Tuesday 5th, August 2025
canara news

ಮೈಸೂರು ಅಸೋಸಿಯೇಶನ್‍ನ ಸಭಾಗೃಹದಲ್ಲಿ ಚಿತ್ರಕಲಾ ಪ್ರದರ್ಶನ

Published On : 01 Jul 2019   |  Reported By : Rons Bantwal


ಕರ್ನಾಟಕ ರಾಜ್ಯ ಪ್ರಶಸ್ತಿ ವಿಜೇತ ಚಿತ್ರಕಲಾವಿದ ಎಸ್.ಜಿ ವಾಸುದೇವ ಅವರಿಂದ ಉದ್ಘಾಟನೆ
(ಚಿತ್ರ / ವರದಿ : ರೊನಿಡಾ ಮುಂಬಯಿ)

ಮುಂಬಯಿ, ಜೂ.29: ಮೈಸೂರು ಅಸೋಸಿಯೇಶನ್ ಮುಂಬಯಿ ಸಂಸ್ಥೆಯು ಮುಂಬಯಿ ವಿಶ್ವವಿದ್ಯಾಲ ಯದ ಕನ್ನಡ ವಿಭಾಗದ ಸಹಯೋಗದೊಂದಿಗೆ ಮಾಟುಂಗಾ ಪೂರ್ವದ ಭಾವುದಾಜಿ ರಸ್ತೆಯಲ್ಲಿನ ಸಭಾಗೃಹದಲ್ಲಿ ಕರ್ನಾಟಕ ಮೂಲದ ಮುಂಬಯಿಯ ನಾಮಾಂಕಿತ ಚಿತ್ರ ಕಲಾವಿದರ `ಚಿತ್ರಕಲಾ ಪ್ರದರ್ಶನ'ಕ್ಕೆ ಚಾಲನೆಯನ್ನೀಡಿತು.

ಮೈಸೂರು ಅಸೋಸಿಯೇಶನ್‍ನ ಸಭಾಂಗಣದಲ್ಲಿ ದ್ವಿದಿನಗಳಲ್ಲಿ ಹಮ್ಮಿಕೊಳ್ಳಲಾದ `ಚಿತ್ರಕಲಾ ಪ್ರದರ್ಶನ' ವನ್ನು ಇಂದಿಲ್ಲಿ ಶನಿವಾರ ಪೂರ್ವಾಹ್ನ ಕರ್ನಾಟಕ ರಾಜ್ಯ ಪ್ರಶಸ್ತಿ ವಿಜೇತ ನಾಡಿನ ಹೆಸರಾಂತ ಚಿತ್ರಕಲಾವಿದ ಹಾಗೂ ಕರ್ನಾಟಕ ಲಲಿತ ಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ಎಸ್.ಜಿ ವಾಸುದೇವ ಉದ್ಘಾಟಿಸಿದರು ಹಾಗೂ ಮೈಸೂರು ಅಸೋಸಿಯೇಶನ್‍ನ ಮುಖವಾಣಿ ನೇಸರು ತ್ರೈಮಾಸಿಕ ಬಿಡುಗಡೆಗೊಳಿಸಿ ಶುಭಾರೈಸಿದರು.


ಹಿರಿಯ ನಾಟಕಕಾರ, ಸಂಘಟಕ ಡಾ| ಬಿ.ಆರ್ ಮಂಜುನಾಥ್ ಅವರ ಪ್ರಧಾನ ಸಹಯೋಜಕತ್ವದಲ್ಲಿ ನಡೆಸಲ್ಪಟ್ಟ ಚಿತ್ರಕಲಾ ಪ್ರದರ್ಶನದಲ್ಲಿ ಪ್ರಸಿದ್ಧ ಚಿತ್ರಕಲಾವಿದರಾದ ವಾಸುದೇವ ಕಾಮತ್, ದೇವದಾಸ್ ಎಸ್.ಶೆಟ್ಟಿ, ದಿವಾಕರ ಶೆಟ್ಟಿ, ರೇಖಾ ಹೆಬ್ಬಾರ್, ಅನು ಪಾವಂಜೆ, ಪಂಜು ಗಂಗುಲಿ, ಚಿತ್ರಮಿತ್ರ ಮತ್ತು ಜಯ ಎಸ್.ಸಾಲ್ಯಾನ್ ಮತ್ತಿತರ ಕಲಾವಿದರು ಭಾಗವಹಿಸಿ ತಮ್ಮತಮ್ಮ ಚಿತ್ರಗಳನ್ನು ಪ್ರದರ್ಶಿಸಿ ಕಲಾಭಿಮಾನಿ ಜನರ ಮನಾಕರ್ಷಣೆಗೆ ಪಾತ್ರರಾದರು.

ಪ್ರದರ್ಶನದ ಅಂಗವಾಗಿ ಸಯನ್, ದಾದರ್ ಮತ್ತು ಮಾಟುಂಗಾ ಆಸುಪಾಸಿನ ಇಲ್ಲಿನ ರ್ನಲ್ಲಿಯ 9ರಿಂದ 12 ವರ್ಷದ ಮುಂಬಯಿನ ಕನ್ನಡ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿದೆ. ವಿಜೇತ ಮಕ್ಕಳಿಗೆ ನಗದು ಬಹುಮಾನ ನೀಡಿ ಚಿತ್ರಕಲೆಗೆ ಪೆÇ್ರೀತ್ಸಾಹಿಸಲಾಯಿತು.

ಈ ಸಂದರ್ಭದಲ್ಲಿ ಮೈಸೂರು ಅಸೋಸಿಯೇಶನ್ ಮುಂಬಯಿ ಟ್ರಸ್ಟಿ ಕೆ.ಮಂಜುನಾಥಯ್ಯ, ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ, ಮೊಗವೀರ ಮಾಸಿಕದ ಸಂಪಾದಕ ಹಾಗೂ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಗೌ| ಪ್ರ| ಕಾರ್ಯದರ್ಶಿ ಅಶೋಕ ಎಸ್.ಸುವರ್ಣ, ಕರ್ನಾಟಕ ಸಂಘ ಮುಂಬಯಿ ಕಾರ್ಯದರ್ಶಿ ಡಾ| ಭರತ್‍ಕುಮಾರ್ ಪೆÇಲಿಪು ಮತ್ತಿತರ ಗಣ್ಯರು ಉಪಸ್ಥಿತರಿದ್ದು ಚಿತ್ರಕಲಾ ಸ್ಪರ್ಧಿಗಳಿಗೆ ಪಾರಿತೋಷಕ ಪ್ರದಾನಿಸಿ ಅಭಿನಂದಿಸಿದರು.

ಅನೇಕ ಕಲಾವಿದರು ಹಾಜರಿದ್ದು, ಪದ್ಮನಾಭ ಶೆಟ್ಟಿ ಸಿದ್ದಕಟ್ಟೆ ಪ್ರಾರ್ಥನೆಯನ್ನಾಡಿದರು. ಮೈಸೂರು ಅಸೋಸಿಯೇಶನ್‍ನ ನಾರಾಯಣ ನವಿಲೇಕರ್ ಸ್ವಾಗತಿಸಿದರು. ಕನ್ನಡ ವಿಭಾಗದ ಮುಂಬಯಿ ವಿಶ್ವವಿದ್ಯಾಲಯದ ಸಹಪ್ರಾಧ್ಯಾಪಕಿ ಡಾ| ಪೂರ್ಣಿಮಾ ಎಸ್.ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಮೈಸೂರು ಅಸೋಸಿಯೇಶನ್‍ನ ಗೌರವ ಕಾರ್ಯದರ್ಶಿ ಡಾ| ಗಣಪತಿ ಶಂಕರಲಿಂಗ್ ವಂದಿಸಿದರು

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here