Wednesday 18th, September 2019
canara news

ಬಂಟರ ಸಂಘ ಮುಂಬಯಿ: ವಾರ್ಷಿಕ ಬೃಹತ್ ಶೈಕ್ಷಣಿಕ-ಸಾಮಾಜಿಕ ಕ್ಷೇಮಾಭಿವೃದ್ಧಿ ಕಾರ್ಯಕ್ರಮ

Published On : 12 Jun 2019   |  Reported By : Rons Bantwal


ಮನುಷ್ಯನಿಗೆ ವಿದ್ಯೆಕ್ಕಿಂತ ತಿಳುವಳಿಕೆ ಅತ್ಯಗತ್ಯ: ಕೊರಂಗ್ರಪಾಡಿ ಪ್ರಕಾಶ್ ಶೆಟ್ಟಿ

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ,ಜೂ.09: ನಾನು ಗುತ್ತಿನ ಮನೆಯಲ್ಲಿ ಹುಟ್ಟಿದವನೂ ಅಲ್ಲ ಮತ್ತು ಅಲ್ಲಿನ ಗತ್ತು ಕಂಡವನಲ್ಲ. ಹುಟ್ಟಿನಿಂದಲೇ ಬಡತನ ಕಂಡಿದ್ದು ಇದೀಗ ಸಾಧನೆ ಮೂಲಕ ಶ್ರೀಮಂತಿಕೆಯನ್ನೂ ಕಂಡವ. ವಿದ್ಯಾದಾನ ಅಂದರೆ ಪುಣ್ಯ ಕಟ್ಟಿಕೊಳ್ಳುವ ಒಂದು ವಸ್ತುಸ್ಥಿತಿಯಾಗಿದೆ. ವಿದ್ಯಾಥಿರ್sವೇತನ ವಿತರಿಸಿ ಪೆÇ್ರೀತ್ಸಾಹಿಸುವುದೇ ಧನ್ಯತಾ ಕಾರ್ಯಕ್ರಮ. ಆದುದರಿಂದ ಇದನ್ನು ಪಡೆದುಕೊಳ್ಳುವ ಫಲಾನುಭವಿಗಳಲ್ಲಿ ಯಾವುದೇ ಸಂಕೋಚ ಸಲ್ಲದು. ಕಾರಣ ಇದು (ಬಂಟರ ಸಂಘ) ನಿಮ್ಮ ಮನೆಯಾಗಿದ್ದು, ನೀವು ನಿಮ್ಮದೇ ಮನೆಗೆ ಬಂದಿದ್ದೀರಿ. ಆದುದರಿಂದ ನಮ್ಮವರಿಗಾಗಿ ನಿಮ್ಮವರು ನೀಡುವ ಸಹಾಯ ಪಡೆದು ವಿದ್ಯಾವಂತರಾಗಿ ರಾಷ್ಟ್ರದ ಸತ್ಪ್ರಜೆಗಳಾಗಿ ಬದುಕು ಬಂಗಾರವಾಗಿಸಿ. ಇಂತಹ ಕಾರ್ಯಕ್ರಮ ಸಂಘದ ಜವಾಬ್ದಾರಿ ತಿಳಿಸುವ ಸಂದೇಶವಷ್ಟೇ. ನಿಮ್ಮೊಂದಿಗೆ ನಾವಿದ್ದೇವೆ ಎನ್ನುವ ಪ್ರೇರಣಾ ಶಕ್ತಿ ಇದಾಗಿದೆ. ವಿದ್ಯೆಕ್ಕಿಂತ ತಿಳುವಳಿಕೆ ರೂಢಿಸಿಕೊಂಡು, ದೂರದೃಷ್ಟಿ ಜೊತೆ ಕ್ರಿಯೆ ಕೂಡಾ ಬೆಳೆಸಿಕೊಂಡಾಗಲೇ ನಾವು ಸಾಧನೆ ಸಿದ್ಧಿಸಲು ಸಾಧ್ಯವಾಗುವುದು ಎಂದು ರಾಷ್ಟ್ರದ ಪ್ರತಿಷ್ಠಿತ ಐಡಿಇ ಗ್ಲೋಬಲ್ ಪ್ರಸ್ತಿತಿಯ ಹಾಸ್ಪಿಟ್ಯಾಲಿಟಿ ಲೀಡರ್'ಸ್ ಇಂಡಸ್ಟೀ ಚಾಯ್ಸ್ ಅವಾರ್ಡ್' ಪ್ರಶಸ್ತಿ ಪುರಸ್ಕೃತ ಬಂಜಾರ-ಗೋಲ್ಡ್‍ಫಿಂಚ್ ಪ್ರಕಾಶಣ್ಣ ಪ್ರಸಿದ್ಧ ಉದ್ಯಮಿ, ಎಂಆರ್‍ಜಿ ಸಮೂಹದ ಆಡಳಿತ ನಿರ್ದೇಶಕ ಕೊರಂಗ್ರಪಾಡಿ ಪ್ರಕಾಶ್ ಶೆಟ್ಟಿ ನುಡಿದರು.

ಇಂದಿಲ್ಲಿ ಆದಿತ್ಯವಾರ ಪೂರ್ವಾಹ್ನ ಕುರ್ಲಾ ಪೂರ್ವದಲ್ಲಿನ ಬಂಟರ ಭವನದ Àದ ಶ್ರೀಮತಿ ರಾಧಾಬಾಯಿ ತಿಮ್ಮಪ್ಪ ಭಂಡಾರಿ ಸಭಾಗೃಹದಲ್ಲಿ ಬಂಟರ ಸಂಘ ಮುಂಬಯಿ ಇದರ ಶಿಕ್ಷಣ ಮತ್ತು ಸಮಾಜ ಕಲ್ಯಾಣಾಭಿವೃದ್ಧಿ ಸಮಿತಿಯು ದಿ| ವಾಸು ಕೆ.ಶೆಟ್ಟಿ ಸ್ಮಾರಣಾರ್ಥ ಚರಿಷ್ಮಾ ಬಿಲ್ಡರ್ಸ್‍ನ ಆಡಳಿತ ನಿರ್ದೇಶಕ ಸುಧೀರ್ ವಿ.ಶೆಟ್ಟಿ ಪ್ರಾಯೋಜಿತ ಸಂಘದ ವಾರ್ಷಿಕ ಬೃಹತ್ ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇಮಾಭಿವೃದ್ಧಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿü ಆಗಿದ್ದು ಬಂಟರ ಸಂಘವು ಈ ವರ್ಷದಿಂದ ಆರಂಭಿಸಿದ ನೂರು ವಿದ್ಯಾಥಿರ್üಗಳ ದತ್ತು ಸ್ವೀಕಾರ (ಒಂದನೇ ತರಗತಿದಿಂದ ಡಿಗ್ರಿ ತನಕದ ವಿದ್ಯಾಭ್ಯಾಸಕ್ಕಾಗಿ) ಯೋಜನಾ ನಾಮಫಕ ಅನಾವರಣ ಗೊಳಿಸಿ `ವಿದ್ಯಾಥಿರ್üಗಳ ದತ್ತು ಸ್ವೀಕಾರ ವಿಧಾನ ಯೋಜನೆ' ಉದ್ಘಾಟಿಸಿ ಪ್ರಕಾಶ್ ಶೆಟ್ಟಿ ಮಾತನಾಡಿದರು.

ಸಂಘದ ಅಧ್ಯಕ್ಷ ಪದ್ಮನಾಭ ಎಸ್.ಪಯ್ಯಡೆ ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿ ತನ್ನ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿüಯಾಗಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಗೌರವ ಅತಿಥಿüಯಾಗಿ ಕರ್ನಾಟಕದ ಮಾಜಿ ಸಚಿವ, ಚಿಕ್ಕಮಂಗಳೂರುನ ಶಾಸಕ ಸಿ.ಟಿ ರವಿ, ಅತಿಥಿü ಅಭ್ಯಾಗತರಾಗಿ ಸುಧೀರ್ ವಿ.ಶೆಟ್ಟಿ, ತುಂಗಾ ಹೊಟೇಲು ಸಮೂಹದ ಆಡಳಿತ ನಿರ್ದೇಶಕ, ಸಮಾಜ ಕಲ್ಯಾಣ ಯೋಜನಾ ರೂವಾರಿ ಸುಧಾಕರ್ ಎಸ್.ಹೆಗ್ಡೆ, ಎಸ್.ವಿ ಶೆಟ್ಟಿ ಇಂಗ್ಲೀಷ್ ವಿೂಡಿಯಂ ಸ್ಕೂಲ್ ಕಲ್ಯಾಣ್ ಸಂಸ್ಥೆಯ ಟ್ರಸ್ಟಿ ಡಾ| ಸುರೇಂದ್ರ ವಿ.ಶೆಟ್ಟಿ ಉಪಸ್ಥಿತರಿದ್ದರು.

ಇದೇ ಶುಭಾವಸರದಲ್ಲಿ ಅತಿಥಿüಗಳು ಬೃಹನ್ಮುಂಬಯಿಯಲ್ಲಿನ ತುಳು-ಕನ್ನಡಿಗ ಅಭ್ಯಥಿರ್üಯಾಗಿ ಮುಂಬಯಿ ನಗರ ಉತ್ತರ ಲೋಕಸಭಾ (ಬೋರಿವಿಲಿ) ಕ್ಷೇತ್ರದಿಂದ ದ್ವಿತೀಯ ಬಾರಿಗೆ ಭಾರೀ ಮತಗಳ ಅಭೂತಪೂರ್ವ ಜಯಗಳಿಸಿ ಮಹಾರಾಷ್ಟ್ರ ರಾಜ್ಯದ ಮೊದಲಿಗ ಎಂಪಿ ಮಾನ್ಯತಾ ಗೋಪಾಲ್ ಸಿ.ಶೆಟ್ಟಿ ಮತ್ತು ಉಷಾ ಗೋಪಾಲ್ ಶೆಟ್ಟಿ ದಂಪತಿ ಹಾಗೂ ಆದಾಯ ತೆರಿಗೆ ಇಲಾಖಾ ಸಹಾಯಕ ಆಯುಕ್ತೆ ನಿವ್ಯಾ ಪಿ.ಶೆಟ್ಟಿ (ಐಆರ್‍ಎಸ್) ಇವರನ್ನು (ಮಾತಾ ಪಿತರಾದ ನರ್ಮದಾ ಪ್ರಕಾಶ್ ಶೆಟ್ಟಿ ಜೊತೆಗೂಡಿ) ಸನ್ಮಾನಿಸಿದರು. ಅಂತೆಯೇ ಹಾಗೂ ಮಾಜಿ ಬಂಟರ ಸಂಘದ ಅಧ್ಯಕ್ಷರೂ ಹಿರಿಯ ಮುತ್ಸದ್ಧಿ ಎಂ.ಡಿ ಶೆಟ್ಟಿ, ನ್ಯಾ| ಆರ್.ಸಿ ಶೆಟ್ಟಿ ಅವರನ್ನೂ ಸತ್ಕರಿಸಿ ಗೌರವಿಸಿದರು.

ನನ್ನ ಎಲ್ಲಾ ಸಾಧನೆ, ಗೆಲುವಿನ ಶಕ್ತಿಯಾಗಿ ಮುಂಬಯಿ ಬಂಟರು ನನ್ನನ್ನು ವಿವಿಧ ಹಂತದಲ್ಲಿ ಆಹ್ವಾನಿಸಿ ಗೌರವಿಸಿ ಪ್ರೇರೆಪಿಸಿದ್ದಾರೆ. ಇಂತಹ ಬಂಟ್ಸ್ ಸಂಘ ಮುಂಬಯಿ ಸಂಸ್ಥೆಗೆ ಅಭಾರಿಯಾಗಿರುವೆ. ಇಲ್ಲಿನ ಕರ್ನಾಟಕ ಜನತೆಯ ಸ್ಪರ್ಧಾಪೂರ್ವ ಸಹಯೋಗ, ಸಮಾವೇಶ, ಸÀತ್ಕಾರಗಳೂ ನನ್ನ ಗೆಲುವಿಗೆ ಬಲ ತುಂದಿದೆ. ದೇಶದಲ್ಲಿ ಬಹಳಷ್ಟು ಸಮಸ್ಯೆಗಳಿದ್ದು ಇವುಗಳನ್ನು ನಿಭಾಯಿಸುವಲ್ಲಿ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಇಡೀ ದೇಶವನ್ನು ಜೋಡಿಸಿದ್ದಾರೆ. ರಾಷ್ಟ್ರದ ಸರ್ವೋನ್ನತಿಗೆ ಬದಲಾವಣೆಗಳು ಆಗಲೇಬೇಕು. ಇದು ನಮ್ಮೆಲ್ಲರ ದೇಶ. ನಮ್ಮ ದೇಶದಲ್ಲಿ ನಮಗೆ ಅಭಿಮಾನ ಅಧಿಕಗೊಳ್ಳಬೇಕು. ನಮ್ಮ ಜವಾಬ್ದಾರಿಯನ್ನು ನಾವು ಸ್ವಯಂಪ್ರೇರಿತರಾಗಿ ಪಾಲಿಸುವಂತಾಗಬೇಕು. ಸರಕಾರಕ್ಕೆ ತೆರಿಗೆ ಜಾಸ್ತಿಯಾದಾಗ ಅಭಿವೃದ್ಧಿ ತನ್ನೀಂತಾನೇ ಹೆಚ್ಚಾಗುತ್ತದೆ. ಇದನ್ನು ಮತ್ತೆ ಮತದಾರರು ಜಾಗೃತಗೊಳಿಸಿದ್ದು ಆ ಮೂಲಕ ಜನಪ್ರತಿನಿಧಿಗಳ ಜವಾಬ್ದಾರಿ ಮತದಾರರೇ ಹೆಚ್ಚಿಸಿದ್ದಾರೆ. ಇಡೀ ಮುಂಬಯಿಯಲ್ಲಿ ವಿದ್ಯೆಗೆ ಬಂಟರ ಕೊಡುಗೆ ಶ್ಲಾಘನೀಯ ಎಂದÀು ಗೋಪಾಲ್ ಶೆಟ್ಟಿ ಸನ್ಮಾನಕ್ಕೆ ಉತ್ತರಿಸಿದರು.

ಸಿ.ಟಿ ರವಿ ಮಾತನಾಡಿ ಸಮಯಕ್ಕೆ ಆಗುವವರು ನೆಂಟರು. ನಾಡಿನ ಆಪತ್ತಿನ ಸಂದರ್ಭದಲ್ಲಿ ನಾಡಸೇವೆಗೆ ನಿಂತವರು ಬಂಟರು. ಅದಕಾಗಿ ಬಂಟರನ್ನು ನಾಡವ ಯಾನೆ ಬಂಟರು ಎಂದು ಕರೆಸಲ್ಪಡುತ್ತಾರೆ. ಈ ಸಮುದಾಯವು ದೇಶದ ಸೇವಾ ಸಲುವಾಗಿಗೆ ಇರುವಂತವರು. ವೋಟು ಅಧಿಕಾರವನ್ನು ಬದಲಾಯಿಸುತ್ತದೆ. ನೋಟು ಜೀವನ ಶೈಲಿಯನ್ನು ಬದಲಾಯಿಸುವುದು. ಆದರೆ ಎಲ್ಲವನ್ನೂ ಬದಲಾಯಿಸುವ ತಾಕತ್ತಿದ್ದರೆ ಅದು ಕೇವಲ ವಿದ್ಯೆಗೆ ಮಾತ್ರ. ಶ್ರೀಮಂತರು ಮತ್ತು ಬಡವರ ಅಂತರ ಕ್ಷಿಣಿಸುವ ಅಗತ್ಯವಿದೆ. ಈ ಮಧ್ಯೆಯ ಶಕ್ತಿ ಅಂದರೆ ಅವಶ್ಯಕತೆ ಇರುವವರಿಗೆ ನೀಡುವ ಸ್ವಭಾವವೇ ದಾನ. ಇದು ಪುಣ್ಯದ ಕೆಲಸವಾಗಿದ್ದು ಮುಕ್ತಿಗೆ ಪೂರಕವಾಗಿದೆ. ಆದುದರಿಂದ ಉಳ್ಳವರು ಇಲ್ಲದವರಿಗೆ ನೀಡಿ ಪುಣ್ಯಗಳಿಸಿ ಇಂತಹ ವಿದ್ಯಾದಾನಕ್ಕೆ ಬಂಟರು ವಿಶ್ವಕ್ಕೆ ಪ್ರೇರಕರು ಎಂದರು.

ಬಂಟ್ಸ್ ಸಂಘ ಮುಂಬಯಿ ಇದರ ಉಪಾಧ್ಯಕ್ಷ ಚಂದ್ರಹಾಸ ಕೆ.ಶೆಟ್ಟಿ, ಜತೆ ಕಾರ್ಯದರ್ಶಿ ಮಹೇಶ್ ಎಸ್.ಶೆಟ್ಟಿ, ಜತೆ ಕೋಶಾಧಿಕಾರಿ ಗುಣಪಾಲ್ ಶೆಟ್ಟಿ ಐಕಳ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಸುಧಾಕರ್ ಹೆಗ್ಡೆ, ಯುವ ವಿಭಾಗದ ಕಾರ್ಯಾಧ್ಯಕ್ಷ ಶರತ್ ವಿ.ಶೆಟ್ಟಿ, ಸಮಾಜ ಕಲ್ಯಾಣಾಭಿವೃದ್ಧಿ ಸಮಿತಿ ಉಪ ಕಾರ್ಯಧ್ಯಕ್ಷ ಸುಬ್ಬಯ ಎ.ಶೆಟ್ಟಿ, ಕೋಶಾಧಿಕಾರಿ ಸುರೇಶ್ ಬಿ.ಶೆಟ್ಟಿ (ಮರಾಠ) ವೇದಿಕೆಯಲ್ಲಿದ್ದು, ಸಂಘವು ಈ ಬಾರಿ ಸುಮಾರು ಒಂದು ಕೋಟಿ ಎಂಬತ್ತು ಲಕ್ಷ ಮೊತ್ತದ ವಿದ್ಯಾಥಿರ್ü ವೇತನವನ್ನು ಸಮಾಜದ ನೂರಾರು ವಿದ್ಯಾಥಿರ್üಗಳಿಗೆ ವಿತರಿಸಿದ್ದು, ಜೊತೆಗೆ ವಿದ್ಯಾಥಿರ್üಗಳ ದತ್ತು ಸ್ವೀಕಾರ, ಪ್ರತಿಭಾ ಸಂಪನ್ನ ಶಿಕ್ಷಣ ವಂಚಿತ ವಿಕಲಚೇತನರಿಗೆ ಆಥಿರ್üಕ ಸಹಾಯ ಹಾಗೂ ವಿಧವಾ ಮಾಸಾಶನ ಸೇರಿದಂತೆ ಮತ್ತಿತರ ದೇಣಿಗೆಗಳನ್ನು ವಿತರಿಸಿದ್ದು ಅತಿಥಿüಗಳು ಮತ್ತು ಸಂಘದ ಪದಾಧಿಕಾರಿಗಳು ವಿತರಿಸಿ ಸಂದರ್ಭೋಚಿತವಾಗಿ ಮಾತನಾಡಿ ಮಕ್ಕಳ ಭವಿಷ್ಯಕ್ಕೆ ಶುಭಾರೈಸಿದರು.

ಬಂಟಗೀತೆಯೊಂದಿಗೆ ಸಮಾರಂಭ ಆದಿಗೊಂಡಿದ್ದು, ಸುಚಿತಾ ಶೆಟ್ಟಿ ಪ್ರಾರ್ಥನೆಗೈದರು. ಶಿಕ್ಷಣ ಮತ್ತು ಸಮಾಜ ಕಲ್ಯಾಣಾಭಿವೃದ್ಧಿ ಸಮಿತಿ ಕಾರ್ಯಧ್ಯಕ್ಷ ಉಳ್ತೂರು ಮೋಹನದಾಸ್ ಶೆಟ್ಟಿ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಗೌ| ಪ್ರ| ಕಾರ್ಯದರ್ಶಿ ಸಿಎ| ಸಂಜೀವ ಶೆಟ್ಟಿ ಸನ್ಮಾನಿತರನ್ನು ಪರಿಚಯಿಸಿದರು. ಕಾರ್ಯದರ್ಶಿ ಖಾಂದೇಶ್ ಭಾಸ್ಕರ್ ವೈ.ಶೆಟ್ಟಿ ಸಮಿತಿಯ ಕಾರ್ಯ ಚಟುವಟಿಕೆಗಳ ವರದಿ ಭಿತ್ತರಿಸಿ ಕೃತಜ್ಞತೆ ಸಮರ್ಪಿಸಿದರು. ಬಂಟರವಾಣಿ ಸಂಪಾದಕ ಗೌರವ ಪ್ರಧಾನ ಅಶೋಕ್ ಪಕ್ಕಳ ಕಾರ್ಯಕ್ರಮ ನಿರ್ವಹಿಸಿದರು. ವಿವಿಧ ಪ್ರಾದೇಶಿಕ ವಿಭಾಗೀಯ ಸಮಿತಿಗಳ ಮುಖ್ಯಸ್ಥರು, ಪದಾಧಿಕಾರಿಗಳು, ಸದಸ್ಯರನೇಕರು ಹಾಜರಿದ್ದು, ಪ್ರಾದೇಶಿಕ ಸಮಿತಿಗಳ ಕಲಾವಿದರು ನೃತ್ಯಾವಳಿಗಳನ್ನು ಪ್ರಸ್ತುತ ಪಡಿಸಿದರು.
More News

ಶಿವ ಪೂಜಾರಿ ನಿಧನ
ಶಿವ ಪೂಜಾರಿ ನಿಧನ
ಅಂಧೇರಿ ಪೂರ್ವದ ಸೆಕ್ರೇಡ್ ಹಾರ್ಟ್ ಇಗರ್ಜಿಯಲ್ಲಿನ ಕೊಂಕಣಿ ಕಮಿಟಿ ಸಂಸ್ಥೆ
ಅಂಧೇರಿ ಪೂರ್ವದ ಸೆಕ್ರೇಡ್ ಹಾರ್ಟ್ ಇಗರ್ಜಿಯಲ್ಲಿನ ಕೊಂಕಣಿ ಕಮಿಟಿ ಸಂಸ್ಥೆ
ಧರ್ಮಸ್ಥಳ ಭಜನಾ ತರಬೇತಿ ಶಿಬಿರ ಉದ್ಘಾಟನೆ
ಧರ್ಮಸ್ಥಳ ಭಜನಾ ತರಬೇತಿ ಶಿಬಿರ ಉದ್ಘಾಟನೆ

Comment Here