Sunday 11th, May 2025
canara news

ಜು.14: ಕಾರ್ಕಳ ದಾನಶಾಲೆಯ ಬೊಮ್ಮರಾಜ ಬಸದಿಯಲ್ಲಿ

Published On : 13 Jul 2019   |  Reported By : Rons Bantwal


ಕ್ಷುಲ್ಲಕ 105 ಧ್ಯಾನ ಸಾಗರ ಮಹಾರಾಜರ ಧ್ಯಾನ ವರ್ಷಾಯೋಗ ಆರಂಭ

ಮುಂಬಯಿ, ಜು.12: ಸಂತ ಶಿರೋಮಣಿ ಆಚಾರ್ಯಶ್ರೀ 108 ವಿದ್ಯಾಸಾಗರ ಮಹಾರಾಜರ ಪ್ರಿಯ ಶಿಷ್ಯರಾದ "ಜಿನವಾಣಿ ಪುತ್ರ, ಜೈನ ಶ್ರುತಜ್ಞಾನ ಕೋಶ, ಕ್ಷುಲ್ಲಕ 105 ಧ್ಯಾನ ಸಾಗರ ಮಹಾರಾಜರ ಧ್ಯಾನ ವರ್ಷಾಯೋಗ 2019 (ಚಾತುರ್ಮಾಸ)ವು ಕಾರ್ಕಳ ದಾನಶಾಲೆಯ ಬೊಮ್ಮರಾಜ ಬಸದಿಯಲ್ಲಿ ದಿನಾಂಕ ಇದೇ ಜು.14ನೇ ಆದಿತ್ಯವಾರದಿಂದ ಆರಂಭಗೊಳ್ಳಲಿದೆ.

ಆ ಪ್ರಯುಕ್ತ ಕಾರ್ಕಳ ಬಾಹುಬಲಿ ಪ್ರವಚನ ಮಂದಿರದಲ್ಲಿ, ಆದಿತ್ಯವಾರ ಮಧ್ಯಾಹ್ನ 2.30ಕ್ಕೆ ಸರಿಯಾಗಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ.

ಧ್ಯಾನ ಯೋಗಿ ಸ್ವಸ್ತಿ ಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ (ಶ್ರೀ ಜೈನ ಮಠ, ದಾನಶಾಲೆ, ಕಾರ್ಕಳ) ಮತ್ತು ಸ್ವಸ್ತಿ ಶ್ರೀ ಮಧಭಿನವ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ (ಶ್ರೀ ಜೈನ ಮಠ ಸಿಂಹನಗದ್ದೆ, ಎನ್.ಆರ್.ಪುರ)ಇವರ ದಿವ್ಯ ಉಪಸ್ಥಿತಿಯಲ್ಲಿ ಜರುಗುವ ಕಾರ್ಯಕ್ರಮದಲ್ಲಿ ಜಿನವಾಣಿ ಪುತ್ರ ಕ್ಷುಲ್ಲಕ 105 ಧ್ಯಾನಸಾಗರ ಮಹಾರಾಜರು ಆಶಿರ್ವಚನ ನೀಡುವರು.

ಸದ್ಧರ್ಮ ಬಂಧುಗಳೆಲ್ಲರೂ ಧರ್ಮಲಾಭವನ್ನು ಪಡೆದು ಕೊಳ್ಳಬೇಕಾಗಿ ಶ್ರೀ ಜೈನ ಮಠ, ದಾನಶಾಲೆ, ಕಾರ್ಕಳ ಇದರ ವಕ್ತಾರರು ಈಮೂಲಕ ವಿನಂತಿಸಿದ್ದಾರೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here