Sunday 11th, May 2025
canara news

ಕಾರ್ಕಳ-ಅಜೆಕಾರ್‍ನಲ್ಲಿ ರೆಮೋನಾ ಕಲಾಯಾನ ಉದ್ಘಾಟನೆ

Published On : 06 Jul 2019   |  Reported By : Rons Bantwal


ಮಕ್ಕಳ ಸ್ವತಂತ್ರ ವ್ಯಕ್ತಿತ್ವ ರೂಪಿಸ ಬೇಕು : ಡಾ| ಸಂತೋಷ ಕುಮಾರ್

ಮುಂಬಯಿ (ಅಜೆಕಾರು), ಜು.05: ತಂದೆ ತಾಯಿಯರು ಮತ್ತು ಶಿಕ್ಷಣ ವ್ಯವಸ್ಥೆ ಮಕ್ಕಳ ಸ್ವತಂತ್ರ ವ್ಯಕ್ತಿತ್ವವನ್ನು ಬೆಳೆಸಲು ಪೂರಕವಾಗ ಬೇಕು ಎಂದು ಸಮಾಜ ಸೇವಕ, ವೈದ್ಯ ಡಾ| ಸಂತೋಷ ಕುಮಾರ್ ಶೆಟ್ಟಿ ಹೇಳಿದರು.

ಪ್ರಸಿದ್ಧ ಬಾಲ ಕಲಾವಿದೆ ಮೂರು ನೃತ್ಯ ವಿಶ್ವ ದಾಖಲೆಗಳ ಸಾಧಕಿ ಬಾಲ ಕಲಾವಿದೆ ರೆಮೊನಾ ಈವೆಟ್ ಪಿರೇರಾ ಅವರ ಶಾಲೆಗಳಲ್ಲಿ ಸರಣಿ ಕಾರ್ಯಕ್ರಮ `ರೆಮನಾ ಕಲಾಯಾನ'ವನ್ನು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ| ಶೇಖರ ಅಜೆಕಾರು ಅವರೊಂದಿಗೆ ಜಂಟಿಯಾಗಿ ಉದ್ಘಾಟಿಸಿ ಮಾತನಾಡಿದರು.

111ರ ಸಂಭ್ರಮದಲ್ಲಿರುವ ಅಜೆಕಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರೆಮನಾ ಅವರ ನೃತ್ಯ ಕಾರ್ಯಕ್ರಮ ನಡೆಯಿತು. ರೆಮೋನಾ ಪಿರೇರಾ ಮಂಗಳೂರು ಅವರನ್ನು ಸನ್ಮಾನಿಸಿ ಗಣ್ಯರು ಶುಭ ಯಾನಕ್ಕೆ ಹಾರೈಸಿದರು.

ಮಾತೃ ಭಾಷೆ, ಪ್ರಾಂತ್ಯ ಭಾಷೆ, ದೇಶ ಭಾಷೆ, ಜಾಗತಿಕ ಭಾಷೆ ಎಲ್ಲವೂ ವಿದ್ಯಾಥಿರ್üಗಳ ಸರ್ವತೋಮುಖ ಅಭಿವೃದ್ಧಿಗೆ ಅಗತ್ಯವಾಗಿದೆ. ಅವುಗಳನ್ನು ಮಕ್ಕಳ ಮೇಲೆ ಹೇರದೆ ಹಂತ ಹಂತವಾಗಿ ಕಲಿಸಿದರೆ ಪರಿಣಾಮಕಾರಿಯಾಗುತ್ತದೆ ಎಂದು ಅಧ್ಯಕ್ಷತೆ ವಹಿಸಿದ್ದ ಪಂಚನಬೆಟ್ಟು ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎ.ನರಸಿಂಹ ಬೊಮ್ಮರಬೆಟ್ಟು ಅಭಿಪ್ರಾಯ ಪಟ್ಟರು.

ಹಿರಿಯ ಪತ್ರಕರ್ತ ಶೇಖರ ಅಜೆಕಾರು ಪ್ರಸ್ತಾವಿಕವಾಗಿ ಮಾತನಾಡಿ `ತನ್ನ ಮಗಳ ನೃತ್ಯ ಇತರ ಮಕ್ಕಳಿಗೆ ಪ್ರೇರಣೆಯಾಗುವುದಾದರೆ ಆಗಲಿ ಎಂಬ ಉದ್ದೇಶದಿಂದ ಅವರ ತಾಯಿ ಗ್ಲಾಡಿಸ್ ಪಿರೇರಾ ಈ ಸರಣಿ ಕಾರ್ಯಕ್ರಮಗಳನ್ನು ಸ್ವಯಂ ಪ್ರೇರಣೆಯಿಂದ ನಡೆಸುತ್ತಿದ್ದು ಸರಕಾರಿ ಶಾಲೆಗಳಲ್ಲಿ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಈ ಕಾರ್ಯಕ್ರಮಗಳನ್ನು ನಡೆಸಲು ಒಪ್ಪಿದ್ದಾರೆ. ಅಜೆಕಾರು ಶಾಲೆಗೆ ಅಗತ್ಯವಿದ್ದ ಬೆಳಕಿನ ಉಪಕರಣಗಳನ್ನು ಕೊಡುಗೆಯಾಗಿ ನೀಡಿದ್ದಾರೆ' ಎಂದರು.

ರೆಮೊನಾ ಪಿರೇರಾ ಕಲಾಯಾನ 1ರ ಆಹ್ವಾನಿತ ಕಲಾವಿದೆ ಮೈಸೂರಿನ ನಾಲ್ಕನೇ ತರಗತಿಯ ಅನನ್ಯ ವಿ.ಎಸ್ ಮೈಸೂರು ಅವರು ಬಡಗು ತಿಟ್ಟಿನ ಯಕ್ಷಗಾನ ನೃತ್ಯ ಪ್ರದರ್ಶನ ನೀಡಿದರು.

ಎಸ್‍ಡಿಎಂಸಿ ಅಧ್ಯಕ್ಷ ಜಯರಾಮ ಆಚಾರ್ಯ, ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿಯ ಪ್ರಧಾನ ಕಾರ್ಯದರ್ಶಿ ಸೌಮ್ಯಶ್ರೀ ಎಸ್.ಅಜೆಕಾರು, ಸದಸ್ಯೆ ಶಶಿಕಲಾ ಹೋಮಲ್ಕೆ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಾಲಾಭಿವೃದ್ಧಿ ಸಮಿತಿ ಎಲ್ಲಾ ಸದಸ್ಯರÀು, ಶಿಕ್ಷಕರನ್ನು, ಅದೃಷ್ಟಶಾಲಿ ವಿದ್ಯಾಥಿರ್üಗಳನ್ನು ಗೌರವಿಸಗಿದ್ದು, ಸುನಿಧಿ ಮತ್ತು ಸುನಿಜ ಪ್ರಾಥಿರ್üಸಿದರು. ಮುಖ್ಯೋಪಾಧ್ಯಾಯ ಕೆ.ವಿಶ್ವನಾಥ ಸ್ವಾಗತಿಸಿದರು. ದೈಹಿಕ ಶಿಕ್ಷಕ ಪಾಂಡುರಂಗ ಆಚಾರ್ಯ ಧನ್ಯವಾದ ಸಮರ್ಪಿಸಿದರು. ವಿದ್ಯಾಥಿರ್üನಿ ಸಮೀಕ್ಷಾ ಬನಾನ್ ಬೈರೊಟ್ಟು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here