Tuesday 25th, June 2019
canara news

ಫೆಡರೇಶನ್ ಆಫ್ ವರ್ಲ್ಡ್ ಬಂಟ್'ಸ್ ಅಸೋಸಿಯೇಶನ್‍ನಿಂದ ಗೋಪಾಲ್ ಸಿ.ಶೆಟ್ಟಿ-ಕೊರಂಗ್ರಪಾಡಿ ಪ್ರಕಾಶ್ ಶೆಟ್ಟಿ ಅವರಿಗೆ ಸನ್ಮಾನ

Published On : 12 Jun 2019   |  Reported By : Rons Bantwal


(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ,ಜೂ.09: ಮುಂಬಯಿ ಬೋರಿವಿಲಿ ಲೋಕಸಭಾ ಕ್ಷೇತ್ರದಿಂದ ದ್ವಿತೀಯ ಬಾರಿಗೆ ಜಯಗಳಿಸಿ ಬಂಟ ಸಮುದಾಯದ ಮಾಣಿಕ್ಯ ಎಂದೆಣಿಸಿದ ಸಂಸದ ಗೋಪಾಲ್ ಸಿ.ಶೆಟ್ಟಿ ಇವರನ್ನು ಹಾಗೂ ಜಾಗತಿಕ ಬಂಟರ ಸಂಘಗಳ ಒಕ್ಕೂಟ (ಫೆಡರೇಶನ್ ಆಫ್ ವರ್ಲ್ಡ್ ಬಂಟ್'ಸ್ ಅಸೋಸಿಯೇಶನ್'ಸ್) ಸಂಸ್ಥೆಗೆ ನೂತನ ನಿರ್ದೇಶಕರಾಗಿ ಸೇರ್ಪಡೆಗೊಂಡ ರಾಷ್ಟ್ರದ ಪ್ರತಿಷ್ಠಿತ ಐಡಿಇ ಗ್ಲೋಬಲ್ ಪ್ರಸ್ತಿತಿಯ ಹಾಸ್ಪಿಟ್ಯಾಲಿಟಿ ಲೀಡರ್'ಸ್ ಇಂಡಸ್ಟೀ ಚಾಯ್ಸ್ ಅವಾರ್ಡ್' ಪ್ರಶಸ್ತಿ ಪುರಸ್ಕೃತ ಎಂಆರ್‍ಜಿ (ಮಾಧವ್ ರತ್ನಾ ಗೌರವ್) ಸಮೂಹದ ಆಡಳಿತ ನಿರ್ದೇಶಕ ಕೊರಂಗ್ರಪಾಡಿ ಪ್ರಕಾಶ್ ಶೆಟ್ಟಿ ಅವರನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಹಾಗೂ ಗೌರವ ಕೋಶಾಧಿಕಾರಿ ಉಳ್ತೂರು ಮೋಹನದಾಸ್ ಶೆಟ್ಟಿ ಮತ್ತು ಒಕ್ಕೂಟದ ಪೆÇೀಷಕ ಸದಸ್ಯರೂ ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್.ಪಯ್ಯಡೆ ಉಪಸ್ಥಿತರಿದ್ದು ಇಂದಿಲ್ಲಿ ಒಕ್ಕೂಟದ ಪರವಾಗಿ ಸನ್ಮಾನಿಸಿ ಗೌರವಿಸಿದರು.

ರವಿವಾರ ಪೂರ್ವಾಹ್ನ ಕುರ್ಲಾ ಪೂರ್ವದಲ್ಲಿನ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ.ಭಂಡಾರಿ ಸಭಾಗೃಹದಲ್ಲಿ ನಡೆದ ಕಾರ್ಯಕ್ರಮವೊಂದರ ಮಧ್ಯಾಂತರದಲ್ಲಿ ಸನ್ಮಾನ ನಡೆಸಲಾಗಿದ್ದು ಈ ಸಂದರ್ಭದಲ್ಲಿ ಕರ್ನಾಟಕದ ಮಾಜಿ ಸಚಿವ, ಹಾಲಿ ಶಾಸಕ ಸಿ.ಟಿ ರವಿ, ಸುಧೀರ್ ವಿ.ಶೆಟ್ಟಿ, ಸುಧಾಕರ್ ಎಸ್.ಹೆಗ್ಡೆ, ಡಾ| ಸುರೇಂದ್ರ ವಿ.ಶೆಟ್ಟಿ, ಆದಾಯ ತೆರಿಗೆ ಇಲಾಖಾ ಸಹಾಯಕ ಆಯುಕ್ತೆ ನಿವ್ಯಾ ಪಿ.ಶೆಟ್ಟಿ (ಐಆರ್‍ಎಸ್), ಬಂಟ್ಸ್ ಸಂಘ ಮುಂಬಯಿ ಇದರ ಪದಾಧಿಕಾರಿಗಳಾದ ಚಂದ್ರಹಾಸ ಕೆ.ಶೆಟ್ಟಿ, ಸಿಎ| ಸಂಜೀವ ಶೆಟ್ಟಿ, ಪ್ರವೀಣ್ ಬಿ.ಶೆಟ್ಟಿ, ಮಹೇಶ್ ಎಸ್.ಶೆಟ್ಟಿ, ಗುಣಪಾಲ್ ಶೆಟ್ಟಿ ಐಕಳ, ರಂಜನಿ ಸುಧಾಕರ್ ಹೆಗ್ಡೆ, ಶರತ್ ವಿಜಯ್ ಶೆಟ್ಟಿ, ಸುಬ್ಬಯ ಎ.ಶೆಟ್ಟಿ, ಖಾಂದೇಶ್ ಭಾಸ್ಕರ್ ವೈ.ಶೆಟ್ಟಿ, ಸುರೇಶ್ ಬಿ.ಶೆಟ್ಟಿ (ಮರಾಠ), ಅಶೋಕ್ ಪಕ್ಕಳ, ಬಂಟರ ಸಂಘದ ಪ್ರಧಾನ ಪ್ರಬಂಧಕ ಪ್ರವೀಣ್ ಶೆಟ್ಟಿ ವಾರಂಗ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

 
More News

ಬೃಹನ್ಮುಂಬಯಿನಲ್ಲಿ ಪೇಜಾವರಶ್ರೀಗಳ ರಜತ ತುಲಾಭಾರ ಸಪ್ತಾಹಕ್ಕೆ ಚಾಲನೆ
ಬೃಹನ್ಮುಂಬಯಿನಲ್ಲಿ ಪೇಜಾವರಶ್ರೀಗಳ ರಜತ ತುಲಾಭಾರ ಸಪ್ತಾಹಕ್ಕೆ ಚಾಲನೆ
ಪತ್ರಕರ್ತ ಮುಹಮ್ಮದ್ ಆರಿಫ್ ಅವರಿಗೆ ಬ್ರ್ಯಾಂಡ್  ಮಂಗಳೂರು ಪ್ರಶಸ್ತಿ
ಪತ್ರಕರ್ತ ಮುಹಮ್ಮದ್ ಆರಿಫ್ ಅವರಿಗೆ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿ
 ಗಡಿನಾಡು ಕಾಸರಗೋಡಿನ ಸಾಹಿತ್ತಿಕ, ಸಾಂಸ್ಕøತಿಕ ಶ್ರೀಮಂತಿಕೆ ಕನ್ನಡ ನಾಡಿಗೆ ಹೆಮ್ಮೆ ತಂದಿದೆ- ಕೋಟ ಶ್ರೀನಿವಾಸ ಪೂಜಾರಿ
ಗಡಿನಾಡು ಕಾಸರಗೋಡಿನ ಸಾಹಿತ್ತಿಕ, ಸಾಂಸ್ಕøತಿಕ ಶ್ರೀಮಂತಿಕೆ ಕನ್ನಡ ನಾಡಿಗೆ ಹೆಮ್ಮೆ ತಂದಿದೆ- ಕೋಟ ಶ್ರೀನಿವಾಸ ಪೂಜಾರಿ

Comment Here