Friday 29th, March 2024
canara news

ಸಂಗೀತ ಪ್ರೇಮಿಗಳ ಮನಸೆಳೆದ `ಕೊಂಕಣಿ ಶ್ರೀರಾಮ ಗೀತಾ'

Published On : 22 May 2019   |  Reported By : Rons Bantwal


ಮುಂಬಯಿ (ಮಂಗಳೂರು), ಮೇ.21: 1974ರಿಂದ ಕೊಂಕಣಿ ಭಾಷೆ ಮತ್ತು ಸಂಸ್ಕøತಿಯ ಸೇವೆಯಲ್ಲಿ ತೊಡಗಿರುವ ಕೊಂಕಣಿ ಭಾಷಾ ಮಂಡಳ ಕರ್ನಾಟಕ ಇವರು ಆಯೋಜಿಸಿ ಕಳೆದ ಆದಿತ್ಯವಾರ ಮಂಗಳೂರಿನ ಕುದ್ಮುಲ್ ರಂಗ ರಾವ್ ಪುರಭವನದಲ್ಲಿ ಸ್ವರಶ್ರೀ ಗೋವಾ ಪ್ರಸ್ತುತ ಪಡಿಸಿದ ರಾಮಾಯಣ ಆಧಾರಿತ `ಕೊಂಕಣಿ ಶ್ರೀರಾಮ ಗೀತಾ' ಸಂಗೀತ ಕಾರ್ಯಕ್ರಮ ಸಂಗೀತ ಪ್ರೇಮಿಗಳ ಮನಸೆಳೆಯಿತು.

ಕೊಂಕಣಿಯ ಭಾಷೆಯ ಖ್ಯಾತ ಕವಿ ದಿವಂಗತ ಮನೋಹರರಾಯ್ ಸರದೇಸಾಯಿ ಇವರು 50 ವರ್ಷಗಳ ಹಿಂದೆ ಗೋವಾ ಓಪಿನಿಯನ್ ಪೆÇೀಲ್‍ನ ಸಂದರ್ಭದಲ್ಲಿ ರಚಿಸಿದ ಗೀತೆಗಳಿಗೆ 17 ಕಲಾವಿದರ ತಂಡವಾಗಿರುವ `ಸ್ವರಶ್ರೀ ಗೋವಾ' ಇವರು ಸಂಗೀತ ನೀಡಿ ವಿನೂತನ ಶೈಲಿಯಲ್ಲಿ ಕಾರ್ಯಕ್ರಮವನ್ನು ನೀಡಿದರು. ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಈ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಿದ್ದೆವೆ ಎಂದು ಸ್ವರಶ್ರೀ ಗೋವಾ ಇದರ ಅಧ್ಯಕ್ಷ ಅಜೀಜ ಲೋಬೊ ತಿಳಿಸಿದರು. ನವರಸಗಳಲ್ಲಿ ಹಲವು ರಸಗಳ ಪರಿಚಯ ಇವರ ಗಾಯನದಲ್ಲಿ ಅನುಭವಿಸಿದ ಪ್ರೇಕ್ಷಕರು ಮಂತ್ರಮುಗ್ಧರಾದರು.

ಇಂತಹ ವಿನೂತನ ಕಾರ್ಯಕ್ರಮಗಳನ್ನು ನೀಡಿ ಕೊಂಕಣಿ ಹಾಗೂ ಇತರ ಸಂಗೀತ ಪ್ರೇಮಿಗಳಿಗೆ ಸಂಗೀತದ ರಸದೌತಣ ನೀಡಿದ ಕೊಂಕಣಿ ಭಾಶಾ ಮಂಡಳ ಕರ್ನಾಟಕ ಇವರನ್ನು ಮುಖ್ಯ ಅತಿಥಿü ನಂದಗೋಪಾಲ ಶೆಣೈ ಶ್ಲಾಘಿಸಿದರು ಹಗೂ ಕಲಾವಿದರನ್ನು ಶಾಲು ಹೊದಿಸಿ ಗೌರವಿಸಿದರು.

ಪ್ರಸಿದ್ಧ ಸಿತಾರ ವಾದಕ ಉಸ್ತಾದ ರಪೀಕ ಖಾನ್ ದೀಪ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿ `ನಾನು ಹೆಚ್ಚಿನ ಸಮಯ ಗೋವಾದಲ್ಲಿ ಕಳೆದಿದ್ದು, ಗೋವಾ ರಾಜ್ಯದಿಂದ ಅನೇಕ ಸಂಗೀತಗಾರರರು ಹೊರಹೊಮ್ಮಿದ್ದಾರೆ. ಅಂತಹ ನಾಡಿನಿಂದ ಬಂದ ಈ ಕಲಾವಿದರ ಭವಿಷ್ಯ ಉಜ್ವಲವಾಗಲಿ' ಎಂದು ಅವರು ಹಾರೈಸಿದರು.

ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಬಸ್ತಿ ವಾಮನ ಶೆಣೈ ಶುಭವನ್ನು ಕೋರಿದರು ಮತ್ತು ಕವಿ ದಿವಂಗತ ಮನೋಹರರಾಯ್ ಸರದೇಸಾಯಿ ಅವರಿಗೆ ಶೃದ್ಧಾಂಜಲಿ ಅರ್ಪಿಸಿದರು.

ಕೊಂಕಣಿ ಭಾಷಾ ಮಂಡಳ ಅಧ್ಯಕ್ಷ ವೆಂಕಟೇಶ ಎನ್.ಬಾಳಿಗಾ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿ ಕೊಂಕಣಿ ಜಾಥಾ ಹಾಗೂ ಪ್ರಥಮ ವಿಶ್ವ ಕೊಂಕಣಿ ಸಮ್ಮೇಳನದಂತಹ ಕಾರ್ಯಕ್ರಮಗಳನ್ನು ಸಂಯೋಜಿಸಿದ ಅನುಭವವಿರುವ ಭಾಶಾ ಮಂಡಳವು ಮುಂದಿನ ದಿನಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಿದ್ದು ಎಲ್ಲರು ಸಹಕಾರ ನೀಡಬೇಕು ಎಂದು ವಿನಂತಿಸಿದರು.

ಸಿ.ಡಿ ಕಾಮತ್, ಗೋಕುಲದಾಸ ಪ್ರಭು, ಡಾ| ಕೆ.ಮೋಹನ ಪೈ, ಸ್ವರಶ್ರೀ ನಿರ್ದೇಶಕ ರಮಾನಂದ ರಾಯಕರ್ ಉಪಸ್ಥಿತರಿದ್ದರು. ಭಾಶಾ ಮಂಡಳದ ಉಪಾಧ್ಯಕ್ಷ ಎಂ. ಆರ್. ಕಾಮತ, ನಿಕಟ ಪೂರ್ವ ಅಧ್ಯಕ್ಷೆ ಗೀತಾ ಸಿ. ಕಿಣಿ, ಕಾರ್ಯದರ್ಶಿ ರತ್ನಾಕರ ಕುಡ್ವ, ಖಜಾಂಚಿ ವಿಠಲ ಕುಡ್ವ, ಸಂಚಾಲಕ ವಸಂತ ರಾವ, ಸಂಪರ್ಕ ಕಾರ್ಯದರ್ಶಿ ಸುರೇಶ ಶೆಣೈ, ಸಹ ಕಾರ್ಯದರ್ಶಿ ಜುಲಿಯೆಟ್ ಫೆರ್ನಾಡಿಂಸ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಪೌಲ್ ಮೋರಾಸ್, ದಿನೇಶ ಶೇಠ್, ಪ್ರವೀಣ್ ಕಾಮತ್, ಮಿನಾಕ್ಷಿ ಪೈ ಸಹಕರಿಸಿದರು.

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here