ಮಾಜಿ ಅಧ್ಯಕ್ಷ ಸೈಮನ್ ಪೀಟರ್ ಫುರ್ಟಾಡೊ ನಿಧನ
ಮುಂಬಯಿ, ಜು.07: ನಗರದಲ್ಲಿ ಕಳೆದ ಅನೇಕ ವರ್ಷಗಳಿಂದ ಶೈಕ್ಷಣಿಕ ಮತ್ತು ಸಾಮಾಜಿಕ ಮತ್ತು ಸಾಂಸ್ಕೃತಿಕ ಸೇವೆಯಲ್ಲಿ ನಿರತ ಸೈಂಟ್ ಪೀಟರ್ಸ್ ಅಸೋಸಿಯೇಶನ್ ಬಾರ್ಕೂರು (ಮುಂಬಯಿ) ಸಂಸ್ಥೆಯ ಮಾಜಿ ಅಧ್ಯಕ್ಷ ಸೈಮನ್ ಪೀಟರ್ ಫುರ್ಟಾಡೊ (75.) ಕಳೆದ ಶನಿವಾರ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಅಲ್ಪಕಾಲದ ಅಸ್ವಸ್ಥತೆಯಿಂದ ಕೊನೆಯುಸಿರೆಳೆದರು.
ಉಡುಪಿ ಜಿಲ್ಲೆಯ ಇತಿಹಾಸ ಪ್ರಸಿದ್ಧ ಬಾರ್ಕೂರು ಮೂಲತ: ಪೀಟರ್ ಸದ್ಯ ಸಾಸ್ತನದಲ್ಲಿ ಮನೆ ಮಾಡಿಕೊಂಡಿದ್ದ ಪೀಟರ್ ಕಳೆದ ಅನೇಕ ವರ್ಷಗಳಿಂದ ಮುಲುಂಡ್ ಪಶ್ಚಿಮದಲ್ಲಿ ನೆಲೆಯಾಗಿದ್ದರು. ಗ್ಲೋರಿ ಎಂಟರ್‍ಪ್ರೈಸಸ್ ಮುಲುಂಡ್ ಇಂಜಿನೀಯರ್ಸ್ ಎಂಡ್ ಫ್ಯಾಬ್ರಿಕೇಟರ್ಸ್ ಸಂಸ್ಥೆಯ ಮಾಲಿಕರಾಗಿ ಓರ್ವ ಉದ್ಯಮಿಯಾಗಿ, ಸಮಾಜ ಸೇವಕರಾಗಿ ಎಸ್ಪಿ ಎಂದೇ ಪ್ರಸಿದ್ಧಿ ಹೊಂದಿದ್ದರು. ಮುಲುಂಡ್ ಪರಿಸರದ ಲಯನ್ಸ್ ಕ್ಲಬ್ ಆಫ್ ಬಾಂಬೇ ಲೇಕ್ ಸೈಡ್ ಇದರ 2008-09ರ ಸಾಲಿನ ಅಧ್ಯಕ್ಷರಾಗಿ, ಮಹಾನಗರದ ಅನೇಕನೇಕ ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದ ಇವರು ಜನಾನುರೆಣಿಸಿದ್ದ ಮೃತರು ಪತ್ನಿ, ಒಂದು ಗಂಡು, ಎರಡು ಹೆಣ್ಣು ಮಕ್ಕಳು ಸೇರಿದಂತೆ ಬಂಧು ಬಳಗವನ್ನು ಅಗಲಿದ್ದಾರೆ.
ಉಪನಗರ ಅಂಧೇರಿ ಪೂರ್ವದ ಮರೋಲ್ ಇಲ್ಲಿನ ಸೈಂಟ್ ಜೋನ್ ಚರ್ಚ್‍ನಲ್ಲಿ ಇಂದಿಲ್ಲಿ ಭಾನುವಾರ ಮೊದಲೇ ನಿಗದಿಪಡಿಸಿದಂತೆ ಸೈಂಟ್ ಪೀಟರ್ಸ್ ಅಸೋಸಿಯೇಶನ್ ತನ್ನ ವಾರ್ಷಿಕ ಪೆÇೀಷಕ ಸಂತರ ಉತ್ಸವ ಹಮ್ಮಿಕೊಂಡಿದ್ದರೂ ಕಾರ್ಯಕ್ರಮ ಮೊಟಕುಗೊಳಿಸಿ ಫುರ್ಟಾಡೊ ನಿಧನಕ್ಕೆ ಸಂತಾಪ ಸೂಚಿಸಿತು.
ಮೃತರ ಅಂತ್ಯಕ್ರಿಯೆ ಸೋಮವಾರ (ಜು.08) ಸಂಜೆ ಬಾರ್ಕೂರು ಅಲ್ಲಿನ ಸೈಂಟ್ ಆ್ಯಂಟನಿ ಚರ್ಚ್ ಸಾಸ್ತನ್ ಇಲ್ಲಿ ನೆರವೇರಲಿದ್ದು ಅಸೋಸಿಯೇಶನ್‍ನ ಪದಾಧಿಕಾರಿಗಳು ಪಾಲ್ಗೊಳ್ಳುವರು ಎಂದು ಅಧ್ಯಕ್ಷ ಐವಾನ್ ರೆಬೆಲ್ಲೋ ತಿಳಿಸಿದ್ದಾರೆ.