Sunday 11th, May 2025
canara news

ಬಾಂದ್ರಾದಲ್ಲಿ ವಾರ್ಷಿಕ ಆಷಾಢೋತ್ಸವ ಆಚರಿಸಿದ ಕನ್ನಡ ಸಂಘ ಸಾಂತಾಕ್ರೂಜ್ ಸಂಸ್ಥೆ

Published On : 26 Jul 2019   |  Reported By : Rons Bantwal


ಆಟಿ ಆಚರಣೆ-ಪದ್ಧತಿಗಳು ಪಾವಿತ್ರ್ಯವುಳ್ಳವು : ಎಲ್.ವಿ ಅವಿೂನ್
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜು.24: ಪರಶುರಾಮನ ಸೃಷ್ಠಿಯ ಸಂಪ್ರದಾಯಸ್ಥ ಆಟಿ ಆಚರಣಾ ಪದ್ಧತಿಗಳÀು ಪಾವಿತ್ರ್ಯತೆವುಳ್ಳವು. ಕರ್ನಾಟಕದ ಕರಾವಳಿ ಜನತೆ ಇವುಗಳನ್ನು ಪರಂಪರಿಗತವಾಗಿ ಅನುಸರಿಸುತ್ತಾ ಶ್ರದ್ಧಾಪೂರ್ವಕವಾಗಿ ಆಚರಿಸುತ್ತಿರುವುದು ಇಂದಿಗೂ ಚಾಲ್ತಿಯಲ್ಲಿದೆ. ಇಲ್ಲಿನ ಎಲ್ಲಾ ಆಚರಣೆಗಳಿಗೂ ಧಾರ್ಮಿಕ, ಆಧ್ಯಾತ್ಮಿಕತೆಯ ಆಳವಾದ ನಂಟುಯಿದ್ದು ಆ ಪಯ್ಕಿ ಆಷಾಢ ಮಾಸ (ಆಟಿ ತಿಂಗಳು) ಕೃಷ್ಣ ಪಕ್ಷಾರಂಭ ಆಯಿತೆಂದರೆ ಸಂತೃಪ್ತಿಯ ಧ್ಯೋತಕವಾಗಿ ಪರಿಣಮಿಸುವುದು. ಮನೆ ಮಕ್ಕಳು (ವಿಶೇಷವಾಗಿ ಮದುವೆಯಾಗಿ ಹೋದ ಹೆಣ್ಣುಮಕ್ಕಳು) ತವರುಮನೆ ಸೇರಿದಾಗ ಉದ್ಭವಿಸುವ ಸಂಬಂಧಗಳ ಅನುಭವ ಅನೋನ್ಯವಾದದ್ದು. ಆದುದರಿಂದಲೇ ಆಷಾಢ ಮಾಸವು ಹಿಂದೂ ಸಂಪ್ರದಾಯಸ್ಥರಿಗೆ ಮಹತ್ವದ್ದಾಗಿದೆ ಎಂದು ಕನ್ನಡ ಸಂಘ ಸಾಂತಾಕ್ರೂಜ್ ಅಧ್ಯಕ್ಷ ಎಲ್.ವಿ ಅವಿೂನ್ ಅಭಿಪ್ರಾಯ ಪಟ್ಟರು.

ಇಂದಿಲ್ಲಿ ಬುಧವಾರ ಸಂಜೆ ಬಾಂದ್ರಾ ಪೂರ್ವದ ಖೇರ್‍ವಾಡಿ ಅಲ್ಲಿನ ರಾಜಯೋಗ್ ಸಭಾಗೃಹದಲ್ಲಿ ಕನ್ನಡ ಸಂಘ ಸಾಂತಾಕ್ರೂಜ್ ಸಂಸ್ಥೆಯು 2019ನೇ ವಾರ್ಷಿಕ ಆಷಾಢೋತ್ಸವ ಆಚರಿಸಿದ್ದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಎಲ್ವೀ ಮಾತನಾಡಿದರು. ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀ (ಬಿಸಿಸಿಐ) ಕಾರ್ಯಾಧ್ಯಕ್ಷ ಎನ್.ಟಿ ಪೂಜಾರಿ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆಯನ್ನಿತ್ತು ಶುಭಾರೈಸಿದರು.

ಈ ಶುಭಾವಸರದಲ್ಲಿ ಸಂಘದ ಪೆÇ್ರೀತ್ಸಹಕರೂ, ಶಿಕ್ಷಣ ಪ್ರೇಮಿಗಳೂ ಆದ ಸದಾನಂದ ಸಫಲಿಗ, ಪ್ರಸಾದ್ ಶೆಟ್ಟಿ, ಬಂಟ್ಸ್ ಸಂಘ ಮುಂಬಯಿ ಇದರ ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿ ಕಾರ್ಯಧ್ಯಕ್ಷ ಡಾ| ಆರ್.ಕೆ ಶೆಟ್ಟಿ, ದೊಡ್ಡಗುತ್ತು ಭುಜಂಗ ಶೆಟ್ಟಿ (ಕ್ವಾಲಿಟಿ ಕೇಟರರ್ಸ್), ಬಿಲ್ಲವರ ಅಸೋಸಿಯೇಶನ್ ಮುಂಬಯಿ ಉಪಾಧ್ಯಕ್ಷ ಹರೀಶ್ ಜಿ.ಅವಿೂನ್, ಸಾಯಿಕೇರ್ ಸಮೂಹದ ಕಾರ್ಯಾಧ್ಯಕ್ಷ ಸುರೇಂದ್ರ ಎ.ಪೂಜಾರಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಅಧ್ಯಕ್ಷ ಎಲ್ವೀ ಅವಿೂನ್
ಸರ್ವರಿಗೂ ಸಂಘದ ಪರವಾಗಿ ಪುಷ್ಪಗುಪ್ಛವನ್ನಿತ್ತು ಅಭಿನಂದಿಸಿದರು.


ಕಾರ್ಯಕ್ರಮದಲ್ಲಿ ಸಂಘದ ಗೌ| ಕೋಶಾಧಿಕಾರಿ ಸುಧಾಕರ್ ಉಚ್ಚಿಲ್ ಗೌ| ಜೊತೆ ಕಾರ್ಯದರ್ಶಿ ಚಂದ್ರಹಾಸ ಜೆ.ಕೋಟ್ಯಾನ್, ಗೌ| ಜೊತೆ ಕೋಶಾಧಿಕಾರಿ ದಿನೇಶ್ ಅವಿೂನ್, ಶಿಕ್ಷಣ ಸಮಿತಿ ಕಾರ್ಯಾಧ್ಯಕ್ಷ ಬನ್ನಂಜೆ ರವೀಂದ್ರ ಅವಿೂನ್, ಕಾರ್ಯದರ್ಶಿ ಶಕೀಲಾ ಪಿ.ಶೆಟ್ಟಿ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷೆ ವನಿತಾ ವೈ.ನೋಂದ, ಸಲಹಾದಾರರಾದ ಶಿವರಾಮ ಎಂ.ಕೋಟ್ಯಾನ್, ಎನ್.ಎಂ ಸನೀಲ್, ಬಿ.ಆರ್ ಪೂಂಜಾ, ಕಾರ್ಯಕಾರಿ ಸಮಿತಿ ಸದಸ್ಯರಾದ ಉಷಾ ವಿ.ಶೆಟ್ಟಿ, ಸುಮಾ ಎಂ.ಪೂಜಾರಿ, ವಾಮನ ಡಿ.ಪೂಜಾರಿ, ಶಾಲಿನಿ ಜಿ.ಶೆಟ್ಟಿ, ಎಸ್.ಡಿ ಅವಿೂನ್, ವಿಜಯ ಕುಮಾರ್ ಕೆ.ಕೋಟ್ಯಾನ್, ಲಿಂಗಪ್ಪ ಬಿ.ಅವಿೂನ್, ಯಶೋದ ಬಿ. ಪೂಂಜಾ, ಸುಜತಾ ಸುಧಾಕರ್ ಉಚ್ಚಿಲ್, ಹರೀಶ್ ಜೆ.ಪೂಜಾರಿ ಸೇರಿದಂತೆ ಸಂಘದ ಹಿತೈಷಿಗಳು ಉಪಸ್ಥಿತರಿದ್ದರು.

ಸುಧಾ ಎಲ್ವೀ ಅವಿೂನ್ ಅವರು ಸಂಪ್ರದಾಯಿಕ ಅಮವಾಸ್ಯೆ ಕಷಾಯ, ಬೆಲ್ಲವನ್ನೀಡಿ ಸುಖಾಗಮನ ಬಯಸಿದÀÀರು. ಗೌ| ಪ್ರ| ಕಾರ್ಯದರ್ಶಿ ಸುಜತಾ ಆರ್.ಶೆಟ್ಟಿ ಸ್ವಾಗತಿಸಿದರು. ಕಾರ್ಯಕ್ರಮ ನಿರ್ವಹಿಸಿದರು. ಸಾಮಾಜಿಕ ಮತ್ತು ಸಾಂಸ್ಕೃತಿಕ ಸಮಿತಿ ಕಾರ್ಯದರ್ಶಿ ಲಕ್ಷ್ಮೀ ಎನ್.ಕೋಟ್ಯಾನ್ ಆಷಾಢ ಗೀತೆಯನ್ನಾಡಿ ಆಟಿ ಸಂಪ್ರದಾಯದ ಬಗ್ಗೆ ತಿಳಿಸಿ ಕೃತಜ್ಞತೆ ಸಮರ್ಪಿಸಿದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here