Friday 26th, April 2024
canara news

ಚಿಕ್ಕೋಡಿಯಲ್ಲಿ ನಡೆಸಲ್ಪಟ್ಟ ಗಡಿನಾಡಿನಲ್ಲಿ ರಾಷ್ಟ್ರಮಟ್ಟದ ಗ್ರಾಮೀಣ ಸಾಹಿತ್ಯ ಸಮ್ಮೇಳನ

Published On : 13 Jul 2019   |  Reported By : Rons Bantwal


ಮಾತನಾಡುವ ಮೂಲಕ ಕನ್ನಡ ಭಾಷೆ ಉಳಿಸಿ-ಶ್ರೀಅಲ್ಲಮಪ್ರಭು ಸ್ವಾಮೀಜಿ

ಮುಂಬಯಿ, ಜು.12: ಸಾಹಿತ್ಯ ಸಂಸ್ಕೃತಿ ನಾಡುನುಡಿ ವಿವಿಧ ರಂಗಗಳಲ್ಲಿ ಕ್ರಿಯಾಶೀಲರಾಗಿ ಕೈಂಕರ್ಯದಲ್ಲಿ ತೊಡಗಿರುವ ಹೊಸ ಕಾಲದ ಸಾಹಿತಿಗಳ ಲೇಖನ ಹಾಗೂ ಕವಿ ಕಾವ್ಯಪ್ರಜ್ಞೆಯನ್ನು ಎಲ್ಲೆಡೆ ಹಬ್ಬಿಸುವ ನಿಟ್ಟಿನಲ್ಲಿ ಕಸ್ತೂರಿ ಸಿರಿಗನ್ನಡ ವೇದಿಕೆ (ರಿ) ಬೆಳಗಾವಿ ವತಿಯಿಂದ ಚಿಕ್ಕೋಡಿ ತಾಲೂಕಿನ ನಾಗರ ಮುನ್ನೋಳಿಯ ಸಿದ್ಧೇಶ್ವರ ದೇವಸ್ಥಾನದಲ್ಲಿ ಇತ್ತೀಚೆಗೆ ರಾಷ್ಟ್ರಮಟ್ಟದ ಗ್ರಾಮೀಣ ಸಾಹಿತ್ಯ ಸಮ್ಮೇಳನ, ರಾಷ್ಟ್ರೀಯ ಗೌರವ ಸಾಹಿತ್ಯ ವಿಭೂಷಣ ಪ್ರಶಸ್ತಿ ಪ್ರದಾನ ಜರುಗಿಸಿತು.

ಕನ್ನಡಕ್ಕೆ ಸುದೀರ್ಘವಾದ ಇತಿಹಾಸವಿದೆ. ಇದನ್ನು ಇನ್ನೂ ಎತ್ತರೆತ್ತರಕ್ಕೆ ಬೆಳಸಲು ಎಲ್ಲರೂ ಕಂಕಣ ಬದ್ದರಾಗಬೇಕು. ಮನೆಮನೆಗಳಲ್ಲಿ ಕನ್ನಡ ಮಾತನಾಡುವ ಮೂಲಕ ಭಾಷೆಯನ್ನು ಉಳಿಸಿ ಕೊಳ್ಳಬೇಕು. ಗಡಿಭಾಗದಲ್ಲಿ ಮಠಾಧೀಶರು ಮತ್ತು ಸಾಹಿತಿಗಳಿಂದ ಕನ್ನಡದ ಅಸ್ತಿತ್ವ ಉಳಿಸಿ ಕೊಂಡಿದೆ ಎಂದು ಚಿಂಚಣಿಯ ಸಿದ್ಧಸಂಸ್ಥಾನ ಮಠದ ಮ.ನಿ.ಪ್ರ ಶ್ರೀಅಲ್ಲಮಪ್ರಭು ಸ್ವಾಮೀಜಿ ರಾಷ್ಟ್ರಮಟ್ಟದ ಗ್ರಾಮೀಣ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆಗೈದು ಮಾತನಾಡಿದರು.

ಗ್ರಾಮೀಣ ಭಾಗದಲ್ಲಿ ಸಾಹಿತ್ಯ ಕಾರ್ಯಕ್ರಮ ಜರುಗಿಸುವುದರಿಂದ ಇಲ್ಲಿಯ ಜನರಿಗೆ ಸಾಹಿತ್ಯದಲ್ಲಿ ಆಸಕ್ತಿ ಹೆಚ್ಚಿಸಿದಂತಾಗುತ್ತದೆ. ಗ್ರಾಮದ ಇತಿಹಾಸದ ಅರಿವು ಮೂಡಿ ಗ್ರಾಮದ ಅಭಿವೃದ್ಧಿಗೆ ಅನುಕೂಲವಾಗುತ್ತದೆ. ಎಂದು ಸಮ್ಮೇಳನದ ಅಧ್ಯಕ್ಷತೆ ವಹಿಸಿದ ನಾಗರಮುನ್ನೋಳಿ ಗ್ರಾಮಪಂಚಾಯತಿ ಅಧ್ಯಕ್ಷ ಸಿದ್ದಪ್ಪ ಮುರ್ಯಾಯಿ ತಿಳಿಸಿದರು. ಸದಲಗಾ ಶ್ರದ್ದಾನಂದ ಸ್ವಾಮೀಜಿ ಸಾಹಿತ್ಯಸಮ್ಮೇಳನದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ ಮಂಡ್ಯದ ಖ್ಯಾತ ಸಾಹಿತಿ ಡಾ| ಪ್ರದೀಪಕುಮಾರ ಹೆಬ್ರಿ ಮಾತನಾಡಿ, ನಾಗರ ಮುನ್ನೋಳಿ ಗ್ರಾಮದಲ್ಲಿ ನಡೆದ ಅಕ್ಷರಜಾತ್ರೆ ಒಂದು ದಿನಕ್ಕೆ ಸೀಮಿತವಾಗಿರದೆ ನಿತ್ಯೋತ್ಸವ ಆಗಬೇಕು. ಕನ್ನಡವನ್ನು ನಮ್ಮೆಲ್ಲರ ಎದೆಗೆ ದೀಪಾಗಿಸಿಕೊಂಡು ನಾವೆಲ್ಲ ಬೆಳಗಬೇಕು. ಕನ್ನಡನಾಡನ್ನು ಬೆಳೆಸಬೇಕು. ಕನ್ನಡದೀಪ ಎಲ್ಲರ ಎದೆತುಂಬಿ ಬೆಳಗಬೇಕು. ಎಂದು ಸಾಹಿತ್ಯಾಭಿಮಾನಿಗಳಿಗೆ ಕರೆನೀಡಿದರು.

ಸಮ್ಮೇಳನದಲ್ಲಿ ಕವಿಗಳಾದ ಅಜಯ ಉದೋಸಿ ಅವರ ಭಾವದೀಪ್ತಿ, ಲಾಲಸಾಬ ಪೆಂಡಾರಿ ಅವರ ಸಂಪಾದಿಸಿದ ಮಾನಸಕಾವ್ಯ, ಗೀತಾರಾಂಪೂರ ಅವರ ಸಮರಸಗಳ ಸಮ್ಮೀಲನ ಕವನಸಂಕಲನಗಳು ಮತ್ತು ಎಸರಸಮ್ಮ ಅವರು ರಚಿಸಿದ ಬಾಳಪಯಣ, ಬಾಡಿಗೆಮನೆ, ಬಾಂಧವ್ಯದಬೆಸುಗೆ, ಪಾಪಪುಣ್ಯ ಕಾದಂಬರಿ ಕೃತಿಗಳು ಬಿಡುಗಡೆ ಗೊಳಿಸಲ್ಪಟ್ಟವು.

ಚಿಕ್ಕೋಡಿಯ ಮಾಜಿ ಉಪನ್ಯಾಸಕ, ಸಾಹಿತಿ ಪೆÇ್ರ.ಎಸ್.ವೈ ಹಂಜಿಅಜಯ ಉದೋಸಿ ಗೀತಾರಾಂಪೂರ ಅವರ ಅಧ್ಯಕ್ಷತೆಯಲ್ಲಿ ರಾಷ್ಟ್ರಮಟ್ಟದ ಕವಿಗೋಷ್ಟಿ ನಡೆಯಿತು. ಕವಿಗೋಷ್ಠಿಯಲ್ಲಿ ಮುಂಬಯಿಯ ಪ್ರತಿಷ್ಠಿತ ಬಿಲ್ಲವರ ಅಸೋಸಿಯೇಶನ್ ಸಂಚಾಲಿತ ಗುರುನಾರಾಯಣ ರಾತ್ರಿ ಪ್ರೌಢಶಾಲೆಯ ಶಿಕ್ಷಕ ಮಲ್ಲಿಕಾರ್ಜುನ ಬಡಿಗೇರ ಸೇರಿದಂತೆ ಮಹಾರಾಷ್ಟ್ರ, ಕರ್ನಾಟಕ, ಆಂದ್ರಪ್ರದೇಶ, ಗೋವಾ ಮುಂತಾದ ರಾಜ್ಯಗಳ ಕವಿಗಳು ಭಾಗವಹಿಸಿ ತಮ್ಮ ಕವನಗೈದರು. ಅಕ್ಕಲಕೋಟೆಯ ಸಿ.ಬಿ.ಖೇಡಗಿ ಮಹಾವಿದ್ಯಾಲಯದ ಕನ್ನಡ ವಿಭಾಗದ ಸಹಉಪನ್ಯಾಸಕರಾಗಿ ಸೇವೆಸಲ್ಲಿಸುತ್ತಿರುವ ಡಾ| ಗುರುಸಿದ್ದಯ್ಯ ಸ್ವಾಮಿ ಅವರ ಸಾಹಿತ್ಯ ಸೇವೆ ಮನಗಂಡು ಅವರಿಗೆ ಸಾಹಿತ್ಯ ವಿಭೂಷಣಪ್ರಶಸ್ತಿ ಪ್ರದಾನಿಸಿ ಸನ್ಮಾನಿಸಿದರು. ಭಾಗವಹಿಸಿದ ಎಲ್ಲಾ ಕವಿಗಳಿಗೂ ಪ್ರಮಾಣಪತ್ರ ,ನೆನಪಿನಕಾಣಿಕೆ ನೀಡಿ ಗೌರವಿಸಿದರು.

ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್‍ನ ಮಾಜಿ ಅಧ್ಯಕ್ಷ ಮಲನಗೌಡ ನೇರ್ಲಿ, ಸದಾಶಿವ ಬೇಸಿಂಗೆ, ಎ.ಆರ್.ಮಠಪತಿ, ಮಹೇಶಬೆಲ್ಲದ ಬೇಸಿಂಗೆ, ಡಾ| ಎಂ.ಬಿ.ಕುಂಬಾರ ಮುಂತಾದವರು ಉಪಸ್ಥಿತರಿದ್ದರು. ಸಮ್ಮೇಳನದ ರೂವಾರಿ ಲಾಲಸಾಬ ಪೆಂಡಾರಿ ಪ್ರಾಸ್ತಾವನೆಗೈದು ಸ್ವಸಂಪಾದಿಸಿದ ಮಾನಸ ಕಾವ್ಯಸಂಕಲನ ಪರಿಚಯಿಸಿದರು. ಉಪನ್ಯಾಸಕ ಪ್ರಕಾಶ ಮನಗೂಳಿ ಕಾರ್ಯಕ್ರಮ ನಿರೂಪಿಸಿದದರು. ಶಿವಾನಂದ ಕೊಟಬಾಗಿ ವಂದನೆಗೈದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here