Wednesday 18th, September 2019
canara news

ಬೃಹನ್ಮುಂಬಯಿಯ ಉಡುಪಿ (ಗೋಕುಲ) ಶ್ರೀಕೃಷ್ಣ ಮಂದಿರಕ್ಕೆ ಮಂದಿರಕ್ಕೆ ಶಿಲಾನ್ಯಾಸ

Published On : 02 Jul 2019   |  Reported By : Rons Bantwal


ಯೋಗ್ಯವುಳ್ಳವರಿಗೆ ಮಾತ್ರ ಭಾಗ್ಯನುಗ್ರಹ ಫಲಿಸುವುದು : ಪೇಜಾವರಶ್ರೀ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜೂ.30: ಎಲ್ಲಾ ಕಾರ್ಯಕ್ರಮಗಳು ಅದ್ಭುತವಾಗಿ ನಡೆದಿವೆ. ಆದುದರಿಂದ ಮಂದಿರವು ನಿರ್ವಿಘ್ನವಾಗಿ ಭಕ್ತರ ಕೇಂದ್ರವಾಗಿ ಉದಯಲಿಸಲಿದೆ. ಇದು ಭಗವಂತನ ಸೇವೆಯಾಗಿದೆ. ಆದುದರಿಂದ ಶ್ರೀ ದೇವರು ಇಷ್ಟಾರ್ಥವಾಗಿ ಒಲಿಯುತ್ತಿದ್ದಾರೆ. ಮುಂಬಯಿನಲ್ಲಿ ಶ್ರೀ ಕೃಷ್ಣನ ದೊಡ್ಡ ಮಂದಿರ ದೊಡ್ಡ ಸಾಧನೆಯೂ, ಸಾಹಸವೂ ಮತ್ತು ಶ್ರೀದೇವರನ್ನು ಕಾಣುವ ಪರಿಪೂರ್ಣತೆ ಆಗಿದೆ. ಎಲ್ಲಾ ಸಮಾಜದ ಸಮಾನತೆಯ ಸಹಯೋಗದಿಂದ ನಿರ್ಮಾಣವಾಗುವ ಈ ದೇಗುಲ ಶ್ರೀಕೃಷ್ಣತಾಣವಾಗಲಿದೆ. ಯೋಗವುಳ್ಳವರಿಂದ ಮಾತ್ರ ಇಂತಹ ಭಾಗ್ಯವ ಪಡೆಯಲು ಸಾಧ್ಯ. ನಾನು ಐದು ಪರ್ಯಾಯ ಮಾಡಲು ನನ್ನ ಸಾಧನೆ ಏನೂ ಇಲ್ಲ ಆದರೆ ನನಗೊದಗಿದ ದೀರ್ಘಾಯುಷ್ಯ ಇದಕ್ಕೆ ಸಾಕ್ಷಿಯಾಗಿದೆ ಎಂದು ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾ ಸಂಸ್ಥಾನದ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ತಿಳಿಸಿದರು.

ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ (ಜಿಪಿಟಿ) ಮತ್ತು ಬಿಎಸ್‍ಕೆಬಿ ಅಸೋಸಿಯೇಶನ್ ಮುಂಬಯಿ ಇವುಗಳ `ಗೊಕುಲ' ಪ್ರಸಿದ್ಧಿಯ ಪುನರ್ ನಿರ್ಮಾಣದ ಶ್ರೀಕೃಷ್ಣ ಮಂದಿರಕ್ಕೆ ತಮ್ಮ ದಿವ್ಯ ಹಸ್ತಗಳಿಂದ ಶಿಲಾನ್ಯಾಸ ನೆರವೇರಿಸಿ ವಿಶ್ವೇಶತೀರ್ಥ ಶ್ರೀಗಳು ನೆರೆದ ಸದ್ಭಕ್ತರನ್ನುದ್ದೇಶಿಸಿ ಅನುಗ್ರಹಿಸಿದರು.

ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಕಟೀಲು ಇದರ ಅನುವಂಶಿಕ ಅರ್ಚಕ ವೇದ ಮೂರ್ತಿ ಲಕ್ಷಿ ್ಮೀನಾರಾಯಣ ಅಸ್ರಣ್ಣ ಚಿತ್ತೈಸಿ ಶುಭಾಶೀರ್ವಚನಗೈದು ಪೇಜಾವರ ಶ್ರೀಗಳ ಮತ್ತು ಕೃಷ್ಣ ದೇವರ ಆಶೀರ್ವಾದದಿಂದ ಇಂದಿನ ದಿನ ಅನುಗ್ರಹವಾಗಿದೆ. ಸುರೇಶ್ ರಾವ್ ಅವರ ಎಲ್ಲಾ ಸಾಧನೆಗಳಿಗೆ ಸ್ವಾಮೀಜಿ ಅವರ ಪ್ರೇರಣೆ ಕಾರಣ. ಸ್ವಸ್ಥತೆ ಮತ್ತು ಸಮಾಜಕ್ಕೆ ಡಾ| ಸುರೇಶ್ ರಾವ್ ಅವರ ಯೋಗದಾನ ಅತ್ಯಾಧ್ಭುತ. ಸೇವೆಯ ಮೂಲಕ ಶ್ರೀಹರಿಯನ್ನು ಆರಾಧಿಸುವ ಅವರೋರ್ವ ದೇವ ಪ್ರತೀತರೇ ಸರಿ. ಆರೋಗ್ಯದಾಯಕ ಬಾಳಿಗೆ ಪ್ರೇರಕರಾದ ಅವರು ಪೇಜಾವರ ಶ್ರೀಗಳ ಸಪ್ತದಿನಗಳಲ್ಲಿ ಅಷ್ಠ ತುಲಾಭಾರ ನೇರವೇರಿಸಿ ಶ್ರೀಕೃಷ್ಣಾರ್ಪಕರೆಣಿಸಿದ್ದಾರೆ. ಇದು ಧಾರ್ಮಿಕ ಚರಿತ್ರೆಯ ಹೊಸ ಇತಿಹಾಸವಾಗಿದೆ ಎಂದರು.

ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಮತ್ತು ಬಿಎಸ್‍ಕೆಬಿಎ ಮುಂಬಯಿ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು ಅಧ್ಯಕ್ಷತೆಯಲ್ಲಿ ನೆರವೇರಿದ ಶಿಲಾನ್ಯಾಸ ಸಮಾರಂಭದಲ್ಲಿ ಉಪಸ್ಥಿತ ಸರ್ವ ಅತಿಥಿü ಅಭ್ಯಾಗತರೂ ಶಿಲೆಗಳನ್ನಿರಿಸಿ ಮಂದಿರವು ನಿರ್ವಿಘ್ನಯುತವಾಗಿ ರೂಪುಗೊಳ್ಳಲಿ ಎಂದು ಹಾರೈಸಿದರು. ಬಳಿಕ ನಡೆಸಲ್ಪಟ್ಟ ಸಮಾರಂಭದಲ್ಲಿ ಉಪಸ್ಥಿತ ವಿವಿಧ ಕ್ಷೇತ್ರಗಳ ಸಾಧಕ ಗಣ್ಯಾತಿಗಣ್ಯರು, ವಿವಿಧ ಸಂಸ್ಥೆಗಳ ಮುಖ್ಯಸ್ಥರು, ಉದ್ಯಮಿಗಳು, ಭಕ್ತರನೇಕರು ದೇವ ಸ್ವಭಾವಿ ಸ್ವಾಮೀಜಿ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರನ್ನು ಪಟ್ಟದ ದೇವರು ಶ್ರೀ ರಾಮವಿಠಲ ಸಹಿತ ರಜತ ತುಲಾಭಾರ ಸೇವೆ ನೆರವೇರಿಸಿದರು. ಅತಿಥಿüಗಳು ಸಾಂದರ್ಭಿಕವಾಗಿ ಮಾತನಾಡಿ ಸಂಘದ ಯೋಜನೆ ಶೀಘ್ರವೇ ಪೂರ್ಣಗೊಳ್ಳಲಿ ಎಂದು ಹಾರೈಸಿದರು.

ಡಾ| ಸುರೇಶ್ ರಾವ್ ಪ್ರಸ್ತಾವನೆಗೈದು ನಾಡಿನ ಸುಪ್ರಸಿದ್ಧ ವಾಸ್ತುತಜ್ಞರ ಸಲಹೆ, ದಕ್ಷಿಣ ಕನ್ನಡದ ಪ್ರಸಿದ್ಧ ನುರಿತ ಶಿಲ್ಪಿಗಳ ಮಾರ್ಗದರ್ಶನದಂತೆ ಪ್ರತ್ಯೇಕ ಗರ್ಭ ಗುಡಿಯೊಂದಿಗೆ ಮಂದಿರ ನಿರ್ಮಾಣವಾಗಲಿರುವ ಮಂದಿರದಲ್ಲಿ ಶ್ರೀ ಕೃಷ್ಣ ಅವತಾರಕ್ಕೆ ಸಂಬಂಧ ಪಟ್ಟಂತಹ, 44 ಕೇಶವಾದಿ ಕೃಷ್ಣ ಶೀಲಾ ದೇವತಾ ಮೂರ್ತಿಗಳನ್ನೊಳಗೊಂಡ ಗರ್ಭಗುಡಿಯ ಸುತ್ತು ಪೌಳಿ, ತೀರ್ಥ ಪ್ರಸಾದ ವಿತರಣೆಗಾಗಿ ಪ್ರತ್ಯೇಕ ಮುಖ ಮಂಟಪ, ದೇವಳದ ಮುಂಭಾಗದಲ್ಲಿ ಧಾರ್ಮಿಕ ಕಾರ್ಯಗಳಿಗೆ ಅನುಕೂಲವಾಗುವಂತೆ, ಸರಿ ಸುಮಾರು 3500 ಚದರ ಅಡಿಗಳಷ್ಟು ವಿಶಾಲವಾದ ಸಭಾಗೃಹ, ಸುಮಾರು 36 ಅಡಿ ಎತ್ತರದ ಗೋಪುರ, ಸಭಾಗೃಹದ ಛಾವಣಿಯ ಒಳಮೈಯ್ಯಲ್ಲಿ ಶ್ರೀ ಕೃಷ್ಣನ ಲೀಲೆಗಳಾಧಾರಿತ ಮರದ ಕುಸುರಿ ಕೆತ್ತನೆಗಳು ಮುಂತಾದ ವಿಶಿಷ್ಟತೆಗಳೊಂದಿಗೆ ನೂತನ ಮಂದಿರದ ಗರ್ಭ ಗುಡಿಯಲ್ಲಿ ಶ್ರೀ ಕೃಷ್ಣನ ಪ್ರತಿಷ್ಠೆಯಾಗಲಿರುವ ಬಗ್ಗೆ ತಿಳಿಸಿದರು.

ವಿದ್ವಾನ್ ಗುರುರಾಜ ಉಡುಪ ಮತ್ತು ಕೃಷ್ಣರಾಜ ಉಪಾಧ್ಯಾಯ ತನ್ನ ಪೌರೋಹಿತ್ಯದಲ್ಲಿ ಪ್ರಾತಃಕಾಲ ಗಣ ಹೋಮ, ಬೆಳಿಗ್ಗೆ ಸಾಮೂಹಿಕ ವಿಷ್ಣು ಸಹಸ್ರನಾಮ ಪಠನೆ ಗೈದು ಶಿಲಾನ್ಯಾಸ ಪೂಜೆ ನೆರವೇರಿಸಿ ತೀರ್ಥ ಪ್ರಸಾದ ವಿತರಿಸಿ ಹರಸಿದರು. ಬಿಎಸ್‍ಕೆಬಿಎ ಗೌರವ ಕೋಶಾಧಿಕಾರಿ ಸಿಎ| ಹರಿದಾಸ್ ಭಟ್ ಮತ್ತು ಆಶಾ ಹೆಚ್.ಭಟ್ ದಂಪತಿ ಪೂಜಾಧಿಗಳ ಯಜಮಾನತ್ವ ವಹಿಸಿದ್ದರು. ಗೋಕುಲ ಭಜನಾ ಮಂಡಳಿ ಮತ್ತು ಬಿಎಸ್‍ಕೆಬಿಎ ಮಹಿಳಾ ಮಂಡಳಿ ಭಜನೆ ನಡೆಸಿತು.

ಸಮಾರಂಭದಲ್ಲಿ ಮಹಾರಾಷ್ಟ್ರ ಸರಕಾರದ ಮಾಜಿ ಸಚಿವ ಸಚಿನ್ ಅಹಿರೆ, ಸಮಾಜ ಸೇವಕ, ಸಮಾಜ ಸೇವಕರಾದ ಐಕಳ ಹರೀಶ್ ಶೆಟ್ಟಿ, ಪದ್ಮನಾಭ ಎಸ್.ಪಯ್ಯಡೆ, ಸುಧಾಕರ ಎಸ್.ಹೆಗ್ಡೆ, ರಜನಿ ಎಸ್.ಹೆಗ್ಡೆ, ಉದ್ಯಮಿಗಳಾದ ಸುಬ್ಬಯ್ಯ ಶೆಟ್ಟಿ (ರಾಮಕೃಷ್ಣ), ರಘುರಾಮ ಕೆ.ಶೆಟ್ಟಿ ಬೋಳ, ಮನಮೋಹನ್ ಆರ್.ಶೆಟ್ಟಿ, ಶಶಿಕಿರಣ್ ಶೆಟ್ಟಿ, ವಿರಾರ್ ಶಂಕರ್ ಶೆಟ್ಟಿ, ಬಿ.ವಿವೇಕ್ ಶೆಟ್ಟಿ (ವಿಶ್ವಾತ್), ಕಡಂದಲೆ ಸುರೇಶ್ ಎಸ್.ಭಂಡಾರಿ, ಧರ್ಮಪಾಲ ಯು.ದೇವಾಡಿಗ, ಸಿಎ| ಶಂಕರ್ ಬಿ.ಶೆಟ್ಟಿ, ಐಕಳ ಗುಣಪಾಲ್ ಶೆಟ್ಟಿ, ಜಯಕೃಷ್ಣ ಎ.ಶೆಟ್ಟಿ, ಎನ್.ಬಿ ಶೆಟ್ಟಿ ಬಾಂದ್ರ, ಸಂತೋಷ್ ಡಿ.ಶೆಟ್ಟಿ ನೆರೂಲ್, ಕುಸುಮೋಧರ ಡಿ.ಶೆಟ್ಟಿ, ಬಿ.ಆರ್ ಶೆಟ್ಟಿ, ಡಾ| ಶಿವರಾಮ ಕೆ.ಭಂಡಾರಿ, ಮುಂಡ್ಕೂರು ಹರಿ ಭಟ್, ಡಾ| ಪಿ.ಜಿ ರಾವ್, ಸುಬ್ಬಣ್ಣ ಎಸ್.ರಾವ್, ಡಾ| ಸುನೀತಾ ಎಂ. ಶೆಟ್ಟಿ, ಅಶೋಕ ಶೆಟ್ಟಿ ಪೆರ್ಮುದೆ, ಚಂದ್ರಹಾಸ ಕೆ.ಶೆಟ್ಟಿ, ಸುರೇಶ್ ಆರ್.ಕಾಂಚನ್, ಶಿವರಾಮ ಜಿ.ಶೆಟ್ಟಿ, ಸುಧೀರ್ ಆರ್.ಎಲ್ ಶೆಟ್ಟಿ, ರಾಜ್‍ಗೋಪಾಲ್ ಬಿ.ಶೆಟ್ಟಿ, ವಿ.ಶಂಕರ್ (ಎಸ್‍ಐಇಎಸ್), ರವೀಂದ್ರ ಎಂ.ಅರಸ, ವಾಸುದೇವ ಉಡುಪ, ಶ್ರೀನಿವಾಸ ಭಟ್ ಪರೇಲ್, ಎಂ.ಎಸ್ ರಾವ್ ಚಾರ್ಕೋಪ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದು ಶ್ರೀಕೃಷ್ಣ ಮಂದಿರಕ್ಕೆ ತಮ್ಮ ಕರಗಳಿಂದ ಶಿಲೆಗಳನ್ನಿರಿಸಿ ಶುಭಾರೈಸಿದರು.

ಕಾರ್ಯಕ್ರಮದಲ್ಲಿ ಬಿಎಸ್‍ಕೆಬಿಎ ಸಂಸ್ಥೆಯ ಉಪಾಧ್ಯಕ್ಷೆ ಶೈಲಿನಿ ರಾವ್, ಜೊತೆ ಕಾರ್ಯದರ್ಶಿಗಳಾದ ಪಿ.ಸಿ.ಎನ್ ರಾವ್, ಚಿತ್ರಾ ಮೇಲ್ಮನೆ, ಜೊತೆ ಕೋಶಾಧಿಕಾರಿ ಕುಸುಮಾ ಶ್ರೀನಿವಾಸ್, ಮಹಿಳಾ ವಿಭಾಗಧ್ಯಕ್ಷೆ ಐ.ಕೆ ಪ್ರೇಮಾ ಎಸ್.ರಾವ್, ಜಿಪಿಟಿ ವಿಶ್ವಸ್ಥ ಮಂಡಳಿ ಗೌ| ಪ್ರ| ಕಾರ್ಯದರ್ಶಿ ಎ.ಎಸ್ ರಾವ್, ವಿಶ್ವಸ್ಥ ಸದಸ್ಯರಾದ ಬಿ.ರಮಾನಂದ ರಾವ್ (ಬಡನಿಡಿಯೂರು), ಕೃಷ್ಣ ವೈ.ಆಚಾರ್ಯ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು, ವಿಜಯಲಕ್ಷಿ ್ಮೀ ಸುರೇಶ್ ರಾವ್, ವಿದ್ವಾನ್ ಎಸ್.ಎನ್ ಉಡುಪ, ವಿಷ್ಣುಮೂರ್ತಿ ಆಚಾರ್ಯ ಉಡುಪಿ, ಪೇಜಾವರ ಮಠದ ಆಡಳಿತಾಧಿಕಾರಿಗಳಾದ ಪ್ರಕಾಶ್ ಆಚಾರ್ಯ ರಾಮಕುಂಜ, ಶ್ರೀಹರಿ ಭಟ್ ಪುತ್ತಿಗೆ, ನಿರಂಜನ್ ಗೋಗ್ಟೆ ಸೇರಿದಂತೆ ಅಪಾರ ಸಂಖ್ಯೆಯ ಶ್ರೀಕೃಷ್ಣ ಭಕ್ತರು ಉಪಸ್ಥಿತರಿದ್ದು ಸೇವೆಗಳಲ್ಲಿ ಪಾಲ್ಗೊಂಡರು.

ಬಿಎಸ್‍ಕೆಬಿಎ ಉಪಾಧ್ಯಕ್ಷÀ ವಾಮನ ಹೊಳ್ಳ ಸ್ವಾಗತಿಸಿದರು. ಜಿಪಿಟಿ ವಿಶ್ವಸ್ಥ ಸದಸ್ಯ ವಿದ್ವಾನ್ ಪೆರ್ಣಂಕಿಲ ಹರಿದಾಸ್ ಭಟ್ ಮತ್ತು ಪೇಜಾವರ ಮಠದ ಪ್ರಬಂಧಕ ವಿದ್ವಾನ್ ರಾಮದಾಸ ಉಪಾಧ್ಯಾಯ ರೆಂಜಾಳ ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಗೌ| ಪ್ರ| ಕಾರ್ಯದರ್ಶಿ ಎ.ಪಿ.ಕೆ ಪೆÇೀತಿ ಕೃತಜ್ಞತೆ ಸಲ್ಲಿಸಿದರು.

 

 
More News

ಶಿವ ಪೂಜಾರಿ ನಿಧನ
ಶಿವ ಪೂಜಾರಿ ನಿಧನ
ಅಂಧೇರಿ ಪೂರ್ವದ ಸೆಕ್ರೇಡ್ ಹಾರ್ಟ್ ಇಗರ್ಜಿಯಲ್ಲಿನ ಕೊಂಕಣಿ ಕಮಿಟಿ ಸಂಸ್ಥೆ
ಅಂಧೇರಿ ಪೂರ್ವದ ಸೆಕ್ರೇಡ್ ಹಾರ್ಟ್ ಇಗರ್ಜಿಯಲ್ಲಿನ ಕೊಂಕಣಿ ಕಮಿಟಿ ಸಂಸ್ಥೆ
ಧರ್ಮಸ್ಥಳ ಭಜನಾ ತರಬೇತಿ ಶಿಬಿರ ಉದ್ಘಾಟನೆ
ಧರ್ಮಸ್ಥಳ ಭಜನಾ ತರಬೇತಿ ಶಿಬಿರ ಉದ್ಘಾಟನೆ

Comment Here