Sunday 11th, May 2025
canara news

ಸರ್ವ ಧರ್ಮೀಯ ಧಾರ್ಮಿಕ ಗುರುಗಳಿಂದ ಉದ್ಘಾಟನೆ

Published On : 11 Aug 2019   |  Reported By : Rons Bantwal


ಬ್ಲಡ್ ಹೆಲ್ಪ್ ಲೈನ್ ಕರ್ನಾಟಕದ ತೃತೀಯ ವಾರ್ಷಿಕೋತ್ಸವ

ಮುಂಬಯಿ (ಮಂಗಳೂರು), ಆ.03: ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ.) ತನ್ನ ತೃತೀಯ ವಾರ್ಷಿಕೋತ್ಸವ ಪ್ರಯುಕ್ತ ಆಯೋಜಿಸಿದ್ದ ಎರಡು ದಿನದ ಬ್ಲಡ್ ಡೊನೇಷನ್ ಎಕ್ಸ್‍ಪೆÇೀ-2019ರ ಉದ್ಘಾಟನಾ ಸಮಾರಂಭ ನಗರದ ಫಿಝಾ ಮಾಲ್ ನಲ್ಲಿ ನಡೆಯಿತು.

ಎಸ್‍ಎಸ್‍ಎಫ್ ಕರ್ನಾಟಕ ರಾಜ್ಯ ಉಪಾಧ್ಯಕ್ಷ ಹಾಫಿಲ್ ಸುಫಿಯಾನ್ ಸಖಾಫಿ, ಮಿಲಾಗ್ರಿಸ್ ಚಚ್9ನ ಧರ್ಮಗುರು ಫಾ| ಅನಿಲ್ ಫ್ರಾನ್ಸಿಸ್ ಪಿಂಟೋ ಹಾಗೂ ಪೆÇಳಲಿ ರಾಮಕೃಷ್ಣ ತಪೆÇೀವನದ ವಿವೇಕ್ ಚೈತನ್ಯಾನಂದ ಸ್ವಾಮಿ ಅವರು ಮೂರು ಧರ್ಮಗುರುಗಳು ಜೊತೆ ಸೇರಿ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು. ಕುಂಬ್ರ ಕರ್ನಾಟಕ ಇಸ್ಲಾಮಿಕ್ ಅಕಾಡೆಮಿಯ ಪ್ರಾಧ್ಯಾಪಕ ಅನೀಸ್ ಕೌಸರಿ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಇದರ ಸಂಪೂರ್ಣ ಮಾಹಿತಿ ಇರುವ ಕೈಪಿಡಿಯನ್ನು ಬಿಡುಗಡೆಗೊಳಿಸಿದರು.

ವೆನ್ಲಾಕ್ ಅಸ್ಪತ್ರೆಯ ರಕ್ತನಿಧಿ ಅಧಿಕಾರಿ ಡಾ| ಶರತ್ ಕುಮಾರ್ ರಾವ್.ಜಿ, ತೇಜಸ್ವಿನಿ ಆಸ್ಪತ್ರೆಯ ರಕ್ತನಿಧಿ ಅಧಿಕಾರಿ ಡಾ| ಶಿಲ್ಪ ಪ್ರೇಮ್ ಕುಮಾರ್, ಶ್ರೀನಿವಾಸ್ ಆಸ್ಪತ್ರೆಯ ಡಾ| ಸುಕೇಶ್ ಕೊಟ್ಟಾರಿ, ಕಣಚೂರು ಆಸ್ಪತ್ರೆಯ ರಕ್ತನಿಧಿ ಅಧಿಕಾರಿ ವೆಂಕಟೇಶ್ ರಾಜ್ ರೈ, ರೆಡ್ ಕ್ರಾಸ್ ಸೊಸೈಟಿಯ ಪ್ರವಿಣ್ ಕುಮಾರ್, ಎ.ಜೆ ಆಸ್ಪತ್ರೆಯ ಪಿ.ಆರ್ ಗೋಪಾಲಕೃಷ್ಣ ರಕ್ತದಾನ ಕುರಿತು ಮಾಹಿತಿ ನೀಡಿದರು. ಯೇನೆಪೆÇೀಯ ಆಸ್ಪತ್ರೆಯ ಶಿಬಿರ ಸಂಯೋಜಕ ಅಬ್ದುಲ್ ರಝಾಕ್, ಸಾಮಾಜಿಕ ಕಾರ್ಯಕರ್ತ ಮುನೀರ್ ಬಾವ ಅತಿಥಿಗಳಾಗಿ ಭಾಗವಹಿಸಿದ್ದರು.

ಈ ಸಂದರ್ಭ ಸಾರ್ವಜನಿಕರಿಗೆ ರಕ್ತ ಮತ್ತು ಆರೋಗ್ಯ ಎಂಬ ವಿಷಯದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ತನ್ಸಿಫ್ ಬಿ.ಎಂ ಕಿಲ್ಲೂರು ಅವರು ರಸಪ್ರಶ್ನೆ ಸ್ಪರ್ಧೆಯನ್ನು ನಡೆಸಿ ಕೊಟ್ಟರು. ಇದೆ ಮೊದಲ ಬಾರಿಗೆ ಏರ್ಪಡಿಸಲಾಗಿದ್ದಾ "ರಕ್ತ, ರಕ್ತದ ವರ್ಗಾವಣೆ ಹೇಗಾಯಿತು, ಮೊಟ್ಟ ಮೊದಲು ರಕ್ತವನ್ನು ಯಾರಿಂದ ಮತ್ತು ಹೇಗೆ ವರ್ಗಾಯಿಸಿದರು ಮತ್ತು ರಕ್ತದ ಗ್ರೂಪ್ ಗಳ ವರ್ಗಿಕರಣ ಹೇಗಾಯಿತು ಎಂಬ ಇತಿಹಾಸವುಳ್ಳ `ಬ್ಲಡ್ ಎಕ್ಸ್‍ಪೆÇೀ-2019' ಮಾಹಿತಿಯನ್ನು ಃಊಐನ ರಾಯಚೂರು ಜಿಲ್ಲೆಯ ಅಡ್ಮಿನ್ರಾದ ಮುನವ್ವರ್ ಅಲಿ ಯವರು ತಿಳಿಸಿದರು.

ಕಾರ್ಯಕ್ರಮದಲ್ಲಿ ರಕ್ತದಾನದ ಮಹತ್ವ ವನ್ನು ಸಾರುವ ನೌಷಾದ್ ಕ್ಲಾಸಿಕ್ ನಿರ್ದೇಶನದ "ಬದಲಾವಣೆ ನಮ್ಮಿಂದಲೇ" ಕಿರುಚಿತ್ರ ಬಿಡುಗಡೆ ಹಾಗೂ ಪ್ರದರ್ಶನ ಕಾರ್ಯಕ್ರಮ ನಡೆಯಿತು. ವಿಜಯ ಕುಮಾರ್ ಕೊಡಿಯಾಲ್ ಬೈಲ್ ಬದಲಾವಣೆ ನಮ್ಮಿಂದಲೇ" ಕಿರುಚಿತ್ರ ಬಿಡುಗಡೆಗೊಳಿಸಿದರು. ನವರಸ ರಾಜೆ ಭೋಜರಾಜ್ ವಾಮಂಜೂರು, ಕೋಸ್ಟಲ್ ವುಡ್ ನಿರ್ಮಾಪಕರಾದ ಕಿಶೋರ್ ಡಿ.ಶೆಟ್ಟಿ, ರಾಜೇಶ್ ಕುಡ್ಲ ಮುಂತಾದ ಹಲವಾರು ಕೋಸ್ಟಲ್ ವುಡ್ ದಿಗ್ಗಜರು ಕಿರು ಚಿತ್ರ ವಿಕ್ಷೀಸಿ ಪ್ರಶಂಸೆ ವ್ಯಕ್ತ ಪಡಿಸಿದರು.

ಬಾಲ ಪ್ರತಿಭೆಗಳಾದ ವಂಶಿ ರತ್ನಕುಮಾರ್, ಮೊಹಮ್ಮದ್ ಶಯಾನ್ ವಾಮಂಜೂರು, ಸಾನ್ವಿತ್ ಕುಲಾಲ್ ಮೂಡಬಿದ್ರೆ ರವರನ್ನು ಸನ್ಮಾನಿಸಲಾಯಿತು. ವಾರ್ಷಿಕೊತ್ಸವದ ಪ್ರಯುಕ್ತ ಪುಟಾಣಿಗಳಿಗೆ ಕಾರ್ಯಗಾರ, ಚಿತ್ರಕಲಾ ಸ್ಪರ್ಧೆ, ರಸ ಪ್ರಶ್ನೆ ಸ್ಪರ್ಧೆ,ಸಾರ್ವಜನಿಕರಿಗೆ ರಕ್ತ ದಾನ ಮತ್ತು ಅದರ ಮಹತ್ವದ ಬಗ್ಗೆ ಮಾಹಿತಿ ನಿಡಲಾಯಿತು. ಮೊದಲನೇ ದಿನದ ಶಿಬಿರದಲ್ಲಿ 35 ಮಂದಿ ಪಾಲ್ಗೊಂಡು ರಕ್ತದಾನಗೈದರು. ದಾನಿಗಳಿಂದ ರಕ್ತ ಸಂಗ್ರಹಿಸುವಲ್ಲಿ ವೆನ್ಲಾಕ್ ಆಸ್ಪತ್ರೆ ವೈಧ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಸಹಕರಿಸಿದರು. ಇಮ್ರಾನ್ ಅಡ್ಡೂರು ಸ್ವಾಗತಿಸಿದ್ದು, ಅಶ್ರಫ್ ಅರಬಿ ಕಲ್ಲಡ್ಕ ಕಾರ್ಯಕ್ರಮ ನಿರೂಪಿಸಿದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here