Sunday 11th, May 2025
canara news

ಕರ್ನಾಟಕ ಸಂಘ ಮುಂಬಯಿ ಇದರ ಎಂಬತ್ತ ಐದನೇ ವಾರ್ಷಿಕ ಮಹಾಸಭೆ

Published On : 29 Jun 2019   |  Reported By : Rons Bantwal


ಮುಂಬಯಿನಲ್ಲಿ ಕನ್ನಡ ಕಾಯಕದ ಅಭಿಮಾನ ಮೊಳಗಲಿ-ಎಂ. ಎಂ ಕೋರಿ
(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)

ಮುಂಬಯಿ, ಜೂ.23: ನಿಯಮಗಳು ಕಾಲ ಕಾಲಕ್ಕೆ ಪರಿಷ್ಕರಣೆ ಆಗುತ್ತದೆ. ಅದಕ್ಕೆ ತಕ್ಕಂತೆ ನಾವು ಸ್ಪಂದಿಸುವ ಅಗತ್ಯವಿದೆ. ಎಲ್ಲಾ ಕನ್ನಡಿಗರಿಗೆ ಮತ್ತು ಕನ್ನಡಾಭಿಮಾನಿಗಳಿಗೆ ಕರ್ನಾಟಕ ಸಂಘವು ಮುಂಬಯಿನಲ್ಲಿ ನಡೆಸುತ್ತಿರುವ ಕನ್ನಡದ ಕಾಯಕದ ಅಭಿಮಾನ ಮತ್ತು ಕಾಳಜಿ ಮುಖ್ಯ ಆಗಬೇಕಾಗಿದೆ. ಮುಂಬಯಿ ಕನ್ನಡಿಗರಾದ ನಾವೆಲ್ಲ ಕನ್ನಡ ತಾಯಿಯ ಮಕ್ಕಳು. ಆದುದರಿಂದಲೇ ಮುಂಬಯಿ ಕನ್ನಡಿಗರ ಹೃದಯ ವೈಶಾಲ್ಯ ಅನುಪಮವಾದದ್ದು ಅನ್ನುತ್ತಾರೆ. ಕರ್ಮಭೂಮಿಯಲ್ಲೂ ನಮ್ಮೊಳಗಿನ ಪ್ರೀತಿ, ವಾತ್ಸಲ್ಯಗಳ ಸಿಂಚನದಿಂದಲೇ ಮನುಷ್ಯ ಸಂಬಂಧಗಳು ಬಲಾಢ್ಯಗೊಂಡು ಅನ್ಯೋನ್ಯತೆಯಿಂದ, ಸಾಮರಸ್ಯಯುತವಾಗಿ ಬದುಕಲು ಸಾಧ್ಯವಾಗಿದೆ. ಎಲ್ಲೂ ಒಳ್ಳೆಯ ಮನಸ್ಸುಗಳು ಒಂದಾದ್ದಲ್ಲಿ ಮಾತ್ರ ಎಂತಹಾ ಅದ್ಭುತವನ್ನೂ ಸಿದ್ಧಿಸಬಹುದು. ಅಂತೆಯೇ ಕರ್ನಾಟಕ ಸಂಘದ ಹಾಲಿ ಮಂಡಳಿಯೂ ನಂಬಿಕೆ ಪ್ರೀತಿ, ವಿಶ್ವಾಸದಿಂದ ಮುನ್ನಡೆಯುತ್ತಿದೆ ಎಂದು ಕರ್ನಾಟಕ ಸಂಘ ಮುಂಬಯಿ ಅಧ್ಯಕ್ಷ ಮನೋಹರ್ ಎಂ.ಕೋರಿ ತಿಳಿಸಿದರು.

ಬೃಹನ್ಮುಂಬಯಿ ಅಲ್ಲಿನ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹೊರನಾಡ ಕನ್ನಡಿಗರ ಸಂಸ್ಥೆಗಳಲ್ಲೇ ಹಿರಿಯ, ಪ್ರತಿಷ್ಠಿತ ಸಂಸ್ಥೆಯೆದೆಣಿಸಿದ ಕರ್ನಾಟಕ ಸಂಘ ಮುಂಬಯಿ ಇದರ 85ನೇ ವಾರ್ಷಿಕ ಮಹಾಸಭೆಯು ಇಂದಿಲ್ಲಿ ಆದಿತ್ಯವಾರ ಸಂಜೆ ಮಾಟುಂಗಾ ಪೂರ್ವದ ಮೈಸೂರು ಅಸೋಸಿಯೇಷನ್ ಮುಂಬಯಿ ಇದರ ಕಿರು ಸಭಾಗೃಹದಲ್ಲಿ ನಡೆದಿದ್ದು ಮಹಾಸಭೆಯ ಅಧ್ಯಕ್ಷತೆ ವಹಿಸಿ ಮನೋಹರ್ ಕೋರಿ ಮಾತನಾಡಿದರು.

ಸಂಘದ ಹಳೆಯ ಕಟ್ಟಡವನ್ನು ನೂತನ ಸಾಂಸ್ಕೃತಿಕ ಸಮುಚ್ಚಯದ ನಿರ್ಮಾಣಕ್ಕಾಗಿ ರೂಪುಗೊಂಡಿದೆ. ಈ ಬೃಹತ್ ಯೋಜನೆ ಸಾಕಾರಗೊಳ್ಳಲು ಸಂಘದ ಸದಸ್ಯರು, ಕನ್ನಡದ ಅಭಿಮಾನಿಗಳು ಹಾಗೂ ದಾನಿಗಳು ಕೈ ಜೋಡಿಸಬೇಕಾಗಿದೆ. ಹನಿ ಹನಿ ಕೂಡಿ ಹಳ್ಳ ಎಂಬಂತೆ ಎಲ್ಲರೂ ತಮ್ಮಿಂದ ಸಾಧ್ಯವಾದಷ್ಟು ಆಥಿರ್sಕ ನೆರವು ನೀಡಿ ಶೀಘ್ರವೇ ಈ ಸಾಂಸ್ಕೃತಿಕ ಸಮುಚ್ಚಯದ ನಿರ್ಮಾಣಕ್ಕೆ ಕನ್ನಡಿಗರೆಲ್ಲರೂ ಸ್ಪಂದಿಸಬೇಕು. ಶೀಘ್ರವೇ ಈ ಯೋಜನಾ ಕನಸು ಸಾಕಾರಗೊಳ್ಳಲು ಕಟಿಬದ್ಧರಾಗೋಣ ಎಂದೂ ಅಧ್ಯಕ್ಷೀಯ ಭಾಷಣವನ್ನುದ್ದೇಶಿಸಿ ಕೋರಿ ಮನವಿಗೈದರು.


ಸಂಘದ ಉಪಾಧ್ಯಕ್ಷ ಡಾ| ಈಶ್ವರ್ ಅಲೆವೂರು, ಗೌರವ ಕೋಶಾಧಿಕಾರಿ ನ್ಯಾಯವಾದಿ ಎಂ.ಡಿ ರಾವ್, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಡಾ| ಎಸ್.ಕೆ ಭವಾನಿ, ಸುಧಾಕರ್ ಪಾಲನ್, ರಾಜೀವ್ ಎನ್.ನಾಯಕ್, ಲಲಿತಾ ಪಿ. ಅಂಗಡಿ, ಡಾ| ಮಮತಾ ಟಿ.ರಾವ್, ಡಾ| ಜಿ.ಪಿ ಕುಸುಮಾ, ದುರ್ಗಪ್ಪ ಎ. ಕೊಟ್ಯಾವರ್, ಸಂಘದ ಗೌರವ ಕಾನೂನು ಸಲಹಾಗಾರ್ತಿ ನ್ಯಾಯವಾದಿ ಅಮಿತಾ ಭಾಗವತ್ ವೇದಿಕೆಯಲ್ಲಿ ಆಸೀನರಾಗಿದ್ದರು.

ಸಂಘದÀ 2019-22ರ ಸಾಲಿನ ಅವಧಿಗೆ ಇತ್ತೀಚೆಗೆ ನಡೆಸಲ್ಪಟ್ಟ ಅಧ್ಯಕ್ಷ ಸ್ಥಾನದ ಮತ್ತು ಕಾರ್ಯಕಾರಿ ಸಮಿತಿಯ 6 ಸ್ಥಾನಗಳ ಚುನಾವಣಾ ಫಲಿತಾಂಶವನ್ನು ಚುನಾವಣಾ ಅಧಿಕಾರಿಯಾಗಿದ್ದ ಸದಾನಂದ ಅವಿೂನ್ ಮಹಾಸಭೆಯ ಮಧ್ಯಾಂತರದಲ್ಲಿ ಪ್ರಕಟಿಸಿದರು.

ಸಭೆಯಲ್ಲಿ ಸಹ ಚುನಾವಣಾ ಅಧಿಕಾರಿಗಳಾಗಿದ್ದ ಎಸ್.ಬಿ ರಾಮಣ್ಣ, ಸುಧಾಕರ ಮೈಂದನ್, ಗೌರವ ಜೊತೆ ಕಾರ್ಯದರ್ಶಿ ಅಮರೇಶ್ ಸಿ.ಪಾಟೀಲ್ ಉಪಸ್ಥಿತರಿದ್ದರು.

ಭುಜಂಗ ಶೆಟ್ಟಿ, ರಾಮೇಶ್ವರ ಎನ್.ಹತ್ತರ್‍ಕರ್, ಆನಿಲ್ ಶೆಟ್ಟಿ ಏಳಿಂಜೆ, ಶ್ರೀನಿವಾಸ ಪಿ.ಸಫಲಿಗ, ಕೆ.ಮಂಜುನಾಥ, ಡಾ| ಮಂಜುನಾಥಯ್ಯ, ಶೇಖರ್ ಎಸ್.ಅಮೀನ್ ಹಾಗೂ ಮತ್ತಿತರರು ಸಭಿಕರ ಪರವಾಗಿ ಮಾತನಾಡಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಸುಶೀಲಾ ಎಸ್.ದೇವಾಡಿಗ ಪ್ರಾರ್ಥನೆಯನ್ನಾಡಿದರು. ಬಳಿಕ ವರದಿ ವರ್ಷದÀಲ್ಲಿ ಸ್ವರ್ಗಸ್ಥರಾದ ಸಂಘದ ಸದಸ್ಯರು, ಹಿತೈಷಿ, ಸಾಹಿತಿ, ಕಲಾವಿದರಿಗೆ ಸಭೆಯ ಆದಿಯಲ್ಲಿ ಮೌನ ಪ್ರಾರ್ಥನೆಯೊಂದಿಗೆ ಶ್ರದ್ಧಾಂಜಲಿ ಕೋರಲಾಯಿತು. ಗೌರವ ಕಾರ್ಯದರ್ಶಿ ಡಾ| ಭರತ್‍ಕುಮಾರ್ ಪೆÇಲಿಪು ಸ್ವಾಗತಿಸಿ, 84ನೇ ವಾರ್ಷಿಕ ಮಹಾಸಭೆ ವರದಿ ಭಿತ್ತರಿಸಿ, ಗತ ವಾರ್ಷಿಕ ಚಟುವಟಿಕೆಗಳ ವರದಿ, ಸಂಘವು ನಿರ್ಮಿಸುತ್ತಿರುವ ನೂತನ ಸಾಂಸ್ಕೃತಿಕ ಸಮುಚ್ಚಾಯದ ಅಭಿವೃದ್ಧಿ ಬಗ್ಗೆ ವಿವರಿಸಿ, ಸಭಾ ಕಾರ್ಯಕಲಾಪ ನಡೆಸಿದರು. ಗೌರವ ಕೋಶಾಧಿಕಾರಿ ನ್ಯಾಯವಾದಿ ಎಂ.ಡಿ ರಾವ್ ಹಣಕಾಸು ಆಯವ್ಯಯ ವಿವರ ಮಂಡಿಸಿದರು.ಓಂದಾಸ್ ಕಣ್ಣಂಗಾರ್ ಧನ್ಯವಾದಗೈದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here