Sunday 11th, May 2025
canara news

ಬೃಹನ್ಮುಂಬಯಿನಲ್ಲಿ ಪೇಜಾವರಶ್ರೀಗಳ ರಜತ ತುಲಾಭಾರ ಸಪ್ತಾಹಕ್ಕೆ ಚಾಲನೆ

Published On : 25 Jun 2019   |  Reported By : Rons Bantwal


ಶ್ರೀಕೃಷ್ಣನ ಆಕರ್ಷಣಾ ಶಕ್ತಿ ಅತ್ಯಾದ್ಭುತವಾದುದು: ವಿಶ್ವೇಶತೀರ್ಥಶ್ರೀ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜೂ.24: ದೊಡ್ಡ ಯೋಜನಾ ಕಾರ್ಯಕ್ಕಾಗಿ, ಭಗವಂತನ ಸೇವೆಗಾಗಿ ಏರ್ಪಾಡಿಸಿದ ತುಲಾಭಾರ ಇದಾಗಿದ್ದು ಇದು ಕೃಷ್ಣನ ಮಂದಿರಕ್ಕಾಗಿ ಶ್ರೀಕೃಷ್ಣನ ತುಲಾಭಾರ. ಆದುದರಿಂದ ಕೃಷ್ಣನ ಭಕ್ತರೆಲ್ಲರ ಈ ತುಲಾಭಾರ ಇದು ನನ್ನದಲ್ಲ, ಭಗವಂತನ ಸೇವಾ ತುಲಾಭಾರವಾಗಿದೆ. ಕೃಷ್ಣನ ಸೇವೆ ಎಂಬ ರೂಪದಿಂದ ಕೃಷ್ಣನ ಭಕ್ತರೆಲ್ಲರೂ ಸೇರಿ ಮಾಡಿದ ತುಲಾಭಾರ. ಬೈದಾ ಪೀಪಲ್, ಫರ್ ದ ಪೀಪಲ್, ಆಫ್ ದ ಪೀಪಲ್ ಅನ್ನುವಂತೆ ಜನರಿಂದ ಜನರಿಗಾಗಿ ಜನರ ಕಾರ್ಯ ಕೃಷ್ಣನೇ ಮಾಡಿಸುವ ಸೇವೆ ಇದಾಗಿದೆ. ಆದುದರಿಂದ ನನಗಿದು ಭಾರವೇ ಅಲ್ಲ ಯಾಕೆಂದರೆ ಇದು ನನಗಲ್ಲ ಕೃಷ್ಣನಿಗೆ ಸಂದ ಸೇವೆಯಾಗಿದೆ. ನನಗೆನೇ ಅಂತ ಮಾಡುತ್ತಿದ್ದರೆ ನನಗೆ ಖಂಡಿತಾ ಭಾರವಾಗುತ್ತಿತ್ತು ಎಂದು ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾ ಸಂಸ್ಥಾನದ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ತಮ್ಮ ಅಮೃತ ನುಡಿಗಳಾನ್ನಾಡಿ ತಿಳಿಸಿದರು.

ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ (ಜಿಪಿಟಿ) ಗೋಕುಲ, ಬಿಎಸ್‍ಕೆಬಿ ಅಸೋಸಿಯೇಶನ್ ಮುಂಬಯಿ ಹಾಗೂ ಶ್ರೀ ಕೃಷ್ಣ ಭಕ್ತಾದಿಗಳು ಮತ್ತು ಶ್ರೀ ಪೇಜಾವರ ಮಠಾಧೀಶರ ಅಭಿಮಾನಿಗಳು ಇದೇ ಪ್ರಪ್ರಥಮ ಬಾರಿಗೆ ಮುಂಬಯಿ ಹಾಗೂ ಉಪನಗರಗಳಲ್ಲಿ ಬೃಹನ್ಮುಂಬಯಿನಲ್ಲಿ ಆಯೋಜಿಸಿರುವ ಪೇಜಾವರಶ್ರೀಗಳ ರಜತ ತುಲಾಭಾರ ಸಪ್ತಾಹಕ್ಕೆ ಚಾಲನೆಯನ್ನೀಡಿ ವಿಶ್ವೇಶತೀರ್ಥರು ಮಾತನಾಡಿದರು.

ಇಂದಿಲ್ಲಿ ಸೋಮವಾರ ಸಂಜೆ ಸಾಂತಾಕ್ರೂಜ್ ಪೂರ್ವದಲ್ಲಿನ ಶ್ರೀ ಪೇಜಾವರ ಮಠದಲ್ಲಿ ಶ್ರೀ ಅಂಬಿಕಾ ಮಹಾಗಣಪತಿ ದೇವಸ್ಥಾನ ವಿದ್ಯಾವಿಹಾರ್ ಇದರ ಪ್ರದಾನ ಅರ್ಚಕ ವಿದ್ವಾನ್ ಪೆರ್ಣಂಕಿಲ ಹರಿದಾಸ್ ಭಟ್ ಸಂಯೋಜನೆಯಲ್ಲಿ ನಡೆಸಲ್ಪಟ್ಟ ಕಾರ್ಯಕ್ರಮದಲ್ಲಿ ಬಿಎಸ್‍ಕೆಬಿಎ ಮತ್ತು ಜಿಪಿಟಿ ಸಂಸ್ಥೆಗಳ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು ಮತ್ತು ವಿಜಯಲಕ್ಷಿ ್ಮೀ ಎಸ್.ರಾವ್ ದಂಪತಿ ಅವರು ಉಭಯ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ವಿವಿಧ ಸಂಸ್ಥೆಗಳ ಮುಖ್ಯಸ್ಥರು, ಭಕ್ತರನ್ನೊಳಗೊಂಡು ವಿಶ್ವೇಶತೀರ್ಥರ ಪ್ರಥಮ ರಜತ ತುಲಾಭಾರ (ಸಪ್ತಾಹದ) ನೆರವೇರಿಸಿದರು.

ಮಧ್ವಾಚಾರ್ಯರು ವರ್ಣಿಸಿದಂತೆ ಕೃಷ್ಣ ಅಂದರೆ ದೊಡ್ಡ ಸಮುದ್ರ, ಏಕ ಸಾಗರ ಎಂದರ್ಥ. ಆ ಸಮುದ್ರದಲ್ಲಿ ಜಲವಿದೆ. ಆದರೆ ಕೃಷ್ಣನಲ್ಲಿ ತುಂಬಿದ್ದು ಜಲವಲ್ಲ ಬಲ. ಸಾಗರದಲ್ಲಿ ಬೇಕಾದಷ್ಟು ರತ್ನಗಳಿದ್ದರೆ ಕೃಷ್ಣನಲ್ಲಿ ಬೇಕಾದಷ್ಟು ಗುಣಗಳಿವೆ. ಇಂತಹ ಕೃಷ್ಣನಲ್ಲಿ ಯೋಗಿಗಳು, ಧ್ಯಾನಿಗಳು, ಗೋವುಗಳು, ಗೋಪಾಲಗರೂ, ಗೋಪಿಕಾ ಸ್ತ್ರೀಯರು ಸೇರಿದಂತೆ ಎಲ್ಲರೂ ಕೂಡಾ ಕೃಷ್ಣನತ್ತ ಧಾವಿಸಿ ಬರುತ್ತಾರೆ. ಎಲ್ಲರನ್ನೂ ಸೆಳೆಯುವ ಆಕರ್ಷಣೆಯ ಶಕ್ತಿ ಶ್ರೀಕೃಷ್ಣನಿಗಿದೆ. ಬರೇ ಭಾರತೀಯರು ಮಾತ್ರವಲ್ಲ ವಿದೇಶಿಯರೂ ಶ್ರೀಕೃಷ್ಣನ ನಾಮಸ್ಮರಣೆಗೈದಾಗ ಕುಣಿಯುತ್ತಾ ಆತನಲ್ಲಿ ಆಕರ್ಷಿತರಾಗುತ್ತಾರೆ. ಶ್ರೀಕೃಷ್ಣನ ಆಕರ್ಷಣಾ ಶಕ್ತಿ ಅತ್ಯಾದ್ಭುತವಾದುದು. ಜಡವಾದ ಈ ಭೂಮಿಯ ಆಕರ್ಷಣಾಶಕ್ತಿ ಮೇಲಿದ್ದದ್ದನ್ನು ಕೆಳಕ್ಕೆ ತಳ್ಳುವಂತಿದ್ದರೆ, ಶ್ರೀಕೃಷ್ಣನ ಶಕ್ತಿ ಕೆಳಕ್ಕಿದ್ದದ್ದನ್ನು ಮೇಲಕ್ಕೆ ಎತ್ತುವ ಆಕರ್ಷಣಾಶಕ್ತಿಯಾಗಿದೆ. ಎಲ್ಲರ ಉದ್ಧಾರಕ ಕೃಷ್ಣನ ಶಕ್ತಿಯನ್ನು ಎಷ್ಟು ಕೊಂಡಾಡಿದರೂ ಸಾಕಾಗಲಿಕ್ಕಿಲ್ಲ. ಕೃಷ್ಣ ರಜತ ಪೀಠವಾಸಿಯಾಗಿದ್ದು ಆತನಿಗೆ ರಜತ ತುಲಾಭಾರ ಸಂದಂತಾಯಿತು. ಅಂತೆಯೇ ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ರೂಪಿಸಲುದ್ದೇಶಿತ ಶ್ರೀಕೃಷ್ಣನ ಮಂದಿರವೂ ಶಿಲಾಮಯವಾಗಿ ಶಾಶ್ವತಮಯವಾಗಿ ರೂಪುಗೊಳ್ಳಲಿ ಎಂದು ಪೇಜಾವರಶ್ರೀಗಳು ನುಡಿದರು.

ಉಡುಪಿ ಶ್ರೀ ಕೃಷ್ಣನ ಆರಾಧಕ, ನಡೆದಾಡುವ, ಮಾತನಾಡುವ ಕೃಷ್ಣನೆಂದೇ ಪ್ರಸಿದ್ಧಿ ಪಡೆದ ಉಡುಪಿ ಅಷ್ಠಮಠಗಳಲ್ಲಿನ ಶ್ರೀ ಪೇಜಾವರ ಮಠದ ಮಠಾಧೀಶ ವಿಶ್ವೇಶಶ್ರೀಗಳÀವರು ಪಟ್ಟದ ದೇವರು ಶ್ರೀ ರಾಮ ವಿಠಲ ದೇವರಿಗೆ ಪೂಜೆ ನೆರವೇರಿಸಿದ ಬಳಿಕ ಇಂದಿನಿಂದ ನಿರಂತರ ಏಳು ದಿವಸಗಳಲ್ಲಿ ರಜತ ತುಲಾಭಾರ ಸಪ್ತಾಹ ನೆರವೇರಿಸುವ ಸಂಕಲ್ಪದಂತೆ ಹಿರಿಯ ಯತಿಗಳು ತುಲಾಭಾರ ಸೇವೆಯಲ್ಲಿ ಪಾಲ್ಗೊಂಡು ಸಯಾನ್‍ನಲ್ಲಿ ರೂಪುಗೊಳ್ಳುವ ಭವ್ಯ ಗೋಕುಲ ಶ್ರೀಕೃಷ್ಣ ಮಂದಿರ ನಿರ್ಮಾಣಕ್ಕೆ ಮಾರ್ಗದರ್ಶನ ನೀಡುತ್ತಾ ಈ ಸಪ್ತಾಹದಲ್ಲಿ ದೇಣಿಗೆ ರೂಪದಲ್ಲಿ ಸಂಗ್ರಹಿತ ಮೊತ್ತ ಬೆಳ್ಳಿ, ಇತ್ಯಾದಿಗಳನ್ನು ಗೋಕುಲ ಶ್ರೀ ಕೃಷ್ಣ ಮಂದಿರ ನಿರ್ಮಾಣ ನಿಧಿಗೆ ನೀಡುವುದಾಗಿ ತಿಳಿಸಿ ನೆರೆದ ಸದ್ಭಕ್ತರನ್ನು ಶ್ರೀ ಕೃಷ್ಣಾನುಗ್ರಹಗಳೊಂದಿಗೆ ಹರಸಿದರು.

ಡಾ| ಸುರೇಶ್ ರಾವ್ ಸ್ವಾಗತಿಸಿ ಪ್ರಸ್ತಾವನೆಗೈದು ಗೋಕುಲವು ಮುಂಬಯಿಯ ಉಡುಪಿ ಆಗಿದೆ. ಒಂದು ಗಂಟೆಯೇ ಒಂದೆಡೆ ಇರದ ಶ್ರೀಗಳ ವಾರದ ಮುಂಬಯಿ ಮೊಕ್ಕಂ ಅಭಿನಂದನೀಯ ಎಂದು ರೂಪುಗೊಳ್ಳುತ್ತಿರುವ ಶ್ರೀ ಕೃಷ್ಣ ಮಂದಿರದ ರೂಪುರೇಷೆ, ಕಾಮಗಾರಿ ಯೋಜನೆಯನ್ನು ಸ್ಲೈಡ್‍ಶೋ ಮುಖೇನ ವಿವರಿಸಿದರು.

ಈ ಸಂದರ್ಭದಲ್ಲಿ ಬಿಎಸ್‍ಕೆಬಿಎ ಸಂಸ್ಥೆಯ ಉಪಾಧ್ಯಕ್ಷರುಗಳಾದ ವಾಮನ ಹೊಳ್ಳ ಮತ್ತು ಶೈಲಿನಿ ರಾವ್, ಗೌ| ಪ್ರ| ಕಾರ್ಯದರ್ಶಿ ಎ.ಪಿ.ಕೆ ಪೆÇೀತಿ, ಗೌರವ ಕೋಶಾಧಿಕಾರಿ ಸಿಎ| ಹರಿದಾಸ್ ಭಟ್, ಜೊತೆ ಕಾರ್ಯದರ್ಶಿಗಳಾದ ಪಿ.ಸಿ.ಎನ್ ರಾವ್, ಚಿತ್ರಾ ಮೇಲ್ಮನೆ, ಜೊತೆ ಕೋಶಾಧಿಕಾರಿ ಕುಸುಮಾ ಶ್ರೀನಿವಾಸ್, ಮಹಿಳಾ ವಿಭಾಗಧ್ಯಕ್ಷೆ ಐ.ಕೆ ಪ್ರೇಮಾ ಎಸ್.ರಾವ್, ಜಿಪಿಟಿ ವಿಶ್ವಸ್ಥ ಮಂಡಳಿ ಗೌ| ಪ್ರ| ಕಾರ್ಯದರ್ಶಿ ಎ.ಎಸ್ ರಾವ್, ವಿಶ್ವಸ್ಥ ಸದಸ್ಯರುಗಳಾದ ಬಿ.ರಮಾನಂದ ರಾವ್ (ಬಡನಿಡಿಯೂರು), ಕೃಷ್ಣ ಆಚಾರ್ಯ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು, ವಿದ್ವಾನ್ ಡಾ| ಎಂ.ಎಸ್ ಶೆಟ್ಟಿ, ಕೈರಬೆಟ್ಟು ವಿಶ್ವನಾಥ್ ಭಟ್, ವಿಷ್ಣುಮೂರ್ತಿ ಆಚಾರ್ಯ ಉಡುಪಿ, ಪೇಜಾವರ ಮಠದ ಆಡಳಿತಾಧಿಕಾರಿಗಳಾದ ಪ್ರಕಾಶ್ ಆಚಾರ್ಯ ರಾಮಕುಂಜ, ವಿದ್ವಾನ್ ರಾಮದಾಸ ಉಪಾಧ್ಯಾಯ ರೆಂಜಾಳ, ಶ್ರೀಹರಿ ಭಟ್ ಪುತ್ತಿಗೆ, ನಿರಂಜನ್ ಗೋಗ್ಟೆ ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು.

ಆರಂಭದಲ್ಲಿ ವಿಶ್ವಪ್ರಸಿದ್ಧ ಡ್ರಮ್‍ವಾದಕ ಪದ್ಮಶ್ರೀ ಆನಂದನ್ ಶಿವಮಣಿ ಸಂಗೀತವಾದನ ಕಾರ್ಯಕ್ರಮ ಪ್ರಸ್ತುತ ಪಡಿಸಿದರು. ಮಧ್ಯಾಂತರದಲ್ಲಿ ತೊಟ್ಟಿಲು ಪೂಜಾ ಸೇವೆ ನಡೆಸಲ್ಪಟ್ಟಿತು. ಪುರೋಹಿತರು ವೇದಘೋಷಗೈದರು. ವಿದ್ವಾನ್ ಪೆರ್ಣಂಕಿಲ ಹರಿದಾಸ್ ಭಟ್ ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆಗೈದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here