Sunday 11th, May 2025
canara news

ಸಂತ ಆಂತೋನಿಯವರ ವಾರ್ಷಿಕ ಮಹೋತ್ಸವಕ್ಕೆ ತ್ರಿದಿನ ನವೇನ ಪ್ರಾರ್ಥನೆ

Published On : 11 Jun 2019   |  Reported By : Vincent Mascarenhas


ಸಂತ ಆಂತೋನಿಯವರ ವಾರ್ಷಿಕ ಮಹೋತ್ಸವಕ್ಕೆ ತಯಾರಿಯಾಗಿ (ತ್ರಿದುವುಮ್) ಮೂರು ದಿನಗಳ ನವೇನ ಪ್ರಾರ್ಥನೆಯ ಮೊದಲ ದಿನ (ಸೋಮವಾರ, 10-06-2019) ಮುಡಿಪು ಸಂತ ಜೋಸೆಫ್ ವಾಜ್ ಪುಣ್ಯಕ್ಷೇತ್ರದ ನಿರ್ದೇಶಕರಾದ ಫಾ. ಬೆಂಜಮಿನ್ ಪಿಂಟೊರವರು ಬಲಿಪೂಜೆ ಅರ್ಪಿಸಿದರು.

ಫಾ. ಪಿಂಟೊರವರು ಸಂತ ಪಾವ್ಲರ ಮಾತುಗಳನ್ನು ಉಲ್ಲೇಖ ಮಾಡುತ್ತಾ ದಾನ ಮಾಡುವುದು ಧರ್ಮದ ಮೂಲ. ಸಂಕಷ್ಟದಲ್ಲಿದ್ದವರಿಗೆ ನೆರವು ನೀಡುವಾಗ ಮತ್ತು ಸಹಾಯ ಮಾಡುವಾಗ ನಾವು ದೇವರಿಗೆ ನಿಜವಾದ ಬಲಿಕಾಣಿಕೆಯನ್ನು ಅರ್ಪಿಸುತ್ತೇವೆ ಎಂದರು. ಸಂತ ಆಂತೋನಿಯವರು ತಮ್ಮ ಜೀವನದಲ್ಲಿ ಹಸಿವು ದಣಿವು ಲೆಕ್ಕಿಸದೆ ಕಷ್ಟದಲ್ಲಿದ್ದವರಿಗೆ ನೆರವಾದರು. ದೇವರು ಮನುಷ್ಯರಲ್ಲಿ ವಾಸ ಮಾಡುತ್ತಾರೆ ಎಂದು ಯೇಸುಸ್ವಾಮಿ ನಮಗೆ ಕಲಿಸಿಕೊಟ್ಟಿದ್ದಾರೆ. ಅಂದ ಮೇಲೆ ಮನುಷ್ಯನ ಅಗತ್ಯಗಳಿಗೆ ಸ್ಪಂದಿಸುವ ಮೂಲಕ ನಾವು ದೇವರಿಗೆ ಮೆಚ್ಚುಗೆ ಪಾತ್ರರಾಗೋಣ ಎಂದು ಕರೆ ನೀಡಿದರು.

ಸಂಸ್ಥೆಯ ನಿರ್ದೇಶಕ ಫಾ. ಒನಿಲ್ ಡಿ’ಸೋಜರವರು ನವೇನ ಪ್ರಾರ್ಥನೆ ನಡೆಸಿ ಕೊಟ್ಟರು. ಸಹಾಯಕ ನಿರ್ದೇಶಕರಾದ ಫಾ. ತ್ರಿಶಾನ್ ಡಿ’ಸೋಜ, ಫಾ. ರೋಶನ್ ಡಿ’ಸೋಜ ಮತ್ತು ಭಕ್ತಾಧಿಗಳು ಬಹು ಸಂಖ್ಯೆಯಲ್ಲಿ ಭಕ್ತಿಕಾರ್ಯಕ್ರಮದಲ್ಲಿ ಪಾಲ್ಗೊಂಡರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here