Sunday 11th, May 2025
canara news

ವಾರ್ಷಿಕ ಪುರಸ್ಕಾರ ಪ್ರದಾನಿಸಿದ ಬೃಹನ್ಮುಂಬಯಿ ನಗರಿ ಸಹಕಾರಿ ಬ್ಯಾಂಕ್ಸ್ ಅಸೋಸಿಯೇಶನ್ `ಉತ್ಕೃಷ್ಟ ಬ್ಯಾಂಕ್' ಪುರಸ್ಕಾರ ಮುಡಿಗೇರಿಸಿದ ಮೋಡೆಲ್ ಬ್ಯಾಂಕ್

Published On : 12 Aug 2019   |  Reported By : Rons Bantwal


(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಆ.09: ದಿ.ಬೃಹನ್ಮುಂಬಯಿ ನಗರಿ ಸಹಕಾರಿ ಬ್ಯಾಂಕ್ಸ್ ಅಸೋಸಿಯೇಶನ್ ಲಿಮಿಟೆಡ್ ಸಂಸ್ಥೆಯ ವಾರ್ಷಿಕ ಪಾರಿತೋಷಕ ಪ್ರದಾನ ಸಮಾರಂಭ ಇಂದಿಲ್ಲಿ ಶುಕ್ರವಾರ ದಾದರ್ ಪ್ರಭಾದೇವಿಯಲ್ಲಿನ ವೊವ್‍ಜ್ ಬಾಕ್ವೆಟ್ ಸಭಾಗೃಹದಲ್ಲಿ ಹಮ್ಮಿಕೊಂಡಿತ್ತು. ಸಮಾರಂಭದಲ್ಲಿ ಸಹಕಾರಿ ಕ್ಷೇತ್ರದ ಸೇವೆಗಾಗಿ ಮುಂಬಯಿ ವಿಭಾಗದಲ್ಲಿ ರೂಪಾಯಿ 501 ರಿಂದ 2,000 ಕೋಟಿ ಠೇವಣಿ ವ್ಯವಹಾರಕ್ಕಾಗಿನ 2018-19ನೇ ಹಣಕಾಸು ಸಾಲಿನ `ಸಹಕಾರಿ ಬ್ಯಾಂಕ್ ಪುರಸ್ಕಾರ ದ್ವಿತೀಯ ಸ್ಥಾನ'ಕ್ಕೆ ಭಾಜನವಾದ ಹಿರಿಮೆಯ ಹಣಕಾಸು ಸಂಸ್ಥೆ ಮೋಡೆಲ್ ಕೋ.ಅಪರೇಟಿವ್ ಬ್ಯಾಂಕ್ ಲಿಮಿಟೆಡ್‍ಗೆ `ಉತ್ಕೃಷ್ಟ ಬ್ಯಾಂಕ್' ಪುರಸ್ಕಾರ ಪ್ರದಾನಿಸಿ ಗೌರವಿಸಿತು.

ವಾರ್ಷಿಕ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಬ್ಯಾಂಕ್ಸ್ ಅಸೋಸಿಯೇಶನ್‍ನ ಅಧ್ಯಕ್ಷ ಅಧ್ಯಕ್ಷ ಕಾಶಿನಾಥ್ ಮೋರೆ, ಉಪಾಧ್ಯಕ್ಷ ವಿಠಲ ಚಿವಿಲ್ಕರ್, ಸಂಚಾಲಕ ಸಿ.ಬಿ.ಅಡ್ಸೂಲ್ ಮತ್ತು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸೋನಾಲಿ ಕದಂ ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದು, ಮೊಡೇಲ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಆಲ್ಬರ್ಟ್ ಡಬ್ಲ್ಯು.ಡಿ ಸೋಜಾ, ನಿರ್ದೇಶಕ ಸಿಎ| ಪೌಲ್ ನಝರೆತ್, ಸಿಇಒ, ಮಹಾ ಪ್ರಬಂಧಕ ವಿಲಿಯಂ ಎಲ್.ಡಿ ಸೋಜಾ ಹಾಗೂ ಉಪ ಪ್ರಧಾನ ಪ್ರಬಂದಕ ಝಿನಾನ್ ಡಿಕ್ರೂಜ್ ಅವರಿಗೆ ಪ್ರದಾನಿಸಿ ಶುಭಾರೈಸಿದರು.

ಕಾರ್ಯಕ್ರಮದಲ್ಲಿ ಬ್ಯಾಂಕ್ಸ್ ಅಸೋಸಿಯೇಶನ್‍ನ ಸಂಚಾಲಕರುಗಳಾದ ದತ್ತರಾಮ್ ಚಾಳ್ಕೆ, ದಿನಕರ್ ಖಾಂಡ್ಸಾಳೆ, ಕಿಶೋರ್ ರಂಗ್ಣೇಕರ್, ಪುರುಷೋತ್ತಮ ಮಾನೆ, ನಾಗೇಶ್ ಫೆÇವ್ಕಾರ್, ಗುಲಾಬ್ ರಾವ್ ಜಗತತ್ ಉಪಸ್ಥಿತರಿದ್ದರು.

ಕರ್ನಾಟಕ ಕರಾವಳಿ ಮೂಲದ ಕ್ರೈಸ್ತ ಸಮೂದಾಯದ ಮುಂದಾಳುಗಳು 1916ನೇ ವರ್ಷದಲ್ಲಿ ದಿ. ಮೆಂಗ್ಳೂರಿಯ ಕಥೋಲಿಕ್ ಕೋ.ಆಪರೇಟಿವ್ ಕ್ರೆಡಿಟ್ ಸೊಸೈಟಿ ನಿಯಮಿತ ಎಂದಾಗಿಸಿ ಸ್ಥಾಪಿತ, ಸದ್ಯ 103ನೇ ದೀರ್ಘಾವಧಿ ಸೇವೆಯಲ್ಲಿ ಮೊಡೇಲ್ ಕೋ.ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಹೆಸರಿನೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಮೊಡೇಲ್ ಬ್ಯಾಂಕ್‍ನ ಹಾಲಿ ಕಾರ್ಯಧಕ್ಷ ಆಲ್ಬರ್ಟ್ ಡಿ ಸೋಜಾ ಸಾರಥ್ಯದಲ್ಲಿ ಬ್ಯಾಂಕ್ ಒಟ್ಟು 25 ಶಾಖೆಗಳನ್ನು ಹೊಂದಿ ಮಹಾರಾಷ್ಟ್ರದ ಹಣಕಾಸು ಕ್ಷೇತ್ರದಲ್ಲಿ ಶೀಘ್ರಗತಿಯಲ್ಲಿ ಸಾಗುತ್ತಿದೆÉ.

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here