ದೆಹಲಿಯ ಜಂತರ್ ಮಂತರ್‍ನಲ್ಲಿ ಸಮಾಪನಕಂಡ ಭಾರತ ಶಿಕ್ಷಣ ರಥಯಾತ್ರೆ
ಮುಂಬಯಿ, ಆ.01: ಬಂಟ್ವಾಳದ ಯುವಕರ ತಂಡವೊಂದು ಆದರ್ಶ ಶಾಲೆಯನ್ನು ನಿರ್ಮಿಸಿ, ಜಿಲ್ಲೆಯಲ್ಲಿ ಸರಕಾರಿ ಶಾಲೆಯನ್ನು ಉಳಿಸುವ ಪ್ರಯತ್ನ ನಡೆಸಿ ದೇಶಾದ್ಯಂತ ಎಲ್ಲರಿಗೂ ಸಮಾನ ಶಿಕ್ಷಣ ಸಿಗಬೇಕೆಂಬ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದಿಂದ ದೆಹಲಿಗೆ ಬಂದು ಹೋರಾಟ ನಡೆಸುತ್ತಿರುವುದು ಸ್ತುತ್ಯಾರ್ಹ. ದೇಶದಲ್ಲಿ ಹೊಸ ಶಿಕ್ಷಣ ನೀತಿ ಜಾರಿ ಬರುತ್ತಿರುವ ಈ ಸಂದರ್ಭದಲ್ಲಿ ಪ್ರಕಾಶ್ ಅಂಚನ್ ತಂಡದ ಸಮಾನ ಶಿಕ್ಷಣ ಜಾರಿಗಾಗಿ ಭಾರತ ಶಿಕ್ಷಣ ರಥಯಾತ್ರೆ ಅರ್ಥಪೂರ್ಣವಾದದ್ದು. ಇದು ಪ್ರಧಾನಮಂತ್ರಿಯ ಆಶಯಕ್ಕೂ ಬೆಂಗಲಾವಾಗಿದೆ ಎಂದÀು ದ.ಕ ಜಿಲ್ಲಾ ಸಂಸದ ನಳೀನ್ ಕುಮಾರ್ ಕಟೀಲ್ ತಿಳಿಸಿದರು.
ಸರಕಾರಿ ಶಾಲೆ ಉಳಿಸಿ ಬೆಳೆಸಿ ರಾಜ್ಯ ಸಮಿತಿ ಹಾಗೂ ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ಜಂಟಿ ಆಶ್ರಯದಲ್ಲಿ ಒಂದೇ ದೇಶ ಒಂದೇ ಶಿಕ್ಷಣ ಜಾರಿಗಾಗಿ ಭಾರತ ಶಿಕ್ಷಣ ರಥಯಾತ್ರೆಯು ಇಂದಿಲ್ಲಿ ಗುರುವಾರ ದೆಹಲಿ ಅಲ್ಲಿನ ಜಂತರ್ ಮಂತರ್‍ನಲ್ಲಿ ಸಾಗಿದ್ದು ಅಲ್ಲಿನ ನಡೆಸಲ್ಪಟ್ಟ ಬೃಹತ್ ಧರಣಿ ಸತ್ಯಾಗ್ರಹ ಉದ್ದೇಶಿಸಿ ಸಂಸದ ಕಟೀಲ್ ಮಾತನಾಡಿದರು.
ಮೈಸೂರು- ಕೊಡಗು ಸಂಸದ ಪ್ರತಾಪ್ ಸಿಂಹ ಮಾತನಾಡಿ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು ಕೇಂದ್ರ ಸರಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಒಂದೇ ಶಿಕ್ಷಣ ನೀತಿ ಜಾರಿ ಬಂದರೆ ಎಲ್ಲರಿಗೂ ಉಪಯೋಗವಾಗಲಿದೆ. ಸಣ್ಣ ವಯಸ್ಸಿನಲ್ಲಿ ಮಕ್ಕಳಿಗೆ ಹೆಚ್ಚು ಭಾಷೆ ಕಲಿಯುವ ಸಾಮರ್ಥ್ಯ ಇರುತ್ತದೆ. ಕನ್ನಡ ಮಾತ್ರ ಕಲಿತರೆ ಕರ್ನಾಟಕದಲ್ಲಿ ಮಾತ್ರ ಇರಬೇಕಾಷ್ಟೆ, ಹೆಚ್ಚು ಭಾಷೆಗಳನ್ನು ಕಲಿತರೆ ಪ್ರಪಂಚ ಜ್ಞಾನವೂ ಹೆಚ್ಚುತ್ತದೆ ಎಂದು ಅಭಿಯಾನದ ಹೋರಾಟಕ್ಕೆ ಜಯ ಸಿಗಲಿ ಎಂದರು.
ಭಾರತ ರಥಯಾತ್ರೆಯ ರೂವಾರಿ ಪ್ರಕಾಶ್ ಅಂಚನ್ ಮಾತನಾಡಿ ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ, ಸರಕಾರಿ ಶಾಲೆಗಳ ಉಳಿವಿಗಾಗಿ, ಎಲ್ಲಾ ರಾಜ್ಯಗಳ ಮಾತೃಭಾಷೆಯೊಂದಿಗೆ ಇಂಗ್ಲೀಷ್ ಹಾಗೂ ಹಿಂದಿ ಭಾಷೆ ಕಲಿಕೆಗೆ ಅವಕಾಶ ನೀಡಬೇಕೆಂದು ಆಗ್ರಹಿಸಿ ಭಾರತ ರಥಯಾತ್ರೆಯನ್ನು ನಡೆಸಲಾಗಿದೆ, ದೇಶದಲ್ಲಿ ಬಡವರಿಗೊಂದು ಶಿಕ್ಷಣ ಶ್ರೀಮಂತರಿಗೊಂದು ಶಿಕ್ಷಣ ಎನ್ನುವ ತಾರತಮ್ಯ ಇದೆ ಅದು ನಿವಾರಣೆಯಾಗಿ ಎಲ್ಲರಿಗೂ ಸಮಾನ ಶಿಕ್ಷಣ ಸಿಗಬೇಕು. ಮಾತೃಭಾಷೆಯೊಂದಿಗೆ ಇಂಗ್ಲೀಷ್ ಹಾಗೂ ಹಿಂದಿ ಶಿಕ್ಷಣವನ್ನು ದೇಶಾದ್ಯಂತ ಕಡ್ಡಾಯವಾಗಿ ನೀಡಬೇಕು, ಒಂದರಿಂದ ಹನ್ನೆರಡನೇ ತರಗತಿವರೆಗೆ ಉಚಿತ ಕಡ್ಡಾಯ ಶಿಕ್ಷಣ ನೀಡಬೇಕು, ಸಮಾನ ಶುಲ್ಕ ಹಾಗೂ ಶಿಕ್ಷಣ ಜಾರಿಗೊಳಿಸ ಬೇಕು, ಪ್ರತಿ ರಾಜ್ಯದಲ್ಲೂ ಬಜೆಟ್‍ನಲ್ಲಿ ಶಿಕ್ಷಣಕ್ಕಾಗಿ ಶೇ.25 ಅನುದಾನ ಮೀಸಲಿಡಬೇಕು ಎನ್ನುತ್ತಾ, ತಮ್ಮ ಬೇಡಿಕೆಯನ್ನು ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವ ರಮೇಶ್ ಪೆÇೀಕ್ರಿಯಾಲ್ ಅವರಿಗೆ ಸಲ್ಲಿಸಿದರು.
ಬೀದರ್ ಸಂಸದ ಭಗವಾನ್ ಕೂಬಾ, ಸರಕಾರಿ ಶಾಲೆ ಉಳಿಸಿ ಬೆಳೆಸಿ ರಾಜ್ಯ ಸಮಿತಿಯ ಕಾರ್ಯದರ್ಶಿ ಪುರುಷೋತ್ತಮ ಅಂಚನ್, ಕೋಶಾಧಿಕಾರಿ ಸಂದೀಪ್ ಸಾಲ್ಯಾನ್, ಉಪಾಧ್ಯಕ್ಷ ಮಯೂರ್ ಕೀರ್ತಿ, ಸದಸ್ಯರಾದ ರಾಮಚಂದ್ರ ಪೂಜಾರಿ, ಸಂತೋಷ್ ಕಟ್ಟೆ, ನವೀನ್ ಸೇಸಗುರಿ, ಉದಯ, ದಿಲೀಪ್ ಡೆಚ್ಚಾರ್, ಪ್ರವೀಣ ಅಲಂಗಾರು, ದೀಪಕ್ ಸಾಲ್ಯಾನ್, ಸುರೇಶ್, ಚಂದ್ರಶೇಖರ, ಅರ್ಜುನ್, ಜೇಸಿಐ ಬಂಟ್ವಾಳ ಅಧ್ಯಕ್ಷ ಯತೀಶ್ ಕರ್ಕೆರಾ, ಸದಸ್ಯರಾದ ಸದಾನಂದ ಬಂಗೇರಾ, ಲೋಕೇಶ್ ಸುವರ್ಣ, ಗಣೇಶ್ ಸುವರ್ಣ, ಭುವನೇಶ್ ಪಚ್ಚಿನಡ್ಕ, ಶಿವಪ್ರಸಾದ ಅಜಿಲರು, ದೇವದಾಸ್ ಸಾಲ್ಯಾನ್, ಪೂರ್ಣೇಶ್, ಮೋಹನ್ ಚೌಧÀರಿ, ಸಾಂಗ್ ಸಿಂಗ್, ರಮನಾಥ ರಾಯಿ, ಸಂತೋಷ್ ರಾಯಿಬೆಟ್ಟು, ಸುರೇಶ್ ಕೋಟ್ಯಾನ್, ಸತೀಶ್ ಜಕ್ರಿಬೆಟ್ಟು, ಅಶೋಕ್ ಚಿಕ್ಕಾಬಳ್ಳಾಪುರ ಮತ್ತಿತರರು ಪ್ರತಿಭಟನೆಯಲ್ಲಿ ಮತ್ತು ಜೇಸಿಐ ಬಂಟ್ವಾಳ, ಹಿಂದೂ ಯುವ ಶಕ್ತಿ ಆಲಡ್ಕ, ನೇತಾಜಿ ಫೌಂಡೇಶನ್ ಚಿಕ್ಕಬಳ್ಳಾಪುರ ಬೆಂಬಲ ವ್ಯಕ್ತಪಡಿಸಿ ಧರಣಿಯಲ್ಲಿ ಪಾಲ್ಗೊಂಡರು.