Sunday 7th, June 2020
canara news

82ನೇ ವಾರ್ಷಿಕ ಮಹಾಸಭೆ-ಸಾಧಕರಿಗೆ ಸನ್ಮಾನಿಸಿದ ಶ್ರೀ ರಜಕ ಸಂಘ ಮುಂಬಯಿ

Published On : 02 Jul 2019   |  Reported By : Rons Bantwal


ನಿಸ್ವಾರ್ಥದ ಸೇವೆಯೇ ಫಲಪ್ರದವಾಗುವುದು : ದಾಸು ಸಿ.ಸಾಲಿಯಾನ್
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜೂ.30: ನಮ್ಮ ಹಿರಿಯರ ದೂರದೃಷ್ಠಿತ್ವದ ಫಲವೇ ಈ ಸಂಸ್ಥೆಯಾಗಿದೆ. ಅವರಲ್ಲಿನ ಸಮುದಾಯದ ಒಲವು ಇಂದು ನಾವು ಫಲವಾಗಿ ಅನುಭವಿಸುತ್ತಿದ್ದೇವೆ. ನಾವು ನಮ್ಮ ಭವಿಷ್ಯತ್ತಿನ ಪೀಳಿಗೆಗೆ ಸೇವೆಯ ಮೂಲಕ ಈ ಸಂಸ್ಥೆಯನ್ನು ಕೊಡಮಾಡಿದಾಗಲೇ ನಮ್ಮ ಸೇವೆಯೂ ಫಲಪ್ರದವಾಗುವುದು. ಪ್ರೀತಿ ವಿಶ್ವಾಸದಿಂದ ನನ್ನನ್ನು ಅಧ್ಯಕ್ಷರನ್ನಾಗಿ ಮಾಡಿ ಸಂಘದ ಏಳಿಗೆಗೆ ಸದಸ್ಯರಿಂದ ದೊರೆತ ಸಹಕಾರ ಪೆÇ್ರೀತ್ಸಾಹಕ್ಕೆ ನಾನು ತುಂಬಾ ಚಿರಋಣಿಯಾಗಿದ್ದೇನೆ. ಇಂದಿನ ದಿನಗಳಲ್ಲಿ ನಾರಿ ಶಕ್ತಿ ಹಾಗೂ ಯುವ ಶಕ್ತಯಿಂದ ಸಂಘವನ್ನು ಬಲಪಡಿಸಿ, ಅದಕ್ಕಾಗಿ ಹೆಂಗಸರು ಹಾಗೂ ತರುಣ ತರುಣಿಯರು ಮುಂದೆ ಬರಬೇಕೆಂದು ನಮ್ಮ ಸಮಾಜಕ್ಕೆ ಇನ್ನಷ್ಟು ಸೇವೆ ಸಲ್ಲಿಸಿ ಸಂಘವನ್ನು ಮುನ್ನಡೆÀಸಬೇಕಾಗಿದೆ. ಅದಕ್ಕಾಗಿ ಸಂಘದ ನಿಧಿ ಸಂಗ್ರಹವನ್ನು ಉನ್ನತ ಗುಣಮಟ್ಟದ ಶಿಕ್ಷಣಕ್ಕೇ ಹಣದ ಕೊರತೆಯಿದೆ. ಅದಕ್ಕಾಗಿ ನಿಧಿಸಂಗ್ರಹಕ್ಕೆ ಕೈ ಜೋಡಿಸಬೇಕೆಂದು, ಅದಕ್ಕಾಗಿ ಪ್ರತಿಯೊಂದು ವಲಯದ ಕಾರ್ಯಕಾರಿ ಸಮಿತಿಯ ಅಧ್ಯಕ್ಷರು ಕಾರ್ಯಕಾರಿ ಸಮಿತಿ ಸದಸ್ಯರು ಸಹಕರಿಸಬೇಕು ರಜಕ ಸಂಘದ ಅಧ್ಯಕ್ಷ ದಾಸು ಸಿ.ಸಾಲಿಯಾನ್ ತಿಳಿಸಿದರು.

ರಜಕ ಸಂಘವು ತನ್ನ 82ನೇ ವಾರ್ಷಿಕ ಮಹಾಸಭೆಯನ್ನು ಇಂದಿಲ್ಲಿ ಭಾನುವಾರ ಬೆಳಿಗ್ಗೆ ದಾದರ್ ಪೂರ್ವದಲ್ಲಿನ ಕೊಹಿನೂರ್ ಭವನ್ ಸಭಾಗೃಹದಲ್ಲಿ ನಡೆಸಲ್ಪಟ್ಟಿದ್ದು, ರಜಕ ಸಂಘದ ಅಧ್ಯಕ್ಷ ದಾಸು ಸಿ.ಸಾಲಿಯಾನ್ ದೀಪಹಚ್ಚಿ ಮಹಾಸಭೆಗೆ ಚಾಲನೆಯನ್ನೀಡಿ ಸಭಾಧ್ಯಕ್ಷತೆ ವಹಿಸಿ ಮಾತನಾಡಿದರು.

ಸಂಘದ ನಿಕಟಪೂರ್ವ ಅಧ್ಯಕ್ಷ ಸತೀಶ್ ಎಸ್.ಸಾಲಿಯಾನ್ ಸಭಾಕಲಾಪ ನಡೆಸಿ ಮಾತನಾಡಿ ಒಂದು ಒಳ್ಳೆಯ ರಥವು ಸಾಗಬೇಕಾದರೆ ಆದರ ಎರಡೂ ಗಾಲಿಗಳು ಸಧೃಡವಾಗಿದ್ದು, ಶೀಘ್ರಗತಿಯಲ್ಲಿ ಸಾಗುವಂತಿರಬೇಕು. ಅಂತೆಯೇ ಒಂದು ಸಂಘವು ಕೂಡ ಸಮಾಜ ಬಾಂಧವರ ಸಮಾನತೆಯ ಸಮಬಲವಿದ್ದು ಮುನ್ನಡೆದಾಗ ಸಮಗ್ರ ಸಮಾಜೋಭಿವೃದ್ಧಿ ಸಾಧ್ಯ. ರಜಕರಲ್ಲಿ ಇಂತಹ ಸಮಾನತೆ ಮತ್ತು ಮುನ್ನಡತೆಯ ಮನೋಭಾವ ಮೂಡುತ್ತಿದ್ದು, ಇದು ಸಮಾಜೋನ್ನತಿಗೆ ಪ್ರೇರಕವಾಗುತ್ತಿದೆ ಎಂದರು.

ಸಂಘದ ಉಪಾಧ್ಯಕ್ಷ ವಿಜಯ್ ವಿ.ಕುಂದರ್, ಜೊತೆ ಕೋಶಾಧಿಕಾರಿ ಜಯ ಕೆ.ಪಡುಬಿದ್ರಿ ಮತ್ತು ಮಹಿಳಾ ವಿಭಾಗಧ್ಯಕ್ಷೆ ಪ್ರವಿಣಾ ಕುಂದರ್, ಯುವ ರಜಕ ವಿಭಾಗಧ್ಯಕ್ಷ ಮನೀಷ್ ಕುಂದರ್ ವೇದಿಕೆಯಲ್ಲಿ, ಸಭೆಯಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಸುಮಿತಾ ಸಾಲ್ಯಾನ್, ಶಶಿಧಾರ ಸಾಲ್ಯಾನ್, ಡಿ.ಆರ್ ಸಾಲ್ಯಾನ್, ಪ್ರಭಾಕರ ಸಾಲ್ಯಾನ್, ಸಂಜೀವ ಸಾಲ್ಯಾನ್, ಪ್ರಕಾಶ್ ಕೆ.ಗುಜರನ್, ಭಾಸ್ಕರ್ ಕುಂದರ್, ಸುಂದರ್ ಎಚ್.ಮಡಿವಾಳ್, ಅಂತರಿಕ ಲೆಕ್ಕಪರಿಶೋಧಕರಾದ ಪೂವಣಿ ಎಸ್.ಸಾಲ್ಯಾನ್, ಸಿಎ| ಪ್ರದೀಪ್ ಕುಂದರ್ ಮತ್ತು ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಶಾಂತಿ ಸಾಲ್ಯಾನ್, ಕಾರ್ಯದರ್ಶಿ ಬಾನುಮತು ಬುನ್ನಾನ್, ಯುವ ವಿಭಾಗದ ಉಪಾಧ್ಯಕ್ಷ ಸ್ಪರ್ಷ ಸಾಲ್ಯಾನ್, ಕಾರ್ಯದರ್ಶಿ ಸಂಜೀತ್ ಕುಂದರ್, ಮಹಿಳಾ, ಯುವ ರಜಕ ವಿಭಾಗಗಳ, ಸಂಘದ ವಿವಿಧ ಪ್ರಾದೇಶಿಕ ಸ್ಥಳೀಯ ಸಮಿತಿಗಳ ಮುಖ್ಯಸ್ಥರು ಹಾಗೂ ಪದಾಧಿಕಾರಿಗಳು, ಸದಸ್ಯರನೇಕರು ಹಾಜರಿದ್ದರು.

ಸಭಿಕರಲ್ಲಿ ಸಂಘದ ಮಾಜಿ ಅಧ್ಯಕ್ಷ ಪಿ.ಕೃಷ್ಣ ಹಾಗೂ ಹಿರಿಯ ಸದಸ್ಯ ಶಿವರಾಂ ಕುಂದರ್, ಮಾಜಿ ಮಹಿಳಾಧ್ಯಕ್ಷೆ ಸುಮಿತ್ರಾ ಗುಜರನ್ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ಸಂಘದ ಸೇವೆ ಪ್ರಶಂಸಿಸಿ ಆರೋಗ್ಯ ನಿಧಿ ಮತ್ತಿ ವಿಧ್ಯಾನಿಧಿ ಸಂಗ್ರಹಣ ಹೆಚ್ಚಿಸಬೇಕು ಎಂದು ಭವಿಷ್ಯದ ಸರ್ವೋನ್ನತಿಗಾಗಿ ಸಲಹೆ ಸೂಚನೆಗಳನ್ನಿತ್ತು ಶುಭಾರೈಸಿದರು.

ಸಭೆಯ ಮಧ್ಯಾಂತರದಲ್ಲಿ ಸಮಾಜದ ವಿವಿಧ ಕ್ಷೇತ್ರದ ಸಾಧಕರಾದ ರಾಷ್ಟ್ರೀಯ ಮಹಿಳಾ ಆಯೋಗ ದೆಹಲಿ ಇದರ ಸದಸ್ಯೆ ಶ್ಯಾಮಲಾ ಎಸ್.ಕುಂದರ್, ಕೋಲಾಪುರ ಆದಾಯ ತೆರಿಗೆ ಇಲಾಖಾ ಸಹ ಅಧಿಕಾರಿ ಶಿವನಂದ ಕಲಕೇರಿ (ಐಆರ್‍ಎಸ್), ಅಂತರಾಷ್ಟ್ರೀಯ ಅತ್ಲೇಟಿಕ್ ಸತೀಶ್ ಗುಜರನ್, ಕಾಮನ್ ವೆಲ್ತ್ ಗೇಮ್ಸ್‍ನ ಕರಾಟೆ ಸ್ವರ್ಣ ಪದಕ ವಿಜೇತ ವರುಣ್ ಡಿ.ಗುಜರನ್, ನೆಲ್ಸನ್ ಮಂಡೇಲಾ ಪ್ರಶಸ್ತಿ ವಿಜೇತೆ ಭರತನಾಟ್ಯ ಕಲಾವಿದೆ ಕು| ಸಮೃದ್ಧಿ ಎಸ್.ಸಾಲಿಯಾನ್, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕರಾಟೆ ಪ್ರಶಸ್ತಿ ವಿಜೇತೆ ಕು| ನಿದೀಶಾ ಹೆಚ್.ಸಾಲಿಯಾನ್, ಮಾಡೆಲಿಂಗ್ ಕ್ಷೇತ್ರದ ರಾಷ್ಟ್ರೀಯ ಪ್ರಶಸ್ತಿ ವಿಜೇತೆ ಕು| ನೇಹಾ ಪಿ.ಸಾಲಿಯಾನ್ ಮತ್ತು ಸುಮಾರು ಹತ್ತಾರು ನವ ದಂಪತಿ ಜೋಡಿಗಳಿಗೆ ಸನ್ಮಾನಿಸಿದರು ಮತ್ತು ಗತ ಶೈಕ್ಷಣಿಕ ವರ್ಷದಲ್ಲಿ ವಿವಿಧ ವಿಭಾಗಗಳಲ್ಲಿ ಉತ್ಕೃಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ಸಮಾಜಬಂಧು ವಿದ್ಯಾಥಿರ್üಗಳಿಗೆ ವಿದ್ಯಾಥಿರ್ü ವೇತನ, ಪ್ರಮಾಣ ಪತ್ರ ಪ್ರದಾನಿಸಿ ಗೌರವಿಸಿ ಶುಭಾರೈಸಿದರು. ಅಂತೆಯೇ ಸಂಘದ ಮಹಾ ಪೆÇೀಷಕರು, ಹಿರಿಯ ಸದಸ್ಯರು, ಉಪಸ್ಥಿತ ವಿವಿಧ ಸಂಸ್ಥೆಗಳ ಮುಖ್ಯಸ್ಥರನ್ನು ಗೌರವಿಸಿ ಅಭಿನಂದಿಸಿದರು.

ಮಹಿಳಾ ವಿಭಾಗದ ಸದಸ್ಯೆಯರು ಪ್ರಾರ್ಥನೆಯನ್ನಾಡಿದರು. ಗೌರವ ಕಾರ್ಯದರ್ಶಿ ಸುಮಿತ್ರಾ ಆರ್.ಪಲಿಮಾರ್ ಸ್ವಾಗತಿಸಿ ಗತ ವಾರ್ಷಿಕ ಮಹಾಸಭೆ ವರದಿ ಮತ್ತು ವಾರ್ಷಿಕ ಚಟುವಟಿಕೆಗಳ ಮಾಹಿತಿ ಸಭೆ ಮುಂದಿಟ್ಟರು. ಕೋಶಾಧಿಕಾರಿ ಸುಭಾಷ್ ಕುಂದರ್ ಗತ ಸಾಲಿನ ಲೆಕ್ಕಪತ್ರ ಮಂಡಿಸಿದರು. ವರದಿ ವರ್ಷದÀಲ್ಲಿ ಸ್ವರ್ಗಸ್ಥರಾದ ಸಂಘದ ಹಿರಿ-ಕಿರಿಯ ಸದಸ್ಯರು, ಹಿತೈಷಿರಿಗೆ ಸಭೆಯ ಆದಿಯಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ಜೊತೆ ಕಾರ್ಯದರ್ಶಿ ಕಿರಣ್ ಕುಂದರ್ ವಂದನಾರ್ಪಣೆಗೈದರು. ರಾಷ್ಟ್ರಗೀತೆಯೊಂದಿಗೆ ಮಹಾಸಭೆ ಸಮಾಪ್ತಿಗೊಂಡಿತು.

 
More News

 ಸ್ವಾಸ್ಥ ್ಯ ಸಮಾಜದ ಹೊಣೆ ಎಲ್ಲಾ ನಾಗರಿಕರದ್ದು : ರೋಲ್ಫಿ ಡಿಕೊಸ್ಟಾ
ಸ್ವಾಸ್ಥ ್ಯ ಸಮಾಜದ ಹೊಣೆ ಎಲ್ಲಾ ನಾಗರಿಕರದ್ದು : ರೋಲ್ಫಿ ಡಿಕೊಸ್ಟಾ
ಟ್ರೆಸ್ಸಿ ಡೋಲ್ಫಿ ಮಾರ್ಟಿಸ್ ನಿಧನ
ಟ್ರೆಸ್ಸಿ ಡೋಲ್ಫಿ ಮಾರ್ಟಿಸ್ ನಿಧನ
ಕವತ್ತಾರು ಬಾಲಗುತ್ತು ಅನಿತಾ ಬಿ.ಶೆಟ್ಟಿ ನಿಧನ
ಕವತ್ತಾರು ಬಾಲಗುತ್ತು ಅನಿತಾ ಬಿ.ಶೆಟ್ಟಿ ನಿಧನ

Comment Here