Sunday 11th, May 2025
canara news

ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ- ಕೆಎಸ್‍ಸಿಸಿ ವತಿಯಿಂದ ದುಬೈಯಲ್ಲಿ ಸಂಪನ್ನಗೊಂಡ ಯಶಸ್ವೀ ರಕ್ತದಾನ ಶಿಬಿರ

Published On : 23 Jun 2019   |  Reported By : Rons Bantwal


ಮುಂಬಯಿ (ದುಬೈ), ಜೂ.23: ವಿಶ್ವ ರಕ್ತದಾನಿಗಳ ದಿನದ ಪ್ರಯುಕ್ತ ಯುನೈಟೆಡ್ ಅರಬ್ ಎಮಿರೇಟ್ಸ್‍ನ ದುಬೈಯಲ್ಲಿ ಕರ್ನಾಟಕ ಸ್ಪೋರ್ಟ್ಸ್ ಎಂಡ್ ಕಲ್ಚರಲ್ ಕ್ಲಬ್ ದುಬೈ ಆಶ್ರಯದಲ್ಲಿ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಸಹಕಾರದೊಂದಿಗೆ ದುಬೈ ಹೆಲ್ತ್ ಅಥಾರಿಟಿ ಎಂಡ್ ಕಮ್ಯೂನಿಟಿ ಡೆವಲಪ್‍ಮೆಂಟ್ ಅಥಾರಿಟಿ ಸಹಭಾಗಿತ್ವದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರವನ್ನು ಕಳೆದ ಶುಕ್ರವಾರ (ಜೂ.21) ದುಬೈ ಇಲ್ಲಿನ ಲತೀಫಾ ಹಾಸ್ಪಿಟಲ್‍ನಲ್ಲಿ ಯಶಸ್ವಿಯಾಗಿ ನಡೆಸಲ್ಪಟ್ಟಿತು.

ದುಬೈ ಯ ಲತೀಫಾ ಹಾಸ್ಪಿಟಲ್‍ನ ಬ್ಲಡ್ ಡೊನೇಷನ್ ಸೆಂಟರ್ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಸಹಕಾರದಿಂದ ನಡೆಸಲ್ಪಟ್ಟ ಈ ಶಿಬಿರದಲ್ಲಿ ಸುಮಾರು142 ರಕ್ತದಾನಿಗಳು ರಕ್ತದಾನ ಮಾಡಿದರು. ಕಾರ್ಯಕ್ರಮದಲ್ಲಿ ಕೆಎಸ್‍ಸಿಸಿ ಅಧ್ಯಕ್ಷ ಜನಾಬ್ ಮೊಹಮ್ಮದ್ ಇಸ್ಮಾಯಿಲ್, ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಶಾಫಿ, ಖಜಾಂಚಿ ಮೊಹಮ್ಮದ್ ಫರಾಜ್ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕದ ನಿರ್ವಾಹಕ ಸಿರಾಜುದ್ಧೀನ್ ಪರ್ಲಡ್ಕ, ಶಾಫಿ ಮಾಣಿ, ಮೆಹತಾಬ್ ಕೈಕಂಬ, ಇರ್ಝಾನ್ ಅಡ್ಡೂರು ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮ ಆಯೋಜಿಸಲು ಸಹಕರಿಸಿದ ದುಬೈ ಹೆಲ್ತ್ ಅಥಾರಿಟಿ ಎಂಡ್ ಕಮ್ಯೂನಿಟಿ ಡೆವಲಪ್‍ಮೆಂಟ್ ಅಥಾರಿಟಿ, ರಕ್ತದಾನಗೈದ ಸರ್ವ ಸಹೃದಯೀ ದಾನಿಗಳು, ಆಸ್ಪತ್ರೆಯ ಸಿಬಂದಿಗಳು, ಕಾರ್ಯಕ್ರಮದ ಯಶಸ್ಸಿಗಾಗಿ ಹಗಲಿರುಳು ದುಡಿದ ಎಲ್ಲಾ ಕಾರ್ಯಕರ್ತರಿಗೆ, ಹಿತೈಷಿಗಳಿಗೂ ಹಾಗೂ ಮಾಧ್ಯಮ ಪ್ರತಿನಿಧಿಗಳಿಗೆ ಸೇರಿದಂತೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸಿದ ಸರ್ವರಿಗೆ ಕೆಎಸ್‍ಸಿಸಿ ಮತ್ತು ಬ್ಲಡ್ ಹೆಲ್ಪ್ ಲೈನ್ ಕರ್ನಾಟಕವು ಕೃತಜ್ಞತೆ ಸಮರ್ಪಿಸಿತು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here