Sunday 11th, May 2025
canara news

ಕದ್ರಿ ಕೃಷ್ಣ ಮಂದಿರಕ್ಕೆ ಪೇಜಾವರ ಶ್ರೀಗಳಿಂದ ಭೂಮಿ ಪೂಜೆ

Published On : 14 Jul 2019   |  Reported By : Rons Bantwal


ಕದ್ರಿ ಮಲ್ಲಿಕಟ್ಟೆಯಲ್ಲಿರುವ ಶ್ರೀ ಕೃಷ್ಣ ಮಂದಿರ ಪುನರ್‍ನಿರ್ಮಾಣಗೊಳಿಸುವ ಉದ್ದೇಶದಿಂದ ಪೇಜಾವರ ಮಠದ ಹಿರಿಯ ಸ್ವಾಮಿಗಳಾದ ಶ್ರೀ ವಿಶ್ವೇಶತೀರ್ಥ ಸ್ವಾಮಿಜಿಯವರು ಭೂಮಿಪೂಜೆ ನೆರವೇರಿಸಿದರು. ಶುಭಾಸಮಾರಂಭಗಳು, ಧಾರ್ಮಿಕ ಕಾರ್ಯಕ್ರಮಗಳು, ವಿದ್ಯಾರ್ಥಿಗಳಿಗೆ ಹಾಗೂ ಸಂಶೋಧÀನಾ ಪ್ರಕ್ರಿಯೆಗಳಿಗೆ ನೂತನ ಸಭಾಭವನವು ಬಳಕೆಯಾಗಲಿದ್ದು ಅಧುನಿಕ ಸವಲತ್ತುಗಳನ್ನು ಒಳಗೊಂಡಂತೆ ಮಂದಿರವು ಪುನರ್‍ನಿರ್ಮಾಣ ಗೊಳ್ಳಲಿದೆ. ಇದರ ನಿರ್ಮಾಣ ಕಾರ್ಯಕ್ಕೆ ಸರ್ವರ ಸಹಕಾರವನ್ನು ಶ್ರೀ ಗಳು ಬಯಸುತ್ತಾ ಶೀಘ್ರಾತಿಶೀಘ್ರವೇ ನವೀಕೃತ ಶ್ರೀ ಕೃಷ್ಣ ಮಂದಿರವು ರೂಪುಗೊಳ್ಳಲೆಂದು ಶುಭವನ್ನು ಹಾರೈಸಿದರು. ವೈದಿಕರಾದ ಉಚ್ಚಿಲ ಶ್ರೀಪತಿ ಭಟ್ ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು.

 

ಶ್ರೀ ಕೃಷ್ಣ ಮಂದಿರದ ವಿಶ್ವಸ್ಥರಲ್ಲೋರ್ವರಾದ ಎಸ್, ಪ್ರದೀಪ ಕುಮಾರ ಕಲ್ಕೂರ ಸ್ವಾಗತಿಸಿದರು. ಎಂ. ಬಿ, ಪುರಾಣಿಕ್ ಪ್ರಸ್ತಾವನೆಗೈದರು. ಈ ಸಂದರ್ಭ ಕೆ.ಎಸ್. ಕಲ್ಲೂರಾಯ, ಹರಿಕೃಷ್ಣ ಪುನರೂರು, ಸ್ಥಳದ ದಾನಿಗಳಾದ ಸುಧಾಕರ ಪಾಂಗಾಳ, ಡಾ| ಜಯಪ್ರಕಾಶ್, ಡಾ| ಎಸ್. ಎಂ. ಶರ್ಮಾ, ಡಾ| ಕೃಷ್ಣ ಪ್ರಸಾದ್, ಶ್ರೀಮತಿ ಫ್ರೆನ್ನಿ ಡೇಸ್ಸಾ, ಇಂಜಿನಿಯರ್ ಶುಭಾನಂದ ರಾವ್, ವಿಪ್ರ ಸಮಾಜದ ಅಧ್ಯಕ್ಷ ರಾಮಕೃಷ್ಣ ರಾವ್, ಡಾ. ಪ್ರಭಾಕರ ಅಡಿಗ ಕದ್ರಿ, ಮಟ್ಟಿ ಲಕ್ಷ್ಮೀ ನಾರಾಯಣ ರಾವ್, ಮಧುಸೂದನ ಕಣ್ವ ತೀರ್ಥ, ಡಾ. ಎಮ್. ಪ್ರಭಾಕರ ಜೋಶಿ, ಪ್ರಭಾಕರ ರಾವ್ ಪೇಜಾವರ, ಶ್ರೀಮತಿ ಪೂರ್ಣಿಮಾ ರಾವ್ ಪೇಜಾವರ, ಡಾ| ಶೋಧನ ರಾವ್ ಪೇಜಾವರ, ನರೇಶ್ ರಾವ್ ಬಿ. ಮೊದಲಾದವರು ಉಪಸ್ಥಿತರಿದ್ದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here