Sunday 11th, May 2025
canara news

ಸೇವಾಂಕ್ಷಿಗಳಿಗೆ ಜಯ ಸಿ.ಸುವರ್ಣರ ಪ್ರೇರಣೆ ಗಜಬಲವಾಗಿದೆ

Published On : 08 Jul 2019   |  Reported By : Rons Bantwal


ಬಿಲ್ಲವರ ಅಸೋಸಿಯೇಶನ್ ಮುಂಬಯಿ 87ನೇ ಮಹಾಸಭೆಯಲ್ಲಿ ಚಂದ್ರಶೇಖರ ಎಸ್.ಪೂಜಾರಿ
(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)

ಮುಂಬಯಿ, ಜು.07: ಕರ್ಮಭೂಮಿ ಮತ್ತು ಜನ್ಮಭೂಮಿಯ ಸೇವಾ ಸಫಲತೆಗೆ ಬಿಲ್ಲವರ ಅಸೋಸಿಯೇಶನ್ ವಿಶ್ವಕ್ಕೇ ಮಾದರಿ. ಪೂರ್ವಜರ ಸೇವಾ ಕನಸು ನನಸಾಗಿಸುವಲ್ಲಿ ಫಲಪ್ರದವಾಗಿ ಭಾವೀ ಪೀಳಿಗೆಯತ್ತ ಸಾಗುತ್ತಿರುವ ಅಸೋಸಿಯೇಶನ್ ಕಾಲಾನುಸಾರ ಬದಲಾವಣೆಯಾಗಿ ಮುನ್ನಡೆಯುತ್ತಿದೆ. ಇದೆಲ್ಲಕ್ಕೂ ಜಯ ಸುವರ್ಣರ ಮಾರ್ಗದರ್ಶನವೇ ಶ್ರೀರಕ್ಷೆ ಆಗಿದೆ. ಸÀುವರ್ಣರ ಪ್ರೇರಣೆ ಬಿಲ್ಲವರಿಗೆ ಮಾತ್ರವಲ್ಲ ಸೇವಾಂಕ್ಷಿಗಳೆಲ್ಲರಿಗೂ ಗಜಬಲವಾಗಿದೆ. ಸಾಮಾಜಿಕ ಚಿಂತನೆ, ದೂರದೃಷ್ಠಿತ್ವವುಳ್ಳ ಸುವರ್ಣರ ಸಮಾಜ ಸೇವೆ ಪ್ರಾತಃ ಸ್ಮರಣೀಯವಾದದು ಎಂದು ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ ತಿಳಿಸಿದರು.

ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಭವನದ ಶ್ರೀ ನಾರಾಯಣಗುರು ಸಭಾಗೃಹದಲ್ಲಿ ಇಂದಿಲ್ಲಿ ಭಾನುವಾರ ಪೂರ್ವಾಹ್ನ ನಡೆಸಲ್ಪಟ್ಟ ಅಸೋಸಿಯೇಶನ್‍ನ 87ನೇ ವಾರ್ಷಿಕ ಮಹಾಸಭೆಗೆ ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಗೌರಧ್ಯಕ್ಷ ಜಯ ಸಿ.ಸುವರ್ಣ ಭವನದಲ್ಲಿನ ಶ್ರೀ ಗುರು ನಾರಾಯಣ ಮಂದಿರದಲ್ಲಿನ ಕೋಟಿಚೆನ್ನಯ ಮತ್ತು ಗುರುಗಳ ಪ್ರತಿಮೆಗೆ ಪುಷ್ಪಾರ್ಚನೆಗೈದು ಆರತಿ ಬೆಳಗಿಸಿ ಮಹಾಸಭೆಗೆ ಸಾಂಕೇತಿಕವಾಗಿ ಚಾಲನೆ ನೀಡಿದ್ದು, ಚಂದ್ರಶೇಖರ ಪೂಜಾರಿ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತಮ್ಮೆಲ್ಲರ ಸಹಯೋಗದೊಂದಿಗೆ ನಮಗೆ ಅಸೋಸಿಯೇಶನ್‍ನಲ್ಲಿ ಸೇವೆ ಸಲ್ಲಿಸುವ ಜವಾಬ್ದಾರಿ ದೊರಕಿದೆ. ಅದನ್ನು ನಾವು ಫಲಪ್ರದವಾಗಿ ನಿಭಾಹಿಸುವೆವು. ಪಡುಬೆಳ್ಳೆಯಲ್ಲಿ 15 ಎಕರೆ ಜಾಗದ ನಮ್ಮ ಶಾಲೆಯಲ್ಲಿ ಸುಮಾರು 850 ವಿದ್ಯಾಥಿರ್sಗಳು ಜಾತಿಮತ ಧರ್ಮ ಭೇದವಿಲ್ಲದೆ ವಿದ್ಯಾರ್ಜನೆ ಮಾಡುತ್ತಿದ್ದಾರೆ. ಈ ಶೈಕ್ಷಣಿಕ ಕೇಂದ್ರವನ್ನು ಕಾಲೇಜು ಮಾಡುವ ಉದ್ದೇಶ ನಮ್ಮೆಲ್ಲರ ಆಶವಾಗಿದೆ. ಅದನ್ನು ನೇರವೇರಲು ತಮ್ಮೆಲ್ಲರ ಸಹಕಾರ ಬೇಕಾಗಿದೆ. ವಿದ್ಯಾದಾನದ ಗುಡಿ ಗೋಪುರ ಕಟ್ಟುವುದರೊಂದಿಗೆ ವಿದ್ಯಾಮಂದಿರಕ್ಕೆ ಹೆಚ್ಚಿನ ಆದ್ಯತೆ ಕೊಡುವ. ನ್ಯಾಯಕ್ಕಾಗಿ ಹೋರಾಡಿದ ಕೋಟಿ ಚೆನ್ನಯರ ಹೆಸರಿನಲ್ಲಿ ಕಾನೂನು ಕಾಲೇಜು, ದೇಯಿ ಬೈದ್ಯೆತಿ ಹೆಸರಿನಲ್ಲಿ ಆಯುರ್ವೆದ ಕಾಲೇಜು ಮಾಡುವಂತಹ ಉನ್ನತ ವಿಚಾರ ನಮ್ಮ ದಾಗಬೇಕು. ಅದಕ್ಕಾಗಿ ನಾವೆಲ್ಲರೂ ಒಂದಾಗಿ ಸಮಾಜ ಸೇವೆ ಮಾಡಿ ಜಯ ಸುವರ್ಣರ ಆದರ್ಶವನ್ನು ಮೈಗೂಡಿಸಿ ಮುನ್ನಡೆಯೋಣ ಎಂದೂ ಚಂದ್ರಶೇಖರ ಪೂಜಾರಿ ತಿಳಿಸಿದರು.

ಅಸೋಸಿಯೇಶನ್‍ನ ಉಪಾಧ್ಯಕ್ಷರುಗಳಾದ ಶಂಕರ ಡಿ.ಪೂಜಾರಿ, ಹರೀಶ್ ಜಿ.ಅವಿೂನ್, ದಯಾನಂದ ಆರ್. ಪೂಜಾರಿ, ಶ್ರೀನಿವಾಸ ಆರ್.ಕರ್ಕೇರ, ಗೌರವ ಪ್ರಧಾನ ಕೋಶಾಧಿಕಾರಿ ರಾಜೇಶ್ ಜೆ.ಬಂಗೇರ, ಗೌ| ಜೊತೆ ಕಾರ್ಯದರ್ಶಿಗಳಾದ ಧರ್ಮೇಶ್ ಎಸ್.ಸಾಲ್ಯಾನ್, ಜೊತೆ ಕೋಶಾಧಿಕಾರಿಗಳಾದ ಶಿವರಾಮ ಎಸ್.ಪೂಜಾರಿ, ಸದಾಶಿವ ಎ.ಕರ್ಕೇರ, ಮೋಹನ್ ಡಿ.ಪೂಜಾರಿ, ಜಯ ಎಸ್.ಸುವರ್ಣ, ಮಹಿಳಾ ವಿಭಾಗಧ್ಯಕ್ಷೆ ಜಯಂತಿ ವಿ.ಉಳ್ಳಾಲ್, ಯುವಾಭ್ಯುದಯ ಸಮಿತಿ ಕಾರ್ಯಾಧ್ಯಕ್ಷ ನಾಗೇಶ್ ಎನ್.ಕೋಟ್ಯಾನ್, ಸೇವಾದಳದ ದಳಪತಿ ಗಣೇಶ್ ಕೆ.ಪೂಜಾರಿ ಸೇರಿದಂತೆ ಅಸೋಸಿಯೇಶನ್‍ನ ವಿವಿಧ ಉಪ ಸಮಿತಿಗಳ ಪದಾಧಿಕಾರಿಗಳು, ಸ್ಥಳೀಯ ಸಮಿತಿಗಳ ಮುಖ್ಯಸ್ಥರು ವೇದಿಕೆಯಲ್ಲಿ ಅಸೀನರಾಗಿದ್ದರು.

ಆದಿಯಲ್ಲಿ ಜಯ ಸಿ.ಸುವರ್ಣರು ಕಳಸೆಗೆ ತಂಡುಲವನ್ನು ಸುರಿದು ಶ್ರೀ ಗುರು ಪ್ರಸಾದ ಅನ್ನನಿಧಿಗೆ ಚಾಲನೆಯನ್ನೀಡಿ ಸಭೆಯಲ್ಲಿ ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿಯ ಅಮೃತಮಹೋತ್ಸವದ ಮನವಿಪತ್ರ ಬಿಡುಗಡೆ ಗೊಳಿಸಿದರು. ಅಸೋಸಿಯೇಶನ್‍ನ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದು ಇತ್ತೀಚೆಗೆ ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಗೌರಧ್ಯಕ್ಷ ಅಧ್ಯಕ್ಷರಾಗಿ ಆಯ್ಕೆಯಾದ ಜಯ ಸಿ.ಸುವರ್ಣ, ನೂತನ ಅಧ್ಯಕ್ಷ ಡಾ| ರಾಜಶೇಖರ್ ಆರ್.ಕೋಟ್ಯಾನ್, ಅಸೋಸಿಯೇಶನ್‍ನ ಸಂಚಾಲಕತ್ವದ ಗುರುನಾರಾಯಣ ರಾತ್ರಿ ಶಾಲೆಯಲ್ಲಿ ಗತ ಶೈಕ್ಷಣಿಕ ಎಸ್‍ಎಸ್‍ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಂದ ತೇರ್ಗಡೆಯಾದ ಕು| ಪೂಜಾ ದಶರತ್ ಚವ್ಹಾಣ್, ಕು| ದಿವ್ಯಾ ದಶರತ್ ಚವ್ಹಾಣ್, ಇಫ್ರಾ ಕೆ.ಶೇಖ್ ಅವರನ್ನು ಅಧ್ಯಕ್ಷರು ಶಾಲು ಹೊದಿಸಿ ಹೂಗುಚ್ಛ ನೀಡಿ ಸತ್ಕರಿಸಿದರು.

ಜಯ ಸಿ.ಸುವರ್ಣ ಮಾತನಾಡಿ ಸಮಾಜದಲ್ಲಿ ನಾವು ಇನ್ನೊಬ್ಬರಿಗೆ ಸಹಕರಿಸುವಂತರಾಗಬೇಕು. ನಿಸ್ವಾರ್ಥ ಸಮಾಜ ಸೇವೆಗೈದರೆÉ ಮಾತ್ರ ಆ ಸೇವೆಯಿಂದ ಜೀವನ ಸಾರ್ಥಕವಾಗಿಸಬಹುದು. ನಮ್ಮ ಜೀವನ ಖರ್ಜೂರ ಮರದಂತೆ ನಿರರ್ಥಕ ಆಗಬಾರದು. ಪಡುಬೆಳ್ಳೆಯಲ್ಲಿರುವ ನಮ್ಮ ಶಾಲೆಯ ಅಭಿವೃದ್ಧಿ ನಮ್ಮ ಕನಸು ನನಸಾಗಲು ತಮ್ಮೆಲ್ಲರ ಸಹಕಾರ ಬೇಕು ಎಂದÀು ಕೋರಿದರು.


ಅಸೋಸಿಯೇಶನ್‍ನ ಸರ್ವತೋಮುಖ ಏಳಿಗೆಗಾಗಿ ಅವಿರತ ಶ್ರಮಿಸಿದ ಸಾಂಸ್ಕೃತಿಕ ಉಪ ಸಮಿತಿ ಕಾರ್ಯದರ್ಶಿ ಅಶೋಕ್ ಕುಕ್ಯಾನ್ ಸಸಿಹಿತ್ಲು (ಧರ್ಮಪತ್ನಿ ವನಿತಾ ಅಶೋಕ್ ಜೊತೆಗೋಡಿ) ಅವರನ್ನು `ವರ್ಷದ ಸರ್ವೋತ್ತಮ ಕಾರ್ಯಕರ್ತ' ಎಂದು ಗೌರವಿಸಿದ್ದು, `ವರ್ಷದ ಸರ್ವೋತ್ತಮ ಸ್ಥಳೀಯ ಸಮಿತಿ' ಗೌರವಕ್ಕೆ ಅಸೋಸಿಯೇಶನ್‍ನ ವಿೂರಾರೋಡ್ ಸ್ಥಳೀಯ ಸಮಿತಿ ಪ್ರಥಮ ಸ್ಥಾನ, ವಸಾಯಿ ಸಮಿತಿ ದ್ವಿತೀಯ ಸ್ಥಾನಕ್ಕೆ ಪಾತ್ರವಾಗಿದ್ದು, ಭಿವಂಡಿ, ಬೋರಿವಿಲಿ-ದಹಿಸರ್ ಮತ್ತು ಥಾಣೆ ಸಮಾಧಾನಕರ ಗೌರವಕ್ಕೆ ಭಾಜನವಾಗಿದ್ದು ವಿಶೇಷವಾಗಿ ಗೌರವಿಸಲ್ಪಟ್ಟಿತು.

ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ್ ಬಿತ್ತ್‍ಲ್ ಕ್ಷೇತ್ರದ ಅನುವಂಶಿಕ ಮೊಕ್ತೇಸರ ಶ್ರೀಧರ ಪೂಜಾರಿ, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಜಯಂತ ನಡುಬೈಲ್, ಅಸೋಸಿಯೇಶನ್‍ನ ಮಾಜಿ ಅಧ್ಯಕ್ಷರಾದ ವರದ ಉಳ್ಳಾಲ್, ಎಲ್.ವಿ ಅವಿೂನ್, ನಿತ್ಯಾನಂದ ಡಿ.ಕೋಟ್ಯಾನ್, ಭಾರತ್ ಬ್ಯಾಂಕ್‍ನ ಉಪಕಾರ್ಯಾಧ್ಯಕ್ಷೆ ನ್ಯಾಯವಾದಿ ರೋಹಿಣಿ ಜೆ.ಸಾಲ್ಯಾನ್, ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀ ಕಾರ್ಯಾಧ್ಯಕ್ಷ ಎನ್.ಟಿ ಪೂಜಾರಿ, ಎನ್.ಎಂ ಸನಿಲ್, ಹರೀಶ್ಚಂದ್ರ ಎಸ್.ಪೂಜಾರಿ, ಟಿ.ಆರ್ ಶೆಟ್ಟಿ, ರೋಹಿತ್ ಎಂ.ಸುವರ್ಣ, ಜಯಕರ್ ಡಿ.ಪೂಜಾರಿ, ಕು| ಪೂಜಾ ಡಿ.ಚವ್ಹಾಣ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಸಲಹೆ, ಸೂಚನೆಗಳನ್ನಿತ್ತರು.

ಅಸೋಸಿಯೇಶನ್‍ನ ಧುರೀಣರುಗಳಾದ ವಾಸುದೇವ ಆರ್.ಕೋಟ್ಯಾನ್, ಭಾರತ್ ಬ್ಯಾಂಕ್‍ನ ನಿರ್ದೇಶಕರನೇರು, ಶ್ರೀ ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿ ಕಾರ್ಯಾಧ್ಯಕ್ಷ ಪೀತಾಂಬರ ಹೇರಾಜೆ, ಕಾರ್ಯದರ್ಶಿ ರವಿ ಪೂಜಾರಿ ಚಿಲಿಂಬಿ, ಕೋಶಾಧಿಕಾರಿ ದೀಪಕ್ ಕೋಟ್ಯಾನ್ ಗುರುಪುರ, ಕೆಲಿಂಜೆಗುತ್ತು ಪ್ರವೀಣ್ ಶೆಟ್ಟಿ, ಸುರೇಂದ್ರ ಎ.ಪೂಜಾರಿ (ಸಾಯಿಕೇರ್), ಸಿಎ| ಅಶ್ವಜಿತ್ ಹೆಜ್ಮಾಡಿ, ಬಿಲ್ಲವರ ಭವನದ ಪ್ರಬಂಧಕ ಭಾಸ್ಕರ ಟಿ.ಪೂಜಾರಿ ಸೇರಿದಂತೆ ಸದಸ್ಯರನೇಕರು ಉಪಸ್ಥಿತರಿದ್ದು ಗತ ವಾರ್ಷಿಕ ಸಾಲಿನಲ್ಲಿ ಅಗಲಿದ ಅಸೋಸಿಯೇಶನ್‍ನ ಸದಸ್ಯರು, ಹಿತೈಷಿಗಳು ಮತ್ತು ಗಣ್ಯರಿಗೆ ಸಭೆಯ ಆದಿಯಲ್ಲಿ ಸಂತಾಪ ಸೂಚಿಸಿ ಸದ್ಗತಿ ಕೋರಲಾಯಿತು.

ಕು| ವಿಧಿತಾ ಆನಂದ ಪೂಜಾರಿ ಪ್ರಾರ್ಥನೆಯನ್ನಾಡಿದರು. ಅಸೋಸಿಯೇಶನ್‍ನ ಗೌರವ ಪ್ರಧಾನ ಕಾರ್ಯದರ್ಶಿ ಧನಂಜಯ ಎಸ್.ಶಾಂತಿ ಸುಖಾಗಮನ ಬಯಸಿ ವಾರ್ಷಿಕ ಚಟುವಟಿಕೆ ಮಾಹಿತಿ, ಗತ ವಾರ್ಷಿಕ ಲೆಕ್ಕಪತ್ರ ತಿಳಿಸಿದರು. ಗೌರವ ಜೊತೆ ಕಾರ್ಯದರ್ಶಿ ಹರೀಶ್ ಜಿ.ಸಾಲ್ಯಾನ್ ಗತ ವಾರ್ಷಿಕ ಮಹಾಸಭೆ ವರದಿ ವಾಚಿಸಿದರು. ಅಸೋಸಿಯೇಶನ್‍ನ ಮುಖವಾಣಿ ಅಕ್ಷಯ ಮಾಸಿಕದ ಸಂಪಾದಕ ಹರೀಶ್ ಹೆಜ್ಮಾಡಿ ಮತ್ತು ಗೌರವ ಜೊತೆ ಕಾರ್ಯದರ್ಶಿ ಕೇಶವ ಕೆ.ಕೋಟ್ಯಾನ್ ಪುರಸ್ಕೃತÀರನ್ನು ಪರಿಚಯಿಸಿದರು. ಗೌ| ಜೊತೆ ಕಾರ್ಯದರ್ಶಿ ರವೀಂದ್ರ ಎ.ಶಾಂತಿ ಅಭಾರ ಮನ್ನಿಸಿದರು. ರಾಷ್ಟ್ರಗೀತೆಯೊಂದಿಗೆ ಸಭೆ ಸಮಾಪನ ಗೊಂಡಿತು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here