ವಿದ್ಯಾಥಿರ್üಗಳಿಂದ `ಡ್ರಗ್, ದ ಕಿಲ್ಲರ್' ನಾಟಕ ಮತ್ತು ಕಿರು ಚಿತ್ರ ಪ್ರದರ್ಶನ
ಮುಂಬಯಿ (ಮಂಗಳೂರು), ಆ.10: ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ.) ತನ್ನ ತೃತೀಯ ವಾರ್ಷಿಕೋತ್ಸವ ಪ್ರಯುಕ್ತ ಆಯೋಜಿಸಿದ್ದ ಎರಡು ದಿನದ ಬ್ಲಡ್ ಡೊನೇಷನ್ ಎಕ್ಸ್‍ಪೆÇೀ-2019ರ ಸಮಾರೋಪ ಸಮಾರಂಭ ನಗರದ ಫಿಝಾ ಮಾಲ್‍ನಲ್ಲಿ ನಡೆಯಿತು.
ಬೆಳಗ್ಗೆ ಮಹಿಳೆಯರಿಗೆ ರಕ್ತದಾನದ ಜಾಗೃತಿ ಮೂಡಿಸುವ ಸಲುವಾಗಿ ಮಹಿಳಾ ಅಧಿಕಾರಿಯಾದ ಮಂಗಳೂರನ ಹೆಲ್ತ್ ಇನ್ಸ್‍ಪೆಕ್ಟರ್ ಕು| ಆಯಿಷಾ ಪಿ ಮತ್ತು ಕೆ.ಎಸ್ ಹೆಗ್ಡೆ ಆಸ್ಪತ್ರೆಯ ಸಹಾಯಕ ವೈದ್ಯೆ ಡಾ| ಲಕ್ಷ್ಮಿ ಎಸ್.ದಾಸ್ ಸಮಾಲೋಚನೆ ಮತ್ತು ಮಾಹಿತಿ ಶಿಬಿರ ನಡೆಸಿದರು. ಪುಟಾಣಿಗಳಿಗೆ ವಿದ್ಯಾಥಿರ್üಗಳಿಗೆ ಯುವಕ ಯುವತಿಯರಿಗೆ 3 ವಿಭಾಗದಲ್ಲಿ ಚಿತ್ರ ಕಲಾ ಸ್ಪರ್ಧೆ ನಡೆಯಿತು. ನಂತರ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ವಿದ್ಯಾಥಿರ್üಗಳಿಂದ `ಡ್ರಗ್, ದ ಕಿಲ್ಲರ್' ನಾಟಕ ಮತ್ತು ಕಿರು ಚಿತ್ರ ಪ್ರದರ್ಶನ ನಡೆಯಿತು.
ನಂತರ ಸಾಯಂಕಾಲ ನಡೆದ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಮಾನ್ಯ ವಿಧಾನ ಪರಿಷತ್ ಸದಸ್ಯ ಜನಾಬ್ ಬಿ.ಎಂ ಫಾರೂಕ್ ಉದ್ಘಾಟಿಸಿ ಮಾತನಾಡುತ್ತಾ ಬ್ಲಡ್ ಡೊನೇಶನ್ ಎಕ್ಸ್‍ಪೆÇೀ. ಕರ್ನಾಟಕದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿ ಆಯೋಜಿಸಿರುವ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಕಾರ್ಯ ಶ್ಲಾಘನೀಯ. ಇಂತಹ ಕಾರ್ಯಕ್ರಮಗಳು ಜನರಿಗೆ ರಕ್ತದಾನ ಮಾಡಲು ಸ್ಪೂರ್ತಿ ನೀಡುತ್ತದೆ. ರಕ್ತದಾನದಿಂದ ಪ್ರೀತಿ ಸಂಬಂಧ ಇನ್ನಷ್ಟು ಹೆಚ್ಚಿಸಬಹುದು ಎಂದು ಹೇಳಿದರು.
ಮುಖ್ಯ ಅತಿಥಿüಗಳಾಗಿ ಆಗಮಿಸಿದ ಮಾಜಿ ಶಾಸಕ ಮೊೈದ್ಧಿನ್ ಬಾವಾ ಮಾತನಾಡಿ ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ ಈ ಭಾರತದಲ್ಲಿ ಎಲ್ಲಾ ಜಾತಿ ಧರ್ಮದವರನ್ನು ಒಂದು ಗೂಡಿಸಿ ಸೃಷ್ಟಿ ಕರ್ತನು ಕೊಟ್ಟ ಜೀವಿತಾವಧಿಯಲ್ಲಿ ಏನಾದರೂ ಒಂದು ಉತ್ತಮ ಕಾರ್ಯವನ್ನು ಮಾಡಬೇಕು ಎನ್ನುವ ಉದ್ದೇಶದಿಂದ ಯುವಕರು ತಂಡವನ್ನು ಕಟ್ಟಿ ಕೊಂಡು ಮಾಡುತ್ತಿರುವ ಇಂತಹ ರಕ್ತದಾನದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಶ್ಲಾಘನೀಯ ಎಂದರು.
ಪಾಪ್ಯುಲರ್ ಫ್ರಂಟ್ ಒಫ್ ಇಂಡಿಯಾ ರಾಜ್ಯ ಸಮಿತಿ ಸದಸ್ಯ ಜನಾಬ್ ಶಾಫಿ ಬೆಳ್ಳಾರೆ ಮಾತನಾಡಿ ಪ್ರಸ್ತಕ ಸನ್ನಿವೇಶದಲ್ಲಿ ಸಾಮಾಜಿಕ ತಾಣಗಳು ದುರ್ಬಳಕೆ ಆಗುವ ಈ ಕಾಲ ಘಟ್ಟದಲ್ಲಿ ಸುಮಾರು 3 ವರ್ಷಗಳಿಂದ ಮನುಷ್ಯ ಜೀವನ್ನು ಉಳಿಸುವ ಕಾರ್ಯವನ್ನು ಮಾಡುತ್ತಿರುವ ಬ್ಲಡ್ ಹೆಲ್ಪ್ ಕಾರ್ಯವನ್ನು ಅಭಿನಂದಿಸುತ್ತೇನೆ. ಸಮಾಜದಲ್ಲಿ ಪರಸ್ಪರ ಜನರಿಗೆ ಉಪಕಾರ ವಾಗುವಂತ ಕೆಲಸ ಹೆಚ್ಚು ಹೆಚ್ಚು ನಡೆಸುವುದರ ಮೂಲಕ ಮನುಷ್ಯರ ಸಂಬಂಧಗಳು ಬೆಳೆಯಲು ಅನೋನ್ಯತೆ ಸೌಹಾರ್ದತೆಯನ್ನು ಬೆಳೆಸಲು ಸಾಧ್ಯವಿದೆ ಎಂದರು..
ಅತಿಥಿüಗಳಾಗಿ ಆಗಮಿಸಿದ ಮಿಸ್ಬಾ ವುಮೆನ್ಸ್ ಕಾಲೇಜು ಚೆಯರ್ಮೆನ್ ಮುಮ್ತಾಜ್ ಅಲಿ,ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಸ್ಥಾಪಕರಾದ ಅಬ್ದುಲ್ ರವೂಫ್ ಪುತ್ತಿಗೆ, ಬ್ಯಾರೀಸ್ ಕಾಲೇಜು ಪ್ರಾಧ್ಯಾಪಕರಾದ ಡಾ| ಮುಸ್ತಫಾ ಬಸ್ತಿಕೋಡಿ, ಬಹು ಎಸ್‍ಬಿ ದಾರಿಮಿ ಉಪ್ಪಿನಂಗಡಿ, ನೌಶಾದ್ ಹಾಜಿ ಸೂರಲ್ಪಾಡಿ, ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಸಲಹೆಗಾರರಾದ ಮುಸ್ತಫಾ ಅಡ್ಡೂರು ದೆಮ್ಮೆಲೆ, ತಬೂಕ್ ದಾರಿಮಿ ಇನ್ನೂ ಹಲವಾರು ಗಣ್ಯಾತಿ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಸಿದ್ದರು. ಇದೆ ವೇದಿಕೆಯಲ್ಲಿ ಅತೀ ಹೆಚ್ಚು ರಕ್ತದಾನ ಮಾಡಿದ ಮತ್ತು ರಕ್ತ ಪೂರೈಕೆಯಲ್ಲಿ ತಮ್ಮನ್ನು ತೊಡಗಿಸಿ ಕೊಂಡಿರುವ ಜಿಲ್ಲೆಯ ಇಲ್ಯಾಸ್ ಬಜ್ಪೆ ,ಸುಧಾಕರ್ ರೈ ಸುಳ್ಯ ಮತ್ತು ಸತೀಶ್ ಸಾಲ್ಯಾನ್ ಅವರನ್ನು ಅತಿಥಿüಗಳಿಂದ ಸನ್ಮಾನಿಸಲಾಯಿತು.