುಗು ವಿಶೇಷ ಬೇಸಿಗೆ ಶಿಬಿರ ಸಂಪನ್ನ

Published On : 20 May 2019   |  Reported By : Rons Bantwal


ವಿದ್ಯಾಜ್ಞಾನ ಜೊತೆಗೆ ಸಂಸ್ಕಾರ ಗುಣಗಳೂ ಅವಶ್ಯ- ಗೋಪಾಲ ತ್ರಾಸಿ

ಮುಂಬಯಿ, ಮೇ.19: ಮಯೂರ ಸ್ಕೂಲ್ ಆಫ್ ಆರ್ಟ್ಸ್ ಮತ್ತು ವಿವೇಕ ಶಿಕ್ಷಣ ವಾಹಿನಿ ಮಂಡ್ಯ ಇವರ ವತಿಯಿಂದ ಜರುಗಿದ `ಬಣ್ಣದ ರಂಗು...ಸಂಸ್ಕಾರದ ಮೆರುಗು' ವಿಶೇಷ ಬೇಸಿಗೆ ಶಿಬಿರಕ್ಕೆ ಭಾನುವಾರ ತೆರೆಬಿದ್ದಿದೆ. ಕಿನಾರ ಕಡಲ ತೀರ, ಕುಂದಾಪುರ ಇಲ್ಲಿ ಜರುಗಿದ ಸಮಾರೋಪ ಸಮಾರಂಭದಲ್ಲಿ `ನೀರು ಉಳಿಸಿ, ಕಾಡು ಬೆಳಸಿ' ಎಂಬ ಸಂದೇಶ ಸಾರುವ ಮರಳು ಶಿಲ್ಪ ರಚನೆಯೊಂದಿಗೆ ವಿಶೇಷವಾಗಿ ಶಿಬಿರ ಸಂಪನ್ನ ಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿüಯಾಗಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಇದರ ಪ್ರಬಂಧಕ ಮತ್ತು ಲೇಖಕ, ಕವಿ ಗೋಪಾಲ್ ತ್ರಾಸಿ, ಅತಿಥಿü ಅಭ್ಯಾಗತರಾಗಿ ಶಿಕ್ಷಕಿ ಮತ್ತು ಲೇಖಕಿ ನಾಗರತ್ನ ಜಿ.ಹೆರ್ಳೆ, ವಿವೇಕ ಶಿಕ್ಷಣ ವಾಹಿನಿ ಮಂಡ್ಯ ಇದರ ಸದಸ್ಯರು ಹಾಗೂ ಶಿಬಿರದ ಸಂಪನ್ಮೂಲ ವ್ಯಕ್ತಿಗಳಾದ ವೈಷ್ಣವಿ ಪೆರ್ಡೂರು, ಕ್ಲೀನ್ ಕುಂದಾಪುರ ಯೋಜನೆಯ ಡಾ| ಕೆ.ರಶ್ಮೀ ಹಾಗೂ ಮಯೂರ ಸ್ಕೂಲ್ ಆಫ್ ಆರ್ಟ್ಸ್‍ನ ಸಂಸ್ಥಾಪಕ ಮತ್ತು ಶಿಬಿರದ ಆಯೋಜಕ ವಕ್ವಾಡಿ ಮಹೇಂದ್ರ ಆಚಾರ್ಯಉಪಸ್ಥಿತರಿದ್ದರು.

ಗೋಪಾಲ್ ತ್ರಾಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ತಾಲೂಕಿನಲ್ಲೆ ಮೊದಲ ಬಾರಿ ನಡೆಯುತ್ತಿರುವ ಈ ಶಿಬಿರದಲ್ಲಿ ಭಾಗವಹಿಸಿರುವುದು ನನ್ನ ಭಾಗ್ಯ. ಕೇವಲ ವಿದ್ಯಾಜ್ಞಾನ ವೊಂದಿದ್ದರೆ ಸಾಲದು, ಅದರೊಂದಿಗೆ ಭಾರತೀಯ ಸಂಸ್ಕಾರ ಗುಣಗಳು ಕೂಡ ಜೀವನದ ಅತೀ ಮುಖ್ಯ ಅಂಗ. ಇನ್ನಷ್ಟು ಇಂತಹ ಅನೇಕ ಕಾರ್ಯಕ್ರಮಗಳನ್ನು ಈ ಸಂಸ್ಥೆ ನಡೆಸುವಂತಾಗಲೆಂದು ಹಾರೈಸಿದರು.

ನಾಗರತ್ನ ಹೆರ್ಳೆ ಮಾತನಾಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಕಲಾವಿದರಾದರೂ ಮಹೇಂದ್ರ ಆಚಾರ್ಯಯವರಿಗೊಂದು ಉತ್ತಮ ಆರಂಭದ ಅಗತ್ಯವಿದೆ, ಅನೇಕ ಸವಾಲುಗಳಿದ್ದರೂ ಅವುಗಳನ್ನು ಮೆಟ್ಟಿ ನಿಂತು ಒಂದು ಉತ್ತಮ ಶಿಬಿರವನ್ನು ಆಯೋಜಿಸಿದ್ದಕ್ಕಾಗಿ ಆಯೋಜಕರಿಗೆ ಧನ್ಯವಾದಗಳು. ಪೆÇೀಷಕರು ಮುಂದಿನ ದಿನಗಳಲ್ಲಿ ತಮ್ಮ ಮಕ್ಕಳನ್ನು ಇಂತಹ ಶಿಬಿರಗಳಿಗೆ ಹೆಚ್ಚೆಚ್ಚು ಕಳುಹಿಸಬೇಕು ಎಂದು ಮನವಿ ಮಾಡಿದರು.

ಡಾ| ರಶ್ಮೀ ಮಾತನಾಡಿ ಕಡಲು ಮಾಲಿನ್ಯದಿಂದ ಉಂಟಾಗುತ್ತಿರುವ ಹಾನಿ, ಅದನ್ನು ತಡೆಗಟ್ಟಲು ತೆಗೆದು ಕೊಳ್ಳಬೇಕಾದ ಮುನ್ನಚ್ಚರಿಕ ಕ್ರಮಗಳ ಕುರಿತು ನೆರೆದವರಿಗೆ ತಿಳಿಸಿದರು. ಶಿಬಿರಾಥಿರ್üಯ ಪೆÇೀಷಕರಾದ ನಿಮಿತಾರವರು ಶಿಬಿರ ಕುರಿತು ತಮ್ಮ ಅಭಿಪ್ರಾಯ ಮತ್ತು ಮಕ್ಕಳಿಗೆ ಶಿಬಿರಿಂದ ದೊರೆತ ಉತ್ತಮ ವಿಚಾರಗಳನ್ನು ನೆರೆದವರಲ್ಲಿ ಹಂಚಿಕೊಂಡರು.

ಇದೇ ಸಂದರ್ಭದಲ್ಲಿ ಗೋಪಾಲ್ ತ್ರಾಸಿ ಮತ್ತು ನಾಗರತ್ನ ಹೆರ್ಳೆಅವರನ್ನು ಸಂಮಾನಿಸಿ ಗೌರವಿಸಲಾಯಿತು. ಶಿಬಿರದಲ್ಲಿ ಭಾಗವಹಿಸಿದ ಎಲ್ಲಾ ಶಿಬಿರಾಥಿರ್üಗಳಿಗೆ ಅತಿಥಿüಗಳು ಪ್ರಮಾಣ ಪತ್ರ ವಿತರಿಸಿ ಶುಭಾರೈಸಿದರು. ಸಂಪನ್ಮೂಲ ವ್ಯಕ್ತಿಗಳಾದ ವೈಷ್ಣವಿ ಪೆರ್ಡೂರು ಹಾಡು ಹಾಡಿ ರಂಜಿಸಿದರು.

ಶಿಬಿರಾಥಿರ್üಗಳು ಸೇರಿದಂತೆ ಪೆÇೀಷಕರು ಸ್ಥಳೀಯ ನಾಗರೀಕರು ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದು, ಶಿಕ್ಷಕಿ, ಲೇಖಕಿ ಮತ್ತು ಶಿಬಿರದುದ್ದಕ್ಕೂ ಆಯೋಜಕರನ್ನು ಸೂಕ್ತ ಸಲಹೆಗಳೊಂದಿಗೆ ಸಹಕರಿಸಿದ ಸರ್ವರನ್ನೂ ಹಾಗೂ ಕುಂದಾಪುರದ ಪ್ರತಿಸ್ಠಿತ ಫೇಸ್ಬುಕ್ ಪೇಜ್‍ವರ್ಲ್ಡ್ ಕುಂದಾಪುರಿಯನ್ ಈ ಕಾರ್ಯಕ್ರಮಕ್ಕೆ ಆನ್ ಲೈನ್ ಪಾರ್ಟ್ನರ್ ಆಗಿ ಸಹಕರಿಸಿದವರನ್ನು ಗೌರವಿಸಲಾಯಿತು.

ಎಸ್.ನಿರೀಕ್ಷಾ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ್ದು, ವಕ್ವಾಡಿ ಮಹೇಂದ್ರ ಆಚಾರ್ಯ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿವಪ್ರಸಾದ್ ವಕ್ವಾಡಿ ಕಾರ್ಯಕ್ರಮ ನಿರೂಪಿಸಿದ್ದು, ವಿಶ್ರುತಾ ಹೇರ್ಳೆ ವಂದಿಸಿದರು.

 
More News

ಭಾರತೀಯ ಪರಂಪರೆಯಲ್ಲಿ ಗುರುವಿಗೆ ವಿಶೇಷ ಸ್ಥಾನ
ಭಾರತೀಯ ಪರಂಪರೆಯಲ್ಲಿ ಗುರುವಿಗೆ ವಿಶೇಷ ಸ್ಥಾನ
ದುಬಾಯಿನಲ್ಲಿ ಮೃಚ್ಛಕಟಿಕ-ನಾಟಕ ಯುಟ್ಯೂಬ್ ಲೋಕಾರ್ಪಣೆ
ದುಬಾಯಿನಲ್ಲಿ ಮೃಚ್ಛಕಟಿಕ-ನಾಟಕ ಯುಟ್ಯೂಬ್ ಲೋಕಾರ್ಪಣೆ
ನಾವುಂದ ಶ್ರೀಗುರು ನಿತ್ಯಾನಂದ ಸೌಹಾರ್ದ ಸಹಕಾರಿಯಿಂದಲ್ಲಿ ಗುರುವಂದನೆ
ನಾವುಂದ ಶ್ರೀಗುರು ನಿತ್ಯಾನಂದ ಸೌಹಾರ್ದ ಸಹಕಾರಿಯಿಂದಲ್ಲಿ ಗುರುವಂದನೆ

Comment Here