Sunday 11th, May 2025
canara news

ಪ್ರಕಾಶ್ ಬಿ.ಪೂಜಾರಿ ಹೃದಯಾಘಾತಕ್ಕೆ ಬಲಿ

Published On : 05 Jul 2019   |  Reported By : Rons Bantwal


ಮುಂಬಯಿ, ಜು.04: ಉಡುಪಿ ಜಿಲ್ಲೆಯ ಸಾಸ್ತನ ಮೂಲತಃ ಪ್ರಕಾಶ್ ಬಿ.ಪೂಜಾರಿ (48.) ಕಳೆದ ಬುಧವಾರ ಸಂಜೆ ತೀವ್ರ ಹೃದಯಾಗಾತದಿಂದ ನಿಧನ ಹೊಂದಿದರು.

ಅಂಧೇರಿ ಪೂರ್ವದ ಸಾಕಿನಾಕ ಇಲ್ಲಿನ ಲಾಲ್‍ಬಹುದ್ಧೂರ್ ಶಾಸ್ತ್ರಿ ನಗರದ ಡಿಸೋಜಾ ನಗರ್ ತೀನ್ ನಂಬರ್ ಖಾಡಿ ನಿವಾಸಿ ಆಗಿದ್ದ ಮೃತ ಪ್ರಕಾಶ್ ಮುಂಬಯಿನಲ್ಲಿ ಖಾಸಾಗಿ ಸಂಸ್ಥೆಯಲ್ಲಿ ನೌಕರನಾಗಿದ್ದರು. ಎಂದಿನಂತೆ ದೈನಂದಿನ ಕೆಲಸಗಳನ್ನು ಪೂರೈಸಿ ಸ್ವನಿವಾಸದಲ್ಲಿ ಇಂಗ್ಲೇಡ್-ನ್ಯೂಝಿಲ್ಯಾಂಡ್ ವರ್ಲ್ಡ್‍ಕಪ್ ಕ್ರಿಕೆಟ್ ಪಂದ್ಯಾಟ ವೀಕ್ಷಿಸುತ್ತಿದ್ದತೆಯೇ ಏಕಾಏಕಿ ಎದೆನೋವು ಕಾಣಿಸಿತು ಎನ್ನಲಾಗಿದೆ. ತತ್‍ಕ್ಷಣವೇ ಪತ್ನಿ ನೆರೆಹೊರೆ ಮನೆÉಯವರ ಸಹಾಯದಿಂದ ಸಾಕಿನಾಕ ಇಲ್ಲಿನ ಫಾರಮೌಂಟ್ ಆಸ್ಪತ್ರೆಗೆ ಸಾಗಿಸಿದ್ದರು ಆದರೆ ಆಸ್ಪತ್ರೆಗೆ ಸಾಗಿಸುವ ರಸ್ತೆ ಮಧ್ಯೆಯೇ ಅಸುನೀಗಿರುವರು ಎಂದು ಹೇಳಲಾಗಿದೆ.

ಮೃತರು ಪತ್ನಿ, ಮಕ್ಕಳಾದ 8-ವಯಸ್ಸಿನ ಗಂಡುಮಗು ಮತ್ತು 3-ವಯಸ್ಸಿನ ಹೆಣ್ಣುಮಗು, ಬಂಧು-ಬಳಗ ಅಗಲಿದ್ದಾರೆ. ಇಂದಿಲ್ಲಿ ಘಾಟ್ಕೋಪರ್‍ನ ರಾಜವಾಡಿ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಿ ಸಂಜೆ ವೇಳೆಗೆ ತವರೂರಿನಿಂದ ಕುಟುಂಬಸ್ಥರು ಆಗಮಿಸಿದಂತೆಯೇ ಸಾಗ್‍ಭಾಗ್ ಇಲ್ಲಿನ ರುದ್ರಭೂಮಿಯಲ್ಲಿ ಅಂತಿಮಕ್ರಿಯೆ ನಡೆಸಲಾಯಿತು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here