Sunday 19th, January 2020
canara news

ಶಿವಾ'ಸ್ ಹೇರ್ ಡಿಝೈನರ್ಸ್ ಪ್ರಸಿದ್ಧಿಯ ಶಿವರಾಮ ಕೆ.ಭಂಡಾರಿಗೆ ಲಂಡನ್‍ನಲ್ಲಿ ಭಾರತ್ ರತ್ನ ಜೀವಮಾನ ಪ್ರಶಸ್ತಿ-2019 ಪ್ರಾಪ್ತಿ

Published On : 22 Jul 2019   |  Reported By : Rons Bantwal


ಮುಂಬಯಿ, ಜು.20: ಮುಂಬಯಿ ಮಹಾನಗರದಲ್ಲಿ ಹೇರ್ ಸ್ಟೈಲೋ ಮೂಲಕ ಪ್ರಸಿದ್ಧಿಯಲ್ಲಿನ ರಾಷ್ಟ್ರದ ಹೆಸರಾಂತ ಕೇಶ ವಿನ್ಯಾಸ ಸಂಸ್ಥೆ ಶಿವಾ'ಸ್ ಹೇರ್ ಡಿಝೈನರ್ಸ್ ಪ್ರೈವೇಟ್ ಲಿಮಿಟೆಡ್‍ನ ಆಡಳಿತ ನಿರ್ದೇಶಕ ಡಾ| ಶಿವರಾಮ ಕೃಷ್ಣ ಭಂಡಾರಿ ಇವರಿಗೆ `ಭಾರತ ಗೌರವ ಜೀವಮಾನ ಪ್ರಶಸ್ತಿ-2019' ಪ್ರದಾನಿಸಿ ಗೌರವಿಸಿದೆ.

ತೀರಾ ಗ್ರಾಮೀಣ ಪ್ರದೇಶದಿಂದ ನಗರಕ್ಕಾಗಮಿಸಿ ಕುಲಕಸಬು ಕೇಶವೃತ್ತಿಯನ್ನು ಜಾಗತಿಕವಾಗಿ ಪರಿಚಯಿಸಿದ ದಕ್ಷಿಣ ಕನ್ನಡ ಕಾರ್ಕಳ ಅತ್ತೂರು ಮೂಲತಃ ಶಿವರಾಮ ಕೆ.ಭಂಡಾರಿ ಅವರ ಅತ್ಯಾದ್ಭುತ ಸಾಧನೆಯನ್ನು ಪರಿಗಣಿಸಿ ಕಳೆದ ಶುಕ್ರವಾರ ಯುಕೆ ಲಂಡನ್ ಇಲ್ಲಿನ ಬ್ರಿಟೀಷ್ ಪಾರ್ಲಿಮೆಂಟ್ ಹೌಸ್‍ನ ಸÀಭಾಗೃಹದಲ್ಲಿ ಸಂಸ್ಕೃತಿ ಯುವ ಸಂಸ್ಥೆ ಆಯೋಜಿಸಿದ್ದ 7ನೇ ವಾರ್ಷಿಕ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿüಯಾಗಿ ಉಪಸ್ಥಿತ ಬ್ರಿಟೀಷ್‍ನ ರಾಬರ್ಟ್ ದಾವೀಸ್, ಪಂಡಿತ್ ಸುರೇಶ್ ಮಿಶ್ರಾ ಅವರು ಡಾ| ಶಿವರಾಮ ಕೃಷ್ಣ ಭಂಡಾರಿ ಇವರಿಗೆ `ಭಾರತ ಗೌರವ ಜೀವಮಾನ ಪ್ರಶಸ್ತಿ-2019' ಪ್ರದಾನಿಸಿ ಗೌರವಿಸಿಸಿದರು.

ಸಮಾರಂಭದಲ್ಲಿ ಗಣ್ಯರಾದ ಲೊಕೇಂದ್ರ ಸಿಂಗ್ ಕಲ್ವಿ, ಶೈಲೇಶ್ ಲೋದಾ, ವಿರೇಂದ್ರ ಶರ್ಮಾ, ಬಾರ್ನೊಸ್ ಸೇಂದಿ ವರ್ಮಾ, ಡಾ| ಬಾವೇಶ್ ಕೋಟಾಕ್, ಪ್ರೀಯಾ ಸೊಟಾ ಕೊಟಾಕ್ ಮತ್ತಿತರ ಮಹಾನೀಯರು ಉಪಸ್ಥಿತರಿದ್ದು ಭಂಡಾರಿ ಅವರಿಗೆ ಶುಭಾರೈಸಿದರು.
More News

ಬಿಸಿಸಿಐ ಮಂಗಳೂರು ಘಟಕದ ಅಧ್ಯಕ್ಷರಾಗಿ ಗಣೇಶ ಬಂಗೇರ ಆಯ್ಕೆ
ಬಿಸಿಸಿಐ ಮಂಗಳೂರು ಘಟಕದ ಅಧ್ಯಕ್ಷರಾಗಿ ಗಣೇಶ ಬಂಗೇರ ಆಯ್ಕೆ
ಭಾಂಡೂಪ್‍ನಲ್ಲಿ ಸ್ವರ್ಗೀಯ ಚಂದ್ರಶೇಖರ ರಾವ್ ಸಂಸ್ಮರಣಾ ಕಾರ್ಯಕ್ರಮ
ಭಾಂಡೂಪ್‍ನಲ್ಲಿ ಸ್ವರ್ಗೀಯ ಚಂದ್ರಶೇಖರ ರಾವ್ ಸಂಸ್ಮರಣಾ ಕಾರ್ಯಕ್ರಮ
ಬಿಎಸ್‍ಎಂ ಅಂಧೇರಿ ಬಾಂದ್ರಾ ಸಮಿತಿಯಿಂದ ಸಿಲ್ಕ್ ಆ್ಯಂಡ್ ಡೈಮಂಡ್ಸ್ ಪ್ರದರ್ಶನ
ಬಿಎಸ್‍ಎಂ ಅಂಧೇರಿ ಬಾಂದ್ರಾ ಸಮಿತಿಯಿಂದ ಸಿಲ್ಕ್ ಆ್ಯಂಡ್ ಡೈಮಂಡ್ಸ್ ಪ್ರದರ್ಶನ

Comment Here