ಮುಂಬಯಿ, ಆ.10: ಬಿ.ಎಸ್.ಕೆ.ಬಿ ಎಸೋಸಿಯೇಶನ್ ಮುಂಬಯಿ ತನ್ನ ಮುಖವಾಣಿಯಾಗಿ ಪ್ರಕಟಿಸುತ್ತಿರುವ `ಗೋಕುಲವಾಣಿ' ಮಾಸಪತ್ರಿಕೆಯ ನವಂಬರ್ 2019ರ ಸಂಚಿಕೆಯನ್ನು ದೀಪಾವಳಿ ಯಾ ರಾಜ್ಯೋತ್ಸವ ವಿಶೇಷ ಸಂಚಿಕೆಯಾಗಿ ಹೊರತರುತ್ತಿದ್ದು ಆ ಪ್ರಯುಕ್ತ ಅಖಿಲ ಭಾರತ ಮಟ್ಟದ ಕನ್ನಡ ಕಥಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಕಥೆಗಳಿಗೆ ಪ್ರಥಮ (ರೂ.10,000/-), ದ್ವಿತೀಯ (ರೂ.7,000/-) ತೃತೀಯ (ರೂ.5,000/-) ಬಹುಮಾನಗಳನ್ನು ಅರ್ಹ ಕತೆಗಳಿಗೆ ನೀಡಲಾಗುತ್ತದೆ. ತೀರ್ಪುಗಾರರ ಮೆಚ್ಚುಗೆ ಪಡೆದ ಎರಡು ಕಥೆಗಳಿಗೆ ತಲಾ ರೂ.1,500/- ಬಹುಮಾನ ಕೊಡಲಾಗುವುದು.
ಸ್ಪರ್ಧೆಯ ನಿಯಮಗಳು ಹೀಗಿವೆ :
ಕಥೆ ಸ್ವರಚಿತವಾಗಿರಬೇಕು. ಅನುವಾದ, ರೂಪಾಂತರ, ಅನುಕರಣೆಗಳಿಗೆ ಆಸ್ಪದವಿಲ್ಲ. ಓರ್ವ ಲೇಖಕರು ಒಂದೇ ಕಥೆ ಕಳುಹಿಸತಕ್ಕದ್ದು. ಕಥೆ 2000 ಶಬ್ದಗಳ ಮಿತಿಯಲ್ಲಿರಬೇಕು. (ಕೈ ಬರಹದಲ್ಲಿ ಫುಲ್‍ಸ್ಕೇಪ್ 10-12 ಪುಟಗಳು ಟೈಪಿಸಿದ 8-9 ಪುಟಗಳು) ಕಾಗದದ ಒಂದೇ ಮಗ್ಗುಲಲ್ಲಿ ಕೈಬರಹ ಅಥವಾ ಕಂಪ್ಯೂಟರೀಕೃತ ರೂಪದಲ್ಲಿರುವ ಕಥೆಯನ್ನು ಸ್ಪೀಡ್‍ಪೆÇೀಸ್ಟ್ ಅಥವಾ ಈಮೇಲ್ ಮುಖಾಂತರ ಕೆಳಗೆ ನೀಡಿದ ವಿಳಾಸಕ್ಕೆ ಕಳಿಸಬಹುದು. ಪ್ರವೇಶ ಶುಲ್ಕವಿಲ್ಲ. ಲೇಖಕರ ಹೆಸರನ್ನು ಪ್ರತ್ಯೇಕ ಹಾಳೆಯೊಂದರಲ್ಲಿ ಲಗತ್ತೀಕರಿಸಬೇಕು. ಇದರಲ್ಲಿ ಕಥೆಯ ಹೆಸರು, ಲೇಖಕರ ಹೆಸರು, ಅವರ ವಿಳಾಸ, ಮೊಬಾೈಲ್ ನಂಬರ್, ಈ ಮೇಲ್ ನಮೂದಿಸಬೇಕು. ಕಥೆಯ ಯಾವುದೇ ಪುಟದಲ್ಲಿ ಲೇಖಕರ ಹೆಸರು ಇದ್ದಲ್ಲಿ ಕಥೆ ಅಸ್ವೀಕೃತವಾಗುತ್ತದೆ. ಸ್ಪರ್ಧೆಗೆ ಬಂದ ಕಥೆಗಳನ್ನು ಹಿಂತಿರುಗಿಸಲಾಗುವುದಿಲ್ಲ. ತೀರ್ಪುಗಾರರ ತೀರ್ಮಾನವೇ ಅಂತಿಮ.
ಯಾವುದೇ ಪತ್ರ ವ್ಯವಹಾರ, ದೂರವಾಣಿ ಕರೆ ನಿಷಿದ್ಧ. ಕತೆಗಳನ್ನು ಸ್ವೀಕರಿಸುವ ಅಂತಿಮ ದಿನಾಂಕ 25.9.2019. ಸ್ಪರ್ಧೆಯ ಫಲಿತಾಂಶವನ್ನು `ಗೋಕುಲವಾಣಿ' ವಿಶೇಷಾಂಕ ಹಾಗೂ ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟಿಸಲಾಗುವುದು. ಕಥೆಗಳನ್ನು Editor, Gokulavani, Kannada Monthly, BSKB Association, Plot No.273, Gokul Marg, Sion East, Mumbai - 400 022. Email: gokulavani@bskba.com. ಈ ವಿಳಾಸಕ್ಕೆ ಕಳುಹಿಸಿ ಕೊಡುವಂತೆ ವಿನಂತಿ.