Sunday 26th, January 2020
canara news

ಭಾರತ್ ಬ್ಯಾಂಕ್ ಲಿಮಿಟೆಡ್‍ಗೆ `ಸರ್ವೋತ್ಕೃಷ್ಟ ಬ್ಯಾಂಕ್' ಪುರಸ್ಕಾರ ಮಾತೃಸಂಸ್ಥೆ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಸಂಭ್ರಮ

Published On : 12 Aug 2019   |  Reported By : Rons Bantwal


(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಆ.10: ದಿ.ಬೃಹನ್ಮುಂಬಯಿ ನಗರಿ ಸಹಕಾರಿ ಬ್ಯಾಂಕ್ಸ್ ಅಸೋಸಿಯೇಶನ್ ಲಿಮಿಟೆಡ್ ಸಂಸ್ಥೆಯ ಸಹಕಾರಿ ಕ್ಷೇತ್ರದ ಸೇವೆಗಾಗಿನ `ಸರ್ವೋತ್ಕೃಷ್ಟ ಬ್ಯಾಂಕ್' ಪುರಸ್ಕಾರಕ್ಕೆ ಭಾಜನವಾದ ತುಳು-ಕನ್ನಡಿಗರ ಪ್ರತಿಷ್ಠಿತ ಹಣಕಾಸು ಸಂಸ್ಥೆ ದಿ.ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ ಇದರ ಸಾಧನೆಗಾಗಿ ಮಾತೃಸಂಸ್ಥೆ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಪ್ರತಿಷ್ಠಿತ ಗೌರವಕ್ಕಾಗಿ ಸಂಭ್ರಮಿಸಿತು.

ದಾದರ್ ಪ್ರಭಾದೇವಿಯಲ್ಲಿನ ವೊವ್‍ಜ್ ಬಾಕ್ವೆಟ್ ಸಭಾಗೃಹದಲ್ಲಿ `ಸರ್ವೋತ್ಕೃಷ್ಟ ಬ್ಯಾಂಕ್' ಪುರಸ್ಕಾರ ಸ್ವೀಕೃತ ಬ್ಯಾಂಕ್ ಮಂಡಳಿಯು ಪ್ರಶಸ್ತಿ ಫಲಕ, ಪ್ರಶಸ್ತಿಪತ್ರದೊಂದಿಗೆ ನೇರವಾಗಿ ಸಾಂತಕ್ರೂಜ್‍ನ ಅಸೋಸಿಯೇಶನ್ ಭವನಕ್ಕೆ ಆಗಮಿಸಿ ಅಲ್ಲಿನ ಬ್ರಹ್ಮಶ್ರೀ ನಾರಾಯಣ ಗುರು ಸನ್ನಿಧಿಯಲ್ಲಿ ಪೂಜೆ ನೆರವೇರಿಸಿತು. ಪುರಸ್ಕೃತ ಭಾರತ್ ಬ್ಯಾಂಕ್‍ನ ಕಾರ್ಯಧ್ಯಕ್ಷ ಜಯ ಸಿ.ಸುವರ್ಣ, ಸಿಇಒ ಮತ್ತು ಆಡಳಿತ ನಿರ್ದೇಶಕ ಸಿ.ಆರ್ ಮೂಲ್ಕಿ ಅವರನ್ನು ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಅಧ್ಯಕ್ಷ ಚಂದ್ರಶೇಖರ್ ಎಸ್.ಪೂಜಾರಿ ಅವರು ಸ್ವಾಗತಿಸಿ ಶುಭಾರೈಸಿದರು.

ಈ ಸಂದರ್ಭದಲ್ಲಿ ಅಸೋಸಿಯೇಶನ್‍ನ ಉಪಾಧ್ಯಕ್ಷರುಗಳಾದ ದಯಾನಂದ್ ಆರ್.ಪೂಜಾರಿ, ಶ್ರೀನಿವಾಸ ಆರ್.ಕರ್ಕೇರ, ಯುವಾಭ್ಯುದಯ ಸಮಿತಿ ಕಾರ್ಯಾಧ್ಯಕ್ಷ ನಾಗೇಶ್ ಎನ್.ಕೋಟ್ಯಾನ್, ಸಾಂಸ್ಕೃತಿಕ ಸಮಿತಿ ಕಾರ್ಯದರ್ಶಿ ಅಶೋಕ್ ಕುಕ್ಯಾನ್ ಸಸಿಹಿತ್ಲು, ವಿದ್ಯಾ ಸಮಿತಿ ಕಾರ್ಯಾಧ್ಯಕ್ಷ ವಿಶ್ವನಾಥ ಆರ್.ತೋನ್ಸೆ, ಭಾರತ್ ಬ್ಯಾಂಕ್‍ನ ನಿರ್ದೇಶಕರಾದ ಜ್ಯೋತಿ ಕೆ.ಸುವರ್ಣ, ಗಂಗಾಧರ್ ಜೆ.ಪೂಜಾರಿ, ಪ್ರೇಮನಾಥ್ ಪಿ.ಕೋಟ್ಯಾನ್, ಬ್ಯಾಂಕ್‍ನ ಪ್ರಧಾನ ಪ್ರಬಂಧಕರಾದ ವಿದ್ಯಾನಂದ ಎಸ್.ಕರ್ಕೇರಾ, ದಿನೇಶ್ ಬಿ.ಸಾಲ್ಯಾನ್, ಬಿಲ್ಲವರ ಭವನದ ಪ್ರಬಂಧಕ ಭಾಸ್ಕರ್ ಟಿ.ಪೂಜಾರಿ, ಲೀಲಾಧರ್ ಸುವರ್ಣ ಅಡ್ವೆ ಸೇರಿದಂತೆ ಅಸೋಸಿಯೇಶನ್‍ನ ಇತರ ಪದಾಧಿಕಾರಿಗಳು, ಸದಸ್ಯರನೇಕರು ಹಾಜರಿದ್ದರು.

 

 
More News

ಗಾಣಿಗ ಸಮಾಜ ಮುಂಬಯಿ ಅಧ್ಯಕ್ಷರಾಗಿ ಬಿ.ವಿ ರಾವ್ ಆಯ್ಕೆ
ಗಾಣಿಗ ಸಮಾಜ ಮುಂಬಯಿ ಅಧ್ಯಕ್ಷರಾಗಿ ಬಿ.ವಿ ರಾವ್ ಆಯ್ಕೆ
ಮಹಾರಾಷ್ಟ್ರದ ಆಹಾರ-ನಾಗರಿಕ ಸರಬರಾಜು ಮಂತ್ರಿ ಛಗ್‍ನ್ ಭುಜಬಲ್‍ಗೆ
ಮಹಾರಾಷ್ಟ್ರದ ಆಹಾರ-ನಾಗರಿಕ ಸರಬರಾಜು ಮಂತ್ರಿ ಛಗ್‍ನ್ ಭುಜಬಲ್‍ಗೆ
ಡೊಂಬಿವಲಿಯಲ್ಲಿ ಜರುಗಿದ ಕನ್ನಡ ಗಾದೆಗಳ ವೈಭವ ವಿಚಾರ ಸಂಕಿರಣ
ಡೊಂಬಿವಲಿಯಲ್ಲಿ ಜರುಗಿದ ಕನ್ನಡ ಗಾದೆಗಳ ವೈಭವ ವಿಚಾರ ಸಂಕಿರಣ

Comment Here