ಮುಂಬಯಿ, ಆ.08: ಶಶಿ ಶೆಟ್ಟಿ ಅಭಿಮಾನಿ ಬಳಗವು ಕಳೆದ ಮಂಗಳವಾರ ಗುಜರಾತ್ ರಾಜ್ಯದ ಬರೋಡಾ ಭಯ್ಲಿ ಇಲ್ಲಿನ ಶಕ್ತಿ ಗ್ರೀನ್ಸ್ ಸಭಾಗೃಹದಲ್ಲಿ ಆಯೋಜಿಸಿದ್ದ ಶಶಿಧರ ಬಿ.ಶೆಟ್ಟಿ ಸ್ವರ್ಣ ಸಂಭ್ರಮದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟ (ಫೆಡರೇಶನ್ ಆಫ್ ವರ್ಲ್ಡ್ ಬಂಟ್'ಸ್ ಅಸೋಸಿಯೇಶನ್'ಸ್‍ನ ಪೆÇೀಷಕ ಸದಸ್ಯ ಶಶಿಧರ ಬಿ.ಶೆಟ್ಟಿ (ಗುರುವಾಯನಕೆರೆ) ಇವರನ್ನು ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಗೌರವಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಬಂಟರ ಒಕ್ಕೂಟದ ಪೆÇೀಷಕ ಸದಸ್ಯರುಗಳಾದ ಶಿವರಾಮ ಬಿ.ಶೆಟ್ಟಿ, ರವೀಂದ್ರನಾಥ್ ವಿ.ಶೆಟ್ಟಿ ಅಂಕ್ಲೇಶ್ವರ್, ಭವಾನಿ ಫೌಂಡೇಶನ್ ನವಿಮುಂಬಯಿ ಸಂಸ್ಥಾಪಕ ಅಧ್ಯಕ್ಷÀ ದಡ್ದಂಗಡಿ ಚೆಲ್ಲಡ್ಕ ಕೆ.ಡಿ ಶೆಟ್ಟಿ, ಬಂಟರ ಸಂಘ ಅಹ್ಮದಾಬಾದ್ ಅಧ್ಯಕ್ಷ ನಿತೇಶ್ ಶೆಟ್ಟಿ, ಡಾ| ಕರ್ನೂರು ಮೋಹನ್ ರೈ ಮತ್ತಿತರರು ಉಪಸ್ಥಿತರಿದ್ದರು.
ಚಿತ್ರ : ರೋನ್ಸ್ ಬಂಟ್ವಾಳ್