ಮುಂಬಯಿ, ಮೇ.30: ಮೋದಿ ಸರಕಾರದಲ್ಲಿ ಮತ್ತೆ ಕೇಂದ್ರ ಕ್ಯಾಬಿನೇಟ್ ಸಚಿವರಾಗಿ ಆಯ್ಕೆಯಾದ ಮಾಜಿ ಕೇಂದ್ರ ಸಚಿವ, ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡ ಅವರನ್ನು ಅವರ ಪರಿವಾರದ ಪರಮಾಪ್ತ, ಬಂಟ ಸಮೂದಾಯದ ಉದ್ಯಮಿಗಳ ಒಕ್ಕೂಟ ಇಂಡಿಯನ್ ಬಂಟ್ಸ್ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರಿ ಲಿಮಿಟೆಡ್ ಸಂಸ್ಥೆಯ ಅಧ್ಯಕ್ಷ ಕೆ.ಸಿ ಶೆಟ್ಟಿ ಅವರು ಡಿವಿಎಸ್ ಅವರಿಗೆ ದೆಹಲಿಯಲ್ಲಿನ ಕಛೇರಿಯಲ್ಲಿ ಅಭಿನಂದಿಸಿ ಶುಭಾರೈಸಿದರು.