Tuesday 5th, August 2025
canara news

ಜೆರಿಮೆರಿಯ ಶ್ರೀ ಕ್ಷೇತ್ರ ಉಮಾ ಮಹೇಶ್ವರೀ ದೇವಸ್ಥಾನದ ಸಭಾಗೃಹದಲ್ಲಿ

Published On : 28 Jun 2019   |  Reported By : Rons Bantwal


ಪೇಜಾವರಶ್ರೀಗಳ ರಜತ ತುಲಾಭಾರ ಸಪ್ತಾಹದ ತೃತೀಯ ತುಲಾಭಾರ ಸೇವೆ

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜೂ.27: ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ (ಗೋಕುಲ), ಬಿಎಸ್‍ಕೆಬಿ ಅಸೋಸಿಯೇಶನ್ ಮುಂಬಯಿ, ಶ್ರೀ ಕೃಷ್ಣ ಭಕ್ತಾದಿಗಳು ಮತ್ತು ಶ್ರೀ ಪೇಜಾವರ ಮಠಾಧೀಶರ ಅಭಿಮಾನಿಗಳು ಹೊರನಾಡ ಮುಂಬಯಿನಲ್ಲಿ ಕೈಗೊಂಡಿರುವ ಪೇಜಾವರಶ್ರೀಗಳ ರಜತ ತುಲಾಭಾರ ಸಪ್ತಾಹದ ತೃತೀಯ ತುಲಾಭಾರ ಸೇವೆಯು ಕಳೆದ ಬುಧವಾರ ಸಂಜೆ ಕುರ್ಲಾ ಪೂರ್ವದ ಜೆರಿಮೆರಿ ಇಲ್ಲಿನ ಶ್ರೀ ಕ್ಷೇತ್ರ ಉಮಾ ಮಹೇಶ್ವರೀ ದೇವಸ್ಥಾನದ ಸಭಾಗೃಹದಲ್ಲಿ ನೆರವೇರಿಸಲ್ಪಟ್ಟಿತು.

ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾ ಸಂಸ್ಥಾನದ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರನ್ನು ಭಕ್ತವೃಂದವು ಸಾಂಪ್ರದಾಯಿಕವಾಗಿ ಬರಮಾಡಿ ಕೊಂಡಿದ್ದು, ಶ್ರೀಪಾದರು ಶ್ರೀ ಉಮಾ ಮಹೇಶ್ವರೀ ಮಾತೆಗೆ ಆರತಿಗೈದು ಸಾಂಕೇತಿಕವಾಗಿ ಕಾರ್ಯಕ್ರಮಕ್ಕೆ ಚಾನೆಯನ್ನಿತ್ತರು.

ಫೆಡರೇಶನ್ ಆಫ್ ವರ್ಲ್ಡ್ ಬಂಟ್'ಸ್ ಅಸೋಸಿಯೇಶನ್'ಸ್ (ಜಾಗತಿಕ ಬಂಟರ ಸಂಘಗಳ ಒಕ್ಕೂಟ) ಇದರ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಜರುಗಿದ ಸಮಾರಂಭದಲ್ಲಿ ಶ್ರೀ ಅಂಬಿಕಾ ಮಹಾಗಣಪತಿ ದೇವಸ್ಥಾನ ವಿದ್ಯಾವಿಹಾರ್‍ನ ಪ್ರಧಾನ ಅರ್ಚಕ ವಿದ್ವಾನ್ ಪೆರ್ಣಂಕಿಲ ಹರಿದಾಸ್ ಭಟ್, ಬಿಎಸ್‍ಕೆಬಿ ಅಸೋಸಿಯೇಶನ್ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್. ಪೂಜಾರಿ, ಕನ್ನಡಿಗ ಕಲಾವಿರದ ಪರಿಷತ್ತು ಅಧ್ಯಕ್ಷ ಸುರೇಂದ್ರಕುಮಾರ್ ಹೆಗ್ಡೆ, ಶ್ರೀ ಕ್ಷೇತ್ರ ಉಮಾ ಮಹೇಶ್ವರೀ ದೇವಸ್ಥಾನದ ಮೊಕ್ತೇಸರೆ ಲಲಿತಾ ಬಿ.ಕೆ ಶೀನ, ಬಂಟ್ಸ್ ಸಂಘ ಮುಂಬಯಿ ಇದರ ಜ್ಞಾನ ಮಂದಿರ ಸಮಿತಿ ಕಾರ್ಯಧ್ಯಕ್ಷ ರವೀಂದ್ರನಾಥ ಎಂ.ಭಂಡಾರಿ ಗೌರವ ಅತಿಥಿsಗಳಾಗಿ ಉಪಸ್ಥಿತರಿದ್ದು, ಅರ್ಚಕ ಶ್ರೀನಿವಾಸ ಎನ್. ಉಡುಪ, ಶಾಂತಳಾ ಎಸ್.ಉಡುಪ, ಶ್ರೀಲಕ್ಷ್ಮೀ ಎಸ್.ಉಡುಪ, ಶ್ರೀನಿಧಿ ಎಸ್.ಉಡುಪ ಪಾದಪೂಜೆ ನೆರವೇರಿಸಿ ಶ್ರೀಗಳಿಗೆ ಆರತಿಗೈದÀು ವಿವಿಧ ಸಂಸ್ಥೆಗಳ ಮುಖ್ಯಸ್ಥರು, ಭಕ್ತರನ್ನೊಳಗೊಂಡು ವಿಶ್ವೇಶತೀರ್ಥ ಶ್ರೀಪಾದÀರ ರಜತ ತುಲಾಭಾರ (ಸಪ್ತಾಹದ) ನೆರವೇರಿಸಿದರು.

ಈ ಸಂದರ್ಭದಲ್ಲಿ ಬಿಎಸ್‍ಕೆಬಿಎ ಸಂಸ್ಥೆಯ ಉಪಾಧ್ಯಕ್ಷ ವಾಮನ ಹೊಳ್ಳ, ಗೌ| ಪ್ರ| ಕಾರ್ಯದರ್ಶಿ ಎ.ಪಿ.ಕೆ ಪೆÇೀತಿ, ಗೌರವ ಕೋಶಾಧಿಕಾರಿ ಸಿಎ| ಹರಿದಾಸ್ ಭಟ್, ಮಹಿಳಾ ವಿಭಾಗಧ್ಯಕ್ಷೆ ಐ.ಕೆ ಪ್ರೇಮಾ ಎಸ್.ರಾವ್, ಜಿಪಿಟಿ ವಿಶ್ವಸ್ಥ ಮಂಡಳಿ ವಿಶ್ವಸ್ಥ ಸದಸ್ಯ ಬಿ.ರಮಾನಂದ ರಾವ್ (ಬಡನಿಡಿಯೂರು), ಕಾರ್ಯಕಾರಿ ಸಮಿತಿ ಸದಸ್ಯರು, ಚಂದ್ರಶೇಖರ ಭಟ್, ಪ್ರಶಾಂತ್ ಆರ್.ಹೆರ್ಲೆ, ವಿಷ್ಣುಮೂರ್ತಿ ಆಚಾರ್ಯ ಉಡುಪಿ, ಪೇಜಾವರ ಮಠದ ಪ್ರಬಂಧಕರಾದ ವಿದ್ವಾನ್ ರಾಮದಾಸ ಉಪಾಧ್ಯಾಯ ರೆಂಜಾಳ, ಪ್ರಕಾಶ್ ಆಚಾರ್ಯ ರಾಮಕುಂಜ ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು.

ಪೂರ್ಣಪ್ರಜ್ನ ಪೀಠ ಬೆಂಗಳೂರು ಇದರ ವಿದ್ಯಾಥಿರ್üಗಳು ವೇದಘೋಷಗೈದರು. ವಿದ್ವಾನ್ ಕೈರಬೆಟ್ಟು ವಿಶ್ವನಾಥ ಭಟ್ ಅವರು ಹರಿಕಥೆ ಪ್ರಸ್ತುತ ಪಡಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಭ್ರಾಮರಿ ಯಕ್ಷ ನೃತ್ಯ ಕಲಾ ನಿಲಯದ ಕಲಾವಿದ ಮಕ್ಕಳು `ಸುದರ್ಶನ ವಿಜಯ' ಮಕ್ಕಳ ಯಕ್ಷಗಾನ ಪ್ರದರ್ಶಿಸಿದರು. ವಿಶ್ವನಾಥ ಶೆಟ್ಟಿ ಪೇತ್ರಿ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿದರು. ಅಶೋಕ ಪಕ್ಕಳ ಸಭಾ ಕಾರ್ಯಕ್ರಮ ನಿರೂಪಿಸಿ ಅಭಾರ ಮನ್ನಿಸಿದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here