Sunday 11th, May 2025
canara news

ಕೊಂಕಣಿ ಭಾಷಾ ಮಂಡಳ್ ಮಹಾರಾಷ್ಟ್ರ ಸಂಸ್ಥೆಯಿಂದ

Published On : 17 Jul 2019   |  Reported By : Rons Bantwal


ಲಾರೇನ್ಸ್ ಕುವೆಲ್ಲೊ ಅವರಿಗೆ ಜೀವಮಾನ ಸಾಧನಾ ಪ್ರಶಸ್ತಿ-2019

ಮುಂಬಯಿ, ಜು.16: ಕೊಂಕಣಿ ಭಾಷಾ ಮಂಡಳ್ ಮಹಾರಾಷ್ಟ್ರ ಸಂಸ್ಥೆಯು ಕೊಂಕಣಿ ಕ್ಷೇತ್ರದಲ್ಲಿ ಅವಿರತ ಸೇವೆಗೈದ ಸಾಧಕರನ್ನು ಗುರುತಿಸಿ ಜೀವನÀ ಸಾಧನಾ ಪ್ರಶಸ್ತಿ ನೀಡಿ ಗೌರವಿಸಲಿದ್ದು ಈ ಬಾರಿ ದಿವೋ ಕೊಂಕಣಿ ಸಾಪ್ತಾಹಿಕದ ಸಂಪಾದಕ ಲಾರೇನ್ಸ್ ಕುವೆಲ್ಲೋ ಅವರಿಗೆ ಜೀವಮಾನ ಸಾಧನಾ ಪ್ರಶಸ್ತಿ-2019 ಪ್ರದಾನಿಸಿ ಗೌರವಿಸಲಿದೆ ಎಂದು ಪ್ರಕಟಿಸಿದೆ.

ಬೃಹನುಂಬಯಿನಲ್ಲಿ ಸುಮಾರು ನಾಲ್ಕು ದಶಕಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯನಿರತ ಇವರು ಸಾವಿರಾರು ಕೃತಿಗಳನ್ನು ಪ್ರಕಟಿಸಿರುವರು. ಮುಂಬಯಿನಿಂದ ಕಳೆದ ಇಪ್ಪತ್ತೈದು ವರ್ಷಗಳಿಂದ ತನ್ನ ಪ್ರಕಾಶಕತ್ವ ಹಾಗೂ ಸಂಪಾದಕತ್ವದಿಂದ ನಿರಂತರವಾಗಿ ದಿವೋ ಕೊಂಕಣಿ ವಾರಪತ್ರಿಕೆ ಹಾಗೂ ಸೆಕುಲರ್ ಸಿಟಿಝನ್ ಸಾಪ್ತಾಹಿಕವನ್ನು ಲಾರೇನ್ಸ್ ಕುವೆಲ್ಲೋ ಪ್ರಕಟಿಸುತ್ತಿದ್ದಾರೆ. ಪತ್ನಿ ಸುಜನ್ಹಾ ಎಲ್.ಕುವೆಲ್ಲೋ ಅವರೂ ಪ್ರಕಾಶಕಿಯಾಗಿ ಶ್ರಮಿಸುತ್ತಿದ್ದಾರೆ. ಇವರಿಬ್ಬರೂ ಕನ್ನಡಿಗ ಪತ್ರಕರ್ತರ ಸಂಘ, ಮಹಾರಾಷ್ಟ್ರ (ರಿ.) ಇದರ ಅಜೀವ ಸದಸ್ಯ, ಕ್ರಿಶ್ಚನ್ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀಸ್ ಸಂಸ್ಥೆಯ ನಿರ್ದೇಶಕ ಆಗಿಯೂ ಸೇವಾನಿರತರಾಗಿದ್ದಾರೆ.

ಇದೇ ಬರುವ ಆಗಸ್ಟ್.17ನೇ ಶನಿವಾರ ಸಂಜೆ 6.30 ಗಂಟೆಗೆ ಮಾಹಿಮ್ ಪಶ್ಚಿಮದ ಸೆನಾಪತಿ ಬಾಪಟ್ ಮಾರ್ಗದಲ್ಲಿರುವ ಸರಸ್ವತಿ ಮಂದಿರ ಶಾಲೆಯ ಸಭಾಗೃಹದಲ್ಲಿ ಭಾಷಾ ಮಂಡಳ್ ಕೊಂಕಣಿ ದಿವಸ್ 2019 ಕಾರ್ಯಕ್ರಮ ಆಯೋಜಿಸಿದ್ದು ಅಂದು ಪ್ರಶಸ್ತಿ ಪ್ರಧಾನ ಸಮಾರಂಭ ನೆರವೇರಿಸಿ ಕುವೆಲ್ಲೋ ಅವರಿಗೆ ಶಾಲು, ಫಲ ಪುಷ್ಪ, ಸನ್ಮಾನ ಪತ್ರ ಜೊತೆಗೆ 10,000/- ರೂಪಾಯಿ ನೀಡಿ ಗೌರವಿಸಲಾಗುವುದು ಎಂದು ಕೊಂಕಣಿ ಭಾಷಾ ಮಂಡಳ್‍ನ ಅಧ್ಯಕ್ಷ ಜೋನ್ ಡಿಸಿಲ್ವಾ ತಿಳಿಸಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನೃತ್ಯ, ಸಂಗೀತ, ಸಯ್ರಿಕ್ ಕೊಂಕಣಿ ಡ್ರಾಮವನ್ನು ಹಾಡಿ ತೋರಿಸಲಿದ್ದಾರೆ. ಸದಸ್ಯರ ಮಕ್ಕಳಿಗಾಗಿ ಪ್ರತಿಭಾ ಪುರಸ್ಕಾರವನ್ನು ನೀಡಲಿದ್ದಾರೆ ಎಂದು ಸಂಘದ ಗೌರವ ಕಾರ್ಯದರ್ಶಿ ಲಾರೇನ್ಸ್ ಡಿಸೋಜಾ ಕಮಾನಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here