Tuesday 25th, June 2019
canara news

ಮೇ.26: ಕಾಂದಿವಿಲಿ ಪಶ್ಚಿಮದ ಪೆÇಯಿಸರ್ ಜಿಮ್ಖಾನಾ ಮೈದಾನದಲ್ಲಿ

Published On : 20 May 2019   |  Reported By : Rons Bantwal


ಸಾಫಲ್ಯ ಸೇವಾ ಸಂಘ ಮುಂಬಯಿ ಇದರ 2019ನೇ ವಾರ್ಷಿಕ ಕ್ರೀಡಾ ಸ್ಪರ್ಧೆ

ಮುಂಬಯಿ, : ರಾಷ್ಟ್ರದ ಆಥಿರ್üಕ ರಾಜಧಾನಿ ಬೃಹನ್ಮುಂಯಿನಲ್ಲಿ ಸುಮಾರು ಏಳುವರೆ ದಶಕಗಳ (77 ವರ್ಷಗಳ) ಹಿಂದೆ ಅಸ್ತಿತ್ವಕ್ಕೆ ಬಂದಂತಹ ಗಾಣಿಗ ಯಾ ಸಫಲಿಗರ ಸಾಫಲ್ಯ ಸೇವಾ ಸಂಘವು ವಿವಿಧ ಚಟುವಟಿಕೆಗಳನ್ನು ಆಯೋಜಿಸುತ್ತಾ ಸ್ವಸಮುದಾಯದ ಜೊತೆಗೆ ಸರ್ವ ಸಮಾಜದ ಸೇವೆಯಲ್ಲಿ ತೊಡಗಿಸಿ ಸರ್ವರನ್ನೂ ಪೆÇ್ರೀತ್ಸಾಹಿಸಿ ಅನ್ಯೋನ್ಯತೆಯಿಂದ ಮುನ್ನಡೆದು ಬಂದಿದೆ. ಇತ್ತೀಚೆಗಷ್ಟೇ ಸಂಸ್ಥೆಯು ತನ್ನ ಅಮೃತ ಮಹೋತ್ಸವವನ್ನು ಅರ್ಥಪೂರ್ಣವಾಗಿ ಸಂಭ್ರಮಿಸಿ ಒಂದು ಮೈಲುಗಲ್ಲನ್ನು ರೂಪಿಸಿದೆ ಮಾದರಿ ಸಂಸ್ಥೆಯಾಗಿ ಮೆರೆದಿದೆ.

  

Sadananda Saphaliga            Shrinivasa Saphaliga

  

  Krishna Bangera                           Anusooya K

 Bhaskar Sapaliga

ಇದೀಗ ಇದೇ ಮೇ.26ರ ಆದಿತ್ಯವಾರ ಬೆಳಿಗ್ಗೆ 8.30 ಗಂಟೆಯಿಂದ ಕಾಂದಿವಿಲಿ ಪಶ್ಚಿಮದ ಗೋವರ್ಧನ್ ನಗರದಲ್ಲಿನ ನೇತಾಜಿ ಸುಭಾಶ್ಚಂದ್ರ ಬೋಸ್ ಕ್ರಿಡಾಂಗಣ (ಪೆÇಯಿಸರ್ ಜಿಮ್ಖಾನಾ)ದಲ್ಲಿ ಸಾಫಲ್ಯ ಕ್ರೀಡಾ ಸ್ಪರ್ಧೆ-2019 ನಡೆಸಲಿದೆ. ಸಾಫಲ್ಯ ಸೇವಾ ಸಂಘದ ಅಧ್ಯಕ್ಷ ಶ್ರೀನಿವಾಸ ಪಿ.ಸಾಫಲ್ಯ ಇವರ ಅಧ್ಯಕ್ಷತೆಯಲ್ಲಿ ಜರಗುವ ಕ್ರೀಡೋತ್ಸವದಲ್ಲಿ ವಿಶೇಷ ಆಕರ್ಷಣೆಯಾಗಿ ಪುರುಷರಿಗಾಗಿ ಕ್ರಿಕೆಟ್ ಮತ್ತು ವಾಲಿಬಾಲ್ ಪಂದ್ಯಾಟ ಹಾಗೂ ಮಹಿಳೆಯರಿಗಾಗಿ ಥ್ರೊಬಾಲ್ ಮತ್ತು ಬಾಕ್ಸ್ ಕ್ರಿಕೆಟ್ ಪಂದ್ಯಾಟ ಮತ್ತು ಎಲ್ಲಾ ವಯೋಮಿತಿಯರಿಗಾಗಿ ಅತ್ಯಾಕರ್ಷಕ ಗೇಮ್ಸ್‍ಗಳು, ಬರ್ಡ್‍ಗಿಫ್ಟ್‍ಸ್, ಲಕ್ಕಿಡ್ರಾವನ್ನೂ ಆಯೋಜಿಸಿದೆ.

ಕ್ರೀಡಾ ಸ್ಪರ್ಧಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಅತಿಥಿü ಅಭ್ಯಾಗತರಾಗಿ ಹೊಟೇಲು ಉದ್ಯಮಿ, ಸಂಘದ ಸದಸ್ಯರೂ ಹಾಗೂ ಕ್ರೀಡೋತ್ಸವದ ಪ್ರಾಯೋಜಕರಾದ ಸದಾನಂದ ಸಫಲಿಗ, ಕೊಡುಗೈದಾನಿ ಕೇಶವ ಪಿ. ಪುತ್ರನ್, ರಾಷ್ಟ್ರೀಯ ಕ್ರೀಡಾಪಟು, ಟೀಂ ಇಂಡಿಯಾ ಥ್ರೊಬಾಲ್ ತಂಡದ ತರಬೇತುದಾರ ದೀಪಕ್ ವಾಸುದೇವ ಕೋಟ್ಯಾನ್, ಸಾಫಲ್ಯ ಎಥ್‍ಲೀಟ್‍ಸ್ ಗಳಾದ ಶಂಕರ್ ಸಫಲಿಗ ಮತ್ತು ಅಶುತೋಶ್ ಸಫಲ್ಯ ಹಾಗೂ ಮುಂಬಯಿಯ ಹಲವಾರು ಪ್ರತಿಷ್ಟಿತ ಗಣ್ಯರು ಆಗಮಿಸಲಿದ್ದಾರೆ.

ಸಂಘವು ಆಯೋಜಿಸಿರುವ ಕ್ರೀಡೋತ್ಸವಕ್ಕೆ ಸಫಲ್ಯ ಬಂಧುಗಳು, ಸದಸ್ಯರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡು ನಿರ್ವಿಘ್ನವಾಗಿ ಅತ್ಯುತ್ತಮ ರೀತಿಯಲ್ಲಿ ನೆರವೇರುವಂತೆ ಸಂಪೂರ್ಣ ಸಹಕಾರ ನೀಡಬೇಕೆಂದು ಸಾಫಲ್ಯ ಸೇವಾ ಸಂಘದ ಉಪಾಧ್ಯಕ್ಷ ಕೃಷ್ಣ ಕುಮಾರ್ ಬಂಗೇರ, ಗೌ| ಪ್ರ| ಕಾರ್ಯದರ್ಶಿ ಅನುಸೂಯ ಕೆಲ್ಲಪುತ್ತಿಗೆ, ಗೌರವ ಕೋಶಾಧಿಕಾರಿ ಭಾಸ್ಕರ್ ಸಫಲಿಗ, ಮಹಿಳಾ ವಿಭಾಗಧ್ಯಕ್ಷೆ ಶೋಭಾ ಬಂಗೇರ ಮತ್ತು ಎಲ್ಲಾ ಪದಾಧಿಕಾರಿಗಳು ಈ ಮೂಲಕ ವಿನಂತಿಸಿದ್ದಾರೆ.

 

 
More News

ಬೃಹನ್ಮುಂಬಯಿನಲ್ಲಿ ಪೇಜಾವರಶ್ರೀಗಳ ರಜತ ತುಲಾಭಾರ ಸಪ್ತಾಹಕ್ಕೆ ಚಾಲನೆ
ಬೃಹನ್ಮುಂಬಯಿನಲ್ಲಿ ಪೇಜಾವರಶ್ರೀಗಳ ರಜತ ತುಲಾಭಾರ ಸಪ್ತಾಹಕ್ಕೆ ಚಾಲನೆ
ಪತ್ರಕರ್ತ ಮುಹಮ್ಮದ್ ಆರಿಫ್ ಅವರಿಗೆ ಬ್ರ್ಯಾಂಡ್  ಮಂಗಳೂರು ಪ್ರಶಸ್ತಿ
ಪತ್ರಕರ್ತ ಮುಹಮ್ಮದ್ ಆರಿಫ್ ಅವರಿಗೆ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿ
 ಗಡಿನಾಡು ಕಾಸರಗೋಡಿನ ಸಾಹಿತ್ತಿಕ, ಸಾಂಸ್ಕøತಿಕ ಶ್ರೀಮಂತಿಕೆ ಕನ್ನಡ ನಾಡಿಗೆ ಹೆಮ್ಮೆ ತಂದಿದೆ- ಕೋಟ ಶ್ರೀನಿವಾಸ ಪೂಜಾರಿ
ಗಡಿನಾಡು ಕಾಸರಗೋಡಿನ ಸಾಹಿತ್ತಿಕ, ಸಾಂಸ್ಕøತಿಕ ಶ್ರೀಮಂತಿಕೆ ಕನ್ನಡ ನಾಡಿಗೆ ಹೆಮ್ಮೆ ತಂದಿದೆ- ಕೋಟ ಶ್ರೀನಿವಾಸ ಪೂಜಾರಿ

Comment Here