ಮುಂಬಯಿ, ಜು.08: ಉಡುಪಿ ಪರ್ಯಾಯ ಶ್ರೀ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದಂಗಳವರ ಪರ್ಯಾಯಾವಧಿಯಲ್ಲಿ ಉಡುಪಿ ಶ್ರೀ ಕೃಷ್ಣ ಸನ್ನಿಧಿಯಲ್ಲಿ, ದಾಸ ಸಾಹಿತ್ಯದ ಮೂಲಕ ಹಮ್ಮಿಕೊಂಡಿದ್ದು ಆ ಪ್ರಯುಕ್ತ ಗೋಕುಲ ಭಜನಾ ಮಂಡಳಿ ಸಾಯನ್ (ಮುಂಬಯಿ) ಕಳೆದ ಬುಧವಾರ ಮತ್ತು ಗುರುವಾರ ಅಖಂಡ ಹರಿನಾಮ ಸಂಕೀರ್ತನೆಯಲ್ಲಿ ಭಾಗವಹಿಸಿತು.
ಹದಿನಾರು ಸದಸ್ಯೆಯರನ್ನೊಳಗೊಂಡ ಗೋಕುಲ ಭಜನಾ ತಂಡ ಶ್ರೀ ಮಠದ ನಿಯಮದಂತೆ ಎರಡು ದಿನಗಳಲ್ಲೂ ಸತತ ನಾಲ್ಕು ಗಂಟೆಗಳಂತೆ ಎಂಟು ಗಂಟೆ ಭಜನೆ ಸೇವೆ ಸಲ್ಲಿಸಿತು. ಭಜನೆಯ ಕೊನೆಯಲ್ಲಿ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ಅವರು ಭಾಗವಹಿಸಿದ ಎಲ್ಲಾ ಭಜನಾಥಿರ್üಗಳಿಗೆ ಮಂತ್ರಾಕ್ಷತೆಯನ್ನಿತ್ತು ಅನುಗ್ರಹಿಸಿದರು.