Sunday 11th, May 2025
canara news

ಇಂದು (ಜು.24) ಬುಧವಾರ ಬೆಳಿಗ್ಗೆ ಸಾಂತಾಕ್ರೂಜ್‍ನ ಬಿಲ್ಲವ ಭವನಕ್ಕೆ

Published On : 24 Jul 2019   |  Reported By : Rons Bantwal


ಪ್ರಕಾಶ್ ಅಂಚನ್ ನೇತೃತ್ವದ ಭಾರತ ಶಿಕ್ಷಣ ಯಾತ್ರೆ ರಥ ಆಗಮನ

ಮುಂಬಯಿ, ಜು.23: ಭಾರತ ರಾಷ್ಟ್ರದಾದ್ಯಂತ ಒಂದೇ ದೇಶ-ಒಂದೇ ಶಿಕ್ಷಣ ಜಾರಿಗಾಗಿ ಸರಕಾರಿ ಶಾಲೆ ಉಳಿಸಿ ಬೆಳೆಸಿ ರಾಜ್ಯ ಸಮಿತಿ, ಕರ್ನಾಟಕ ಹಾಗೂ ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಮತ್ತು ಪ್ರಕಾಶ್ ಅಂಚನ್ ನೇತೃತ್ವದಲ್ಲಿ ಆಯೋಜಿಸಲಾಗಿರುವ ಭಾರತ ಶಿಕ್ಷಣ ಯಾತ್ರೆ ರಥ ಮಹಾರಾಷ್ಟಕ್ಕೆ ಆಗಮಿಸುತ್ತಿದೆ. ಇಂದು (ಜುಲೈ.24) ಬುಧವಾರ ಪೂರ್ವಾಹ್ನ10.00 ಗಂಟೆಗೆ ಸಾಂತಾಕ್ರೂಜ್ ಪೂರ್ವದಲ್ಲಿನ ಬಿಲ್ಲವ ಭವನಕ್ಕೆ ಭಾರತ ಶಿಕ್ಷಣ ಯಾತ್ರೆ ರಥ ಆಗಮಿಸಲಿದೆ.

ಬಿಲ್ಲವರ ಅಸೋಸಿಯೇಶನ್‍ನ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ ಮತ್ತು ಪದಾಧಿಕಾರಿಗಳು, ಅಸೋಸಿಯೇಶನ್‍ನ ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷ ದಯಾನಂದ್ ಆರ್.ಪೂಜಾರಿ, ಕಾರ್ಯದರ್ಶಿ ಅಶೋಕ್ ಕುಕ್ಯಾನ್ ಸಸಿಹಿತ್ಲು, ಶಾಲಾ ಸಮಿತಿ ಕಾರ್ಯಾಧ್ಯಕ್ಷ ಬನ್ನಂಜೆ ರವೀಂದ್ರ ಅಮೀನ್ ಮುಂದಾಳುತ್ವದಲ್ಲಿ ಶಿಕ್ಷಣ ಯಾತ್ರೆ ರಥ ಬರಮಾಡಿ ಕೊಳ್ಳಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.

ಬೃಹನ್ಮುಂಬಯಿಯಲ್ಲಿನ ಎಲ್ಲಾ ಕನ್ನಡ ಕಲಿಕಾ ಶಾಲೆಯ ಶಿಕ್ಷಕರು, ವಿದ್ಯಾಥಿರ್üಗಳು, ಶಿಕ್ಷಕೇತರರು, ಶಿಕ್ಷಣಾಭಿಮಾನಿಗಳು ಗಣ್ಯರು ಸಕಾಲದಲ್ಲಿ ಆಗಮಿಸಿ ಶಿಕ್ಷಣ ಯಾತ್ರೆ ರಥವನ್ನು ಸ್ವಾಗತಿಸಬೇಕು ಎಂದು ಬಿಲ್ಲವರ ಅಸೋಸಿಯೇಶನ್‍ನ ಗೌರವ ಪ್ರಧಾನ ಕಾರ್ಯದರ್ಶಿ ಧನಂಜಯ ಎಸ್.ಶಾಂತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಒಂದೇ ದೇಶ-ಒಂದೇ ಶಿಕ್ಷಣ ಜಾರಿಗಾಗಿ ರಾಷ್ಟ್ರ ರಾಜಧಾನಿ ದೆಹಲಿಗೆ ಸಾಗುತ್ತಿರುವ ಮಧ್ಯೆ ಇಂದಿಲ್ಲಿ ಮುಂಬಯಿ ಆಗಮಿಸಿದೆ. ವಿದ್ಯೆಯಿಂದ ಸ್ವಾತಂತ್ರರಾಗಿರಿ... ಸಂಘಟನೆಯಿಂದ ಬಲಯುತರಾಗಿರಿ ಎಂಬ ಜಗದ್ಗುರು ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶ ರೂಢಿಸಿ ದೇಶ ಸೇವೆಯಲ್ಲಿ ಭಾಗಿಗಳಾಗುವಂತೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಸಾಮಾಜಿಕ ಹೋರಾಟಗಾರ, ಏಕರೂಪಿ ಶಿಕ್ಷಣ ಹೋರಾಟಗಾರ ಪ್ರಕಾಶ್ ಅಂಚನ್ ತಿಳಿಸಿದ್ದಾರೆ.

ಕಳೆದ ಜು.21ನೇ ಆದಿತ್ಯವಾರ ಶ್ರೀ ರಾಜರಾಜೇಶ್ವರಿ ದೇವಸ್ಥಾನ ಪೆÇಳಲಿ ಇಲ್ಲಿ ಆರಂಭಗೊಂಡ ಈ ಯಾತ್ರೆಗೆ ಕರ್ನಾಟಕ ರಾಜ್ಯ ವಿಧಾನ ಪರಿಷತ್‍ನ ಮಾಜಿ ಸಭಾಪತಿ, ಕರ್ನಾಟಕ ರಾಜ್ಯ ಸರಕಾರದ ಸಾಮ್ಯತ್ವದ (ವಿಧಾನ ಪರಿಷತ್ ಆಡಳಿತ್ವದ) ಗಡಿನಾಡ ಕನ್ನಡಿಗರ ಸೇವಾಭಿವೃದ್ಧಿ ಸಂಸ್ಥೆಯ ಮಾಜಿ ಅಧ್ಯಕ್ಷ ಡಿ.ಹೆಚ್ ಶಂಕರಮೂರ್ತಿ ಉದ್ಘಾಟಿಸಿದ್ದರು. ಬಳಿಕ ಗೋವಾ, ಮಹಾರಾಷ್ಟ್ರ ರಾಜ್ಯಕ್ಕೆ (ಮುಂಬಯಿಗೆ) ಇಂದು ಪ್ರವೇಶಿಸಿದೆ. ಇಲ್ಲಿಂದ ಗುಜರಾತ್, ರಾಜಸ್ಥಾನ, ಹರಿಯಾಣ ಮೂಲಕ ದೆಹಲಿ ಸೇರಿ ವಿನಂತಿಸಿದ್ದಾರೆ. ಆ.01ನೇ ಗುರುವಾರ ಬೆಳಿಗ್ಗೆ ದೆಹಲಿಯಲ್ಲಿ ಜಂತರ್-ಮಂತರ್ ಇಲ್ಲಿ ಸಮಾಪನ ಆಗಲಿದೆ ಎಂದು ಪತ್ರಕರ್ತ ಹಾಗೂ ಕಾರ್ಯಕರ್ತ ಸಂದೀಪ್ ಸಾಲ್ಯಾನ್ ತಿಳಿಸಿದ್ದಾರೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here