Sunday 6th, July 2025
canara news

ಐಎಫ್ಎಫ್ ಹತ್ತೊಂಬತ್ತನೆಯ ವರ್ಷದ ಹಜ್ ಸೇವೆ ಉದ್ಘಾಟನೆ

Published On : 26 Jun 2019   |  Reported By : Rons Bantwal


ಮುಂಬಯಿ (ಬಂಟ್ವಾಳ),ಜೂ.25:ಇಂಡಿಯಾ ಫ್ರೆಟರ್ನಿಟಿ ಫೋರಮ್ ಇದರ ಹತ್ತೊಂಬತ್ತನೆಯ ವರ್ಷದ ಹಜ್ ಸೇವೆಯ ಉದ್ಘಾಟನಾ ಕಾರ್ಯಕ್ರಮ ಇತ್ತೀಚಿಗೆ ಜಿದ್ದಾದ ಸಾಫಿರ ಆಡಿಟೋರಿಯಂನಲ್ಲಿ ನಡೆಯಿತು.ಕಾರ್ಯಕ್ರಮದ ಉದ್ಘಾಟನೆಯನ್ನು ಮುಹಮ್ಮದ್ ಅಲಿ (ಮ್ಯಾನೇಜಿಂಗ್ ಡೈರೆಕ್ಟರ್ ಜಿದ್ದಾ ನ್ಯಾಷನಲ್ ಹಾಸ್ಪಿಟಲ್) ನೆರವೇರಿಸಿದರು.

ಫ್ರೆಟರ್ನಿಟಿ ಹಜ್ ಸರ್ವಿಸ್ ಲಾಂಛನವನ್ನು ಡಾ.ಜಂಶೀತ್(ಅಲ್ ಅಬೀರ್ ಹಾಸ್ಪಿಟಲ್ ಸ್ಟ್ರಾಟೆಜಿಕ್ ಪ್ಲಾನಿಂಗ್ ವೈಸ್ ಛೇರ್ಮನ್) ಬಿಡುಗಡೆಗೊಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಐ ಎಫ್ ಎಫ್ ರೀಜನಲ್ ಅಧ್ಯಕ್ಷ ಫಾಯಝುದ್ದೀನ್ ಚೆನ್ನೈ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಅಬ್ದುಲ್ ಅಜೀಜ್ ಕಿದ್ವಾಯಿ ಅಧ್ಯಕ್ಷರು ಐಪಿಡಬ್ಲ್ಯೂ ಎಫ್,ಝಕಾರಿಯಾ ಬಿಲಾದಿ,ತಮೀಮ್ ಕೌಸರ್,ಜುನೈದ್ ಅಹಮದ್ ಇಂಡಿಯಾ ಫೋರಮ್,ಸಾಲಾಹ್ ಕಾರಡನ್ ಕಾರ್ಯದರ್ಶಿ ಎಂಇಎಸ್, ಕೆಟಿಎ ಮುನೀರ್ ಅಧ್ಯಕ್ಷರು ಓಐಸಿಸಿ, ನೂರುದ್ದೀನ್ ಖಾನ್ ಅಧ್ಯಕ್ಷರು AMUOBA ,haagu ಅಶ್ರಫ್ ಮೊರಯುರ್ ಅಧ್ಯಕ್ಷರು ಐಎಸ್ಎಫ್ ಭಾಗವಹಿಸಿದ್ದರು.

ಇಂಡಿಯಾ ಫ್ರೆಟರ್ನಿಟಿ ಫೋರಮ್ ಎಕ್ಸ್ಕ್ಯೂಟಿವ್ ಸದಸ್ಯ ಅಬ್ದುಲ್ ಗಣಿ ಇಂಡಿಯಾ ಫ್ರೆಟರ್ನಿಟಿ ಫೋರಮ್ ನ ಹತ್ತೊಂಬತ್ತು ವರ್ಷಗಳ ಹಜ್ ಸೇವೆಯ ಮೈಲಿಗಲ್ಲನ್ನು ವಿವರಿಸಿದರು.ಈ ವರ್ಷ ಸುಮಾರು 1200ರಷ್ಟು ಸ್ವಯಂ ಸೇವಕರು ಹಜ್ ಯಾತ್ರಾರ್ಥಿಗಳ ಸೇವೆಯಲ್ಲಿ ಇರುತ್ತಾರೆ ಹಾಗು ಮಕ್ಕಾ ಹಾಗು ಮದೀನದಲ್ಲಿ ಮೊದಲ ಹಜ್ ತಂಡ ಬಂದು ಕೊನೆಯ ಹಜ್ ಕೊನೆಯ ಹಜ್ ತಂಡ ಸ್ವದೇಶಕ್ಕೆ ಮರಳುವ ವರೆಗೆ ಇಂಡಿಯಾ ಫ್ರೆಟರ್ನಿಟಿ ಫೋರಮ್ ಹಜ್ ಸೇವೆ ಇರುತ್ತದೆ ಎಂದು ಎಂದು ಐ ಎಫ್ ಎಫ್ ತಿಳಿಸಿದೆ.ಕಾರ್ಯಕ್ರಮದಲ್ಲಿ ಮುಹಮ್ಮದ್ ಇಕ್ಬಾಲ್ ಸ್ವಾಗತಿಸಿದರೆ ಮುದಸ್ಸಿರ್ ಅಕ್ಕರಂಗಡಿ ವಂದಿಸಿದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here